ಶಶಿ ತರೂರ್‌ ಕಾರ್ಯಕ್ರಮಗಳಿಗೆ ನಿರಾಕರಿಸಿದ ಯುವ ಕಾಂಗ್ರೆಸ್

ಶಶಿ ತರೂರ್‌ ಕಾರ್ಯಕ್ರಮಗಳಿಗೆ ನಿರಾಕರಿಸಿದ ಯುವ ಕಾಂಗ್ರೆಸ್

Updated : 22.11.2022

ಕೇರಳ: ತಿರುವನಂತಪುರದ ಸಂಸದರಾಗಿರುವ ಶಶಿ ತರೂರ್‌ ಅವರು ಕೇರಳದ ಉತ್ತರ ಭಾಗಗಳಲ್ಲಿ ನಡೆಸಿರುವ ಪ್ರವಾಸದ ಸಂದರ್ಭ ಆಯೋಜಿಸಲಾಗಿರುವ ಕಾರ್ಯಕ್ರಮಗಳಿಗೆ ಬೆಂಬಲಿಸಲು ಕೇರಳದ ಯುವ ಕಾಂಗ್ರೆಸ್ ನಿರಾಕರಿಸಿದೆ. 

ಶಶಿ ತರೂರು ಅವರು ಉತ್ತರ ಕೇರಳ ಪ್ರವಾಸದ ಮೊದಲ ದಿನದಂದು ಕೋಯಿಕ್ಕೋಡ್‌ನಲ್ಲಿ ‘ಸಂಘ ಪರಿವಾರ ಮತ್ತು ಜಾತ್ಯತೀತತೆಗೆ ಸವಾಲುಗಳು’ ಕುರಿತು ಭಾ‍‍‍‍‍‍‍‍‍‍‍ಷಣ ಮಾಡಬೇಕಾಗಿತ್ತು. ಈ ಕಾರ್ಯಕ್ರಮವನ್ನು ಆಯೋಜಿಸುವ ಆಹ್ವಾನವನ್ನು ಕೇರಳದ ಯುವ ಕಾಂಗ್ರೆಸ್ ಘಟಕ ನಿರಾಕರಿಸಿದ ನಂತರ ಜವಾಹರ್‌ ಯೂತ್‌ ಫೌಂಡೇಷನ್‌ ಮೂಲಕ ನಡೆಸಲಾಗಿತ್ತು. ಶಶಿ ತರೂರ್‌ ಅವರ ಉತ್ತರ ಕೇರಳ ಭೇಟಿಯ ಬಗ್ಗೆ ಕಾಂಗ್ರೆಸ್‌ನ ಕೇರಳ ಘಟಕದಲ್ಲಿ ಅಸಮಾಧಾನ ಉಂಟಾಗಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ. ರಾಜ್ಯ ರಾಜಕೀಯದಲ್ಲಿ ಹೆಚ್ಚು ಸಕ್ರಿಯರಾಗಲು ತರೂರ್ ಪ್ರಯತ್ನಿಸುತ್ತಿರುವುದನ್ನು ವಿರೋಧಿಸಿ, ಅವರ ಕಾರ್ಯಕ್ರಮಗಳಿಗೆ ಬೆಂಬಲಿಸದೆ ಇರುವಂತೆ ಕೇರಳ ಕಾಂಗ್ರೆಸ್ ತನ್ನ ಘಟಕಗಳಿಗೆ ಸೂಚಿಸಿದೆ ಎನ್ನಲಾಗಿದೆ.


© Copyright 2022, All Rights Reserved Kannada One News