ಯೋಗ, ಪ್ರಯೋಗ ಮತ್ತು ಬುದ್ಧ: ಭಾಗ-ಎರಡು: ಫಿನಿಕ್ಸ್ ರವಿ ಅವರ ವಾರದ ಅಂಕಣ

Related Articles

ವಾಟ್ಸಾಪ್ ಯೂನಿವರ್ಸಿಟಿ ಘಟಿಕೋತ್ಸವ ಮತ್ತು ಗಾಂಧೀ ಜಯಂತಿ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ವಿಜ್ಞಾನಿಗಳ ವಿಜ್ಞಾನಿ, ತಥಾಗತ ಬುದ್ಧ: ರಮಾಕಾಂತ ಪುರಾಣಿಕ ಅವರ 27ನೇ ಅಂಕಣ

ಯೋಗ, ಪ್ರಯೋಗ ಮತ್ತು ಬುದ್ಧ ಭಾಗ-ಐದು: ಫೀನಿಕ್ಸ್ ರವಿ ಅವರ ವಾರದ ಅಂಕಣ

ಮುಂಜಾನೆಯ ಕೊಲೆ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಬೀದಿಗೆ ಬಿದ್ದ ಭ್ರಷ್ಟರ ಮಾನ; ಚೀತಾದಿಂದ ಬೆಲೆ ಏರಿಕೆ ನಿಯಂತ್ರಣ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ಸಂಗೀತಿ ಸುತ್ತ-ಬುದ್ಧರ ಬೋಧನೆಗಳ ಸಾರ ಭಾಗ-3: ರಮಾಕಾಂತ ಪುರಾಣಿಕ ಅವರ 26ನೇ ಅಂಕಣ

ನಿಷೇಧವಾಗುತ್ತಾ ಪಿಎಫ್ಐ...?: ಎಡಿಟರ್ ಸ್ಪೆಷಲ್

ಕುಸುಮಬಾಲೆ ‘ಅವರವರಗ ತಿಳಿದ ರೀತೀಲೀ...’: ಡಾ.ರವಿಕುಮಾರ್ ನೀಹ ಅವರ ಅಂಕಣ

ಯೋಗ, ಪ್ರಯೋಗ ಮತ್ತು ಬುದ್ಧ ಭಾಗ-ನಾಲ್ಕು: ಫೀನಿಕ್ಸ್ ರವಿ ಅವರ ವಾರದ ಅಂಕಣ

ಸಿಎಂ ಬಸವರಾಜ ಬೊಮ್ಮಾಯಿ ರಾಜೀನಾಮೆ..?: ಎಡಿಟರ್ ಸ್ಪೆಷಲ್

ಯೋಗ, ಪ್ರಯೋಗ ಮತ್ತು ಬುದ್ಧ: ಭಾಗ-ಎರಡು: ಫಿನಿಕ್ಸ್ ರವಿ ಅವರ ವಾರದ ಅಂಕಣ

Updated : 09.09.2022

ಯೋಗಿಗಳು ಯೋಗದ ಮೂಲಕ ಆತ್ಮದ ಸಾಕ್ಷಾತ್ಕಾರ ಮಾಡಿಕೊಂಡು ಪರಮಾತ್ಮನ ಕಾಣಬಹುದು ಎಂಬ ನಂಬಿಕೆ ಉಳ್ಳವರು. ಪ್ರಾಯೋಗಿಗಳು ಅಂದರೇ  ವಿಜ್ಞಾನಿಗಳು, ಅಣುವಿನ ಶೋಧದ ಮೂಲಕ ಪರಮಾಣುವಿನ ಹಂತ ತಲುಪಿದಾಗ ಅದು ನೀಡುವ ಸಾಕ್ಷಾತ್ಕಾರದ  ಮೂಲಕ ಪ್ರಕೃತಿಯ ಸೃಷ್ಟಿಯ  ರಹಸ್ಯಗಳ ಅರಿಯಬಹುದು ಎಂದು ನಂಬಿದವರು.

ಯೋಗಿಗಳು ಅಣುವಿಗೆ ಆತ್ಮವೆಂದರೆ, ಪ್ರಾಯೋಗಿಗಳು ಅಥವಾ ವಿಜ್ಞಾನಿಗಳು ಆತ್ಮವನ್ನು ಅಣು ಎಂದವರು. ಯೋಗಿಗಳು ಪರಮಾಣುವಿಗೆ ಪರಮಾತ್ಮ  ಎಂದರೇ, ಪ್ರಾಯೋಗಿಗಳು ಪರಮಾತ್ಮವನ್ನು ಪರಮಾಣು  ಎಂದವರು.
ಆಗಾಗಿ  ಈ ಇಬ್ಬರ ಶೋಧನೆಯ  ವಿಷಯ ಒಂದೇ ಆದರೂ, ಈ ಇಬ್ಬರು ತಲಪುವ ಗಮ್ಯ ಸ್ಥಾನ ಒಂದೇ ಆದರೂ, ಇವರಿಬ್ಬರು ಶೋಧಿಸಲು  ನಿಂತ ನೆಲೆಗಳು  ಬೇರೆಬೇರೆ!!.  ಯೋಗಿ ತನ್ನ ದೇಹ ಬಳಸಿ  ಯೋಗವೆಂಬ ವಾಹನದ  ಮೂಲಕ   ಅಂತರಂಗದಲಿ ತನ್ನ ಅಂತಿಮ ಗಮ್ಯ ಸ್ಥಾನವಾದ  ಪರಮಾತ್ಮ ಸಾಕ್ಷಾತ್ಕಾರಕ್ಕೆ  ಹೊರಟರೆ, ವಿಜ್ಞಾನಿಯು ತನ್ನ ಪ್ರಯೋಗವೆಂಬ ವಾಹನ ಹತ್ತಿ  ಬಹಿರಂಗದಲಿ ತನ್ನ ಅಂತಿಮ ಗಮ್ಯ ಸ್ಥಾನವಾದ ಪರಮಾಣು ಸಾಕ್ಷಾತ್ಕಾರಕ್ಕೆ ಹೊರಟವನು.

ಪಾಶ್ಚಿಮಾತ್ಯ ಧಾರ್ಮಿಕವಾದಿಗಳು ಇಂಗ್ಲಿಷ್ ನಲ್ಲಿ ಆತ್ಮಕ್ಕೆ soul ಎಂದು ಕರೆದರೆ, ಪರಮಾತ್ಮಕ್ಕೆ god ಎಂದು ಕರೆಯುತ್ತಾರೆ. ಅದೇ ರೀತಿ ಪಾಶ್ಚಿಮಾತ್ಯ ವಿಜ್ಞಾನಿಗಳು  ಅಣುವಿಗೆ molecule ಎಂದು ಕರೆದರೆ, ಪರಮಾಣುವಿಗೆ atom ಎಂದು ಕರೆಯುತ್ತಾರೆ.

ಈ ಇಬ್ಬರದ್ದೂ ಶಕ್ತಿ ವಾದವೇ, ತಮ್ಮ ಶಕ್ತಿ ವಾದದ  ಮೂಲಕ ವಿಶಿಷ್ಟ ಶಕ್ತಿಯನ್ನು ಅರಸಿ  ಬೇರೆ ಬೇರೆ ದಾರಿಯಲ್ಲಿ ಹೊರಟವರು.

ಮೊದಲಿಗೆ ಬುದ್ಧ ಧಾರ್ಮಿಕರ  ಆತ್ಮವಾದವನ್ನು  ತಿರಸ್ಕರಿಸಿದ. ಆ ಮೂಲಕ ಅವರ ಪರಮಾತ್ಮವೆಂಬ ನಂಬಿಕೆಯು ಬಿದ್ದು ಹೋಯಿತು!!.  ಈ ಕಾರಣದಿಂದಾಗಿಯೇ  ಯೋಗಿ, ಪ್ರಾಯೋಗಿಗಿಂತ ಬುದ್ಧ ಬೇರೆಯೇ ಆಗಿ  ವಿಶಿಷ್ಟವಾಗಿ  ನಿಲ್ಲುತ್ತಾನೆ.

ಬುದ್ಧನ ಧ್ಯಾನಕ್ಕೂ ಮೇಲಿನಿಬ್ಬರ  ಧ್ಯಾನಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಬುದ್ಧನ ಧ್ಯಾನದಲ್ಲಿ ಆತನ  ಎದಿರು ಯಾವ ಗುರಿ, ಗಮ್ಯ ಸ್ಥಾನವಿಲ್ಲ!!.  ಬುದ್ಧನ ಧ್ಯಾನದಲ್ಲಿ ಯಾವ  ವಿಷಯಗಳಿಲ್ಲ, ಸಿದ್ಧಾಂತಗಳಿಲ್ಲ, ತರ್ಕಗಳಿಲ್ಲ, ಯಾವ ಯೋಗಾಚಾರವು ಇಲ್ಲ, ಯಾವ ಮುದ್ರೆಗಳಿಲ್ಲ, ಯಾವ ಆಕಾಂಕ್ಷೆಗಳಿಲ್ಲ, ಆಸೆಗಳಿಲ್ಲ, ಯಾವ ನಂಬಿಕೆಗಳಿಲ್ಲ, ಯಾವ ಅಪನಂಬಿಕೆಗಳಿಲ್ಲ
ಅಥವಾ ಅದು ಲೋಕ ರೂಡಿಯವರು ನಂಬಿಕೊಂಡಂತಹ  ಧ್ಯಾನ ಅದಲ್ಲ.  ಲೋಕರೂಡಿಯವರು ನಂಬಿಕೊಂಡಂತೆ  ಧ್ಯಾನವೆಂದರೇ ಒಂದು ಮರದ ಕೆಳಗೆ  ಕಣ್ಣುಗಳ ಮುಚ್ಚಿ ದೇವರ ಸಾಕ್ಷಾತ್ಕಾರಕ್ಕೆ ಪ್ರಯತ್ನಿಸುವ ಯತ್ನ.

ಆದರೆ, ಬುದ್ಧನ ಧ್ಯಾನವೆಂದರೇ ಯಾವುದನ್ನು ಕುರಿತು ಧ್ಯಾನಿಸದಿರುವುದು!!. ಮನುಷ್ಯ ನಾಗರಿಕತೆಯ ನಡುವೆ ಇಲ್ಲಿಯವರೆಗೆ ಏನೇನೂ ನಂಬಿಕೊಂಡು ಬಾಳುತ್ತಿದ್ದಾನೋ  ಅದನ್ನೂ ಮತ್ತು ಮನುಷ್ಯ ನಾಗರಿಕತೆಯ ನಡುವೆ ಇಲ್ಲಿಯವರೆಗೆ ಏನೇನನ್ನು ಅಪನಂಬಿಕೆಯಿಂದ ಕಾಣುತ್ತಿದ್ದಾನೋ ಅದನ್ನೂ ಒಟ್ಟಾಗಿ  ಬುದ್ಧ ಮಹಾಶಯ  ತಿರಸ್ಕರಿಸಿ ಬಿಟ್ಟ!!.

ಆ ಧ್ಯಾನದ ಅಲ್ಟಿಮೆಟ್ ನೆಸ್ ಇರುವುದು ಯಾವುದನ್ನು ಕುರಿತು ಧ್ಯಾನಿಸದಿರುವುದು ಅಷ್ಟೇ ಅಲ್ಲ,  ಯಾವುದನ್ನು ಕುರಿತು ಧ್ಯಾನಿಸದಿರುವುದು ಎಂಬ ವಿಷಯವನ್ನು ಅಂತಿಮವಾಗಿ ಬಿಟ್ಟು ಕೊಟ್ಟಲ್ಲಿ  ಮನುಷ್ಯನಿಗೆ ಜ್ಞಾನೋದಯ  ಖಂಡಿತ ಸಾಧ್ಯವೆಂಬುದನ್ನು  ಅರಿತಿದ್ದ!!.  ಇಲ್ಲವಾದರೆ ಯಾವುದನ್ನು ಕುರಿತು ಧ್ಯಾನಿಸದಿರುವುದು ಎಂಬ ವಿಷಯ ಅಥವಾ ಆಲೋಚನೆಯೇ  ಕೊನೆಗೆ ತನಗೊಂದು ಬಲೆಯಾಗಿ ತನ್ನ ಸುತ್ತ ಸುತ್ತಿಕೊಳ್ಳುತ್ತದೆ ಎಂಬ ಅರಿವಿದ್ದೆ ಬುದ್ಧ ಕೊನೆಗೆ ಆ  'ಯಾವುದನ್ನು ಕುರಿತು ಧ್ಯಾನಿಸದಿರುವುದು ಎಂಬುದನ್ನು ಕುರಿತು ಕೂಡ  ಧ್ಯಾನಿಸದಿರುವುದು! ' ಎಂಬುದನ್ನು ಕಂಡುಕೊಂಡ.

ಬುದ್ದನಿಗೆ ಅರಿವಿತ್ತು. ಎಂತಹ  ಅರಿವು!!??.  ಮನುಷ್ಯನ  ನಾಗರಿಕತೆಯ ನಡುವೆ, ಮನುಷ್ಯನ  ಚೈತನ್ಯವನ್ನು,  ಮನುಷ್ಯನ ಮುಗ್ದತೆಯನ್ನು  ಮತ್ತು ಮನುಷ್ಯನ ಮೌನವನ್ನು  ಹಾಗೂ ಮನುಷ್ಯನ ಮುಗ್ದ ನಗುವನ್ನು  ಯಾವು ಯಾವುಗಳು  ಕೊಲ್ಲುತ್ತಿವೆ ಎಂಬ ಅರಿವಿತ್ತು!!.  ಮನುಷ್ಯನ ನಾಗರಿಕತೆಯ ನಡುವೆ ಈ ನಂಬಿಕೆ ಮತ್ತು ಅಪನಂಬಿಕೆಯ  ನಿಜವಾದ ಪಾತ್ರದ  ಆಳ ಅಗಲ ಆತನಿಗೆ  ತಿಳಿದ್ದಿತ್ತು. ಈ ನಂಬಿಕೆ ಮತ್ತು ಅಪನಂಬಿಕೆಯ ನೆಲವಾಗಿಸಿಕೊಂಡು  ನಿಂತ  ಮನುಷ್ಯನ  ಬ್ರಾಂತಿಯ  ಮರಕ್ಕೆ ಅಥವಾ ತನ್ನೊಳಗಿನ  ಆ ಬ್ರಾಂತಿಯ  ಮರದ  ಬುಡ್ಡಕ್ಕೆ ಕೊಡಲಿ ಬೀಸಿ ಆ ಮರವ ಬುದ್ಧ ಕೆಡವಿ ಬಿಟ್ಟ!!. ಯಾಕೆಂದರೆ, ಆ ಬ್ರಾಂತಿಯ  ಮರದಲ್ಲಿ ಮನುಷ್ಯನೆಲ್ಲ ಹುಚ್ಚಾಟಗಳು, ಅತಿರತಿಯ ಸುಖದ  ಗೂಡುಗಳು, ಆ  ಗೂಡಿನಿಂದ  ಹೊರ ಹಾರುವ ಮರಿ  ಹಕ್ಕಿಗಳು, ಮನುಷ್ಯ ನಂಬಿಕೊಂಡ  ಆತ್ಮ -ಪರಮಾತ್ಮ, ಅಣು-ಪರಮಾಣು ಅಥವಾ ಮನುಷ್ಯನೆಲ್ಲ ನಂಬಿಕೆ ಮತ್ತು ಅಪನಂಬಿಕೆಗಳು ಆ ಮರದಲ್ಲಿ ವಾಸವಾಗಿದ್ದವು. ಅವು ಮನುಷ್ಯನ  ಚೈತನ್ಯವನ್ನು, ಅವು ಮನುಷ್ಯನ ಮುಗ್ದತೆಯನ್ನು ಕೊಲ್ಲುವ ಕೊಲುದಾಣವಾಗಿದ್ದವು!!!. ಆ  ಕಾರಣಕಾಗಿಯೇ  ಬುದ್ಧ ಅವೆಲ್ಲವನ್ನು ತಿರಸ್ಕರಿಸಿ ಬಿಟ್ಟ!!!. ಬುದ್ಧ ಆಗೇ ತಿರಸ್ಕರಿಸಿದ  ತಕ್ಷಣವೇ  ತನ್ನ ಅಂತರಂಗದಲ್ಲಿ ಚೈತನ್ಯದ  ಚಿಲುಮೆಯ ಬಾಯಿಗೆ ಅಡ್ಡವಾಗಿದ್ದ ಎಲ್ಲ ಅಡೆತಡೆಗಳು ಬಿಸಿಲಿಗೆ ಬಿದ್ದ ಹಿಮದ ಬಂಡೆಗಳಂತೆ ಕರಗುತ್ತಿರುವುದ್ದನ್ನು ಕಂಡ!!.  ಅಡೆತಡೆಗಳು  ಇಲ್ಲವಾದ ಕ್ಷಣವೇ ಆತನೊಳಗಿನಿಂದ ಚೈತನ್ಯವೂ ಇಡೀ ದೇಹವನ್ನು ಆವರಿಸಿದನ್ನು ಕಂಡ!!. ಆ  ಚೈತನ್ಯವೂ ಅವನೀಡಿ ದೇಹದೊಳಗೆ  ಕೊರೈಸುವ ಬೆಳಕಾಗಿ ಹಬ್ಬಿರುವುದನ್ನು ಕಂಡ!!.  ಅನಂತರ, ಶಬ್ದದ  ಜಾಗದಲ್ಲಿ ನಿಶಬ್ದದ  ಮೌನದ  ಅಲೆಗಳು ಅವನ ಇಡೀ ದೇಹವನ್ನು ಆವರಿಸಿ ಆತನ ಕಣ್ಣಲ್ಲಿ ಅದು ನೋಟವಾಗಿ, ಮುಖ ಮತ್ತು ತುಟಿಯಲ್ಲಿ ಮೌನದ ನಗೆಯಾಗಿ  ಶಾಶ್ವತವಾಗಿ ನೆಲೆಸಿದ್ದನ್ನು  ಕಂಡ!!. ಆ  ಅತೀತವಾದ ಆನಂದವು ಅವನೊಳಗಿನಿಂದ ಕಣ್ಣುಗಳು ಮತ್ತು ಮುಖದ ಮೂಲಕ ಹೊರ ಚಿಮ್ಮತ್ತಿರುವುದನ್ನು ಹಾಗೂ ಇಡೀ ದೇಹವೇ  ಅದರ ಪ್ರಭಾವಳಿಯಿಂದ ಹೊಳೆಯುತ್ತಿರುವುದ್ದನ್ನು ಕಂಡ!!. ಅಂದಿನಿಂದ ಬುದ್ಧ ಮಾತನಾಡುವುದನ್ನು  ಬಿಟ್ಟು ಬಿಟ್ಟ!!. ಜನ ಅವನ ಆ  ಸ್ಥಿತಿಯನ್ನು ಕಂಡು  ಆ ಸ್ಥಿತಿಗೆ ಜ್ಞಾನೋದಯ ಎಂದು ಹೆಸರಿಟ್ಟರು. ಮತ್ತೆ ಕೆಲವರು ಆ ಸ್ಥಿತಿಗೆ ನಿರ್ವಾಣ ಎಂದರು.

ಮಾತನ್ನು ಬಿಟ್ಟು ಮೌನಕ್ಕೆ ಶರಣಾದ ಬುದ್ಧನ ಸುತ್ತ ಇದ್ದ ಬುದ್ಧನ ಆ ಅತೀತ ಆನಂದದ ಸ್ಥಿತಿಯ ಅಭಿಮಾನಿಗಳು, ಆ ಸ್ಥಿತಿಯ ತಲುಪಲು ಯಾವ ಯಾವ ತಂತ್ರ ಬಳಸಬೇಕು, ಯಾವ ತಂತ್ರ ಬಳಸಬಾರದು ಎಂಬೆಲ್ಲ ಶೋಧನೆಗಿಳಿದ್ದಿದ್ದರ ಫಲವೇ  ಮಹಾಯಾನ ಮತ್ತು ಹೀನಾಯಾನ ಎಂಬೆರಡು  ಬೌದ್ಧ ಪಂಥಗಳು!!.
~ ಫೀನಿಕ್ಸ್ ರವಿ

© Copyright 2022, All Rights Reserved Kannada One News