ಟಿ-20 ವಿಶ್ವಕಪ್ ಸೆಮಿಫೈನಲ್ ನಲ್ಲಿ ಸೋತ ಭಾರತ ಕ್ರಿಕೆಟ್ ತಂಡವನ್ನು ಚೋಕರ್ಸ್ ಎಂದ ಕಪಿಲ್ ದೇವ್

Related Articles

ಟೀ20 ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೋತ ಟೀಂ ಇಂಡಿಯಾ: ಫೈನಲ್‌ಗೆ ತಲುಪಿದ ಇಂಗ್ಲೆಂಡ್-ಪಾಕ್!

ಅತ್ಯಾಚಾರ ಆರೋಪ: ದನುಷ್ಕಾ ಗುಣತಿಲಕರನ್ನು ಅಮಾನತುಗೊಳಿಸಿದ ಶ್ರೀಲಂಕಾ ಕ್ರಿಕೆಟ್ ಮಂಡಳಿ

ಟಿ-20 ವಿಶ್ವಕಪನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ದ. ಆಫ್ರಿಕಾಕ್ಕೆ ಸೋಲು, ಸೆಮಿಫೈನಲ್ ಗೆ ಲಗ್ಗೆ ಇಟ್ಟ ಭಾರತ!

ಐಪಿಎಸ್ ಅಧಿಕಾರಿ ವಿರುದ್ಧ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ ಎಂಎಸ್ ಧೋನಿ

‘ಖೇಲ್ ರತ್ನ’ ಪ್ರಶಸ್ತಿಗೆ ಟೇಬಲ್ ಟೆನಿಸ್ ತಾರೆ ಶರತ್ ಕಮಲ್ ಹೆಸರು ಶಿಫಾರಸು

ಏಷ್ಯಾ ಸ್ಕ್ವಾಷ್‌ ಚಾಂಪಿಯನ್‌ಷಿಪ್‌ನಲ್ಲಿ ಐತಿಹಾಸಿಕ ಚಿನ್ನ ಗೆದ್ದ ಭಾರತ ತಂಡ

ಬೈಜುಸ್ ನ ಜಾಗತಿಕ ರಾಯಭಾರಿಯಾಗಿ ಫುಟ್ಬಾಲ್ ತಾರೆ ಲಿಯೊನೆಲ್ ಮೆಸ್ಸಿ ನೇಮಕ

ಟಿ20 ವಿಶ್ವಕಪ್‌| ಟಾಸ್‌ ಗೆದ್ದ ಬಾಂಗ್ಲಾದೇಶ: ಭಾರತ ಬ್ಯಾಟಿಂಗ್

ಟಿ20 ವಿಶ್ವಕಪ್ ನಲ್ಲಿ ಜಿಂಬಾಬ್ವೆ ವಿರುದ್ಧ 3 ರನ್ ಅಂತರದ ಜಯ ಸಾಧಿಸಿದ ಬಾಂಗ್ಲಾದೇಶ

ಪುರುಷ, ಮಹಿಳಾ ಕ್ರಿಕೆಟಿಗರಿಗೆ ಸಮಾನ ಪಂದ್ಯ ವೇತನ: ಬಿಸಿಸಿಐ ಘೋಷಣೆ

ಟಿ-20 ವಿಶ್ವಕಪ್ ಸೆಮಿಫೈನಲ್ ನಲ್ಲಿ ಸೋತ ಭಾರತ ಕ್ರಿಕೆಟ್ ತಂಡವನ್ನು ಚೋಕರ್ಸ್ ಎಂದ ಕಪಿಲ್ ದೇವ್

Updated : 11.11.2022

ನವದೆಹಲಿ: ಐಸಿಸಿ ಟಿ–20 ವಿಶ್ವಕಪ್‌ನ ಸೆಮಿಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ 10 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿದ ಭಾರತ ಕ್ರಿಕೆಟ್ ತಂಡದ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಅಭಿಮಾನಿಗಳು, ‌ಮಾಜಿ ಆಟಗಾರರು ಭಾರತ ತಂಡದ ಪ್ರದರ್ಶನಕ್ಕೆ ಕಿಡಿ ಕಾರುತ್ತಿದ್ದಾರೆ.ಮಾಜಿ ಕ್ರಿಕೆಟಿಗ ಹಾಗೂ 1983ರ ಏಕದಿನ ವಿಶ್ವಕಪ್‌ ಗೆದ್ದ ತಂಡದ ನಾಯಕ ಕಪಿಲ್‌ ದೇವ್ ಅವರು ಸೋತ ಭಾರತ ತಂಡವನ್ನು ‘ಚೋಕರ್ಸ್‌‘ ಎಂದು ಕರೆದಿದ್ದಾರೆ.

‘ಭಾರತ ತಂಡವನ್ನು ಚೋಕರ್ಸ್‌ ಎಂದು ಕರೆಯುವುದರಲ್ಲಿ ಯಾವುದೇ ತಪ್ಪಿಲ್ಲ. ಅವರು ಕೊನೆವರೆಗೂ ಬಂದು ಸೋಲುತ್ತಾರೆ‘ ಎಂದು ಕಪಿಲ್ ದೇವ್‌ ಹೇಳಿದ್ದಾರೆ.

ಅಲ್ಲದೇ ಇದೇ ವೇಳೆ ಭಾರತ ತಂಡವನ್ನು ಅತಿಯಾಗಿ ಟೀಕೆ ಮಾಡಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ‘ಭಾರತ ತಂಡವು ಕೆಟ್ಟ ಆಟ ಆಡಿದೆ ನಿಜ. ಆದರೆ ನಾವು ಆಟಗಾರರನ್ನು ತೀವ್ರವಾಗಿ ಟೀಕೆ ಮಾಡುವುದು ಬೇಡ. ಒಂದು ಪಂದ್ಯದಿಂದ ಇಡೀ ತಂಡವನ್ನು ಟೀಕೆಗೆ ಗುರಿಪಡಿಸುವುದು ಸರಿಯಲ್ಲ‘ ಎಂದು ಅವರು ಹೇಳಿದ್ದಾರೆ.

ಗುರುವಾರ ಅಡಿಲೇಡ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ 10 ವಿಕೆಟ್‌ಗಳಿಂದ ಸೋಲು ಅನುಭಿಸಿತ್ತು. ‌ಟಾಸ್‌ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 20 ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು 168 ರನ್‌ ಗಳಿಸಿತು.

© Copyright 2022, All Rights Reserved Kannada One News