ಕತೆಗಾರ್ತಿ ಶೋಭಾ ಗುನ್ನಾಪೂರ ಅವರ ʼಭೂಮಿಯ ಋಣʼ ಕಥಾಸಂಕಲನ ಅ.16ಕ್ಕೆ ಲೋಕಾರ್ಪಣೆ

ಕತೆಗಾರ್ತಿ ಶೋಭಾ ಗುನ್ನಾಪೂರ ಅವರ ʼಭೂಮಿಯ ಋಣʼ ಕಥಾಸಂಕಲನ ಅ.16ಕ್ಕೆ ಲೋಕಾರ್ಪಣೆ

Updated : 09.10.2022

ಕತೆಗಾರ್ತಿ ಶೋಭಾ ಗುನ್ನಾಪೂರ ಅವರ ಚೊಚ್ಚಲ ಕತಾಸಂಕಲನ "ಭೂಮಿಯ ಋಣʼ ಅ.16ರಂದು ರವಿವಾರ ಸಾಮಾಜಿಕ ನ್ಯಾಯಕ್ಕಾಗಿ ವಕೀಲರು, ವೈಷ್ಣವಿ ಪ್ರಕಾಶನ ಹಾಗೂ ಬುಕ್‌ ಬ್ರಹ್ಮ ಸಹಯೋಗದಲ್ಲಿ ಲೋಕಾರ್ಪಣೆಗೊಳ್ಳಲಿದೆ.

ನಗರದ ಕನ್ನಡ ಸಾಹಿತ್ಯ ಪರಿಷತ್ತು, ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆಯುವ ಈ ಕಾರ್ಯಕ್ರತಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ  ಅವರು ವಹಿಸಲಿದ್ದಾರೆ. ಖ್ಯಾತ ಲೇಖಕ ಡಾ.ನಟರಾಜ್‌ ಹುಳಿಯಾರ್‌ ಅವರು ಪುಸ್ತಕ ಲೋಕಾರ್ಪಣೆಗೊಳಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಮರ್ಶಕಿ ಡಾ.ಎಂ.ಎಸ್.ಆಶಾದೇವಿ ಭಾಗವಹಿಸಲಿದ್ದಾರೆ.

ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತು, ಅಕ್ಕಮಹಾದೇವಿ ಸಭಾಂಗಣ ಪಂಪ ಮಹಾಕವಿ ರಸ್ತೆ, ಚಾಮರಾಜ ಪೇಟೆ, ಬೆಂಗಳೂರು
© Copyright 2022, All Rights Reserved Kannada One News