ಟಿ20 ವಿಶ್ವಕಪ್: ನ್ಯೂ ಜೆರ್ಸಿಯಲ್ಲಿ ಕಣಕ್ಕಿಳಿಯಲಿರುವ ಟೀಂ ಇಂಡಿಯಾ

Related Articles

ಟಿ-20 ಕ್ರಿಕೆಟ್: ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ ಗೆ ಭರ್ಜರಿ ಜಯ

ಇಂಡೋನೇಷ್ಯಾ ಫುಟ್‌ಬಾಲ್ ಪಂದ್ಯದ ವೇಳೆ ಹಿಂಸಾಚಾರ: ಕನಿಷ್ಠ 127 ಮಂದಿ ಸಾವು

ಇಂಗ್ಲೆಂಡ್ ವಿರುದ್ಧ ಕ್ಲೀನ್‍ಸ್ವೀಪ್ ಸಾಧಿಸಿದ ಭಾರತದ ಮಹಿಳಾ ಕ್ರಿಕೆಟ್ ತಂಡ

ಟೆನಿಸ್ ಗೆ ವಿದಾಯ ಹೇಳಿದ ರೋಜರ್ ಫೆಡರರ್: ಸ್ನೇಹಿತನ ನಿವೃತ್ತಿಗೆ ಗಳಗಳನೆ ಅತ್ತ ಪ್ರತಿಸ್ಪರ್ಧಿ ರಫೆಲ್ ನಡಾಲ್: ಇದು ಕ್ರೀಡೆಯ ಅತ್ಯುತ್ತಮ ಕ್ಷಣ ಎಂದ ಕೊಹ್ಲಿ

ಟೆನಿಸ್ ಗೆ ಸ್ವಿಸ್ ಸ್ಟಾರ್ ರೋಜರ್ ಫೆಡರರ್ ವಿದಾಯ

ಲಾರೆನ್ಸ್ ಮೈದಾನದಲ್ಲಿ ಅಬ್ಬರಿಸಿದ ಹರ್ಮನ್​ಪ್ರೀತ್ ಕೌರ್: ಇಂಗ್ಲೆಂಡ್‌ ವಿರುದ್ಧ ಭಾರತಕ್ಕೆ 88 ರನ್‌ ಗೆಲುವು

ಭಾರತ-ಆಸ್ಟ್ರೇಲಿಯಾ ಟಿ20 ಪಂದ್ಯ ಟಿಕೆಟ್ ಖರೀದಿಗೆ ನೂಕುನುಗ್ಗಲು: ಕಾಲ್ತುಳಿತದಿಂದ ಹಲವರಿಗೆ ಗಾಯ

ಉದ್ದೀಪನ ಮದ್ದು ಸೇವನೆ ಪ್ರಕರಣ: ಹಿರಿಯ ಅಥ್ಲೀಟ್ ಪೂವಮ್ಮಗೆ 2 ವರ್ಷ ನಿಷೇಧ

ಉತ್ತರ ಪ್ರದೇಶ| ಕಬಡ್ಡಿ ಆಟಗಾರ್ತಿಯರಿಗೆ ಶೌಚಾಲಯದಲ್ಲಿ ಊಟ: ವೀಡಿಯೊ ವೈರಲ್

ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‍: ಭಾರತದ ಬಜರಂಗ್ ಪೂನಿಯಾಗೆ ಕಂಚಿನ ಪದಕ

ಟಿ20 ವಿಶ್ವಕಪ್: ನ್ಯೂ ಜೆರ್ಸಿಯಲ್ಲಿ ಕಣಕ್ಕಿಳಿಯಲಿರುವ ಟೀಂ ಇಂಡಿಯಾ

Updated : 19.09.2022

ಮುಂದಿನ ತಿಂಗಳಿನಿಂದ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್  ಆರಂಭವಾಗಲಿದ್ದು, ಈ ಬಾರಿಯ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಪ್ರಶಸ್ತಿ ಗೆಲ್ಲುವ ಬಲಿಷ್ಠ ತಂಡಗಳಲ್ಲಿ ಒಂದಾಗಿದೆ. ಈ ಚುಟುಕು ಸಮರಕ್ಕೂ ಮುನ್ನ ರೋಹಿತ್ ಪಡೆ, ಆಸೀಸ್ ಹಾಗೂ ಹರಿಣಗಳ ವಿರುದ್ಧ ಟಿ20 ಸರಣಿಯನ್ನು ಆಡಬೇಕಿದೆ. ಆದರೆ ಈ ಟಿ20 ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಈ ಬಾರಿಯ ಮಿನಿ ಸಮರದಲ್ಲಿ ರೋಹಿತ್ ಪಡೆ ತೊಡುವ ಹೊಸ ಜೆರ್ಸಿ ಅನಾವರಣಗೊಂಡಿದೆ.

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಹೊಸ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಟೀಮ್ ಇಂಡಿಯಾದ ಅಧಿಕೃತ ಜೆರ್ಸಿ ಪ್ರಾಯೋಜಕ ಎಂಪಿಎಲ್ ಸ್ಪೋರ್ಟ್ಸ್ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿದೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯಗಳಲ್ಲಿ ಭಾರತ ತಂಡದ ಆಟಗಾರರು ಇದೇ ಜೆರ್ಸಿಯನ್ನು ಧರಿಸುತ್ತಾರೆ.ಭಾರತ ತಂಡದ ಹೊಸ ಜೆರ್ಸಿ ಸಂಪೂರ್ಣವಾಗಿ ಆಕಾಶ ನೀಲಿಯಿಂದ ಕೂಡಿದ್ದು, ತೋಳಿನ ಭಾಗದಲ್ಲಿ ಮಾತ್ರ ಗಾಢ ನೀಲಿಯಲ್ಲಿದೆ. ಜೆರ್ಸಿ ಪ್ರಾಯೋಜಕತ್ವ ಪಡೆದಿರುವ ಎಂಪಿಎಲ್​ ಜೆರ್ಸಿಯ ಬಲಭಾಗದಲ್ಲಿ ದೊಡ್ಡ ಅಕ್ಷರಗಳಲ್ಲಿ ಕಾಣಬಹುದು.ಟೀಂ ಇಂಡಿಯಾದ ಹಳೆ ಜರ್ಸಿಗೂ ಹೊಸ ಜರ್ಸಿಗೂ ತುಂಬಾ ವ್ಯತ್ಯಾಸವಿದೆ. ಈ ಹಿಂದಿನ ಜರ್ಸಿ ಸಂಪೂರ್ಣವಾಗಿ ಗಾಢ ನೀಲಿಯಿಂದ ಕೂಡಿದ್ದರೆ, ಇದು ಆಕಾಶ ನೀಲಿಯಿಂದ ರೂಪಿಸಲಾಗಿದೆ. ತೋಳಿನ ಭಾಗವನ್ನು ಮಾತ್ರ ಗಾಢ ನೀಲಿಯಲ್ಲಿ ಉಳಿಸಿಕೊಳ್ಳಲಾಗಿದೆ.

ಹೊಸ ಜರ್ಸಿ ಬಿಡುಗಡೆ ಮಾಡಿರುವ ಬಿಸಿಸಿಐ, “ಇದು ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳಿಗಾಗಿ, ಎಂಪಿಎಲ್​ ಹೊಸ ಜರ್ಸಿಯನ್ನು ಪ್ರಸ್ತುತಪಡಿಸುತ್ತಿದೆ" ಎಂದು ಬರೆದು ಟ್ವೀಟ್​ ಮಾಡಿದೆ.ಹೊಸ ಜರ್ಸಿಯ ಬಿಡುಗಡೆಯ ಚಿತ್ರದಲ್ಲಿ ಭಾರತ ತಂಡದ ನಾಯಕ ರೋಹಿತ್​ ಶರ್ಮಾ, ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯಾ, ಸೂರ್ಯಕುಮಾರ್​ ಯಾದವ್​ ಇದ್ದರೆ, ಮಹಿಳಾ ತಂಡದ ಪರವಾಗಿ ನಾಯಕಿ ಹರ್ಮನ್​ಪ್ರೀತ್​ ಕೌರ್​, ಶೆಫಾಲಿ ವರ್ಮಾ, ರೇಣುಕಾ ಸಿಂಗ್​ ಇದ್ದಾರೆ.

ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಕೂಡ ಇದೇ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದೆ. ಟೀಮ್ ಇಂಡಿಯಾ ಬಹುತೇಕ ಟಿ20 ವಿಶ್ವಕಪ್‌ನಲ್ಲಿ ಪ್ರತಿ ಬಾರಿಯೂ ಹೊಸ ಜೆರ್ಸಿಯನ್ನು ಧರಿಸಿದೆ. ಈ ಬಾರಿಯೂ ಅದೇ ಆಗಲಿದೆ. ಈಗ ಈ ಹೊಸ ಜೆರ್ಸಿ ಭಾರತ ತಂಡಕ್ಕೆ ಅದೃಷ್ಟ ತಂದುಕೊಡುತ್ತದೋ ಇಲ್ಲವೋ ಕಾದು ನೋಡಬೇಕಿದೆ. 2007 ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತವು T20 ವಿಶ್ವಕಪ್‌ನ ಮೊದಲ ಆವೃತ್ತಿಯನ್ನು ಗೆದ್ದುಕೊಂಡಿತು ಆದರೆ ಅದರ ನಂತರ ಅದು ಮತ್ತೆ ಟ್ರೋಫಿಯನ್ನು ಎತ್ತಿ ಹಿಡಿಯಲು ಸಾಧ್ಯವಾಗಲಿಲ್ಲ. 2014ರಲ್ಲಿ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಫೈನಲ್‌ಗೆ ಕಾಲಿಟ್ಟರೂ ಗೆಲುವು ಅವರ ಕೈ ಸೇರಲಿಲ್ಲ.

© Copyright 2022, All Rights Reserved Kannada One News