ಯುವ ಜನರ ಆಕ್ರೋಶದ ಅಲೆಗೆ ಭ್ರಷ್ಟ ಬಿಜೆಪಿ ಸರ್ಕಾರ ಕೊಚ್ಚಿ ಹೋಗುವ ದಿನ ದೂರವಿಲ್ಲ: ಸಿದ್ದರಾಮಯ್ಯ ಕಿಡಿ

Related Articles

ಪರೇಶ್ ಮೇಸ್ತ ಪ್ರಕರಣ| ಬಿಜೆಪಿಗರೇ ಜನರೆದುರು ಕ್ಷಮೆ ಕೇಳುವ ಮುಖ ಇದ್ಯಾ: ಬಿ.ಕೆ.ಹರಿಪ್ರಸಾದ್

ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ.6ರಿಂದ 10ಕ್ಕೇರಿಸಿದ ತೆಲಂಗಾಣ ಸರ್ಕಾರ

ಅಡ್ಡ ಮತದಾನ: ಜೆಡಿಎಸ್‌ನ ಇಬ್ಬರು ಶಾಸಕರಿಗೆ ನೋಟಿಸ್‌

ಪರೇಶ್ ಮೇಸ್ತಾ ಕುರಿತ CBI ವರದಿ ಬಿಜೆಪಿ ಮುಖಕ್ಕೆ ಬಡಿದ ತಪರಾಕಿ: ಸಿದ್ದರಾಮಯ್ಯ

ಅಧ್ಯಕ್ಷೀಯ ಚುನಾವಣೆಗೆ ಕಾಂಗ್ರೆಸ್‌ನಿಂದ ಮಾರ್ಗಸೂಚಿ ಬಿಡುಗಡೆ

SDPI ಯನ್ನು ನಿಷೇಧಿಸಲು ಪೂರಕವಾದ ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ: ಚುನಾವಣಾ ಆಯೋಗ

ಎರಡಕ್ಕಿಂತ ಅಧಿಕ ಮಕ್ಕಳಿರುವವರು ಪಾಕಿಸ್ತಾನಕ್ಕೆ ಹೋಗಲಿ: ಯತ್ನಾಳ ವಿವಾದಾತ್ಮಕ ಹೇಳಿಕೆ

ರಾಹುಲ್ ಗಾಂಧಿ ಭದ್ರತೆಗೆ ಒಂದು ಹಗ್ಗ ಕೊಡಿಸಲೂ ಈ ಸರ್ಕಾರಕ್ಕೆ ಗತಿ ಇಲ್ಲವಾ?: ಬಿಜೆಪಿ ವಿರುದ್ಧ ಖರ್ಗೆ ಆಕ್ರೋಶ

ಮಹಾ ಸಿಎಂ ಶಿಂದೆಗೆ ಬೆದರಿಕೆ ಹಾಕಿದ್ದ ವ್ಯಕ್ತಿ ಬಂಧನ: ಫಡಣವೀಸ್

ಅಕ್ರಮ ಅಕ್ಕಿ ಸಾಗಾಟ ಪ್ರಕರಣ: ಬಿಜೆಪಿ ಮುಖಂಡ ಗಡಿಪಾರು

ಯುವ ಜನರ ಆಕ್ರೋಶದ ಅಲೆಗೆ ಭ್ರಷ್ಟ ಬಿಜೆಪಿ ಸರ್ಕಾರ ಕೊಚ್ಚಿ ಹೋಗುವ ದಿನ ದೂರವಿಲ್ಲ: ಸಿದ್ದರಾಮಯ್ಯ ಕಿಡಿ

Updated : 20.09.2022

ಬೆಂಗಳೂರು: 'ರಾಜ್ಯ ಸರ್ಕಾರವು ಸರ್ಕಾರಿ ನೇಮಕಾತಿಗಳಲ್ಲಿ ನಡೆಸುತ್ತಿರುವ ಅಕ್ರಮಗಳಿಂದಾಗಿ ಪ್ರಾಮಾಣಿಕವಾಗಿ ಪರೀಕ್ಷೆ ಎದುರಿಸಿದ ಅಭ್ಯರ್ಥಿಗಳಿಗೆ ಉದ್ಯೋಗ ಸಿಗದೆ, ಬದುಕು ಅತಂತ್ರವಾಗಿದೆ' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, 'ಲಕ್ಷಾಂತರ ನೊಂದ ಯುವ ಜನರ ಪರವಾಗಿ ಸದನದ ಒಳಗೆ ಮತ್ತು ಹೊರಗೆ ನನ್ನ ಹೋರಾಟ ಮುಂದುವರಿಸುತ್ತೇನೆ. ಪಾರದರ್ಶಕ ನೇಮಕಾತಿ ನಡೆಯಲಿ, ಅರ್ಹರು ಆಯ್ಕೆಯಾಗಲಿ' ಎಂದು ಆಗ್ರಹಿಸಿದ್ದಾರೆ.

'ಸರ್ಕಾರಿ ಉದ್ಯೋಗಗಳಿಗೆ ಲಂಚ ಕೊಡುವ ಶಕ್ತಿಯಿಲ್ಲದ ಬಡ ಉದ್ಯೋಗಕಾಂಕ್ಷಿಗಳು ತಮ್ಮ ಪೋಷಕರು ಬೆಳೆದ ಅಕ್ಕಿ, ರಾಗಿ, ಜೋಳ ಮುಂತಾದ ಬೆಳೆಗಳ ಗಂಟನ್ನು ನನ್ನ ಕೈಗಿತ್ತು ಸರ್ಕಾರಕ್ಕೆ ತಲುಪಿಸಿ, ಉದ್ಯೋಗ ಕೊಡಿಸಿ ಎಂದು ಕೋರಿದ್ದಾರೆ. ಯುವ ಜನರ ಆಕ್ರೋಶದ ಅಲೆಗೆ ಭ್ರಷ್ಟ ಬಿಜೆಪಿ ಸರ್ಕಾರ ಕೊಚ್ಚಿ ಹೋಗುವ ದಿನ ದೂರವಿಲ್ಲ' ಎಂದು ಕಿಡಿಕಾರಿದ್ದಾರೆ.

© Copyright 2022, All Rights Reserved Kannada One News