ಟಿಪ್ಪು ಭಿತ್ತಿಚಿತ್ರ ಹರಿದು ಹಾಕಿದ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಡಿಕೆಶಿ ಆಗ್ರಹ

Related Articles

ಜಾರ್ಜ್‌ ಅವರಿಗೆ ರಾಜಕೀಯ, ಸೈದ್ಧಾಂತಿಕ ಬದ್ದತೆ ಇತ್ತು: ಸಿದ್ದರಾಮಯ್ಯ

ತಮ್ಮ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಬಿಜೆಪಿಯವರು ಜಾತಿ ಬಣ್ಣ ಕಟ್ಟಿದ್ದಾರೆ: ಸಿದ್ದರಾಮಯ್ಯ

ಕೊಲೆಗಡುಕರು, ಅತ್ಯಾಚಾರಿಗಳು, ಭ್ರಷ್ಟರ ಕೂಟವೇ ಬಿಜೆಪಿ: ಕಾಂಗ್ರೆಸ್‌ ಟೀಕೆ

ಹಿರಿಯ ಕಾಂಗ್ರೆಸ್ ನಾಯಕ ಆರ್ಯಾದನ್ ಮುಹಮ್ಮದ್ ನಿಧನ

ರೈತರ ಮನೆ, ಆಸ್ತಿ ಜಪ್ತಿ ನಿಷೇಧಕ್ಕೆ ಕ್ರಮ: ಸಿಎಂ ಬೊಮ್ಮಾಯಿ

ಬಿಜೆಪಿಯ ಆಪರೇಶನ್ ಕಮಲ ಸಂಚಿಗೆ ರಾಜ್ಯಪಾಲರ ಸಾಥ್: ಪಂಜಾಬ್‌ ಸಿಎಂ ಆರೋಪ

ಮಂಗಳೂರು| ಜಿಲ್ಲಾ ಕಚೇರಿಗೆ NIA ಅಕ್ರಮ ಪ್ರವೇಶ ಖಂಡಿಸಿ ಇಂದು ಸಂಜೆ SDPI ಪ್ರತಿಭಟನೆ

ಪೇ ಸಿಎಂ ಅಭಿಯಾನ| ಕಾಂಗ್ರೆಸ್ಸಿನದು ಡರ್ಟಿ ಪಾಲಿಟಿಕ್ಸ್: ಸಿಎಂ ಬೊಮ್ಮಾಯಿ

ಶೇ.40 ಲಂಚ ಯಾರು ಯಾರಿಗೆ ಕೊಟ್ಟಿದ್ದಾರೆಂದು ಸಿದ್ದರಾಮಯ್ಯ ಹೇಳಲಿ: ಸಿಎಂ ಬೊಮ್ಮಾಯಿ

ಪಿಎಸ್‌ಐ ಹಗರಣ| ಎಡಿಜಿಪಿ ಅಮೃತ್ ಪೌಲ್ ನೇಮಕ ಮಾಡಿದ್ದೇ ಬೊಮ್ಮಾಯಿ‌: ಸಿದ್ದರಾಮಯ್ಯ

ಟಿಪ್ಪು ಭಿತ್ತಿಚಿತ್ರ ಹರಿದು ಹಾಕಿದ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಡಿಕೆಶಿ ಆಗ್ರಹ

Updated : 14.08.2022

ಬೆಂಗಳೂರು: '75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಪಕ್ಷ  ಆ. 15ರಂದು ಹಮ್ಮಿಕೊಂಡಿರುವ 'ಸ್ವಾತಂತ್ರ್ಯ ನಡಿಗೆ' ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರದಲ್ಲಿ ಅಳವಡಿಸಿದ್ದ ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್ ಅವರ ಕಟ್ಔಟ್ಅನ್ನು ಕಿಡಿಗೇಡಿಗಳು ನಾಶ ಮಾಡಿದ್ದಾರೆ. ಈ ಘಟನೆ ಮನಸ್ಸಿಗೆ ನೋವು ತಂದಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

'ಪೊಲೀಸ್ ಅಧಿಕಾರಿಗಳಿದ್ದರೂ ಅದನ್ನು ಹರಿದಿದ್ದಾರೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳ ಜತೆ ಮಾತನಾಡಿದ್ದೇನೆ. ಅವರು ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಈ ಕೃತ್ಯ ಯಾರು ಎಸಗಿದ್ದಾರೆ ಎನ್ನುವುದು ನಮಗೆ ಗೊತ್ತಿದೆ. ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು' ಎಂದು ಅವರು ಒತ್ತಾಯಿಸಿದರು.  

'ಸರ್ಕಾರದ ಪುರಾತತ್ವ ಇಲಾಖೆ ಅಡಿಯಲ್ಲಿ ಟಿಪ್ಪು ಸುಲ್ತಾನ್ ಅರಮನೆ ಇದೆ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಿಶೇಷ ಅಲಂಕಾರ ಮಾಡಿ ಆಚರಣೆ ಮಾಡಲಾಗುತ್ತಿದೆ. ಆ ಮೂಲಕ, ಕೇಂದ್ರ ಸರ್ಕಾರ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹೋರಾಟ ಮಾಡಿದವರಿಗೆ ಗೌರವ ನೀಡುತ್ತಿದೆ' ಎಂದರು. 


© Copyright 2022, All Rights Reserved Kannada One News