ಆರೆಸ್ಸೆಸ್, ರಾಷ್ಟ್ರಧ್ವಜ ಮತ್ತು ದೇಶ ಪ್ರೇಮ: ಉಮರ್‌ ಫಾರೂಕ್‌ ಅವರ ವಾರದ ಅಂಕಣ

Related Articles

ಕುಸುಮಬಾಲೆ ‘ಅವರವರಗ ತಿಳಿದ ರೀತೀಲೀ...’: ಡಾ.ರವಿಕುಮಾರ್ ನೀಹ ಅವರ ಅಂಕಣ

ಯೋಗ, ಪ್ರಯೋಗ ಮತ್ತು ಬುದ್ಧ ಭಾಗ-ನಾಲ್ಕು: ಫೀನಿಕ್ಸ್ ರವಿ ಅವರ ವಾರದ ಅಂಕಣ

ಸಿಎಂ ಬಸವರಾಜ ಬೊಮ್ಮಾಯಿ ರಾಜೀನಾಮೆ..?: ಎಡಿಟರ್ ಸ್ಪೆಷಲ್

ನಂಬಲಾರದ ದು:ಸ್ವಪ್ನ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಬೇಟಿ ಬಚಾವೋ ಬಿಜೆಪಿಯಿಂದ..!: ಎಡಿಟರ್ ಸ್ಪೆಷಲ್

ಸಂಗೀತಿ ಸುತ್ತ-ಬುದ್ಧರ ಬೋಧನೆಗಳ ಸಾರ ಭಾಗ-2: ರಮಾಕಾಂತ ಪುರಾಣಿಕ ಅವರ 25ನೇ ಅಂಕಣ

ಮಾರಕ ಮತಾಂತರ ಕಾಯ್ದೆಗೆ ಅಸ್ತು!: ಎಡಿಟರ್ ಸ್ಪೆಷಲ್

ಯೋಗ, ಪ್ರಯೋಗ ಮತ್ತು ಬುದ್ಧ ಭಾಗ-ಮೂರು: ಫೀನಿಕ್ಸ್ ರವಿ ಅವರ ವಾರದ ಅಂಕಣ

ಕಾಲದ ತಲ್ಲಣಗಳು: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಧಮ್ ಇದ್ದು…ತಾಕತ್ತಿದ್ದು…ನಿದ್ದೆ ಹೊಡೆದ ಕುರ್ಚಿಗಳು; ಎಚ್ಚೆತ್ತ ಜನಗಳ ದೇಶ ಕಟ್ಟೊ ಜಾಥಾವು: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ಆರೆಸ್ಸೆಸ್, ರಾಷ್ಟ್ರಧ್ವಜ ಮತ್ತು ದೇಶ ಪ್ರೇಮ: ಉಮರ್‌ ಫಾರೂಕ್‌ ಅವರ ವಾರದ ಅಂಕಣ

Updated : 13.08.2022

ಯಾವುದೇ ದೇಶಕ್ಕಾಗಲಿ ರಾಷ್ಟ್ರಧ್ವಜ ಎನ್ನುವುದು ಹೆಮ್ಮೆಯ ಕಿರೀಟವಾಗಿರುತ್ತದೆ. ಆ ದೇಶದ ಜನರಿಗೆ ಅದೊಂದು ಭಾವನೆಯಾಗಿರುತ್ತದೆ. ರಾಷ್ಟ್ರಧ್ವಜವನ್ನು ಗೌರವಿಸುವುದು ಕಡ್ಡಾಯ ಮತ್ತು ಗೌರವಿಸಲೇಬೇಕು. ಅಗೌರವ ತೋರುವಂತಿಲ್ಲ! ಮಾತೆತ್ತಿದ್ದರೆ ದೇಶ, ದೇಶಭಕ್ತಿ, ರಾಷ್ಟ್ರವಾದ ಅಂತ ಬೊಗಳೆ ಬಿಡುವ ಆರ್‌ಎಸ್ಎಸ್ ನಿಜಕ್ಕೂ ಮನಸ್ಸಿನಾಳದಿಂದ ರಾಷ್ಟ್ರಧ್ವಜವನ್ನು ಒಪ್ಪಿಕೊಂಡಿದಿಯೇ..? ಬಾಯಿ ತೆಗೆದ್ರೆ ದೇಶಪ್ರೇಮದ ವ್ಯಾಖ್ಯಾನ ಮಾಡುವ ಮತ್ತು ತಮ್ಮ ವ್ಯಾಖ್ಯಾನದಿಂದ ಹೊರಗಿರುವವರನ್ನು ದೇಶದ್ರೋಹಿಗಳೆಂದು ಕರೆಯುವ ಆರೆಸ್ಸೆಸ್ ಮತ್ತು ಸಂಘಪರಿವಾರ ಅದೆಷ್ಟರ ಮಟ್ಟಿಗೆ ದೇಶಭಕ್ತರು ಮತ್ತು ದೇಶಭಕ್ತಿಯ ಸೋಗಿನಲ್ಲಿ ಇವರ ಭಯೋತ್ಪಾದನೆ ಹೇಗಿದೆ ಅನ್ನೋದನ್ನ ತಿಳಿದುಕೊಳ್ಳೋಣ.
ಸ್ವಾತಂತ್ರೋತ್ಸವಕ್ಕಾಗಲೀ, ಗಣರಾಜ್ಯೋತ್ಸವಕ್ಕಾಗಲೀ ದೇಶಾದ್ಯಂತ ಖಾಸಗಿ, ಸರ್ಕಾರಿ ಹಾಗೂ ಅರೆಸರ್ಕಾರಿ ಸಂಸ್ಥೆಗಳಲ್ಲಿ ರಾಷ್ಟ್ರಧ್ವಜವನ್ನು ಮೇಲೆ ಏರಿಸುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನಗಳನ್ನು ನೆನೆಯಲಾಗುತ್ತದೆ. ಆದರೆ ಸ್ವಾತಂತ್ರ್ಯ ಗಳಿಸಿಕೊಟ್ಟ ವೀರರಿಗೆ ನಮನ ಸಲ್ಲಿಸುವ ಇಂತಹ ಅಪೂರ್ವ ಅವಕಾಶವನ್ನು ಬಳಸಿಕೊಳ್ಳದ ಆರೆಸ್ಸೆಸ್ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸದೇ ಇರುವುದು ಎಂತಹ ದೇಶಭಕ್ತಿ ಎಂದು ಅವರೇ ಹೇಳಬೇಕು! ಇನ್‌ಫ್ಯಾಕ್ಟ್‌ ಆರೆಸ್ಸೆಸ್‌ ತನ್ನ ಕಛೇರಿಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲು ಶುರು ಮಾಡಿದ್ದೇ ಇತ್ತೀಚಿಗೆ!
ಮುಸಲ್ಮಾನರ ಮಸೀದಿ ಮದರಸಾಗಳಲ್ಲಿ ಪುಡಾರಿಗಳಂತೆ ಹಾರಿಬಂದು ತ್ರಿವರ್ಣ ಧ್ವಜ ಹಾರಿಸುವ ಸಂಘಪರಿವಾರದ ಪುಡಾರಿಗಳು, ತಮ್ಮದೇ ಶಾಖೆಗಳಲ್ಲಿ ರಾಷ್ಟ್ರದ ಏಕತೆಯ, ಸಮಗ್ರತೆಯ ಪ್ರತೀಕವಾದ ತ್ರಿವರ್ಣ ಧ್ವಜವನ್ನು ಸುಮಾರು 5 ದಶಕಗಳ ಕಾಲ ಯಾಕೆ ಹಾರಿಸಲಿಲ್ಲ? ಏಕೆಂದರೆ ಅದಕ್ಕೊಂದು ಸ್ಪಷ್ಟ ಇತಿಹಾಸ ಇದೆ. 1929 ರ ಡಿಸೆಂಬರ್ ನಲ್ಲಿ ಕಾಂಗ್ರೆಸ್ ನಡೆಸಿದ ಲಾಹೋರ್ ಅಧಿವೇಶನದಲ್ಲಿ ಕೇಸರಿ, ಬಿಳಿ, ಹಸಿರಿನ ಧ್ವಜವನ್ನು ದೇಶಾದ್ಯಂತ ಹಾರಿಸಿ ಗೌರವಿಸುವ ಮೂಲಕ ಜನವರಿ 26, 1930 ರಂದು ಸ್ವಾತಂತ್ರ್ಯ ದಿನಾಚರಣೆ ಆಚರಿಸಿ ಸಂಭ್ರಮಿಸಬೇಕೆಂದು ಭಾರತೀಯರಿಗೆ ಕರೆ ನೀಡಿದರು. ಇಂತಹ ರಾಷ್ಟ್ರವಾದಿ ಕರೆಯನ್ನು ಉಲ್ಲಂಘಿಸಿದ ಸರಸಂಘಚಾಲಕರಾಗಿದ್ದ ಕೆ ಬಿ ಹೆಡ್ಗೆವಾರ್ ತ್ರಿವರ್ಣ ಧ್ವಜಕ್ಕೆ ವಿರುದ್ಧವಾಗಿ ಭಗವಾಧ್ವಜ ಹಾರಿಸಬೇಕೆಂದು ಕರೆ ನೀಡಿದ್ದರು.
ಸ್ವಾತಂತ್ರ್ಯ ಘೋಷಣೆಯ ಮುನ್ನ ಭಾರತೀಯ ಸಂವಿಧಾನ ಸಭೆ ತ್ರಿವರ್ಣ ಧ್ವಜವನ್ನು ರಾಷ್ಟ್ರಧ್ವಜವನ್ನಾಗಿ ಅಂಗೀಕರಿಸಿತ್ತು. ಮರುದಿನ ವಿರುದ್ಧವಾಗಿ, ಅಗಸ್ಟ್ 14, 1947 ರಂದು ಇಂಗ್ಲಿಷ್ ಆವೃತ್ತಿಯ ಆರ್ಗನೈಸರ್ ಪತ್ರಿಕೆಯಲ್ಲಿ ಆರೆಸ್ಸೆಸ್ ರಾಷ್ಟ್ರಧ್ವಜಕ್ಕೆ ಮಸಿ ಬಳಿಯುವಂತಹ, ಹೀಯಾಳಿಸುವಂತಹ ಲೇಖನವೊಂದನ್ನು ಪ್ರಕಟಿಸಿತು. ಲೇಖನದಲ್ಲಿನ ಬರಹಗಳು ದೇಶಪ್ರೇಮಿ ಭಾರತೀಯರನ್ನು ಕೆರಳಿಸದೆ ಇರಲಾರದು!
"ತ್ರಿವರ್ಣ ಧ್ವಜವನ್ನು ಸಂವಿಧಾನ ಸಭೆ ಅಂಗೀಕರಿಸಿರಬಹುದು ಆದರೆ ಯಾವ ಹಿಂದುವೂ ಈ ನಿರ್ಧಾರವನ್ನು ಗೌರವಿಸಬಾರದು, ಒಪ್ಪಬಾರದು. ಮೂರು ಎಂಬ ಅಂಕಿಯೇ ಅಪಶಕುನ ಮತ್ತು ದೇಶಕ್ಕೆ ಹಾನಿಕಾರಕ" ಎಂದು ಐಕ್ಯತೆಯ ಸಂಕೇತವಾದ, ಜಾತ್ಯತೀತೆಯ ಪ್ರತೀಕವಾದ ತ್ರಿವರ್ಣ ಧ್ವಜವನ್ನು ಆರೆಸ್ಸೆಸ್ ಅಲ್ಲಗಳೆದಿತ್ತು!
ಆರೆಸ್ಸೆಸ್ ಸರಸಂಘಚಾಲಕರಾಗಿದ್ದ ಕೆ ಬಿ ಹೆಡ್ಗೆವಾರ್ ಮತ್ತು ಎಂ ಎಸ್ ಗೋಲ್ವಾಲ್ಕರ್ ನ ದೇಶವಿರೋಧಿ ಚಿಂತನೆಯ ಪರಿಣಾಮ, ಸಂಘದ ಶಾಖೆಗಳಲ್ಲಿ ರಾಷ್ಟ್ರಧ್ವಜ ಹಾರಾಡದಿದ್ದರೂ ಮುಸಲ್ಮಾನರ ಮಸೀದಿ, ಮದರಸಗಳಲ್ಲಿ ತ್ರಿವರ್ಣ ಧ್ವಜ ಹಾರಾಡಬೇಕೆನ್ನುವುದೇ ಸಂಘಪರಿವಾರದ ಕಪಟ ದೇಶಭಕ್ತಿ. ದೇಶ ವಿರೋಧಿ, ಸಂವಿಧಾನ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದ ಕಾರಣಕ್ಕೆ ಎರಡು ಬಾರಿ ನಿಷೇಧಕ್ಕೊಳಗಾಗಿದ್ದ ಆರೆಸ್ಸೆಸ್ ಮಾತೆತ್ತಿದರೆ ದೇಶ, ದೇಶಭಕ್ತಿ, ರಾಷ್ಟ್ರ, ರಾಷ್ಟ್ರವಾದ ಎಂದು ಬೊಗಳೆ ಬಿಡುವುದು ಕಾಡುಗಳ್ಳ ವೀರಪ್ಪನ್ ವನಮಹೋತ್ಸವ ಆಚರಿಸಿದಂತೆ,  ಶಾಂತಿದೂತ ಗಾಂಧಿ ಕೊಂದ ಕೊಲೆಗಡುಕ ಗೋಡ್ಸೆ ಶಾಂತಿ ಮಂತ್ರ ಜಪಿಸಿದಂತೆ!
ಇವರೆಂಥ ದೇಶಭಕ್ತರು ಎನ್ನುವುದಕ್ಕೆ ಇಲ್ಲೊಂದು ಸ್ಪಷ್ಟ ಉದಾಹರಣೆ ಇಲ್ಲಿದೆ. 2001 ಜನೇವರಿ 26 ರಂದ ರಾಷ್ಟ್ರಪ್ರೇಮಿ ಯುವದಳದ ಮೂವರು ಕಾರ್ಯಕರ್ತರು ನಾಗಪುರದ ಆರೆಸ್ಸೆಸ್ ಮುಖ್ಯ ಕಚೇರಿಗೆ ಭೇಟಿ ನೀಡಿದರು.

‘ಕೇಶವ ಹೆಡಗೇವಾರ್’ ಅವರಿಗೆ ಶದ್ದಾಂಜಲಿ ಸಲ್ಲಿಸಲು ಬಂದಿದ್ದೇವೆ’ ಎಂದು ಅವರು ಮುಖ್ಯ ಕಚೇರಿಗೆ ಪ್ರವೇಶ ಪಡೆದಿದ್ದರು. ಕಚೇರಿಗೆ ಪ್ರವೇಶಿಸಿದ ಕೆಲವೇ ನಿಮಿಷಗಳಲ್ಲಿ, ಬಾಬಾ ಮಂಧೆ, ರಮೇಶ್ ಕಾಳಂಬಿ, ದಿಲೀಪ್ ಜಟ್ಟಾಣಿ ಎಂಬ ಆ ಮೂವರು ದೇಶಪ್ರೇಮಿ ಯುವಕರು, ತಮ್ಮ ಚೀಲದಲ್ಲಿದ್ದ ರಾಷ್ಟ್ರ ಧ್ವಜವನ್ನು ಹೊರ ತೆಗೆದವರೇ, ಕಚೇರಿಯ ಮುಂದೆ ಹಾರಿಸಿಯೇ ಬಿಟ್ಟರು. ದೇಶದ ಇತಿಹಾಸದಲ್ಲೇ ಮೊದಲ ಬಾರಿ ನಾಗಪುರ ಆರೆಸ್ಸೆಸ್ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿದ್ದು ಹೀಗೆ. ಇವರನ್ನು ತಡೆಯಲು ಆರೆಸ್ಸೆಸ್‌ನ ಮುಖಂಡ ಸುನೀಲ್ ಕಾಥ್ಲೆ ತಂಡ ಸರ್ವ ಪ್ರಯತ್ನ ಮಾಡಿದರಾದರೂ, ಅದರಲ್ಲಿ ವಿಫಲರಾದರು. ಮುಂದೇನಾಯಿತು ಗೊತ್ತೆ? ಆರೆಸ್ಸೆಸ್ ಇವರ ಮೇಲೆ ಪ್ರಕರಣ ದಾಖಲಿಸಿತು.

ಸುಮಾರು 12 ವರ್ಷ ಈ ಮೂವರು ಯುವಕರನ್ನು ನ್ಯಾಯಾಲಯದಲ್ಲಿ ಅಲೆದಾಡಿಸಿತು. ಅಂತಿಮವಾಗಿ 2013ರ ಸ್ವಾತಂತ್ರ ದಿನದಂದು, ಸರಿಯಾದ ಸಾಕ್ಷಾಧಾರವಿಲ್ಲ ಎನ್ನುವ ಕಾರಣಕ್ಕೆ ಈ ಮೂವರನ್ನು ಆರ್. ಆರ್. ಲೋಹಿಯಾ ನ್ಯಾಯಾಲಯ ನ್ಯಾಯಾಲಯ ಬಿಡುಗಡೆ ಮಾಡಿತು. ರಾಷ್ಟ್ರಧ್ವಜ ಹಾರಿಸಿದ್ದೇ ಈ ಮೂವರು ಯುವಕರು ಮಾಡಿದ ಮಹಾಪರಾಧವಾಗಿತ್ತು. ಆ ಅಪರಾಧಕ್ಕಾಗಿ ಅವರು 12 ವರ್ಷಗಳ ಕಾಲ ಕೊರ್ಟ್‌ಗೆ ಅಲೆದಾಡಬೇಕಾಯಿತು. ಈಗ ಹೇಳಿ ಯಾರು ದೇಶದ್ರೋಹಿಗಳು? ಯಾರು ದೇಶಪ್ರೇಮಿಗಳು?

ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತೆ ಆರೆಸ್ಸೆಸ್ ದೇಶಭಕ್ತಿಯ ಬಗ್ಗೆ ಮಾತಾಡಿ ನಗೆಪಾಟಲಿಗೀಡಾಗುತ್ತಿದೆ. ಇವರ ದ್ವೇಷದ ಭಕ್ತಿಯನ್ನು ನೋಡುವಾಗ ಒಬ್ಬ ತೆಲುಗು ಕವಿಯ ಕವಿತೆಯ ಸಾಲುಗಳು ನೆನಪಿಗೆ ಬರುತ್ತದೆ "ದೇಶವೆಂದರೆ ಮಣ್ಣಲ್ಲವೋ ಮೂರ್ಖ, ದೇಶದಲ್ಲಿ ವಾಸಿಸುತ್ತಿರುವ ಜನರು"!  ದೇಶ, ದೇಶಭಕ್ತಿ, ರಾಷ್ಟ್ರ ಧರ್ಮ ಎಂದು ಬೊಂಬಡಾ ಬಜಾಯಿಸುವ ಆರೆಸ್ಸೆಸ್ ಮತ್ತು ಸಂಘಪರಿವಾರ ಈ ದೇಶದ ಮೂಲ ನಿವಾಸಿಗಳಾದ ಮುಸಲ್ಮಾನರನ್ನು ಸಿಕ್ಕ ಸಿಕ್ಕಲ್ಲಿ ವಧಿಸಿ, "ಜೈ ಶ್ರೀರಾಮ್" ಹೇಳಲು ಚಿತ್ರಹಿಂಸೆ ನೀಡಿ ಅವರನ್ನು ಸಾಯಿಸಿ,  ಮುಸಲ್ಮಾನರೆನ್ನುವ ಕಾರಣಕ್ಕೆ ಮಹಿಳೆಯರ ಮೇಲೆ ಅತ್ಯಾಚಾರವೆಸಗಿ ಅವರ ಗರ್ಭ ಬಗೆದು ಪಿಂಡವನ್ನೆತ್ತಿ ಕುಣಿದಾಡಿ, ಬೆಂಕಿಯಲ್ಲಿ ಮನುಷ್ಯರನ್ನು ಜೀವಂತ ದಹಿಸುವ ಈ ಭಯೋತ್ಪಾದಕ ನರಾಧಮರು ದೇಶಭಕ್ತರೇ? ಮನುಷ್ಯರನ್ನು ಕೊಲ್ಲುವುದೇ ಇವರ ರಾಷ್ಟ್ರವಾದ ಸಿದ್ಧಾಂತವೇ? ಲಕ್ಷ ಲಕ್ಷಗಳ ಸಂಖ್ಯೆಯಲ್ಲಿ ಮುಸಲ್ಮಾನರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಸಾವಿರಾರು ಸಂಖ್ಯೆಯಲ್ಲಿ ಸೆರೆಮನೆವಾಸ ಅನುಭವಿಸಿದರು.

ಗಲ್ಲಿಗೇರಿದರು, ಬ್ರಿಟಿಷರ ಬಂದೂಕಿಗೆ ಎದೆಕೊಟ್ಟು ಗುಂಡೇಟಿಗೆ ಬಲಿಯಾದರು. ಅಂತಹ ಮುಸಲ್ಮಾನರ ಕುಡಿಗಳನ್ನು ದೇಶದ್ರೋಹಿಗಳೆಂದು ಭಯೋತ್ಪಾದಕರಂತೆ ಚಿತ್ರಿಸಿ ಸಿಕ್ಕಸಿಕ್ಕಲ್ಲಿ ವಧಿಸುವ ನೀವು ಬ್ರಿಟಿಷರ ವಿರುದ್ಧ ಹೋರಾಡಿ ಭಾರತವನ್ನು ಬಿಡುಗಡೆಗೊಳಿಸಲು ಯಾವ ಜಾಗೃತಿ ಆಂದೋಲನ ಮಾಡಿದ್ದೀರಿ?  ನಿಮ್ಮ ಯಾವ ನಾಯಕರು ಬ್ರಿಟಿಷರಿಂದ ನೋವು ಅನುಭವಿಸಿದ್ದಾರೆ? ಈ ದೇಶದ ಸ್ವಾತಂತ್ರ್ಯಕ್ಕಾಗಿ ಅದೆಷ್ಟು ಆರೆಸ್ಸೆಸ್ಸಿನ ನಾಯಕರು ಹೋರಾಡಿದ್ದಾರೆ? ಎಷ್ಟು ಜನ ಸೆರೆಮನೆಗೆ ಹೋಗಿದ್ದಾರೆ? ಎಷ್ಟು ಜನ ಬ್ರಿಟಿಷರ ಗುಂಡೇಟಿಗೆ ಬಲಿಯಾಗಿದ್ದಾರೆ? ಅದೆಷ್ಟು ಜನ ಭಗತ್ ಸಿಂಗ್, ಆಶ್ಫಾಖುಲ್ಲಾ ಖಾನ್ ರಂತೆ ನೇಣುಗಂಬಕ್ಕೆ ಏರಿದ್ದಾರೆ?
ಆರೆಸ್ಸೆಸ್ಸಿನ ದೇಶಪ್ರೇಮದ ಇತಿಹಾಸ ತಡಕಾಡುತ್ತಾ ಹೊರಟಾಗ ಸಿಗುವ ಉತ್ತರ ಭೂಮಿಯ ಆಕಾರದಷ್ಟಿರುವ ಸೊನ್ನೆ! ಮನಸ್ಸಿನ ತುಂಬಾ ಮುಸಲ್ಮಾನರ ಬಗ್ಗೆ ದ್ವೇಷ ತುಂಬಿಕೊಂಡು ದೇಶಕ್ಕಾಗಿ ಪ್ರಾಣತೆತ್ತ ಮುಸಲ್ಮಾನರ ದೇಶಭಕ್ತಿಯ ಬಗ್ಗೆ ಮಾತಾಡುವ ನಿಮಗೆ ನಾಚಿಕೆಯಾಗುವುದಿಲ್ಲವೇ? ಅಥವಾ ಮಾತನಾಡುವ ನೈತಿಕತೆಯಾದರೂ ನಿಮಗಿದೆಯೇ? ಲಜ್ಜೆಗೆಟ್ಟ ನಿಮಗೆ ಆತ್ಮಸಾಕ್ಷಿ ಎನ್ನುವುದು ಏನಾದರೂ ಇದ್ದರೆ, ಅದನ್ನೊಮ್ಮೆ ಮುಟ್ಟಿಕೊಂಡು ಯೋಚಿಸಿ.‌

© Copyright 2022, All Rights Reserved Kannada One News