Flash News:
ಏಳು ತಿಂಗಳಲ್ಲೇ ರೂಪಾಯಿ ಸಾರ್ವಕಾಲಿಕ ಕುಸಿತ

ಏಳು ತಿಂಗಳಲ್ಲೇ ರೂಪಾಯಿ ಸಾರ್ವಕಾಲಿಕ ಕುಸಿತ

Updated : 23.09.2022

ನವದೆಹಲಿ: ಡಾಲರ್ ಎದುರು ರೂಪಾಯಿ ಮೌಲ್ಯವು ನಿರಂತರವಾಗಿ ಕುಸಿತ ಕಂಡಿದ್ದು, ಗುರುವಾರ 83 ಪೈಸೆ ಇಳಿಕೆ ಕಂಡು ಡಾಲರಿಗೆ ರೂ. 80.79 ದಾಖಲಾಗಿತ್ತು. ಶುಕ್ರವಾರ ಬೆಳಿಗ್ಗೆ ಮತ್ತೆ 39 ಪೈಸೆ ಕುಸಿದು ಒಂದು ಡಾಲರಿಗೆ 81.18 ಪೈಸೆಗೆ ಜಾರಿದೆ. ಇದು ರೂಪಾಯಿಯ ಹಿಂದೆಂದಿಗಿಂತಲೂ ಕೆಟ್ಟದಾದ ಅತಿ ದೊಡ್ಡ ಪತನವಾಗಿದೆ.

ಫೋರೆಕ್ಸ್ ಹಣ ಪ್ರಾಜ್ಞರ ಪ್ರಕಾರ ಉಕ್ರೇನ್ ಯುದ್ಧದ ರಾಜಕೀಯ, ಯುಎಸ್ ಫೆಡ್ ದರ ಏರಿಕೆ ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವೆನ್ನಲಾಗಿದೆ. 

ಅಮೆರಿಕ ಸಂಯುಕ್ತ ಸಂಸ್ಥಾನದ ಹಣದ ಬಲವು ಜಾಗತಿಕವಾಗಿ ಪೆಟ್ರೋಲಿಯಂ ಕಚ್ಚಾ ಎಣ್ಣೆ ಶೇರು ವ್ಯವಹಾರವನ್ನೂ ಅವಲಂಬಿಸಿ ಬೆಳೆದಿದೆ.

ಅಂತಾರಾಷ್ಟ್ರೀಯ ಬ್ಯಾಂಕಿಂಗ್ ವಿದೇಶಿ ವಿನಿಮಯದಲ್ಲಿ ನಿನ್ನೆ 80.79ರಲ್ಲಿ ಆರಂಭವಾದುದು ಸೆಪ್ಟೆಂಬರ್ 23ರ ಬೆಳಿಗ್ಗೆ 1 ಡಾಲರಿಗೆ ರೂ. 81.18 ಪೈಸೆಯಾಗಿ ಕುಸಿಯಿತು. ನಿನ್ನೆಯ ಕುಸಿತವು ಫೆಬ್ರವರಿ 24ರ ಬಳಿಕದ ಒಂದು ದಿನದ ಅತಿ ದೊಡ್ಡ ಪಾತಾಳ ಜಿಗಿತವಾಗಿದೆ. ಫೆಬ್ರವರಿ 24ರಂದು ಒಂದೇ ದಿನದಲ್ಲಿ ದಾಖಲೆಯ 99 ಪೈಸೆ ಕುಸಿತ ಕಂಡಿತ್ತು.

ಯುಎಸ್ ಫೆಡರಲ್ ರಿಸರ್ವ್ 75 ಮೂಲಾಂಕದ ಮೇಲೆ 3.25% ಬಡ್ಡಿ ದರ ಏರಿಸಿದೆ. ಫೆಡ್ ಚೇರ್ಮನ್ ಜೆರೋಮ್ ಪೋವೆಲ್ ರು ಹಣದುಬ್ಬರ ತಡೆಯಲು ಇದು ಅನಿವಾರ್ಯ ಎಂದು ಹೇಳಿದ್ದಾರೆ.

© Copyright 2022, All Rights Reserved Kannada One News