ಸಾವರ್ಕರ್-ಟಿಪ್ಪು ಸುಲ್ತಾನ್ ಫ್ಲೆಕ್ಸ್ ತೆರವು ಹಿನ್ನೆಲೆ ಗಲಾಟೆ: ಪೊಲೀಸರ ಲಾಠಿ ಚಾರ್ಚ್

Related Articles

108 ಆ್ಯಂಬುಲೆನ್ಸ್ ಸ್ಥಗಿತ ಹಿನ್ನೆಲೆ: ಆರೋಗ್ಯ ಸಚಿವ ಕೆ. ಸುಧಾಕರ್ ವಿರುದ್ಧ ಕಾಂಗ್ರೆಸ್ ಟೀಕೆ

ಎನ್.ಡಿ.ಎ ಮೈತ್ರಿಕೂಟವನ್ನು ತೊರೆದದ್ದು ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಗಾಗಿ: ತೇಜಸ್ವಿ ಯಾದವ್

ಕಾಂಗ್ರೆಸ್‌ನ ರಾಹುಲ್‌ ಗಾಂಧಿ ಹೋದಲ್ಲೆಲ್ಲಾ ಕಮಲ ಅರಳಿದೆ: ಸಿಎಂ ಬಸವರಾಜ ಬೊಮ್ಮಾಯಿ

ಆಂಧ್ರಪ್ರದೇಶದ ಆಸ್ಪತ್ರೆಯಲ್ಲಿ ಅಗ್ನಿ ಅವಘಡ: ವೈದ್ಯ, ಅವರ ಇಬ್ಬರು ಮಕ್ಕಳು ಮೃತ್ಯು

ಮಹಿಷ ದಸರಾ: ಮಹಿಷ ಪ್ರತಿಮೆ ಪೂಜೆ ಅವಕಾಶಕ್ಕೆ ಹೈಕೋರ್ಟ್‌ ನಕಾರ

ಉಸಿರಾಟದ ಸಮಸ್ಯೆ: ಎಸ್.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

ಅನುಮತಿ ಸಿಗದೆ ಇದ್ದರೂ ಮಹಿಷ ದಸರಾ ಆಚರಣೆ ಮಾಡಿಯೇ ತೀರುತ್ತೇವೆ: ಲೇಖಕ ಸಿದ್ಧಸ್ವಾಮಿ

ಬಲವಂತವಾಗಿ ಮತಾಂತರ ಮಾಡಲು ಯತ್ನ ಆರೋಪ: ಪ್ರಕರಣ ದಾಖಲು

ದಂಡ ಕಟ್ಟುತ್ತೇವೆ, ದೇವರ ಮುಟ್ಟಲು ಬಿಡಿ: ಆರ್‌.ಧರ್ಮಸೇನ ಸವಾಲು

‘ಚೈಲ್ಡ್‌ ಪೋರ್ನ್‌’ ವೀಡಿಯೊ ಹಂಚಿಕೆ ಜಾಲದ ಮೇಲೆ ಸಿಬಿಐ ದಾಳಿ: 50 ಲ್ಯಾಪ್‌ಟಾಪ್‌ಗಳು ವಶಕ್ಕೆ

ಸಾವರ್ಕರ್-ಟಿಪ್ಪು ಸುಲ್ತಾನ್ ಫ್ಲೆಕ್ಸ್ ತೆರವು ಹಿನ್ನೆಲೆ ಗಲಾಟೆ: ಪೊಲೀಸರ ಲಾಠಿ ಚಾರ್ಚ್

Updated : 15.08.2022

ಶಿವಮೊಗ್ಗ: 75ನೇ ಸ್ವಾತಂತ್ರ್ಯ ದಿನಾಚರಣೆ(Azadi Ka Amrit Mahotsav) ಹಿನ್ನೆಲೆ ಟಿಪ್ಪು ಸುಲ್ತಾನ್(Tipu Sultan) ಸಂಘಟನೆ ಟಿಪ್ಪು ಸುಲ್ತಾನ್ ಫೋಟೋ ಇಟ್ಟು ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ್ದಾರೆ. ಈ ವೇಳೆ ಮನುವಾದಿ ಸಂಘಟನೆ ಕೂಡ ಶಿವಮೊಗ್ಗದ ಅಮೀರ್ ಅಹ್ಮದ್ ವೃತ್ತದಲ್ಲಿ ಸಾವರ್ಕರ್ ಫ್ಲೆಕ್ಸ್ ಅಳವಡಿಸಿದ್ದಾರೆ. ಸಾವರ್ಕರ್ ಫ್ಲೆಕ್ಸ್ ಆಳವಡಿಕೆಗೆ ಟಿಪ್ಪು ಸುಲ್ತಾನ್ ಸಂಘಟನೆ ವಿರೋಧಿಸಿ ಫ್ಲೆಕ್ಸ್ ತೆರವಿಗೆ ಮುಂದಾಗಿದ್ದು ಈ ವೇಳೆ ಫ್ಲೆಕ್ಸ್ ತೆರವಿಗೆ ಮುಂದಾದ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ಆಗಿದೆ.

ಇನ್ನು ಇದೇ ವೇಳೆ ಫ್ಲೆಕ್ಸ್ ತೆರವು ಖಂಡಿಸಿ ಮನುವಾದಿ ಸಂಘಟನೆಗಳು ಧರಣಿ ನಡೆಸಿದ್ದಾರೆ. ಗುಂಪು ಚದುರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ಶಿವಮೊಗ್ಗದ ಅಮೀರ್ ಅಹ್ಮದ್ ವೃತ್ತದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು ಶಿವಮೊಗ್ಗ ನಗರದಾದ್ಯಂತ ಸೆಕ್ಷನ್ 144 ಜಾರಿ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಎಸ್ಪಿ ಲಕ್ಷ್ಮಿ ಪ್ರಸಾದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 3 ದಿನ ನಿಷೇಧಾಜ್ಞೆ: ಶಿವಮೊಗ್ಗ ನಗರದಲ್ಲಿ 3 ದಿನ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

© Copyright 2022, All Rights Reserved Kannada One News