Flash News:
ನಾನು ಎಲ್ಲಿಯೂ ಪಲಾಯನ ಮಾಡಿಲ್ಲ, ಕೀವ್‌ನಲ್ಲೇ ಇದ್ದೇನೆ: ವೊಲೊಡಿಮಿರ್ ಝೆಲೆನ್ಸ್ಕಿ

ನಾನು ಎಲ್ಲಿಯೂ ಪಲಾಯನ ಮಾಡಿಲ್ಲ, ಕೀವ್‌ನಲ್ಲೇ ಇದ್ದೇನೆ: ವೊಲೊಡಿಮಿರ್ ಝೆಲೆನ್ಸ್ಕಿ

Updated : 05.03.2022

ಕೀವ್: ನಾನು ಎಲ್ಲಿಯೂ ಪಲಾಯನ ಮಾಡಿಲ್ಲ, ಕೀವ್‌ನಲ್ಲೇ ಇದ್ದೇನೆ ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸ್ಪಷ್ಟಪಡಿಸಿದ್ದಾರೆ.

ಕುರಿತು ಇನ್​​ಸ್ಟಾಗ್ರಾಮ್ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿರುವ ಅವರು, ಉಕ್ರೇನ್‌ ಅಧ್ಯಕ್ಷ ಪೋಲೆಂಡ್​ಗೆ ಪಲಾಯನ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಆದರೆ ಅದು ಸುಳ್ಳು. ನಾನು ಎಲ್ಲಿಯೂ ಪಲಾಯನ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ವಿಡಿಯೋದಲ್ಲಿ ಝೆಲೆನ್ಸ್ಕಿ ತಮ್ಮ ಕಚೇರಿಯಲ್ಲಿರುವುದು ಗೊತ್ತಾಗುತ್ತದೆ. ಅವರ ಜೊತೆಗೆ ಮತ್ತೊಬ್ಬ ಅಧಿಕಾರಿ ಕೂಡಾ ಇದ್ದಾರೆ.

ಕೆಲವು ದಿನಗಳ ಹಿಂದೆ ರಷ್ಯಾದ ರಾಜಕಾರಣಿ ವ್ಯಾಚೆಸ್ಲಾವ್ ವೊಲೊಡಿನ್ ಅವರು ಝೆಲೆನ್ಸ್ಕಿ ಪೋಲೆಂಡ್ಗೆ ಪಲಾಯನ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದರು. ರಷ್ಯಾ ದಾಳಿಯ ಕುರಿತು ಉಕ್ರೇನ್ ಸಂಸತ್ತು ಸಭೆ ನಡೆಸುವ ಮೊದಲು ಅವರು ಮಾರ್ಚ್​ 2ರಂದು ಉಕ್ರೇನ್ತೊರೆದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಸೋಷಿಯಲ್ ಮೀಡಿಯಾಗಳಲ್ಲಿ ಕೂಡಾ ಇದೇ ರೀತಿಯಾಗಿ ಚರ್ಚೆಗಳಾಗಿತ್ತು.

ಉಕ್ರೇನ್ನಲ್ಲಿಯೇ ಝೆಲೆನ್ಸ್ಕಿ ಇದ್ದಾರೆಂದು ಹೇಳಲಾಗುತ್ತಿದ್ದು, ಅವರು ಎಲ್ಲಿದ್ದಾರೆಂಬ ಬಗ್ಗೆ ಗೌಪ್ಯತೆಯನ್ನು ಕಾಪಾಡಿಕೊಳ್ಳಲಾಗಿದೆ.

© Copyright 2022, All Rights Reserved Kannada One News