ಸರ್ಕಾರಿ ಪ್ರಯೋಜಿತ ಕೊಲೆಗೆ ಒಂದು ವರ್ಷ!

Related Articles

ಮಲ್ಲಿಕಾರ್ಜುನ ಖರ್ಗೆಗೆ ಒಲಿಯುತ್ತಾ ಕಾಂಗ್ರೆಸ್ ಅಧ್ಯಕ್ಷ ಪಟ್ಟ?

‘ಪೇ ಟಿಎಂ ಅಲ್ಲ ಪೇ ಸಿಎಂ’: ಇದು ಬಿಜೆಪಿ ಭ್ರಷ್ಟಾಚಾರದ ಜಾಹೀರಾತು

ದಲಿತ ಸೊಸೆಯನ್ನು ಮನೆಗೆ ಸೇರಿಸದ ಕುಟುಂಬ: ಮಗುವಿನೊಂದಿಗೆ ಧರಣಿ ಕುಳಿತ ಮಹಿಳೆ

ಮೂಡಿಗೆರೆ ಮಾಯಾವಿ ಪೂರ್ಣಚಂದ್ರ ತೇಜಸ್ವಿ ಅವರ ಕರ್ವಾಲೋ ಕಾದಂಬರಿ ಕುರಿತು ಪಿ. ಲಂಕೇಶರ ಮಾತು

‘ಸಚಿವರು ಕಾಣೆಯಾಗಿದ್ದಾರೆ! ಹುಡುಕಿಕೊಡಿ...

ಗೌರಿಯನ್ನು ಕೊಂದವರು ಜೈಲಿನಲ್ಲಿದ್ದಾರೆ, ಕೊಲ್ಲಿಸಿದವರು ಅಧಿಕಾರದಲ್ಲಿದ್ದಾರೆ: ನಟ ಪ್ರಕಾಶ್ ರಾಜ್

ನಾ ಕಂಡ ಹಾಗೆ 'ಗೌರಿ' ಅಮ್ಮ: ವಿಕಾಸ್ ಆರ್ ಮೌರ್ಯ ಅವರ ಲೇಖನ

ಗೌರಿಯ ಅಕ್ಷರಗಳು ಮಾತು ಚಟುವಟಿಕೆ ಎಲ್ಲವೂ ನಿರ್ಭಯ ಭಾರತ ನಿರ್ಮಾಣದ ಗುರಿ ಹೊಂದಿತ್ತು: ಕೆ. ನೀಲಾ ಅವರ ಲೇಖನ

ನನ್ನಕ್ಕ ಗೌರಿ ಲಂಕೇಶ್, ನಾನು ಲಂಕೇಶ್! -ಅಪ್ಪಗೆರೆ ಲಂಕೇಶ್ ಅವರ ಲೇಖನ

ಗೌರಿ ಲಂಕೇಶ್ ವ್ಯಕ್ತಿತ್ವದ ಭಿನ್ನ ಆಯಾಮಗಳು: ಹುಲಿಕುಂಟೆ ಮೂರ್ತಿ ಅವರ ಲೇಖನ

ಸರ್ಕಾರಿ ಪ್ರಯೋಜಿತ ಕೊಲೆಗೆ ಒಂದು ವರ್ಷ!

Updated : 05.07.2022

ಮಾನವ ಹಕ್ಕುಗಳ ಪ್ರತಿಪಾದಕ ಪಾದ್ರಿ ಸ್ಟಾನ್ ಸ್ವಾಮಿ ಸಾವಿಗೆ ಒಂದು ವರ್ಷ ತುಂಬಿದೆ. ವಿಶ್ವಮಟ್ಟದಲ್ಲಿ ಭಾರತದ ಮಾನವೀಯತೆಯ ಸಾವಾಗಿ ಬರ್ತಿ ಒಂದು ವರ್ಷ.

ಎಲ್ಗರ್ ಪರಿಷದ್ ಪ್ರಕರಣದಲ್ಲಿ ಸುಳ್ಳು ದೇಶದ್ರೋಹದ ಆರೋಪದಲ್ಲಿ ಸ್ವಾನ್ ಸ್ವಾಮಿ ಸೇರಿದಂತೆ 15 ಮಂದು ಮಾನವಹಕ್ಕುಗಳ ಹೋರಾಟಗಾರರನ್ನು ಬಂಧಿಸಿ ಜೈಲಿನಲ್ಲಿಡಲಾಗಿತ್ತು. ಆದರೆ ಪಾರ್ಕಿನ್ಸನ್ ಖಾಯಿಲೆಯ ಜೊತೆಗೆ ಹಲವಾರು ತಿಂಗಳುಗಳ ಕಾಲ ಕೋವಿಡ್ ಖಾಯಿಲೆಯಿಂದ ಚಿತ್ರಹಿಂಸೆ ಅನುಭವಿಸುತ್ತಿದ್ದ ವೃದ್ಧ ಪಾದ್ರಿ ಸ್ಟಾನ್ ಸ್ವಾಮಿಯವರ ಆರೋಗ್ಯ ಪೂರ್ಣವಾಗಿ ಹದಗೆಟ್ಟಾಗಲೂ ಅವರಿಗೆ ಖಾಲೆಯಿದೆಯೆಂಬುದನ್ನೇ ಓIಂ ನಿರಾಕರಿಸಿತ್ತು. ಬದಲಿಗೆ ತನ್ನದೇ ಆದ ವೈದ್ಯಕೀಯ ತನಿಖೆಯನ್ನೂ ಮಾಡಿಸದೆ ಕೊಲೆಗಡುಕ ನಿರ್ಲಕ್ಷ್ಯದಲ್ಲಿ ತಿಂಗಳುಗಳನ್ನು ಕಳೆಯಿತು.

ಜೊತೆಗೆ ಜಾಮೀನು ಪಡೆದುಕೊಳ್ಳುವ "ದುರುದ್ದೇಶದಿಂದ" ಪಾದ್ರಿ ಸ್ವಾಮಿ ನಾಟಕವಾಡುತ್ತಿದ್ದಾರೆಂದು ನ್ಯಾಯಾಲಯದಲ್ಲಿ ವಾದಮಾಡಿತು. ನ್ಯಾಯಾಲಯ ಕಣ್ಣುಮುಚ್ಚಿಕೊಂಡು ಅವರು ಹೇಳಿದ್ದನ್ನೆಲ್ಲಾ ಒಪ್ಪಿಕೊಂಡಿತು. ಪದೇ ಪದೇ ಸ್ಟಾನ್ ಸ್ವಾಮಿಯವರ ಜಾಮೀನನ್ನು ನಿರಾಕರಿಸುತ್ತಲೇ ಹೋಯಿತು.
84 ವರ್ಷದ ರೋಗಗ್ರಸ್ಥ ಪಾದ್ರಿಯ ಸಾವಿಗೆ ಸ್ವಲ್ಪ ಮೊದಲು ಜಾಮೀನು ಅರ್ಜಿಯನ್ನು ನಿರಾಕರಿಸುತ್ತಾ ಕೋರ್ಟು  ಹೇಳಿದ್ದೇನೆಂದರೆ:
"ಆರೋಪಿಯ ಮೇಲಿರುವ ಆರೋಪದ ಗಂಭೀರತೆಯ ದೃಷ್ಟಿಯಿಂದ ನೋಡುವುದಾದರೆ, ಖಾಯಿಲೆಯಿಂದ ಬಳಲುತ್ತಿದ್ದಾರೆಂದು ಹೇಳಲ್ಪಟ್ಟ ಆರೋಪಿಗೆ ಜಾಮೀನು ನೀಡುವುದಕ್ಕಿಂತ ಸಮಾಜದ ಸಾಮೂಹಿಕ ಹಿತಾಸಕ್ತಿಯು ಮಹತ್ವದ್ದೆಂದು ಕಂಡುಬರುತ್ತದೆ. ಆದ್ದರಿಂದ, ಜಾಮೀನು ನಿರಾಕರಿಸಲಾಗಿದೆ" ಎಂದು.

'ಮಾನವ ಹಕ್ಕು ಪ್ರತಿಪಾದಕರ ವಿರುದ್ಧ ಯುಎಪಿಎ ಬಳಕೆ ಬಗ್ಗೆ ಹೈಕಮಿಷನರ್ ಕಳವಳ ವ್ಯಕ್ತಪಡಿಸಿತ್ತು. ಈ ಕಾನೂನನ್ನು ತಾವು ಸಾಯುವ ಮೊದಲು ಸ್ಟಾನ್ ಸ್ವಾಮಿ ಭಾರತೀಯ ನ್ಯಾಯಾಲಯಗಳಲ್ಲಿ ಪ್ರಶ್ನಿಸಿದ್ದರು. ಯಾವುದೇ ಸೂಕ್ತ ಕಾನೂನಾತ್ಮಕ ಆಧಾರಗಳಿಲ್ಲದೆ ಬಂಧಿಸಿದ ಪ್ರತಿಯೊಬ್ಬರನ್ನೂ ಎಲ್ಲ ದೇಶಗಳೂ ಕೋವಿಡ್ 19 ಸಾಂಕ್ರಾಮಿಕದ ಪರಿಣಾಮದ ತೀವ್ರತೆ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಬೇಕು' ಎಂದು ಅವರು ಒತ್ತಾಯಿಸಿದ್ದರು.

ಆದರೆ 84 ವರ್ಷದ ಸ್ಟಾನ್ ಸ್ವಾಮಿ ಅವರನ್ನು ಬಾಂಬೆ ಹೈಕೋರ್ಟ್ ಆದೇಶದ ಬಳಿಕ ನವಿ ಮುಂಬಯಿಯ ತಲೋಜಾ ಕಾರಾಗೃಹದಿಂದ ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಅಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅವರು ಮೃತಪಟ್ಟಿದ್ದರು. ಇದು ಖಂಡಿತವಾಗಿಯೂ ಸರ್ಕಾರದ ಪ್ರಾಯೋಜಿತ ಕೊಲೆ. 

© Copyright 2022, All Rights Reserved Kannada One News