ಕಬ್ಬಿಗೆ ಎಫ್‌ಆರ್‌ಪಿ ಶೇ 2.6ರಷ್ಟು ಹೆಚ್ಚಳ

ಕಬ್ಬಿಗೆ ಎಫ್‌ಆರ್‌ಪಿ ಶೇ 2.6ರಷ್ಟು ಹೆಚ್ಚಳ

Updated : 04.08.2022

ನವದೆಹಲಿ: ಸ‌ಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಪ್ರತಿ ಕ್ವಿಂಟಲ್‌ಗೆ ಪಾವತಿಸಬೇಕಿರುವ ಮೊತ್ತವನ್ನು ಕೇಂದ್ರ ಸರ್ಕಾರವು ₹15ರಷ್ಟು ಹೆಚ್ಚಿಸಿದೆ. ಈ ವರ್ಷದ ಅಕ್ಟೋಬರ್‌ನಿಂದ ಅನ್ವಯವಾಗುವಂತೆ ಕಾರ್ಖಾನೆಗಳು ‍ಪ್ರತಿ ಕ್ವಿಂಟಲ್‌ಗೆ ₹ 305ರಷ್ಟು ಪಾವತಿಸಬೇಕಿದೆ.

2022–23ನೇ ಮಾರುಕಟ್ಟೆ ವರ್ಷಕ್ಕೆ ಅನ್ವಯ ಆ‌ಗುವಂತೆ ‘ನ್ಯಾಯಸಮ್ಮತ ಮತ್ತು ಪ್ರೋತ್ಸಾಹದಾಯಕ ದರ’ (ಎಫ್‌ಆರ್‌ಪಿ) ಹೆಚ್ಚಿಸಲು ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಸಂಪುಟ ಸಮಿತಿಯ ಸಭೆಯು ಬುಧವಾರ ಒಪ್ಪಿಗೆ ನೀಡಿದೆ.

2021–22ರಲ್ಲಿ ನೀಡಿದ್ದ ಎಫ್‌ಆರ್‌ಪಿಗೆ ಹೋಲಿಸಿದರೆ 2022–23ರಲ್ಲಿ ಶೇ 2.6ರಷ್ಟು ಹೆಚ್ಚು ನಿಗದಿಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

© Copyright 2022, All Rights Reserved Kannada One News