ಕಾಶ್ಮೀರ ಕುರಿತ ಶಾಸಕ ಕೆ.ಟಿ ಜಲೀಲ್ ಪೋಸ್ಟ್‌ ಬಗ್ಗೆ ಕೇರಳ ರಾಜ್ಯಪಾಲ ಅಸಮಾಧಾನ

Related Articles

ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುವುದಿಲ್ಲ: ಅಶೋಕ್ ಗೆಹ್ಲೋಟ್

ಎರಡು ರೀತಿಯ ಸಾಹಿತಿಗಳು ಇದ್ದಾರೆ: ಸಿಎಂ ಬೊಮ್ಮಾಯಿ‌

ದಸರಾ ಕ್ರೀಡಾಪಟುಗಳಿಗೆ ವಸತಿ ನೀಡಲು ಯೋಗ್ಯತೆ ಇಲ್ಲವೇ? : ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿ

SDPI ನಿಷೇಧದ ಬಗ್ಗೆ ಇನ್ನೂ ನಿರ್ಧರಿಸಿಲ್ಲ: ಸಿಎಂ ಬೊಮ್ಮಾಯಿ

ಪಿಎಫ್ಐ ಸಿದ್ದರಾಮಯ್ಯರ ಪಾಪದ ಕೂಸು: ಯಡಿಯೂರಪ್ಪ

ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಚುನಾವಣೆ: ನಾಮಪತ್ರ ಸ್ವೀಕರಿಸಿದ ದಿಗ್ವಿಜಯ್ ಸಿಂಗ್

‘ರೂಟ್ ಮಾರ್ಚ್’ ಗೆ ಆರೆಸ್ಸೆಸ್ ಮನವಿ : ಅನುಮತಿ ನಿರಾಕರಿಸಿದ ತಮಿಳುನಾಡು ಸರ್ಕಾರ

ರಾಜ್ಯ ಮಟ್ಟದ ದಸರಾ ಯೋಗಾಸನ ಸ್ಪರ್ಧೆಗೆ ಚಾಲನೆ ನೀಡಿದ ಸಚಿವ ಎಸ್.ಟಿ.ಸೋಮಶೇಖರ್

ದೇಶದಲ್ಲಿ ಮೊದಲು ಕಾಂಗ್ರೆಸ್ ಪಕ್ಷವನ್ನು ನಿಷೇಧ ಮಾಡಬೇಕು: ನಳಿನ್ ಕುಮಾರ್ ಕಟೀಲ್

ಶಿವಮೊಗ್ಗ : ಎಸ್ ಡಿಪಿಐ ಕಚೇರಿ, ಮುಖಂಡರ ಮನೆಗಳ ಮೇಲೆ ಪೊಲೀಸ್ ದಾಳಿ

ಕಾಶ್ಮೀರ ಕುರಿತ ಶಾಸಕ ಕೆ.ಟಿ ಜಲೀಲ್ ಪೋಸ್ಟ್‌ ಬಗ್ಗೆ ಕೇರಳ ರಾಜ್ಯಪಾಲ ಅಸಮಾಧಾನ

Updated : 14.08.2022

ತಿರುವನಂತಪುರ: ಜಮ್ಮು ಮತ್ತು ಕಾಶ್ಮೀರವನ್ನು 'ಭಾರತದ ಅಧೀನ ಜಮ್ಮು ಮತ್ತು ಕಾಶ್ಮೀರ’ (ಭಾರತ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ) ಎಂದೂ, ಪಾಕ್ ಆಕ್ರಮಿತ ಕಾಶ್ಮೀರವನ್ನು 'ಆಜಾದ್ ಕಾಶ್ಮೀರ' ಎಂದೂ ಫೇಸ್‌ಬುಕ್‌ನಲ್ಲಿ ಉಲ್ಲೇಖಿಸಿದ್ದ ಕೇರಳದ ಮಾಜಿ ಸಚಿವ ಮತ್ತು ಆಡಳಿತಾರೂಢ ಎಲ್‌ಡಿಎಫ್‌ ಬೆಂಬಲಿತ ಶಾಸಕ ಕೆ.ಟಿ ಜಲೀಲ್ ಅವರ ಹೇಳಿಕೆ ವಿರುದ್ಧ ಕೇರಳ ರಾಜ್ಯಪಾಲ ಆರಿಫ್‌ ಮೊಹಮದ್‌ ಖಾನ್‌ ಬೇಸರ ವ್ಯಕ್ತಪಡಿಸಿದ್ದಾರೆ. 

ರವಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, 'ಜಲೀಲ್‌ ಅವರ ಪೋಸ್ಟ್ ದುರದೃಷ್ಟಕರ. ಈ ಹೇಳಿಕೆ ಅನಿರೀಕ್ಷಿತವಾದದ್ದಲ್ಲ ಎಂದು ನನಗನಿಸುತ್ತದೆ. ಇಂಥವುಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದು ಅವರು ಹೇಳಿದ್ದಾರೆ. 

ಎಡರಂಗ ಬೆಂಬಲಿತ ಸ್ವತಂತ್ರ ಶಾಸಕರಾಗಿರುವ ಶಾಸಕ ಜಲೀಲ್‌ ಅವರ ವಿರುದ್ಧ ಮುಖ್ಯಮಂತ್ರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಮತ್ತು ಕಾಂಗ್ರೆಸ್‌ ಆಗ್ರಹಿಸಿವೆ. ಆದರೆ, ಜಲೀಲ್‌ ಅವರ ಹೇಳಿಕೆಯು ಸಿಪಿಎಂನ ನಿಲುವು ಅಲ್ಲ ಎಂದು ಕೇರಳದ ಸಚಿವ ಎಂ.ವಿ. ಗೋವಿಂದನ್‌ ಸ್ಪಷ್ಟಪಡಿಸಿದ್ದರು. 

ವಿವಾದ ಹಿನ್ನೆಲೆಯಲ್ಲಿ, ಜಲೀಲ್‌ ತಮ್ಮ ಫೇಸ್‌ಬುಕ್‌ ಪೋಸ್ಟ್‌ ಅನ್ನು ಡಿಲಿಟ್‌ ಮಾಡಿದ್ದರು. 'ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಕುರಿತ ಹೇಳಿಕೆಯು ತಪ್ಪು ತಿಳಿವಳಿಕೆಗೆ ಕಾರಣವಾಗಿತ್ತು ಮತ್ತು ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿತ್ತು. ಈ ಕಾರಣಕ್ಕೆ ಅದನ್ನು ಹಿಂಪಡೆದುಕೊಳ್ಳುತ್ತೇನೆ' ಎಂದು ಅವರು ಹೇಳಿದ್ದಾರೆ.

© Copyright 2022, All Rights Reserved Kannada One News