ನಾನು ಈಗಲೂ ಗೋಮಾಂಸ ತಿನ್ನುತ್ತೇನೆ: 'ಕಾಶ್ಮೀರ್‌ ಫೈಲ್ಸ್‌' ನಿರ್ದೇಶಕನ ವಿಡಿಯೊ ವೈರಲ್‌

ನಾನು ಈಗಲೂ ಗೋಮಾಂಸ ತಿನ್ನುತ್ತೇನೆ: 'ಕಾಶ್ಮೀರ್‌ ಫೈಲ್ಸ್‌' ನಿರ್ದೇಶಕನ ವಿಡಿಯೊ ವೈರಲ್‌

Updated : 09.09.2022

ಬೆಂಗಳೂರು: ವಿವಾದಿತ ಹೇಳಿಕೆಗೆ ಹೆಸರುವಾಸಿಯಾಗಿರುವ 'ಕಾಶ್ಮೀರ್‌ ಫೈಲ್ಸ್‌' ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಈಗ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ.

ಗೋಮಾಂಸ ಸೇವನೆಗೆ ಸಂಬಂಧಿಸಿದಂತೆ ಅಗ್ನಿಹೋತ್ರಿ ನೀಡಿರುವ ಹೇಳಿಕೆಯ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.

‘ಎಲ್ಲಿ ಉತ್ತಮ ಗೋಮಾಂಸ ಸಿಗುವುದೆಂದು ಹಿಂದೆ ಬರೆದಿದ್ದೆ. ನಾನು ಅದನ್ನು ತಿನ್ನುತ್ತಿದ್ದೆ, ಈಗಲೂ ತಿನ್ನುತ್ತೇನೆ. ನನ್ನ ಬದುಕಲ್ಲಿ ಏನೂ ಬದಲಾಗಿಲ್ಲ’ ಎಂದು ವಿವೇಕ್‌ ಅಗ್ನಿಹೋತ್ರಿ ವಿಡಿಯೊದಲ್ಲಿ ಹೇಳಿದ್ದಾರೆ. ಇದು ಹಳೆಯ ವಿಡಿಯೊ ಎನ್ನಲಾಗಿದೆ.

ನಟ ರಣಬೀರ್‌ ಕಪೂರ್ ಅವರು ಗೋಮಾಂಸ ಸೇವಿಸುವುದರ ಬಗೆಗಿನ ವಿಡಿಯೊ ವೈರಲ್‌ ಆಗಿತ್ತು. ಇದರ ಬೆನ್ನಲ್ಲೇ ಕಪೂರ್‌ ನಟನೆಯ ಬ್ರಹ್ಮಾಸ್ತ್ರ ಚಿತ್ರವನ್ನು ಬಹಿಷ್ಕರಿಸಬೇಕೆಂದು ಕರೆ ನೀಡಲಾಗಿತ್ತು. 

ಬ್ರಹ್ಮಾಸ್ತ್ರ ಚಿತ್ರವನ್ನು ಟೀಕಿಸಿದ್ದ ಅಗ್ನಿಹೋತ್ರಿ ವಿಡಿಯೊ ಈಗ ವೈರಲ್‌ ಆಗಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

© Copyright 2022, All Rights Reserved Kannada One News