‘ಅಕ್ಕಿ ರಫ್ತು ನಿರ್ಬಂಧ ಇಲ್ಲ’

‘ಅಕ್ಕಿ ರಫ್ತು ನಿರ್ಬಂಧ ಇಲ್ಲ’

Updated : 31.08.2022

ನವದೆಹಲಿ: ಅಕ್ಕಿ ರಫ್ತಿನ ಮೇಲೆ ನಿರ್ಬಂಧ ಹೇರುವ ಯಾವ ಆಲೋಚನೆಯೂ ಕೇಂದ್ರ ಸರ್ಕಾರಕ್ಕೆ ಈಗ ಇಲ್ಲ ಎಂದು ಸರ್ಕಾರದ ಮೂಲಗಳು ಹೇಳಿವೆ. ದೇಶಿ ಬೇಡಿಕೆ ಪೂರೈಸಲು ಅಗತ್ಯವಿರುವ ಸಂಗ್ರಹ ಇದೆ ಎಂದೂ ಮೂಲಗಳು ಸ್ಪಷ್ಟಪಡಿಸಿವೆ.

ಅಕ್ಕಿ ರಫ್ತಿನ ಮೇಲೆ ನಿರ್ಬಂಧ ವಿಧಿಸುವ ಚರ್ಚೆಗಳು ನಡೆದಿದ್ದವು. ಆದರೆ ಯಾವ ತೀರ್ಮಾನವನ್ನೂ ಕೈಗೊಂಡಿಲ್ಲ. ಸರ್ಕಾರವು ನಿರ್ಬಂಧ ವಿಧಿಸುವ ಸಾಧ್ಯತೆ ಕಡಿಮೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

© Copyright 2022, All Rights Reserved Kannada One News