Flash News:
ಉಬರ್ ನೆಟ್‌ವರ್ಕ್‌ನ ಹಲವು ಮಾಹಿತಿಯನ್ನು ಕದ್ದ ಹ್ಯಾಕರ್ಸ್

ಉಬರ್ ನೆಟ್‌ವರ್ಕ್‌ನ ಹಲವು ಮಾಹಿತಿಯನ್ನು ಕದ್ದ ಹ್ಯಾಕರ್ಸ್

Updated : 16.09.2022

ಹ್ಯಾಕರ್ಸ್ ಉಬರ್ ನೆಟ್‌ವರ್ಕ್‌ನ ಹಲವು ಮಾಹಿತಿಯನ್ನು ಕಳವುಗೈದಿದ್ದಾರೆ ಎಂದು ಯುಗ ಲ್ಯಾಬ್ಸ್‌ನ ಸೆಕ್ಯುರಿಟಿ ಇಂಜಿನಿಯರ್ ಸ್ಯಾಮ್ ಕಾರಿ ವರದಿ ಮಾಡಿದೆ.

ಭದ್ರತಾ ಇಂಜಿನಿಯರ್ ಒಬ್ಬರು ಈ ಕುರಿತು ಮಾಹಿತಿ ನೀಡಿದ್ದು, ಉಬರ್ ಟ್ಯಾಕ್ಸಿ ಸೇವೆಗಳ ಮೇಲೆ ಇದರಿಂದ ಯಾವುದೇ ಪರಿಣಾಮ ಉಂಟಾಗಿಲ್ಲ, ಆದರೆ ಕಂಪನಿಯ ಅಮೂಲ್ಯ ಮಾಹಿತಿ ಮತ್ತು ಸೋರ್ಸ್ ಕೋಡ್‌ ಮೇಲೆ ಹ್ಯಾಕರ್ಸ್ ಕಣ್ಣು ಹಾಕಿದ್ದಾರೆ ಎಂದು ವರದಿಯಾಗಿದೆ.

ಯುಗ ಲ್ಯಾಬ್ಸ್‌ನ ಸೆಕ್ಯುರಿಟಿ ಇಂಜಿನಿಯರ್ ಸ್ಯಾಮ್ ಕಾರಿ ಈ ಬಗ್ಗೆ ವಿವರ ಬಹಿರಂಗಪಡಿಸಿದ್ದು, ಹ್ಯಾಕರ್ಸ್ ಉಬರ್ ನೆಟ್‌ವರ್ಕ್‌ನ ಹಲವು ಮಾಹಿತಿಯನ್ನು ಕಳವುಗೈದಿದ್ದಾರೆ ಎಂದು ತಿಳಿಸಿದ್ದಾರೆ. ಉಬರ್‌ನ ಸೋರ್ಸ್ ಕೋಡ್ ಮತ್ತು ಗ್ರಾಹಕರ ದತ್ತಾಂಶವನ್ನು ಅಮೆಜಾನ್ ಮತ್ತು ಗೂಗಲ್ ಕ್ಲೌಡ್ ಸ್ಟೋರೇಜ್‌ಗಳಲ್ಲಿ ಸಂಗ್ರಹಿಸಲಾಗಿದೆ. ಅದಕ್ಕೆ ಪ್ರವೇಶ ಪಡೆದ ಹ್ಯಾಕರ್ಸ್, ಉಬರ್ ಮಾಹಿತಿಗೆ ಕನ್ನ ಹಾಕಿದ್ದಾರೆ.

ಸ್ಯಾಮ್ ಅವರು, ಉಬರ್ ಇಂಜಿನಿಯರ್‌ಗಳ ಜತೆ ಮಾತನಾಡಿದ್ದು, ಅವರು ಉಬರ್‌ನ ಎಲ್ಲ ಪ್ರಮುಖ ಸೇವೆಗಳ ನೆಟ್‌ವರ್ಕ್ ಮತ್ತು ದತ್ತಾಂಶವನ್ನು ಲಾಕ್ ಮಾಡುವುದರಲ್ಲಿ ನಿರತರಾಗಿದ್ದಾರೆ. ಆ ಮೂಲಕ ಮಾಹಿತಿ ಸೋರಿಕೆಗೆ ಕಡಿವಾಣ ಹಾಕುವುದು ಉಬರ್ ಉದ್ದೇಶವಾಗಿದೆ.

© Copyright 2022, All Rights Reserved Kannada One News