ವಿಠ್ಠಲ ದಳವಾಯಿ ಅವರ ‘ಕಾಡ ಹೂವಿನ ಹಾಡು’ ಕೃತಿ ಬಿಡುಗಡೆ

ವಿಠ್ಠಲ ದಳವಾಯಿ ಅವರ ‘ಕಾಡ ಹೂವಿನ ಹಾಡು’ ಕೃತಿ ಬಿಡುಗಡೆ

Updated : 22.10.2022

ಕವಿ ವಿಠ್ಠಲ ದಳವಾಯಿ ಅವರು ಅನುವಾದಿಸಿರುವ ಹಾಗೂ ‘ಸಮಕಾಲೀನ ಓದು ಬರಹ ಪ್ರಕಾಶನ’ ಪ್ರಕಟಿಸಿರುವ
ವಿಲಿಯಂ ಬ್ಲೇಕ್ ಕವಿತೆಗಳ ಅನುವಾದ ಸಂಕಲನ ‘ಕಾಡ ಹೂವಿನ ಹಾಡು’ ಕೃತಿಯನ್ನು ವೈಷ್ಣವಿ ಪ್ರಕಾಶನದ ಪುಸ್ತಕ ಮಳಿಗೆಯಲ್ಲಿ ಸಾಂಕೇತಿಕವಾಗಿ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಾಹಿತಿಗಳಾದ ಜಿ.ಪಿ. ಬಸವರಾಜು, ದಸ್ತಗೀರ ದಿನ್ನಿ, ಕವಿಗಳಾದ ವಿಠ್ಠಲ ದಳವಾಯಿ, ಮೆಹಬೂಬ್ ಮಠದ, ಮೆಹಬೂಬ್ ಮುಲ್ತಾನಿ, ಭುವನಾ ಹಿರೇಮಠ, ಮುದಿರಾಜ ಬಾಣದ, ಚಾಂದ್ ಕವಿಚಂದ್ರ, ಸುಮಿತ್ ಮೇತ್ರಿ ಮತ್ತಿತರರು ಉಪಸ್ಥಿತರಿದ್ದರು.


© Copyright 2022, All Rights Reserved Kannada One News