Flash News:
ಕಾನೂನುಬದ್ಧ ಗರ್ಭಪಾತಕ್ಕೆ ಎಲ್ಲ ಮಹಿಳೆಯರು ಅರ್ಹ : ಸುಪ್ರೀಂಕೋರ್ಟ್

ಕಾನೂನುಬದ್ಧ ಗರ್ಭಪಾತಕ್ಕೆ ಎಲ್ಲ ಮಹಿಳೆಯರು ಅರ್ಹ : ಸುಪ್ರೀಂಕೋರ್ಟ್

Updated : 29.09.2022

ಹೊಸದಿಲ್ಲಿ: "ಎಲ್ಲ ಮಹಿಳೆಯರು ಸುರಕ್ಷಿತ ಹಾಗೂ  ಕಾನೂನುಬದ್ಧ ಗರ್ಭಪಾತಕ್ಕೆ ಅರ್ಹರಾಗಿದ್ದಾರೆ. ವಿವಾಹಿತ, ಅವಿವಾಹಿತ ಮಹಿಳೆಯರ ನಡುವಿನ ವ್ಯತ್ಯಾಸ ಅಸಂವಿಧಾನಿಕ. 2021 ರ ವೈದ್ಯಕೀಯ ಗರ್ಭಪಾತ ಕಾಯಿದೆಯ ತಿದ್ದುಪಡಿಯು ವಿವಾಹಿತ ಹಾಗೂ  ಅವಿವಾಹಿತ ಮಹಿಳೆಯರ ನಡುವೆ ವ್ಯತ್ಯಾಸವನ್ನು ಮಾಡುವುದಿಲ್ಲ’’ ಎಂದು ಸುಪ್ರೀಂ ಕೋರ್ಟ್ (Supreme Court) ಗುರುವಾರ ಮಹತ್ವದ ತೀರ್ಪಿನಲ್ಲಿ ಘೋಷಿಸಿತು.

ಲಿವ್-ಇನ್ ಸಂಬಂಧದಿಂದ ಗರ್ಭ ಧರಿಸುವ ಅವಿವಾಹಿತ ಮಹಿಳೆಯರನ್ನು ಮೆಡಿಕಲ್ ಟರ್ಮಿನೇಶನ್ ಆಫ್ ಪ್ರೆಗ್ನೆನ್ಸಿ ನಿಯಮಗಳಿಂದ ಹೊರಗಿಡುವುದು ಅಸಂವಿಧಾನಿಕ ಎಂದು ಕೋರ್ಟ್ ತೀರ್ಪು ನೀಡಿದೆ.

© Copyright 2022, All Rights Reserved Kannada One News