ರಿಲಯನ್ಸ್ ಲಾಭ ಶೇ.46ರಷ್ಟು ಏರಿಕೆ!

ರಿಲಯನ್ಸ್ ಲಾಭ ಶೇ.46ರಷ್ಟು ಏರಿಕೆ!

Updated : 23.07.2022

ನವದೆಹಲಿ: ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಜೂನ್ ತ್ರೈಮಾಸಿಕದ ನಿವ್ವಳ ಲಾಭದ ಪ್ರಮಾಣವು ಶೇಕಡ 46ರಷ್ಟು ಹೆಚ್ಚಾಗಿದೆ. ತೈಲ ಸಂಸ್ಕರಣೆ, ದೂರಸಂಪರ್ಕ ಉದ್ದಿಮೆ ಮತ್ತು ರಿಟೇಲ್ ವಹಿವಾಟು ಉತ್ತಮವಾಗಿದ್ದು ಈ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ.

ಜೂನ್ ತ್ರೈಮಾಸಿಕದಲ್ಲಿ ಕಂಪನಿಯು 17,955 ಕೋಟಿ ಲಾಭ ಗಳಿಸಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ  12,273 ಕೋಟಿ ಲಾಭ ಗಳಿಸಿತ್ತು.

ದೇಶದ ಅತಿದೊಡ್ಡ ಮೊಬೈಲ್ ದೂರಸಂಪರ್ಕ ಸೇವಾ ಕಂಪನಿಯಾಗಿರುವ ರಿಲಯನ್ಸ್ ಜಿಯೊ ಇನ್ಫೊಕಾಮ್‌ನ ಜೂನ್‌ ತ್ರೈಮಾಸಿಕದ ಲಾಭದಲ್ಲಿ ಶೇ.24ರಷ್ಟು ಏರಿಕೆ ಆಗಿದ್ದು,  4,530 ಕೋಟಿಗೆ ತಲುಪಿದೆ. ಕಂಪನಿಯು ಹೊಸದಾಗಿ 97 ಲಕ್ಷ ಗ್ರಾಹಕರನ್ನು ಪಡೆದುಕೊಂಡಿದೆ. ಪ್ರತಿ ಗ್ರಾಹಕನಿಂದ ಬರುವ ಆದಾಯವು ತಿಂಗಳಿಗೆ  175.7ಕ್ಕೆ ತಲುಪಿದೆ.

ರಿಲಯನ್ಸ್‌ನ ರಿಟೇಲ್‌ ವಹಿವಾಟು ಜೂನ್ ತ್ರೈಮಾಸಿಕದಲ್ಲಿ 2,061 ಕೋಟಿಗೆ ತಲುಪಿದೆ. ಕಂಪನಿಯು ಹೊಸದಾಗಿ 792 ಮಳಿಗೆಗಳನ್ನು ಆರಂಭಿಸಿದೆ.

© Copyright 2022, All Rights Reserved Kannada One News