ಸೂರ್ಯಕಾಂತಿ ಎಣ್ಣೆ ಬೆಲೆ ಇಳಿಕೆ

ಸೂರ್ಯಕಾಂತಿ ಎಣ್ಣೆ ಬೆಲೆ ಇಳಿಕೆ

Updated : 29.09.2022

ಮುಂಬೈ : ಕಪ್ಪು ಸಮುದ್ರದ ಮಾರ್ಗವಾಗಿ ಉಕ್ರೇನ್‌ ಸೂರ್ಯಕಾಂತಿ ಎಣ್ಣೆಯ ರಫ್ತನ್ನು ಆಗಸ್ಟ್‌ನಿಂದ ಶುರು ಮಾಡಿರುವ ಪರಿಣಾಮವಾಗಿ ಈ ಅಡುಗೆ ಎಣ್ಣೆಯ ಬೆಲೆಯಲ್ಲಿ ಇಳಿಕೆ ಆಗಿದೆ.

ಏಪ್ರಿಲ್‌ನಲ್ಲಿ ಸೂರ್ಯಕಾಂತಿ ಎಣ್ಣೆಯ ಬೆಲೆ ಗರಿಷ್ಠ ಮಟ್ಟ ತಲುಪಿತ್ತು. ಆ ಮಟ್ಟಕ್ಕೆ ಹೋಲಿಸಿದರೆ ಈಗ ಬೆಲೆಯು ಸರಿಸುಮಾರು ಅರ್ಧದಷ್ಟು ಕಡಿಮೆ ಆಗಿದೆ.

‘ಸೂರ್ಯಕಾಂತಿ ಎಣ್ಣೆಯನ್ನು ಸಾಧ್ಯವಾದಷ್ಟು ಬೇಗ ರಫ್ತು ಮಾಡಲು ಉಕ್ರೇನಿನ ಪೂರೈಕೆದಾರರು ಯತ್ನಿಸುತ್ತಿದ್ದಾರೆ. ಅಲ್ಲದೆ, ಸೂರ್ಯಕಾಂತಿ ಬೀಜದಿಂದ ಆಗಬೇಕಿರುವ ಎಣ್ಣೆ ಉತ್ಪಾದನೆ ದೊಡ್ಡ ಪ್ರಮಾಣದಲ್ಲಿ ಬಾಕಿ ಇದೆ’ ಎಂದು ಮುಂಬೈ ಮೂಲದ ವರ್ತಕರೊಬ್ಬರು ತಿಳಿಸಿದ್ದಾರೆ.

ಬೆಲೆ ತಗ್ಗಿರುವ ಕಾರಣ ಭಾರತವು ಒಂದೆರಡು ವಾರಗಳಿಂದ ಉಕ್ರೇನಿನ ಸೂರ್ಯಕಾಂತಿ ಎಣ್ಣೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಿದೆ ಎಂದು ವರ್ತಕರು ತಿಳಿಸಿದ್ದಾರೆ.

© Copyright 2022, All Rights Reserved Kannada One News