ಮೊಳಕೆ ಕಾಳಿನ ಉಪಯೋಗಗಳು: ಹೆಲ್ತ್‌ ಟಿಪ್ಸ್‌

ಮೊಳಕೆ ಕಾಳಿನ ಉಪಯೋಗಗಳು: ಹೆಲ್ತ್‌ ಟಿಪ್ಸ್‌

Updated : 26.09.2022

 ಕಾಳುಗಳನ್ನು ಬೇಯಿಸಿ ತಿನ್ನುವ ಬದಲು ಮೊಳಕೆ ಕಟ್ಟಿ ಹಸಿಯಾಗಿ ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಹೆಚ್ಚು ಲಾಭದಾಯಕವಾಗಿದೆ. ಮೊಳಕೆ ಬರಿಸಿದ ಹೆಸರು ಕಾಳಿನಲ್ಲಿ ಪ್ರೋಟೀನ್‌, ಫೈಬರ್‌, ವಿಟಮಿನ್ಸ್‌, ಕ್ಯಾಲ್ಸಿಯಂ ಹಾಗೂ ಕಬ್ಬಿಣ್ಣದ ಅಂಶ ಹೇರಳವಾಗಿರುತ್ತವೆ. ಮೊಳಕೆ ಬರಿಸಿದ ಕಾಳುಗಳು ಆರೋಗ್ಯಕ್ಕೆ ಉತ್ತಮ ಪೋಷಣೆ ನೀಡುತ್ತವೆ. ಇದರ ಉಪಯೋಗವನ್ನು ಪ್ರಾಚೀನ ಕಾಲದಿಂದಲೂ ಮಾಡಲಾಗುತ್ತಿದೆ. ಚೀನೀ ಪಾಕ ವಿಧಾನದಲ್ಲಿ ಮೊಳಕೆ ಬರಿಸಿದ ಕಾಳುಗಳನ್ನು ಪ್ರಧಾನ ಆಹಾರ ಎಂದು ಪರಿಗಣಿಸಲಾಗಿದೆ. ಮೊಳಕೆ ಭರಿಸಿದ ಧಾನ್ಯಗಳಲ್ಲಿ ಸಂಪೂರ್ಣವಾದ ಪೋಷಕಾಂಶಗಳು ಹಾಗೂ ಜೀವಸತ್ವಗಳು ಇರುತ್ತವೆ ಇನ್ನೂ ಮೊಳಕೆ ಕಾಳಿನಿಂದಾಗುವ ಆರೋಗ್ಯ ಪ್ರಯೋಜನಗಳ ಏನೆಂದು ತಿಳಿಯೋಣ ಬನ್ನಿ.

1. ಜೀರ್ಣ ಕ್ರಿಯೆಯನ್ನು ಸುಧಾರಿಸುತ್ತದೆ

ಮೊಳಕೆ ಬರಿಸಿದ ಕಾಳುಗಳಲ್ಲಿ ಸಮೃದ್ಧವಾಗಿ ನಾರಿನಂಶ ಹಾಗೂ ಒಮೆಗಾ-3 ಕೊಬ್ಬಿನಾಮ್ಲಗಳು ಇರುತ್ತವೆ. ಇದನ್ನು ನಿತ್ಯ ಸೇವಿಸುವುದರಿಂದ ಚಯಾಪಚಯ ಕ್ರಿಯೆ ಸುಧಾರಿಸುವುದು. ಮಲಬದ್ಧತೆ, ಅತಿಸಾರ ಹಾಗೂ ಕರುಳಿನ ಕ್ಯಾನ್ಸರ್ ಆಗುವುದನ್ನು ತಡೆಯುವುದು. ಇದು ಪೋಷಕಾಂಶಳನ್ನು ಹೀರಿಕೊಳ್ಳಲು ಸಹಾಯ ಮಾಡುವುದು. ಜೊತೆಗೆ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.2. ರಕ್ತದಲ್ಲಿ ಸಕ್ಕರೆಯನ್ನು ಕಡಿಮೆ ಮಾಡುತ್ತದೆ
ಮಧುಮೇಹ ಹೊಂದಿದವರಿಗೆ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಲು ಮೊಳಕೆ ಬರಿಸಿದ ಕಾಳುಗಳನ್ನು ಸೇವಿಸಲು ಸಲಹೆ ನೀಡಲಾಗುವುದು. ಮೊಳಕೆ ಭರಿಸಿದ ಕಾಳುಗಳು ರಕ್ತದಲ್ಲಿ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುವುದು. ಅವುಗಳಲ್ಲಿ ಕಾರ್ಬೋಹೈಡ್ರೇಟ್ಸ್ ಕಡಿಮೆ ಪ್ರಮಾಣದಲ್ಲಿ ಇರುತ್ತವೆ. ಜೊತೆಗೆ ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ ಎಂದು ಕೆಲವು ಅಧ್ಯಯನಗಳು ಸಹ ಸಾಭೀತು ಪಡಿಸಿವೆ.3. ಹೃದಯದ ಆರೋಗ್ಯವನ್ನು ಕಾಪಾಡುತ್ತದೆ
ಮೊಳಕೆ ಭರಿಸಿದ ಕಾಳುಗಳಲ್ಲಿ ನಾರಿನಾಂಶ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿ ಇರುವುದರಿಂದ ಹೃದಯದ ಆರೋಗ್ಯವನ್ನು ಸುಲಭವಾಗಿ ಸುಧಾರಿಸುವುದು. ಹೃದಯದ ಉತ್ತಮ ಆರೋಗ್ಯಕ್ಕೆ ಈ ಎರಡು ಪೋಷಕಾಂಶಗಳು ಅತ್ಯಗತ್ಯ. ಇವುಗಳಲ್ಲಿ ಇರುವ ನಾರಿನಂಶ ಮತ್ತು ಒಮೆಗಾ-3 ಕೊಬ್ಬಿನಾಮ್ಲ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದು. ಹೃದಯದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಜೊತೆಗೆ ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಗಳು ಬರದಂತೆ ಕಾಪಾಡುವುದು.


4. ಕೂದಲನ್ನು ಬಲಪಡಿಸುತ್ತದೆ

ವಿಟಮಿನ್ ಸಿ ಕೂದಲು ಬೆಳವಣಿಗೆ ಹಾಗೂ ಬಲವನ್ನು ಹೆಚ್ಚಿಸಲು ಸಹಾಯ ಮಾಡುವುದು. ಮೊಳಕೆ ಬರಿಸಿದ ಕಾಳುಗಳಲ್ಲಿ ಅಧಿಕ ಪ್ರಮಾಣ ವಿಟಮಿನ್ ಸಿ ಇರುತ್ತದೆ ಆದ್ದರಿಂದ ಇದು ಕೂದಲು ಉದುರುವುದು, ಒರಟಾಗುವುದು, ಬಣ್ಣವನ್ನು ಕಳೆದುಕೊಳ್ಳುವುದು ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ನಿವಾರಿಸುವುದು. ಕೂದಲುಗಳ ಕೋಶಗಳನ್ನು ಬಲಪಡಿಸಿ, ಉತ್ತಮ ಆರೋಗ್ಯವನ್ನು ಹೊಂದಿರುವಂತೆ ಮಾಡುವುದು. ತಲೆ ಹೊಟ್ಟು, ಕೂದಲುಗಳ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸುವುದು.

5. ತೂಕ ನಿಯಂತ್ರಣ

ಮೊಳಕೆಕಾಳುಗಳು ಹೆಚ್ಚಿನ ಪೌಷ್ಟಿಕಾಂಶಗಳನ್ನು ಹೊಂದಿದ್ದರೂ, ಕಡಿಮೆ ಕ್ಯಾಲೋರಿ ಹೊಂದಿರುವುದರಿಂದ ತೂಕ ಹೆಚ್ಚು ಏರುವುದಿಲ್ಲ. ಅಲ್ಲದೆ, ಅಧಿಕ ಫೈಬರ್ ಹೊಂದಿರುವ ಮೊಳಕೆಕಾಳುಗಳು ಹೆಚ್ಚಿನ ಸಮಯ ಹೊಟ್ಟೆ ತುಂಬಿರುವ ಭಾವ ನೀಡುತ್ತದೆ. ಇದರಿಂದ ಹಸಿವು ಕಡಿಮೆಯಾಗಿ ತೂಕ ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆ.

6. ಕಣ್ಣಿನ ಆರೋಗ್ಯ ಸುಧಾರಿಸುವುದು
ಕೆಲವು ಸಂಶೋಧನೆ ಮತ್ತು ಅಧ್ಯಯನಗಳಿಂದ ಮೊಳಕೆ ಕಾಳುಗಳು ಕಣ್ಣಿನ ಆರೋಗ್ಯವನ್ನು ಉತ್ತಮವಾಗಿಸುವುದು ಎನ್ನುವುದನ್ನು ಸಾಭೀತು ಪಡಿಸಿದೆ. ವಿಶೇಷವಾಗಿ ಕಣ್ಣಿನ ಪೊರೆ, ದೃಷ್ಟಿ ದೋಷ, ದುರ್ಬಲ ದೃಷ್ಟಿ, ಇರುಳುಗಣ್ಣು ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಯನ್ನು ಸುಧಾರಿಸುವುದು. ಮೊಳಕೆ ಕಾಳುಗಳಲ್ಲಿ ವಿಟಮಿನ್ ಎ ಸಮೃದ್ಧವಾಗಿರುತ್ತದೆ. ಇದು ಕಣ್ಣಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸಲು ಹಾಗೂ ದೃಷ್ಟಿ ಆರೋಗ್ಯ ಹೆಚ್ಚಿಸಲು ಸಹಾಯ ಮಾಡುವುದು.

ಆರೋಗ್ಯಕರ ತ್ವಚೆ

ಮೊಳಕೆ ಕಾಳುಗಳಲ್ಲಿರುವ ವಿಟಮಿನ್ ಇ ಹಾಗೂ ಎ ನಿಮ್ಮ ಚರ್ಮಕ್ಕೆ ಅಗತ್ಯವಿರುವ ಪೌಷ್ಟಿಕತೆಯನ್ನು ನೀಡಿ, ಕೊಲಾಜನ್ ಉತ್ಪಾದನೆಯನ್ನು ಪ್ರಚೋದಿಸುತ್ತದೆ. ಕೊಲಾಜನ್ ನಿಮ್ಮ ಚರ್ಮವನ್ನು ಮೃದುವಾಗಿಸಿ ಹೊಳೆಯುವಂತೆ ಮಾಡಿ, ಆರೋಗ್ಯಕರವಾಗಿಸುತ್ತದೆ. ಮೊಳಕೆ ಕಾಳುಗಳು ಜೀವಕೋಶಗಳ ಪುನರುತ್ಪಾದನೆಯ ಮೂಲಕ ದೇಹದಲ್ಲಾದ ಗಾಯವನ್ನು ಗುಣಪಡಿಸುವಲ್ಲಿ ಸಹಾಯ ಮಾಡುತ್ತ

ತಲೆಹೊಟ್ಟಿನಿಂದ ಮುಕ್ತಿ

ಮೊಳಕೆ ಕಾಳುಗಳಲ್ಲಿ ಸೆಲೆನಿಯಮ್‌ನಿಂದ ಸಮೃದ್ಧವಾಗಿದ್ದು, ಮಲಸ್ಸೇಜಿಯಾ ಎಂಬ ತಲೆಹೊಟ್ಟನ್ನು ಉಂಟು ಮಾಡುವ ಫಂಗಸ್ ಕೊಲ್ಲುವಲ್ಲಿ ಸಹಾಯ ಮಾಡುತ್ತದೆ. ಪ್ರತಿನಿತ್ಯ ಮೊಳಕೆ ಕಾಳುಗಳನ್ನು ಸೇವಿಸುವುದರಿಂದ ಈ ತಲೆಹೊಟ್ಟು ಸಂಪೂರ್ಣ ಮಾಯವಾಗುತ್ತದೆ. ಇದರ ಪರಿಣಾಮವಾಗಿ ತುರಿಕೆಯೂ ನಿಲ್ಲುತ್ತದೆ. ಹಸಿ ಕಾಳುಗಳನ್ನು ಸೇವಿಸುವುದು ಬೇಯಿಸಿದ ಕಾಳುಗಳಿಗಿಂತ ಉತ್ತಮ.

ಮೊಳಕೆ ಕಾಳು ನಮ್ಮ ಆರೋಗ್ಯಕ್ಕೆ ಅತ್ಯುತ್ತಮವಾದುದ್ದು. ಅವುಗಳಲ್ಲಿ ಕ್ಯಾಲ್ಸಿಯಮ್, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಪೋಲೆಟ್, ಇದ್ದು, ಕಡಿಮೆ ಪ್ರಮಾಣದ ಕ್ಯಾಲೋರಿ ಇರುತ್ತವೆ. ಒಂದು ಕಪ್ ಮೊಳಕೆ ಕಾಳನ್ನು ಸೇವಿಸುವುದರಿಂದ 8ರಷ್ಟು ಕ್ಯಾಲೋರಿ, 1 ಗ್ರಾಂ ಪ್ರೋಟೀನ್, 1 ಗ್ರಾಂಕ್ಕಿಂತಲೂ ಕಡಿಮೆ ಕೊಬ್ಬು, 1 ಗ್ರಾಂ ಕಾರ್ಬ್, 1 ಗ್ರಾಂ ನಾರಿನಂಶ, 1 ಗ್ರಾಂ ಗಿಂತ ಕಡಿಮೆ ಸಕ್ಕರೆ ಪ್ರಮಾಣವನ್ನು ಪಡೆಯಬಹುದಾಗಿದೆ, ನಾವು ದಿನನಿತ್ಯ ಜೀವನದಲ್ಲಿ ಕಾಳುಗಳನ್ನು ಸೇವಿಸುವುದು ಸರ್ವೆ ಸಾಮಾನ್ಯ ಇನ್ನೂ ಮೊಳಕೆ ಕಾಳನ್ನು ನಿಮ್ಮ ಆಹಾರ ಕ್ರಮದಲ್ಲಿ ಬಳಸಿಕೊಂಡು ನಿಮ್ಮ ಆರೋಗ್ಯ ವೃದ್ಧಿಸಿಕೊಳ್ಳಿ.

 -ಕನ್ನಡ ಒನ್‌ ನ್ಯೂಸ್‌ ಬಳಗ
© Copyright 2022, All Rights Reserved Kannada One News