ತಮಿಳುನಾಡು ಸಚಿವರ ಕ್ಷಮೆ ಕೋರಿದ್ದ ಬಿಜೆಪಿ ಜಿಲ್ಲಾಧ್ಯಕ್ಷನ ಉಚ್ಚಾಟನೆ

Related Articles

ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುವುದಿಲ್ಲ: ಅಶೋಕ್ ಗೆಹ್ಲೋಟ್

ಎರಡು ರೀತಿಯ ಸಾಹಿತಿಗಳು ಇದ್ದಾರೆ: ಸಿಎಂ ಬೊಮ್ಮಾಯಿ‌

ದಸರಾ ಕ್ರೀಡಾಪಟುಗಳಿಗೆ ವಸತಿ ನೀಡಲು ಯೋಗ್ಯತೆ ಇಲ್ಲವೇ? : ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿ

SDPI ನಿಷೇಧದ ಬಗ್ಗೆ ಇನ್ನೂ ನಿರ್ಧರಿಸಿಲ್ಲ: ಸಿಎಂ ಬೊಮ್ಮಾಯಿ

ಪಿಎಫ್ಐ ಸಿದ್ದರಾಮಯ್ಯರ ಪಾಪದ ಕೂಸು: ಯಡಿಯೂರಪ್ಪ

ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಚುನಾವಣೆ: ನಾಮಪತ್ರ ಸ್ವೀಕರಿಸಿದ ದಿಗ್ವಿಜಯ್ ಸಿಂಗ್

‘ರೂಟ್ ಮಾರ್ಚ್’ ಗೆ ಆರೆಸ್ಸೆಸ್ ಮನವಿ : ಅನುಮತಿ ನಿರಾಕರಿಸಿದ ತಮಿಳುನಾಡು ಸರ್ಕಾರ

ರಾಜ್ಯ ಮಟ್ಟದ ದಸರಾ ಯೋಗಾಸನ ಸ್ಪರ್ಧೆಗೆ ಚಾಲನೆ ನೀಡಿದ ಸಚಿವ ಎಸ್.ಟಿ.ಸೋಮಶೇಖರ್

ದೇಶದಲ್ಲಿ ಮೊದಲು ಕಾಂಗ್ರೆಸ್ ಪಕ್ಷವನ್ನು ನಿಷೇಧ ಮಾಡಬೇಕು: ನಳಿನ್ ಕುಮಾರ್ ಕಟೀಲ್

ಶಿವಮೊಗ್ಗ : ಎಸ್ ಡಿಪಿಐ ಕಚೇರಿ, ಮುಖಂಡರ ಮನೆಗಳ ಮೇಲೆ ಪೊಲೀಸ್ ದಾಳಿ

ತಮಿಳುನಾಡು ಸಚಿವರ ಕ್ಷಮೆ ಕೋರಿದ್ದ ಬಿಜೆಪಿ ಜಿಲ್ಲಾಧ್ಯಕ್ಷನ ಉಚ್ಚಾಟನೆ

Updated : 14.08.2022

ಮಧುರೈ:  ತಮಿಳುನಾಡಿನ ಹಣಕಾಸು ಸಚಿವ ಪಳನಿವೇಲ್‌ ತ್ಯಾಗರಾಜನ್‌ ಅವರ ಕಾರಿನ ಮೇಲೆ ಮಧುರೈನಲ್ಲಿ ಚಪ್ಪಲಿ ತೂರಿದ ಐವರು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೊಂದೆಡೆ, ಘಟನೆಯನ್ನು ಖಂಡಿಸಿ, ಸಚಿವರ ಕ್ಷಮೆ ಕೋರಿದ ಬಿಜೆಪಿಯ ಮಧುರೈ ಜಿಲ್ಲಾ ಘಟಕದ ಅಧ್ಯಕ್ಷನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. 

ಮಧುರೈನ ವಿಮಾನ ನಿಲ್ದಾಣದಲ್ಲಿ ಶನಿವಾರ ಸಚಿವರ ಕಾರಿನ ಮೇಲೆ ಚಪ್ಪಲಿ ತೂರಲಾಗಿತ್ತು. ಪ್ರಕರಣದಲ್ಲಿ ಬಂಧಿಯಾಗಿರುವ ಐವರು ಬಿಜೆಪಿ ಕಾರ್ಯಕರ್ತರ ಮೇಲೆ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮಧುರೈ ಪೊಲೀಸ್‌ ಆಯುಕ್ತರು ತಿಳಿಸಿದ್ದರು. 

ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಬಿಜೆಪಿಯ ಮಧುರೈ ಜಿಲ್ಲಾ ಘಟಕದ ಅಧ್ಯಕ್ಷ ಶರವಣನ್,  ‘ಮಧುರೈ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆ ನೋವುಂಟು ಮಾಡಿದೆ. ಮಧ್ಯರಾತ್ರಿ ಸಚಿವರನ್ನು ಭೇಟಿಯಾಗಿ ಘಟನೆಗೆ ಕ್ಷಮೆಯಾಚಿಸಿದ್ದೇನೆ. ನಮ್ಮ ಕಾರ್ಯಕರ್ತರು ಅಂಕೆ ಮೀರಿ ವರ್ತಿಸಿರುವುದು ಬೇಸರ ತರಿಸಿದೆ’ ಎಂದಿದ್ದರು. 

'ನನಗೆ ಬಿಜೆಪಿ ಹುದ್ದೆಗಿಂತ ಶಾಂತಿ ಮುಖ್ಯ. ನಾನು ಬಿಜೆಪಿಯಲ್ಲಿ ಮುಂದುವರಿಯುವುದಿಲ್ಲ. ಬೆಳಗ್ಗೆ ಬಿಜೆಪಿಗೆ ರಾಜೀನಾಮೆ ನೀಡಲಿದ್ದೇನೆ. ಡಿಎಂಕೆ ಸೇರುವ ಬಗ್ಗೆ ನಾನು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದರೆ ಡಿಎಂಕೆ ಸೇರುವುದರಲ್ಲಿ ತಪ್ಪೇನೂ ಇಲ್ಲ’ ಎಂದು ಶರವಣನ್ ಹೇಳಿದ್ದರು. 

ಸರವಣನ್‌ ಅವರ ಹೇಳಿಕೆ ಹಿನ್ನೆಲೆಯಲ್ಲಿ ಬಿಜೆಪಿಯು ಅವರನ್ನು ಉಚ್ಚಾಟನೆ ಮಾಡಿದೆ. ‘ಶಿಸ್ತು ಉಲ್ಲಂಘಿಸಿ, ಪಕ್ಷದ ಹೆಸರಿಗೆ ಕಳಂಕ ತಂದಿದ್ದಕ್ಕಾಗಿ ಬಿಜೆಪಿ ಮಧುರೈ ಜಿಲ್ಲಾಧ್ಯಕ್ಷ ಶರವಣನ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

© Copyright 2022, All Rights Reserved Kannada One News