Flash News:
ಸೆಪ್ಟಿಕ್‌ ಟ್ಯಾಂಕ್‌ ಸ್ವಚ್ಚಗೊಳಿಸುವ ವೇಳೆ ಇಬ್ಬರ ಕಾರ್ಮಿಕರ ಸಾವು

ಸೆಪ್ಟಿಕ್‌ ಟ್ಯಾಂಕ್‌ ಸ್ವಚ್ಚಗೊಳಿಸುವ ವೇಳೆ ಇಬ್ಬರ ಕಾರ್ಮಿಕರ ಸಾವು

Updated : 30.03.2022

ಥಾಣೆ: ಮುಂಬ್ರಾ ಪ್ರದೇಶದಲ್ಲಿ ಹೌಸಿಂಗ್ ಸೊಸೈಟಿಯೊಂದರ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ವಿಷ ಅನಿಲ ಸೇವಿಸಿ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಥಾಣೆ ನಗರದಲ್ಲಿ ಕಳೆದ ಒಂದು ವಾರದಲ್ಲಿ ಸೆಪ್ಟಿಕ್ ಟ್ಯಾಂಕ್ಗಳನ್ನು ಸ್ವಚ್ಛಗೊಳಿಸುವ ವೇಳೆ ಕಾರ್ಮಿಕರು ಸಾವನ್ನಪ್ಪಿದ ಎರಡನೇ ಘಟನೆ ಇದಾಗಿದೆ.

ಖಾಸಗಿ ಗುತ್ತಿಗೆದಾರರೊಬ್ಬರು ಟ್ಯಾಂಕ್ ಸ್ವಚ್ಛಗೊಳಿಸಲು ಆರು ಮಂದಿ ಕಾರ್ಮಿಕರನ್ನು ನೇಮಿಸಿಕೊಂಡಿದ್ದರು. ಅವರಲ್ಲಿ ಇಬ್ಬರು ಸಂಜೆ 6.30 ಸುಮಾರಿಗೆ ಟ್ಯಾಂಕ್ಒಳಗೆ ಇಳಿದಿದ್ದು, ವೇಳೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಮೃತರನ್ನು ಹನುಮಾನ್ ಕೊರ್ಪಕ್ವಾಡ್ (25), ಸೂರಜ್ ಮದ್ವಿ (22) ಎಂದು ಗುರುತಿಸಲಾಗಿದೆ. ಕುರಿತು ಮುಂಬ್ರಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.

© Copyright 2022, All Rights Reserved Kannada One News