Flash News:
ಅನುಮತಿ ಸಿಗದೆ ಇದ್ದರೂ ಮಹಿಷ ದಸರಾ ಆಚರಣೆ ಮಾಡಿಯೇ ತೀರುತ್ತೇವೆ: ಲೇಖಕ ಸಿದ್ಧಸ್ವಾಮಿ

ಅನುಮತಿ ಸಿಗದೆ ಇದ್ದರೂ ಮಹಿಷ ದಸರಾ ಆಚರಣೆ ಮಾಡಿಯೇ ತೀರುತ್ತೇವೆ: ಲೇಖಕ ಸಿದ್ಧಸ್ವಾಮಿ

Updated : 25.09.2022

ಮೈಸೂರು: 'ಉದ್ದೇಶ ಪೂರ್ವಕದಿಂದಲೇ ಚಾಮುಂಡಿ ಬೆಟ್ಟದ ಮಹಿಷ ಮೂರ್ತಿ ಬಳಿ ಮಹಿಷ ದಸರಾ ಆಚರಣೆಗೆ ಅವಕಾಶ ನೀಡದೆ ಮೂಲ ನಿವಾಸಿಗಳ ಆಚರಣೆಗೆಧಕ್ಕೆಯುಂಟು ಮಾಡಲಾಗುತ್ತಿದೆ. ಆದರೂ ನಾವು ಇದಕ್ಕೆಲ್ಲಾ ಬಗ್ಗದೆ ಮೈಸೂರು ನಗರದ ಅಶೋಕಪುಂ ನ ಅಂಬೇಡ್ಕರ್ ಪಾರ್ಕ್ ನಲ್ಲಿ ಮಹಿಷ ದಸರಾ ಆಚರಣೆ ಮಾಡಿಯೇ ತೀರುತ್ತೇವೆ' ಎಂದು ಮಹಿಷ ದಸರಾಆಚರಣಾ ಸಮಿತಿ ಅಧ್ಯಕ್ಷ ಲೇಖಕ ಸಿದ್ಧಸ್ವಾಮಿ ತಿಳಿಸಿದ್ದಾರೆ.

ಈ ಸಂಬಂಧ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ವಹಿಸಲಿದ್ದು, ಸಾಹಿತಿ ಪ್ರೊ.ಕೆ.ಎಸ್.ಭಗವಾನ್, ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್‍ಚಂದ್ರಗುರು, ಇತಿಹಾಸ ತಜ್ಞಪ್ರೊ.ಪಿ.ವಿ.ನಂಜರಾಜೇಅರಸ್, ಮಾಜಿ ಮೇಯರ್ ಪುರುಷೋತ್ತಮ್‍ ಸೇರಿದಂತೆ ಮೂಲ ನಿವಾಸಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.

© Copyright 2022, All Rights Reserved Kannada One News