ಸಮಂತಾ ನಟನೆಯ 'ಶಾಕುಂತಲಂ' ಸಿನಿಮಾ ನವೆಂಬರ್ 4ಕ್ಕೆ ತೆರೆಗೆ

Related Articles

ಸಿನಿಮಾ ಕ್ಷೇತ್ರದಿಂದ ಕೊಂಚ ಬಿಡುವು ಪಡೆದು, ಕುಟುಂಬದ ಜೊತೆ ಕಾಲ ಕಳೆಯಲು ನಿರ್ಧರಿಸಿದ್ದೇನೆ: ಅಮೀರ್ ಖಾನ್

‘ಸದ್ದು ವಿಚಾರಣೆ ನಡೆಯುತ್ತಿದೆ’ ಸಿನಿಮಾ ನ.25ಕ್ಕೆ ಬಿಡುಗಡೆ

ತೆಲುಗು ನಟ ಮಹೇಶ್ ಬಾಬು ತಂದೆ ಸೂಪರ್ ಸ್ಟಾರ್ ಕೃಷ್ಣ ನಿಧನ

ವೀರ ದಾಸ್ ಅವರ ಬೆಂಗಳೂರು ಶೋ ರದ್ದಾದ ಬಳಿಕ ಕೋಲ್ಕತ್ತಾಗೆ ಆಹ್ವಾನಿಸಿದ ಟಿಎಂಸಿ

ʼದಿ ಕೇರಳ ಸ್ಟೋರಿʼ ಸಿನಿಮಾ: ನಿರ್ಮಾಪಕರ ವಿರುದ್ಧ ಪ್ರಕರಣ ದಾಖಲಿಸಲು ಸೂಚನೆ

ಹಿರಿಯ ನಟ ಟಿ.ಎಸ್. ಲೋಹಿತಾಶ್ವ ನಿಧನ

ನಾಳೆ ́ಬೈ2 ಕಾಫಿ́ ನಾಟಕ ಪ್ರದರ್ಶನ

ಶಾಲಾ ಮಕ್ಕಳಿಗೆ 'ಗಂಧದ ಗುಡಿ' ಉಚಿತ ಪ್ರದರ್ಶನ ನೀಡಲು ಮನವಿ

‘ಉತ್ತರಕಾಂಡ’ ಸಿನೆಮಾದಲ್ಲಿ ಧನಂಜಯ್‌–ರಮ್ಯಾ ಜೋಡಿ

ಮುಂದಿನ ಚುನಾವಣೆಯಲ್ಲಿ ನಿಂತು ಗೆಲ್ಲುವ ಸಾಮರ್ಥ್ಯ ನನಗಿದೆ. ಆದರೆ, ನನಗೆ ಆ ಆಸೆ ಇರಲಿಲ್ಲ: ಝೈದ್ ಖಾನ್

ಸಮಂತಾ ನಟನೆಯ 'ಶಾಕುಂತಲಂ' ಸಿನಿಮಾ ನವೆಂಬರ್ 4ಕ್ಕೆ ತೆರೆಗೆ

Updated : 23.09.2022

ಚೆನ್ನೈ: ನಟಿ ಸಮಂತಾ ರುತ್‌ ಪ್ರಭು ಅಭಿನಯದ ಪೌರಾಣಿಕ ಕಥಾಹಂದರದ ಸಿನಿಮಾ 'ಶಾಕುಂತಲಂ' ನವೆಂಬರ್‌ 4ಕ್ಕೆ ತೆರೆಗೆ ಬರಲಿದೆ.ಈ ವಿಚಾರವನ್ನು ಸ್ವತಃ ಸಮಂತಾ ಅವರೇ ತಮ್ಮ ಟ್ವಿಟರ್‌ ಪುಟದಲ್ಲಿ ಹಂಚಿಕೊಂಡಿದ್ದಾರೆ. 'ಪ್ರೇಮ ಮಹಾಕಾವ್ಯ ಶಾಕುಂತಲಂ 2022ರ ನವೆಂಬರ್‌ 4ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ' ಎಂದು ಟ್ವೀಟ್ ಮಾಡಿದ್ದಾರೆ.


ಅಭಿಮಾನಿಗಳನ್ನು ಉದ್ದೇಶಿಸಿ, 'ನಿಮ್ಮ ಪ್ರೀತಿಗೆ ಧನ್ಯವಾದಗಳು. ಯಾವಾಗಲೂ ನೀವೇ ನನ್ನ ಶಕ್ತಿ' ಎಂದು ಇನ್ನೊಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಸಿನಿಮಾವನ್ನು ಗುಣಶೇಖರ್‌ ನಿರ್ದೇಶಿಸಿದ್ದಾರೆ. ಅವರೂ ಸಹ ಚಿತ್ರ ನವೆಂಬರ್‌ ನಾಲ್ಕರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಖಚಿತಪಡಿಸಿದ್ದಾರೆ. ಮಹಾಕವಿ ಕಾಳಿದಾಸರ ಜನಪ್ರಿಯ 'ಶಾಕುಂತಲ' ನಾಟಕವನ್ನು ಆಧರಿಸಿದ ಸಿನಿಮಾ ಇದಾಗಿದ್ದು, ಇದರಲ್ಲಿ ಸಮಂತಾ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ದುಷ್ಯಂತ ಪಾತ್ರದಲ್ಲಿ ದೇವ್‌ ಮೋಹನ್‌ ಕಾಣಿಸಿಕೊಂಡಿದ್ದಾರೆ.


© Copyright 2022, All Rights Reserved Kannada One News