Flash News:
ಬೆಳ್ತಂಗಡಿಯಲ್ಲಿ RSSನಿಂದ ಶಸ್ತ್ರಾಸ್ತ ಪೂಜೆ: ಸಿಪಿಐ(ಎಂ) ಖಂಡನೆ

ಬೆಳ್ತಂಗಡಿಯಲ್ಲಿ RSSನಿಂದ ಶಸ್ತ್ರಾಸ್ತ ಪೂಜೆ: ಸಿಪಿಐ(ಎಂ) ಖಂಡನೆ

Updated : 04.10.2022

ಆಯುಧ ಪೂಜೆ ಹೆಸರಿನಲ್ಲಿ ಬಹಿರಂಗವಾಗಿ 'ಶಸ್ತ್ರ ಪೂಜೆ' ಮಾಡಲು ಬೆಳ್ತಂಗಡಿ ತಾಲೂಕು ವಿಶ್ವ ಹಿಂದೂ ಪರಿಷತ್‌ ಬಜರಂಗದಳ ಮುಂದಾಗಿದೆ. ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಸಂಘಪರಿವಾರದ ಶಸ್ತ್ರ ಪೂಜೆಯನ್ನು ತಡೆಯಬೇಕು ಎಂದು ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಸಮಿತಿ ಆಗ್ರಹಿಸಿದೆ. 

ಆರ್‍‌ಎಸ್‌ಎಸ್ ಸ್ಥಾಪನೆಯಾದ ದಿನದಿಂದ ದೇಶ ಒಂದಲ್ಲ ಒಂದು ರೀತಿಯಲ್ಲಿ ಅಪಾಯಕಾರಿ ಸನ್ನಿವೇಶವನ್ನು ಎದುರಿಸುತ್ತಿದೆ. ಇದೀಗ ಮತ್ತೆ ಹಿಂದುತ್ವ ಸಿದ್ಧಾಂತದ ಹೆಸರಿನಲ್ಲಿ ತನ್ನ ಭಯೋತ್ಪಾದಕ ಚಟುವಟಿಕೆಯನ್ನು ವಿಸ್ತರಿಸಲು ಹೊರಟಿರುವುದು ದೇಶಕ್ಕೆ ಕಂಟಕವಾಗಿ ಪರಿಣಮಿಸುತ್ತಿದೆ ಎಂದು ಸಿಪಿಐ(ಎಂ) ಆತಂಕ ವ್ಯಕ್ತಪಡಿಸಿದೆ. 

"ದೇಶದಾದ್ಯಂತ ರಾಜಕೀಯ ಉದ್ದೇಶದಿಂದ ಬಾಂಬ್ ದಾಳಿ ನಡೆಸುತ್ತಿರುವ ಬಗ್ಗೆ ಇತ್ತೀಚಿಗೆ ಆರ್‍‌ಆರ್‍‌ಎಸ್‌ ನಾಯಕನೊಬ್ಬ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ದರು. ಇದೀಗ ಅದೇ ಭಯೋತ್ಪಾದಕತೆ ಭಾಗವಾಗಿ ಸಂಘಪರಿವಾರವು ‘ಆಯುಧ ಪೂಜೆ’ ಹೆಸರಿನಲ್ಲಿ ತಲಾವಾರು, ಖಡ್ಗ, ಭರ್ಜಿ, ಪಿಸ್ತೂಲ್, ಬಂದೂಕು, ತ್ರಿಶೂಲವನ್ನು ಬಹಿರಂಗವಾಗಿ ಪ್ರದರ್ಶಿಸಿ ಪೂಜೆ ಸಲ್ಲಿಸುವುದು ಅಪಾಯಕಾರಿ ಬೆಳವಣಿಗೆ" ಎಂದು ಸಿಪಿಐ(ಎಂ) ಆಕ್ರೋಶ ವ್ಯಕ್ತಪಡಿಸಿದೆ. 

"ಶಸ್ತ್ರ ಪೂಜೆಯನ್ನು ತಡೆಯಲು ಪೋಲಿಸ್ ಇಲಾಖೆ ವಿಫಲವಾದರೆ, ತಾಲೂಕಿನಲ್ಲಿ ನಡೆಯುವ ಮುಂದಿನ ಎಲ್ಲ ಅಹಿತಕರ ಘಟನೆಗಳಿಗೆ ಪೋಲಿಸ್ ಇಲಾಖೆ ಮತ್ತು ತಾಲೂಕು ಆಡಳಿತ ನೇರ ಹೊಣೆ ಹೊರಬೇಕಾಗುತ್ತದೆ" ಎಂದು ಸಿಪಿಐ(ಎಂ) ತಾಲೂಕು ಘಟಕದ ಕಾರ್ಯದರ್ಶಿ ಶಿವಕುಮಾರ್ ಎಸ್.ಎಂ ಹೇಳಿದ್ದಾರೆ.

ಪೋಲಿಸ್ ಇಲಾಖೆ ಮತ್ತು ತಾಲೂಕು ಆಡಳಿತ ಸಂಘಪರಿವಾರದ ಭಯೋತ್ಪಾದಕ ಕೃತ್ಯಗಳನ್ನು ತಡೆಯದಿದ್ದರೆ ತಾಲೂಕಿನ ಪ್ರಗತಿಪರ ಸಂಘಟನೆಗಳ ಜೊತೆಗೂಡಿ ತಡೆಯುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗುತ್ತದೆ. ಮುಂದೆ ನಡೆಯುವ ಎಲ್ಲಾ ಅಹಿತಕರ ಘಟನೆಗಳಿಗೆ ನೇರ ಹೊಣೆಗಾರಿಕೆಯಾಗಬೇಕಾಗುತ್ತದೆ ಎಂದು ಸಂಘಟನೆ ಎಚ್ಚರಿಕೆ ನೀಡಿದೆ.

© Copyright 2022, All Rights Reserved Kannada One News