Flash News:
ತೈವಾನ್ ಬಿಕ್ಕಟ್ಟಿನ ನಡುವೆ ಚೀನಾ ಗಡಿಯಲ್ಲಿ ಭಾರತ-ಅಮೆರಿಕಾ ಸಮರಾಭ್ಯಾಸಕ್ಕೆ ಚಿಂತನೆ

ತೈವಾನ್ ಬಿಕ್ಕಟ್ಟಿನ ನಡುವೆ ಚೀನಾ ಗಡಿಯಲ್ಲಿ ಭಾರತ-ಅಮೆರಿಕಾ ಸಮರಾಭ್ಯಾಸಕ್ಕೆ ಚಿಂತನೆ

Updated : 04.08.2022

ಬೆಂಗಳೂರು: ತೈವಾನ್ ತನ್ನದು ಎಂದು ಹೇಳುತ್ತಿರುವ ಚೀನಾವು ತೈವಾನ್ ಗೆ ಅಮೆರಿಕ ಸ್ಪೀಕರ್ ನ್ಯಾನ್ಸಿ ಪೆಲೊಸಿ ಅವರ ಭೇಟಿಯನ್ನು ಕಟುವಾಗಿ ವಿರೋಧಿಸಿತ್ತು ಈ ಬಿಕ್ಕಟ್ಟಿನ ನಡುವೆಯೇ ಚೀನಾ ಗಡಿಯಲ್ಲಿ ಭಾರತ-ಅಮೆರಿಕ ಜಂಟಿ ಸಮರಾಭ್ಯಾಸ ನಡೆಸಲು ಯೋಜಿಸಿವೆ.

ಬರುವ ಅಕ್ಟೋಬರ್ 14 ರಿಂದ 31ರವರೆಗೆ ಭಾರತ ಹಾಗೂ ಅಮೆರಿಕದ ಮಿಲಿಟರಿ ವಿಭಾಗದಿಂದ ಉತ್ತರಾಖಂಡದ ಹೌಲಿಯಲ್ಲಿ ಈ ಸಮರಾಭ್ಯಾಸ ನಡೆಯಲಿದೆ ಎಂದು ರಕ್ಷಣಾ ಇಲಾಖೆ ಖಚಿತಪಡಿಸಿದೆ. ಇದು ಭಾರತ–ಅಮೆರಿಕದ 18ನೇ ಆವೃತ್ತಿಯ ಸಮರಾಭ್ಯಾಸ ಆಗಿದೆ.ಚೀನಾ, ಭಾರತದೊಂದಿಗೆ ಹೊಂದಿರುವ ಪೂರ್ವ ಲಡಾಖ್‌ನ ಗಡಿ ಕಲಹ ಪ್ರದೇಶದ ಸನಿಹದಲ್ಲಿ ಉತ್ತರಾಖಂಡದ ಹೌಲಿ ಇದೆ. ಕಳೆದ ವರ್ಷ ಅಮೆರಿಕ–ಭಾರತ ಜಂಟಿ ಸಮರಾಭ್ಯಾಸವು ಅಮೆರಿಕದ ಅಲಾಸ್ಕಾದಲ್ಲಿ ನಡೆದಿತ್ತು.

ಭಾರತವನ್ನು ಪ್ರಮುಖ ರಕ್ಷಣಾ ಪಾಲುದಾರ ಎಂದು ಅಮೆರಿಕ 2016 ರಲ್ಲಿ  ಘೋಷಿಸಿದೆ.ಎರಡೂ ರಾಷ್ಟ್ರಗಳ ನಡುವೆ ಕಳೆದ ಐದಾರು ವರ್ಷಗಳಲ್ಲಿ ಶಸ್ತ್ರಾಸ್ತ್ರ ಖರೀದಿ, ಒಪ್ಪಂದ ಹಾಗೂ ಒಡಂಬಡಿಕೆಗಳಿಗೆ ಸಂಬಂಧಿಸಿದಂತೆ ಮಹತ್ವದ ಸುಧಾರಣೆಗಳಾಗಿವೆ. COMCASA (ಸಂವಹನ ಹೊಂದಾಣಿಕೆ ಮತ್ತು ಭದ್ರತಾ ಒಪ್ಪಂದ) ಅಡಿ ಭಾರತ ಮತ್ತು ಅಮೆರಿಕದ ಮಿಲಟರಿ ನಡುವೆ ಉನ್ನತ ತಂತ್ರಜ್ಞಾನ ಹಂಚಿಕೆಗೆ ಸಂಬಂಧಿಸಿದಂತೆ 2018 ರಲ್ಲಿ ಮಹತ್ವದ ಬದಲಾವಣೆ ಆಗಿದೆ.

© Copyright 2022, All Rights Reserved Kannada One News