ಸುಳ್ಳಿನ ಸರದಾರನೊಂದಿಗೆ ಚರ್ಚೆ ಬೇಕಾಗಿಲ್ಲ; ಸೂಲಿಬೆಲೆಗೆ ಮುಖಭಂಗ

ಸುಳ್ಳಿನ ಸರದಾರನೊಂದಿಗೆ ಚರ್ಚೆ ಬೇಕಾಗಿಲ್ಲ; ಸೂಲಿಬೆಲೆಗೆ ಮುಖಭಂಗ

Updated : 22.11.2022

ಬೆಂಗಳೂರು: ಹಿಂದೂ ಪದದ ನನ್ನ ಹೇಳಿಕೆಯ ಬಗ್ಗೆ ಪರ ವಿರೋಧ ಚರ್ಚೆ ಇರೋದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಮಾತಾಡೋ ಹಕ್ಕಿದೆ ಎಂದು ಕೆಪಿಸಿಸಿ ಕರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಚಕ್ರವರ್ತಿ ಸೂಲಿಬೆಲೆಯ ಬಹಿರಂಗ ಆಹ್ವಾನಕ್ಕೆ ಕೊಪ್ಪಳದಲ್ಲಿ ತಿರುಗೇಟು ನೀಡಿದ ಜಾರಕಿಹೊಳಿ,  ಸೂಲಿಬೆಲೆ ಆಹ್ವಾನಕ್ಕೆ ನಾನು ಈಗಾಗಲೇ ಉತ್ತರ ಕೊಟ್ಟಿದ್ದೇನೆ. ಅವನ ಅಹ್ವಾನಕ್ಕೆ ನಾನು ಹೊಗುವ ಅವಶ್ಯಕತೆ ಇಲ್ಲ. ಆತ ಸುಳ್ಳಿನ ಸರದಾರ, ಸುಳ್ಳಿನ ವಿಶ್ವ ವಿದ್ಯಾಲಯದ ಕುಲಪತಿ, ಆತನ ಜೊತೆ ಚರ್ಚೆಗೆ ನಾನು ಹೋಗಬೇಕಾ..? ಚಿನ್ನದ ರಸ್ತೆ ಎಲ್ಲಿದೆ, ಬುಲೆಟ್ ಟ್ರೈನ್ ಎಲ್ಲಿದೆ..? ಎಂದು ಚಕ್ರರ‍್ತಿ ಸೂಲಿಬೆಲೆ ವಿರುದ್ಧ ವ್ಯಂಗ್ಯವಾಡಿದ್ದಾರೆ.

© Copyright 2022, All Rights Reserved Kannada One News