Flash News:
ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ.6ರಿಂದ 10ಕ್ಕೇರಿಸಿದ ತೆಲಂಗಾಣ ಸರ್ಕಾರ

ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ.6ರಿಂದ 10ಕ್ಕೇರಿಸಿದ ತೆಲಂಗಾಣ ಸರ್ಕಾರ

Updated : 04.10.2022

ತೆಲಂಗಾಣ: ಮುಂದಿನ ವಿಧಾನ ಸಭೆ ಚುನಾವಣೆಗೂ ಮೊದಲು ಸರ್ಕಾರಿ ಶಿಕ್ಷಣ ಸಂಸ್ಥೆ ಮತ್ತು ಔದ್ಯೋಗಿಕ ಕ್ಷೇತ್ರಗಳಲ್ಲಿ ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇಕಡಾ 6ರಿಂದ 10ಕ್ಕೇರಿಸಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಟಿ.ಆರ್.ಎಸ್ ಸರ್ಕಾರ ಆದೇಶ ಹೊರಡಿಸಿದೆ.

ಸಾರ್ವಜನಿಕರಿಗೆ ನೀಡಿದ ಪ್ರಮುಖ ಭರವಸೆಗಳಲ್ಲಿ ಎಸ್.ಟಿಗಳಿಗೂ ಮೀಸಲಾತಿಯನ್ನು ಹೆಚ್ಚಿಸುವ ಬಗ್ಗೆ ಯೋಜನೆ ಇದೆ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ತಿಳಿಸಿದ್ದಾರೆ.

ಶಿಕ್ಷಣ ಸಂಸ್ಥೆ ಮತ್ತು ರಾಜ್ಯ ಸರ್ಕಾರಿ ಸೇವೆಗಳಲ್ಲಿ ಎಸ್.ಟಿ ಮೀಸಲಾತಿಯನ್ನು ಶೇಕಡಾ 10ಕ್ಕೇರಿಸುವ ಮಸೂದೆಯನ್ನು ತೆಲಂಗಾಣ ಶಾಸಕಾಂಗ ಸಭೆ ಏಪ್ರಿಲ್ 2017ರಲ್ಲಿ ಸರ್ವಾನುಮತದಿಂದ ಅಂಗೀಕರಿಸಿತ್ತು. ಆ ಬಳಿಕ ರಾಷ್ಟ್ರಪತಿ ಅಂಕಿತಕ್ಕಾಗಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿತ್ತು.

ಈ ಮಧ್ಯೆ ಹಿಂದುಳಿದ ವರ್ಗಗಳಿಗಾಗಿ ಶೇಕಡಾ 29, ಪರಿಶಿಷ್ಟ ಜಾತಿಗಳಿಗೆ ಶೇಕಡಾ 15 ಮತ್ತು EWS ಗಳಿಗೆ ಶೇ.10 ಸೇರಿದಂತೆ ಒಟ್ಟು ಶೇಕಡಾ ಮೀಸಲಾತಿ ಕಾಯ್ದಿರಿಸಿದ ತೆಲಂಗಾಣ ಸರ್ಕಾರ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿದೆ.

© Copyright 2022, All Rights Reserved Kannada One News