Flash News:
ಉತ್ತರಾಖಂಡ್‌: ಹಿಮಕುಸಿತದಲ್ಲಿ ಸಿಲುಕಿದ 28 ಪರ್ವತಾರೋಹಿಗಳು

ಉತ್ತರಾಖಂಡ್‌: ಹಿಮಕುಸಿತದಲ್ಲಿ ಸಿಲುಕಿದ 28 ಪರ್ವತಾರೋಹಿಗಳು

Updated : 04.10.2022

ಉತ್ತರಾಖಂಡದ ದ್ರೌಪದಿಯ ದಂಡ 2 ಪರ್ವತ ಶಿಖರದಲ್ಲಿ ಮಂಗಳವಾರ ಹಿಮಕುಸಿದಿದೆ. 28 ಪರ್ವತಾರೋಹಿಗಳು ಹಿಮಕುಸಿತದಲ್ಲಿ ಸಿಲುಕಿದ್ದಾರೆ ಎಂದು ವರದಿಯಾಗಿದೆ.

"ಉತ್ತರ ಕಾಶಿಯಲ್ಲಿ ಹಿಮಕುಸಿತದ ಪರಿಣಾಮ ನೆಹರು ಪರ್ವತಾರೋಹಣ ಸಂಸ್ಥೆಯ (ಎನ್‌ಐಎಂ) 28 ಪ್ರಶಿಕ್ಷಣಾರ್ಥಿಗಳು ಸಿಲುಕಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ" ಎಂದು ಉತ್ತರಾಖಂಡ್‌ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ.

ಉತ್ತರಾಖಂಡದ ಗರ್ವಾಲ್ ಹಿಮಾಲಯದ ಗಂಗೋತ್ರಿ ಶ್ರೇಣಿಯಲ್ಲಿನ ಶಿಖರದಲ್ಲಿ ಹಿಮಕುಸಿತವಾಗಿದೆ.

ಘಟನೆಗೆ ಸಂಬಂಧಿಸಿ ಪುಷ್ಕರ್ ಸಿಂಗ್ ಧಾಮಿ ಅವರು ಟ್ವೀಟ್ ಮಾಡಿ, "ದ್ರೌಪದಿಯ ದಂಡೆಯಲ್ಲಿ ಹಿಮಪಾತದಲ್ಲಿ ಸಿಲುಕಿರುವ ಪ್ರಶಿಕ್ಷಣಾರ್ಥಿಗಳನ್ನು ರಕ್ಷಿಸಲು ಎನ್‌ಐಎಂ ತಂಡದೊಂದಿಗೆ ಜಿಲ್ಲಾಡಳಿತ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಸೇನೆ ಹಾಗೂ ಐಟಿಬಿಪಿ ಸಿಬ್ಬಂದಿಗಳು ಕ್ಷಿಪ್ರ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ" ಎಂದು ತಿಳಿಸಿದ್ದಾರೆ.

"ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಕ್ಷಣೆಗೆ ಬೇಕಾದ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಸೇನೆಯ ಸಹಾಯದಿಂದ ರಕ್ಷಣಾ ಕಾರ್ಯಚರಣೆ ನಡೆಸಿದೆ" ಎಂದು ಹೇಳಿದ್ದಾರೆ.

© Copyright 2022, All Rights Reserved Kannada One News