ಸಂಗೀತಿ ಸುತ್ತ-ಬುದ್ಧರ ಬೋಧನೆಗಳ ಸಾರ ಭಾಗ-2: ರಮಾಕಾಂತ ಪುರಾಣಿಕ ಅವರ 25ನೇ ಅಂಕಣ

Related Articles

ವಾಟ್ಸಾಪ್ ಯೂನಿವರ್ಸಿಟಿ ಘಟಿಕೋತ್ಸವ ಮತ್ತು ಗಾಂಧೀ ಜಯಂತಿ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ವಿಜ್ಞಾನಿಗಳ ವಿಜ್ಞಾನಿ, ತಥಾಗತ ಬುದ್ಧ: ರಮಾಕಾಂತ ಪುರಾಣಿಕ ಅವರ 27ನೇ ಅಂಕಣ

ಯೋಗ, ಪ್ರಯೋಗ ಮತ್ತು ಬುದ್ಧ ಭಾಗ-ಐದು: ಫೀನಿಕ್ಸ್ ರವಿ ಅವರ ವಾರದ ಅಂಕಣ

ಮುಂಜಾನೆಯ ಕೊಲೆ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಬೀದಿಗೆ ಬಿದ್ದ ಭ್ರಷ್ಟರ ಮಾನ; ಚೀತಾದಿಂದ ಬೆಲೆ ಏರಿಕೆ ನಿಯಂತ್ರಣ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ಸಂಗೀತಿ ಸುತ್ತ-ಬುದ್ಧರ ಬೋಧನೆಗಳ ಸಾರ ಭಾಗ-3: ರಮಾಕಾಂತ ಪುರಾಣಿಕ ಅವರ 26ನೇ ಅಂಕಣ

ನಿಷೇಧವಾಗುತ್ತಾ ಪಿಎಫ್ಐ...?: ಎಡಿಟರ್ ಸ್ಪೆಷಲ್

ಕುಸುಮಬಾಲೆ ‘ಅವರವರಗ ತಿಳಿದ ರೀತೀಲೀ...’: ಡಾ.ರವಿಕುಮಾರ್ ನೀಹ ಅವರ ಅಂಕಣ

ಯೋಗ, ಪ್ರಯೋಗ ಮತ್ತು ಬುದ್ಧ ಭಾಗ-ನಾಲ್ಕು: ಫೀನಿಕ್ಸ್ ರವಿ ಅವರ ವಾರದ ಅಂಕಣ

ಸಿಎಂ ಬಸವರಾಜ ಬೊಮ್ಮಾಯಿ ರಾಜೀನಾಮೆ..?: ಎಡಿಟರ್ ಸ್ಪೆಷಲ್

ಸಂಗೀತಿ ಸುತ್ತ-ಬುದ್ಧರ ಬೋಧನೆಗಳ ಸಾರ ಭಾಗ-2: ರಮಾಕಾಂತ ಪುರಾಣಿಕ ಅವರ 25ನೇ ಅಂಕಣ

Updated : 19.09.2022

ನಮೋ ಅರಹತೋ ಭಗವತೋ ಸಮ್ಮಾ ಸಂಬುದ್ಧಸ್ಸ
(ಹಿಂದಿನ ಸಂಚಿಕೆಯಿಂದ ಮುಂದುವರೆದುದು)
ಧರ್ಮವು ಐದರಿಂದ ಆಗಿದೆ. ಯಾವವು ಆ ಐದು?  
ಖಂದಗಳು ಐದು-ರೂಪ, ವೇದನಾ, ಸಞ್ಞಾ, ಸಂಖಾರ ಮತ್ತು ವಿಞ್ಞಾಣ
ಕಾಮಗುಣಗಳು ಐದು- ಪಂಚೇಂದ್ರಿಯಗಳಿಂದ ಗ್ರಹಿಸಲ್ಪಡುವ, ಅಪೇಕ್ಷಣೀಯವಾದ , ರಮ್ಯವಾದ ಕಾಮವನ್ನು ಉದ್ರೇಕಿಸುವ ಸಂಗತಿಗಳು.
ಮುಂದಿನ ಗತಿಗಳು ಐದು- ನಿರಯ, ತಿರ್ಯಕ್, ಪ್ರೇತ, ಮನುಷ್ಯ ಮತ್ತು ದೇವಲೋಕಗಳು.
ನೀವರಣಗಳು (ಅಡೆತಡೆಗಳು) ಐದು- ಬಯಕೆಯಿಂದ ತುಂಬಿರುವದು, ವೈರ ಭಾವನೆ, ಆಲಸ್ಯ ಮತ್ತು ಜಡತೆ, ಚಿಂತೆ ಮತ್ತು ಕಳವಳ, ಸಂದೇಹ
ಕೆಳಗಿನ ಲೋಕಗಳಿಗೆ ಬಂಧಿಸುವ ಸಂಕೋಲೆಗಳು ಐದು - ಈ ಶರೀರವೇ ನಿಜ ಎಂದು ನಂಬಿ ನಾನು ನನ್ನದುಎಂಬ ಭಾವನೆಯನ್ನು ಹೊಂದುವದು, ಸಂದೇಹದಿಂದಿರುವದು, ನಿಯಮ ವೃತಗಳ ಮೂಲಕ ಬಿಡುಗಡೆ ಸಿಗುತ್ತದೆಂಬ ನಂಬಿಕೆ, ಕಾಮ ಮತ್ತು ವೈರ.
ಮೇಲಿನ ಲೋಕಗಳಿಗೆ ಬಂಧಿಸುವ ಸಂಕೋಲೆಗಳು ಐದು- ರೂಪಲೋಕದಲ್ಲಿ ಹುಟ್ಟಬೇಕೆಂಬ ಆಶೆ, ಅರೂಪ ಲೋಕದಲ್ಲಿ ಹುಟ್ಟಬೇಕೆಂಬ ಆಶೆ, ದುರಭಿಮಾನ, ಚಿಂತೆ ಮತ್ತು ಅವಿದ್ಯೆ.
ಶೀಲಗಳು ಐದು--- ಪ್ರಾಣಿಹಿಂಸೆಯನ್ನು ಮಾಡದಿರುವದು, ತನಗೆ ಸೇರದುದನ್ನು ತಗೆದುಕೊಳ್ಳದಿರುವದು, ವ್ಯಭಿಚಾರ ಮಾಡದಿರುವದು, ಸುಳ್ಳಾಡದಿರುವದು, ಬುದ್ಧಿಬ್ರಮಣೆಯುಂಟು ಮಾಡುವ ಸುರೆ, ಮಧ್ಯಗಳನ್ನು ಸೇವಿಸದಿರುವದು.
ಅಸಾಧ್ಯವಾದವುಗಳು ಐದು- ಆಸವಗಳನ್ನು ಕಳೆದುಕೊಂಡ ಬಿಕ್ಖುವು ಇಚ್ಛಾಪೂರ್ವಕವಾಗಿ ಪ್ರಾಣ ತಗೆಯುವದು, ತನಗೆ ಸೇರದುದನ್ನು ತಗೆದುಕೊಳ್ಳುವದು, ಮೈಥುನದಲ್ಲಿ ತೊಡಗುವದು, ತಿಳಿದೂ ಸುಳ್ಳು ಹೇಳುವದು ಮತ್ತುಅನಗಾರಿಕನಾಗುವ ಮುಂಚಿನ ಭೋಗಗಳಲ್ಲಿ ತೊಡಗುವದು ಅಸಾಧ್ಯ.
ನಷ್ಠಗಳು ಐದು-  ನೆಂಟರಿಷ್ಟರನ್ನು ಕಳೆದುಕೊಳ್ಳುವದು, ಆಸ್ತಿಯನ್ನು ಕಳೆದುಕೊಳ್ಳುವದು, ಆರೋಗ್ಯವನ್ನು ಕಳೆದುಕೊಳ್ಳುವದು, ಶೀಲವನ್ನು ಕಳೆದುಕೊಳ್ಳುವದು ಮತ್ತು ಒಳ್ಳೆಯ ದೃಷ್ಠಿಯನ್ನು ಕಳೆದುಕೊಳ್ಳುವದು.
ಸಂಪತ್ತುಗಳು ಐದು- ಬಂಧುಗಳು, ಆಸ್ತಿ, ಆರೋ ಗ್ಯ, ಶೀಲ ಮತ್ತು ಒಳ್ಳೆಯ ದೃಷ್ಠಿ.
ಇತರರಿಗೆ ಬುದ್ಧಿ ಹೇಳುವ ಬಿಕ್ಖುವು ಐದು ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. “ ಹೇಳಬೇಕಾದುದನ್ನು ಸಕಾಲದಲ್ಲಿಯೇ ಹೇಳುತ್ತೇನೆ, ಅಕಾಲದಲ್ಲಲ್ಲ. ಸತ್ಯವಾದುದನ್ನೇ ಹೇಳುತ್ತೇನೆ. ಮೃದುವಾಗಿ ಹೇಳುತ್ತೇನೆ, ಕಠಿಣವಾಗಿಯಲ್ಲ ಅರ್ಥವತ್ತಾಗಿ ಹೇಳುತ್ತೇನೆ ಮತ್ತು ಮೈತ್ರಿಯಿಂದ ಹೇಳುತ್ತೇನೆ.
ಸಾಧನೆಯ ಅಂಶಗಳು ಐದು- ತಥಾಗತರ ಬೋಧಿಯಲ್ಲಿ ಶ್ರದ್ಧೆ,ಉತ್ತಮವಾದ ಜೀರ್ಣಶಕ್ತಿಯುಳ್ಳವನಾಗಿ ಆರೋಗ್ಯವಂತನಾಗಿರುತ್ತಾನೆ.ಕಪಟಿಯಾಗಲಿ.ಮಾಯಾವಿಯಾಗಲಿ ಆಗಿರದೇ ಪರಿಶುದ್ಧವಾದ ಜೀವನವನ್ನು ನಡೆಸುವವನಾಗಿರುತ್ತಾನೆ. ಅಕುಶಲವಾದುದನ್ನು ವರ್ಜಿಸಿ ಕುಶಲವಾದುದನ್ನು ಗಳಿಸುವ ಯತ್ನದಲ್ಲಿರುತ್ತಾನೆ. ಉದಯ ವ್ಯಯಗಳನ್ನು ತಿಳಿಯುವಂಥ ಪ್ರಜ್ಞೆಯನ್ನು ಹೊಂದಿದವನಾಗಿ ಉತ್ಕೃಷ್ಠವಾದ ದುಃಖನಾಶದ ದಾರಿಯನ್ನು ತಿಳಿದವನಾಗಿರುತ್ತಾನೆ.
ಅನಾಗಾಮಿಗಳು ಪಡೆಯುವ ಸುಗತಿ ಲೋಕಗಳು ಐದು – ಅವಿಹ, ಆತಪ್ಪ, ಸುದಸ್ಸ, ಸುದಸ್ಸಿ ಅಕನಿಟ್ಠಾ.
ಬಂಜರು ಸ್ಥಿತಿಗಳು ಐದು- ಗುರುವಿನಲ್ಲಿ ಸಂಶಯ ಹೊಂದಿ ಅತೃಪ್ತ ಸ್ಥಿತಿಯಲ್ಲಿರುವದು. ಧಮ್ಮದಲ್ಲಿ ಶಂಕೆ, ಸಂಶಯಗಳನ್ನು ಹೊಂದುವದು. ಸಂಘದಲ್ಲಿ ಶಂಕೆ, ಸಂಶಯಗಳನ್ನು ಹೊಂದುವದು. ತನ್ನ ಶಿಕ್ಷಣದಲ್ಲಿ ಸಂಶಯ ಹೊಂದುವದು.  ಜೊತೆಯ ಸಾಧಕರ ಜೊತೆ ಕೋಪಗೊಳ್ಳುವದು, ಅದರಿಂದಾಗಿ ಶ್ರದ್ಧೆ, ಸತತ ಯತ್ನ, ಸಾಧನೆಗಳ ಕಡೆಗೆ ಚಿತ್ತ ನಿಲ್ಲದಿರುವದು.
ಚಿತ್ತ ಬಂಧಗಳು ಐದು- ಕಾಮರಾಗದಿಂದ ತುಂಬಿದ ಚಿತ್ತ ಬಂಧನ, ಕಾಯದ ಮೇಲೆ ಇರುವ ಅತೀ ವ್ಯಾಮೋಹದ ಬಂಧನ, ರೂಪದ ಮೇಲಿನ ವ್ಯಾಮೋಹದ ಬಂಧನ, ಸೋಮಾರಿತನದಿಂದ ಯತ್ನಶೀಲನಾಗದ ಬಂಧನ, ದೇವಕಾಯವನ್ನು ಪಡೆಯುವ ಆಶೆಯಿಂದ ಚಿತ್ತವು ಶ್ರದ್ಧೆ, ಸತತ ಯತ್ನಗಳಿಂದ ವಾಲುವದು.
ಇಂದ್ರಿಯಗಳು ಐದು—ಚಕ್ಷು, ಶ್ರೋತ, ಘ್ರಾಣ, ಜಿಹ್ವೆ, ಕಾಯ.
ಇನ್ನೂ ಐದು ಇಂದ್ರಿಯಗಳು- ಸುಖೇಂದ್ರಿಯ, ದುಃಖೇಂದ್ರಿಯ, ಸೋಮನಸ್ಸೇಂದ್ರಿಯ, ದೋಮನಸ್ಸೇಂದ್ರಿಯ, ಉಪೇಕ್ಖೇಂದ್ರಿಯ.
ಇನ್ನೂ ಐದು ಇಂದ್ರಿಯಗಳು—ಶ್ರದ್ಧೆ, ವೀರ್ಯ, ಸ್ಮೃತಿ, ಸಮಾಧಿ, ಪಞ್ಞಾ
ಬಿಡುಗಡೆಯ ಕಡೆಗೊಯ್ಯುವ ಧಾತುಗಳು ಐದು—1) ಕಾಮಗಳಿಂದ ಬಿಡುಗಡೆ 2) ವ್ಯಾಪಾದ (ದ್ವೇಷ) ದಿಂದ ಬಿಡುಗಡೆ 3) ಹಿಂಸಾಭಾವನೆಯಿಂದ ಬಿಡುಗಡೆ 4) ರೂಪದ ಮೇಲಿನ ಆಶೆಯಿಂದ ಬಿಡುಗಡೆ.  5)ಸಕ್ಕಾಯ ಭಾವನೆಗಳಿಂದ ಬಿಡುಗಡೆ.
ವಿಮುಕ್ತಿ ಪಕ್ವವಾಗುವದಕ್ಕೆ ಬೇಕಾದ ಐದು ಅರಿವುಗಳು- ಅನಿಚ್ಚ, ದುಃಖ, ಅನತ್ತ, ವರ್ಜಿಸಬೇಕಾದದ್ದು, ವೈರಾಗ್ಯ.
ಹೀಗೆ ಧರ್ಮವು ಐದರಿಂದಾಗಿದೆ ಎನ್ನುವದನ್ನು ಭಗವಾನರು ಅರಿತಿದ್ದಾರೆ, ಕಂಡಿದ್ದಾರೆ ಮತ್ತು ಸ್ಪಷ್ಠಪಡಿಸಿದ್ದಾರೆ.
ಧರ್ಮವು ಆರರಿಂದ ಆಗಿದೆ. ಯಾವುವು ಆ ಆರು ?
ತನ್ನಲ್ಲೇ ಇರುವ ಅನುಭವದ ನೆಲೆಗಳು ಆರು- ಚಕ್ಷು, ಶ್ರೋತ, ಘ್ರಾಣ, ಜಿಹ್ವೆ, ಕಾಯ.
 ಮತ್ತು ಮನಸ್ಸು
ತನ್ನ ಹೊರಗಿರುವ ಅನುಭವದ ನೆಲೆಗಳು ಆರು- ರೂಪ, ಶಬ್ಧ, ಗಂಧ, ರಸ, ಸ್ಪರ್ಶ, ಧರ್ಮ
ವಿಞ್ಞಾಣ ಕಾಯಗಳು ಆರು- ಚಕ್ಷು, ಶ್ರೋತ, ಘ್ರಾಣ, ಜಿಹ್ವೆ, ಕಾಯ.
 ಮತ್ತು ಮನೋ ವಿಞ್ಞಾಣಗಳು
ಫಸ್ಸ ಕಾಯಗಳು ಆರು- ಚಕ್ಷು , ಶ್ರೋತ, ಘ್ರಾಣ, ಜಿಹ್ವೆ, ಕಾಯ.
 ಮತ್ತು ಮನೋ ಸಂಫಸ್ಸಗಳು.
ವೇದನಾ ಕಾಯಗಳು ಆರು- ಚಕ್ಷು, ಶ್ರೋತ, ಘ್ರಾಣ, ಜಿಹ್ವೆ, ಕಾಯ.  ಮನಸ್ಸುಇವುಗಳ ಸಂಸ್ಪರ್ಶದಿಂದ ಹುಟ್ಟುವ ವೇದನೆಗಳು.
ಸಞ್ಞಾ ಕಾಯಗಳು ಆರು-   ರೂಪ, ಶಬ್ಧ, ಗಂಧ, ರಸ, ಸ್ಪರ್ಶ, ಧರ್ಮಇವುಗಳ ಅರಿವು.
ಸಂಚೇತನ ಕಾಯಗಳು ಆರು- ರೂಪ, ಶಬ್ಧ, ಗಂಧ, ರಸ, ಸ್ಪರ್ಶಮತ್ತು ಧರ್ಮ
ತಣ್ಣಾಕಾಯಗಳು ಆರು- ರೂಪ ತಣ್ಣಾ, ಶಬ್ಧ, ಗಂಧ, ರಸ, ಸ್ಪರ್ಶ, ಧರ್ಮತಣ್ಣಾ ಕಾಯಗಳು.
ಅಗೌರವಗಳು ಆರು ಬಗೆ- ಬಿಕ್ಖುವು ಗುರುವಿನ ಬಗ್ಗೆ ಅಗೌರವದಿಂದ ನಡೆದುಕೊಳ್ಳುವದು, ಧಮ್ಮದ ಬಗ್ಗೆ ಅಗೌರವ, ಸಂಘದ ಬಗ್ಗೆ ಅಗೌರವ, ಶಿಕ್ಷಣದ ಬಗ್ಗೆ ಅಗೌರವ,  ಎಚ್ಚರಿಕೆಯನ್ನು ಅಸಡ್ಡೆ ಮಾಡುವದು.ಸಂಗಾತಿಗಳನ್ನು ನಿರ್ಲಕ್ಷಿಸುವದು. ಇವುಗಳನ್ನು ಗೌರವಿಸುವದು ಆರು ಬಗೆ.
ಸೋಮನಸ್ಸಿನಿಂದ ಮಾಡುವ ವಿಚಾರಗಳು ಆರು- ಕಣ್ಣಿನಿಂದ ರೂಪವನ್ನು ನೋಡಿ ಸೋಮನಸ್ಸಿನಿಂದ ವಿಚಾರ ಮಾಡುವದು, ಕಿವಿಯಿಂದ ಶಬ್ಧವನ್ನು ಕೇಳಿ, ಮೂಗಿನಿಂದ ವಾಸನೆ ತಿಳಿದು, ನಾಲಗೆಯಿಂದ ರುಚಿಯನ್ನು ನೋಡಿ, ಕಾಯದಿಂದ ಸ್ಪರ್ಶವನ್ನು ಅನುಭವಿಸಿ, ಮನಸ್ಸಿನಿಂದ ಧರ್ಮವನ್ನು ತಿಳಿದು ಸೋಮನಸ್ಸಿನಿಂದ ವಿಚಾರ ಮಾಡುವದು.
ಇದೇ ರೀತಿ ದೋಮನಸ್ಸಿನಿಂದ , ಉಪೇಕ್ಖಾಭಾವದಿಂದ ಆರಾರು ವಿಚಾರಗಳು.
ವಿವಾದದ ಮೂಲಗಳು ಆರು—ಬಿಕ್ಖುವು ಕ್ರೋಧ ಉಳ್ಲವನಾಗಿದ್ದರೆ ಗುರು, ಧಮ್ಮ,ಸಂಘ ಮತ್ತು ಶಿಕ್ಷಣಗಳ ಬಗ್ಗೆ ಅಗೌರವದಿಂದಿರುತ್ತಾನೆ, ನಿರ್ಲಕ್ಷ್ಯದಿಂದ ನಡೆದುಕೊಳ್ಳುತ್ತಾನೆ. ಆ ಮೂಲಕ ತನ್ನ ಸುತ್ತ ವಿವಾದ ಜಗಳಗಳಿಗೆ ಕಾರಣನಾಗುತ್ತಾನೆ. ಇದೇ ರೀತಿ 2) ಬೇರೆಯವರು ಮಾಡಿದ ಸತ್ಕಾರ್ಯಗಳನ್ನು ಮುಚ್ಚಿಕೊಂಡರೆ 3) ಈರ್ಷೆ ಮತ್ತು ಮಾತ್ಸರ್ಯುಳ್ಲವನಾಗಿದ್ದರೆ 4) ಕಪಟಿ ಮತ್ತು ಮಾಯಾವಿಯಾಗಿದ್ದರೆ 5) ಮಿಥ್ಯಾ ದೃಷ್ಠಿಯುಳ್ಳವನಾಗಿದ್ದರೆ 6) ತನ್ನ ನಂಬಿಕೆಗಳಿಗೆ ಅಂಟಿಕೊಂಡು ಭದ್ರವಾಗಿ ಕಚ್ಚಿಕೊಂಡಿದ್ದರೆ , ಗುರು, ಧಮ್ಮ,ಸಂಘ ಮತ್ತು ಶಿಕ್ಷಣಗಳ ಬಗ್ಗೆ ಅಗೌರವದಿಂದಿರುತ್ತಾನೆ, ನಿರ್ಲಕ್ಷ್ಯದಿಂದ ನಡೆದುಕೊಳ್ಳುತ್ತಾನೆ. ಆ ಮೂಲಕ ತನ್ನ ಸುತ್ತ ವಿವಾದ ಜಗಳಗಳಿಗೆ ಕಾರಣನಾಗುತ್ತಾನೆ..
ಬಿಡುಗಡೆಗೆ ಕರೆದೊಯ್ಯುವ ಧಾತುಗಳು ಆರು- 1) ಮೈತ್ರಿ ಭಾವನೆಯಿಂದ ಚಿತ್ತವಿಮುಕ್ತಿಯಾಗುತ್ತದೆ. ವೈರಭಾವನೆಯಿಂದ ಬಿಡುಗಡೆ ಹೊಂದುವದೇ ಮೈತ್ರಿಯಿಂದ ಸಾಧಿಸುವ ಚಿತ್ತವಿಮುಕ್ತಿ. 2) ಕರುಣಾಭಾವನೆಯಿಂದ ಚಿತ್ತವಿಮುಕ್ತಿಯಾಗುತ್ತದೆ. ಹಿಂಸಾಭಾವನೆಯಿಂದ ಬಿಡುಗಡೆಯಾಗುವದೇ ಕರುಣೆಯ ಮೂಲಕ ಆಗುವ ಚಿತ್ತವಿಮುಕ್ತಿ. 3) ಮುದಿತಾಭಾವನೆಯಿಂದ ಚಿತ್ತವಿಮುಕ್ತಿಯಾಗುತ್ತದೆ.ಜಿಗುಪ್ಸೆಯಿಂದ ಬಿಡುಗಡೆಯಾಗುವದೇ ಮುದಿತಾದ ಮೂಲಕ ಆಗುವ ಚಿತ್ತವಿಮುಕ್ತಿ. 4) ಉಪೇಕ್ಖಾಭಾವನೆಯಿಂದ ಚಿತ್ತವಿಮುಕ್ತಿಯಾಗುತ್ತದೆ. ರಾಗದಿಂದ ಬಿಡುಗಡೆಯಾಗುವದೇ ಉಪೇಕ್ಖಾದ ಮೂಲಕ ಆಗುವ ಚಿತ್ತವಿಮುಕ್ತಿ. 5) ಅನಿಮಿತ್ತ ಭಾವನೆಗಳನ್ನು ಬೆಳೆಸಿಕೊಳ್ಳುವದರಿಂದ ಚಿತ್ತವಿಮುಕ್ತಿಯಾಗುತ್ತದೆ. ಎಲ್ಲ ನಿಮಿತ್ತಗಳಿಂದ ಬಿಡುಗಡೆಯಾಗುವದೇ ಅನಿಮಿತ್ತ ಭಾವನೆಯ ಮೂಲಕ ಸಾಧಿಸುವ ಚಿತ್ತವಿಮುಕ್ತಿ. 6) ನಾನು ಇದ್ದೇನೆ ಎಂಬ ಭಾವನೆ ಹೊರಟುಹೋದಾಗ ಚಿತ್ತವಿಮುಕ್ತಿಯನ್ನು ಸಾಧಿಸಬಹುದು. ವಿಚಾರಗಳು ಚಿತ್ತದಲ್ಲಿಲ್ಲದಿದ್ದಾಗಲೇ ಇದ್ದೇನೆ ಎಂಬ ಭಾವನೆಯಿಂದ ಬಿಡುಗಡೆಯಾಗುತ್ತದೆ.
ಅನುತ್ತರವಾದ ಅನುಭವಗಳು ಆರು—ಅನುತ್ತರ ದರ್ಶನ, ಅನುತ್ತರ ಶ್ರವಣ, ಅನುತ್ತರ ಲಾಭ, ಅನುತ್ತರ ಶಿಕ್ಷಣ, ಅನುತ್ತರ ಪರಿಚಾರಿಕೆ, ಅನುತ್ತರ ನೆನಪು.
ಸ್ಮರಣೆಗಳು ಆರು—ಬುದ್ಧಾನುಸತಿ, ಧಮ್ಮಾನುಸತಿ. ಸಂಘಾನುಸತಿ, ಶೀಲಾನುಸತಿ, ತ್ಯಾಗಾನುಸತಿ, ದೇವತಾನುಸತಿ.
ಸತತ ಮನೋವಿಹಾರಗಳು ಆರು—ಕಣ್ಣಿನಿಂದ ನೋಡಿದಾಗ, ಕಿವಿಯಿಂದ ಕೇಳಿದಾಗ, ಮೂಗಿನಿಂದ ವಾಸನೆ ನೋಡಿದಾಗ, ನಾಲಗೆಯಿಂದ ರಸ ತಿಳಿದಾಗ ದೇಹದಿಂದ ಸ್ಪರ್ಶ ತಿಳಿದಾಗ ಮತ್ತು ಮನೋಧರ್ಮಗಳಿಂದ ಬಿಕ್ಖುವಿಗೆ ಯಾವುದೇ ಸಂತೋಷ , ಮನೋವಿಕಾರ ಉಂಟಾಗುವದಿಲ್ಲ.
ಆನುವಂಶೀಯತೆಗಳು ಆರು- 1) ಕೆಟ್ಟ ಸನ್ನಿವಶದಲ್ಲಿ ಹುಟ್ಟಿದ ಕೆಲವರು ಕೆಟ್ಟ ಜೀವನವನ್ನು ನಡೆಸುತ್ತಾರೆ. 2) ಕೆಟ್ಟ ಸನ್ನಿವೇಶದಲ್ಲಿ ಹುಟ್ಟಿದರೂ ಕೆಲವರು ಒಳ್ಳೆಯ ಜೀವನವನ್ನು ನಡೆಸುತ್ತಾರೆ.  3) ಕೆಠ್ಟ ಸನ್ನಿವೇಶದಲ್ಲಿ ಹುಟ್ಟಿದ ಕೆಲವರು ಒಳ್ಳೆಯದನ್ನೂ ದಾಟಿ ನಿಬ್ಬಾಣವನ್ನು ಸಾಧಿಸುತ್ತಾರೆ. 4) ಒಳ್ಳೆಯ ಸನ್ನಿವೇಶದಲ್ಲಿ ಹುಟ್ಟಿದ ಕೆಲವರು ಒಳ್ಳೆಯ ಜೀವನವನ್ನು ನಡೆಸುತ್ತಾರೆ. 5) ಒಳ್ಲೆ ಸ್ಥಿತಿಯಲ್ಲಿ ಹುಟ್ಟಿದ ಕೆಲವರು ಕೆಟ್ಟ ಜೀವನವನ್ನು ನಡೆಸುತ್ತಾರೆ. 6) ಒಳ್ಳೆ ಸ್ಥಿತಿಯಲ್ಲಿ ಹುಟ್ಟಿದ ಕೆಲವರು ಕೆಟ್ಟದು, ಒಳ್ಳೆಯದಾಚೆಗಿನ ನಿಬ್ಬಾಣವನ್ನು ಸಾಧಿಸುತ್ತಾರೆ.
ನಿಬ್ಬಾಣಕ್ಕೆ ಬೇಕಾದ ಮನೋಸ್ಥಿತಿಗಳು ಆರು—ಅನಿತ್ಯದ ಅರಿವು, ಅನಿತ್ಯದ ಜೊತೆಗಿನ ದುಃಖದ ಅರಿವು, ದುಃಖದ ಜೊತೆಗಿನ ಅನತ್ತದ ಅರಿವು. ಬಿಡಬೇಕಾದವುಗಳ ಅರಿವು, ವೈರಾಗ್ಯದ ಅರಿವು, ದುಃಖನಿರೋಧದ ಅರಿವು.
ಸಮ್ಮಾಸಂಬುದ್ಧರು ಧರ್ಮವು ಆರರಿಂದ ಆಗಿದೆ ಎಂದು ಅರಿತಿದ್ದಾರೆ, ಕಂಡಿದ್ದಾರೆ ಮತ್ತು ಸ್ಪಷ್ಠಪಡಿಸಿದ್ದಾರೆ, ಅತ್ಥಾಯ ಹಿತಾಯ ಸುಖಾಯ ದೇವಮನುಸ್ಸಾನಂ.
ಧರ್ಮವು ಏಳರಿಂದ ಆಗಿದೆ .ಆ ಏಳು ಯಾವುವು ?
ಶ್ರೇಷ್ಠವಾದ ಧನಗಳು ಏಳು- ಶ್ರದ್ಧೆ, ಶೀಲ, ಹ್ರೀ (ಆತ್ಮಸಾಕ್ಷಿ, ಆತ್ಮಸಮ್ಮಾನ) , ವಿವೇಚನೆ, ವಿದ್ಯೆ, ತ್ಯಾಗ, ಪಞ್ಞಾ.
ಬೋಧೀಯ ಅಂಗಗಳು (ಬೊಜ್ಝಂಗ) ಏಳು- ಸತಿ, ಧಮ್ಮ ವಿಚಯ, ಪೀತಿ, ಯತ್ನ, ಸಮಾಧಿ, ಉಪೇಕ್ಖಾ
ಸಮಾಧಿಯ ಪರಿಕರಗಳು ಏಳು-  ಸಮ್ಮಾದಿಟ್ಠಿ, ಸಮ್ಮಾಸಂಕಪ್ಪ, ಸಮ್ಮಾ ವಾಚಾ, ಸಮ್ಮಾ ಕಮ್ಮಂತ, ಸಮ್ಮಾ ಅಜೀವ, ಸಮ್ಮಾ ವಾಯಾಮ, ಸಮ್ಮಾಸತಿ
ಅಧರ್ಮಗಳು ಏಳು-  ಅಶ್ರದ್ಧೆ, ನಾಚಿಕೆ ಇಲ್ಲದಿರುವದು, ವಿವೇಚನೆ ಇಲ್ಲದಿರುವದು, ಎಚ್ಚರಿಕೆ ಇಲ್ಲದಿರುವದು, ತಿಳುವಳಿಕೆ ಇಲ್ಲದಿರುವದು, ಸ್ಪಷ್ಠ ವಿಚಾರ ಇಲ್ಲದಿರುವದು, ಪಞ್ಞಾ ಇಲ್ಲದಿರುವದು.
ಸದ್ಧರ್ಮಗಳು ಏಳು-   ಶ್ರದ್ಧೆ, ಹ್ರೀ, ಎಚ್ಚರಿಕೆ, ಪಾಂಡಿತ್ಯ, ತನ್ನ ಬಗೆಗೆ ಇರಬೇಕಾದ ತಿಳುವಳಿಕೆ, ಮನಸ್ಸಿನ ಸಮತೋಲತೆ ಮತ್ತು ಪಞ್ಞಾ
ಸತ್ಪುರುಷನಿಗಿರಬೇಕಾದ ಗುಣಗಳು ಏಳು—ಧಮ್ಮದ ತಿಳುವಳಿಕೆ, ಯಾವುದು ಒಳ್ಳೆಯದು ಎಂಬುದರ ತಿಳುವಳಿಕೆ, ತನ್ನ ಬಗೆಗಿರಬೇಕಾದ ತಿಳುವಳಿಕೆ, ಕಾಲೋಚಿತವಾದುದರ ತಿಳುವಳಿಕೆ, ಜನರ ಗುಂಪುಗಳ ಬಗ್ಗೆ ತಿಳುವಳಿಕೆ, ವ್ಯಕ್ತಿಯ ವೈಶಿಷ್ಠತೆಯ ಬಗ್ಗೆ ತಿಳುವಳಿಕೆ.
ಅರಿವುಗಳು ಏಳು—ಅನಿತ್ಯದ ಬಗ್ಗೆ ತಿಳುವಳಿಕೆ, ಅನತ್ತದ ಅರಿವು, ಅಶುಭದ ಅರಿವು, ಅಪಾಯಗಳ ಅರಿವು, ಬಿಡಬೇಕಾದದ್ದರ ಬಗ್ಗೆ ಅರಿವು, ವೈರಾಗ್ಯದ ಬಗ್ಗೆ ಅರಿವು, ದುಃಖನಿರೋಧದ ಅರಿವು.
ಬಲಗಳು ಏಳು—ಶ್ರದ್ಧೆ, , ವೀರ್ಯ, ಹ್ರೀ, ಎಚ್ಚರಿಕೆ , ಸ್ಮೃತಿ, ಸಮಾಧಿ, ಪಞ್ಞಾ
ವಿಞ್ಞಾಣದ ಸ್ಥಿತಿಗಳು ಏಳು—1) ನಾನಾ ಕಾಯಗಳನ್ನು ನಾನಾ ರೀತಿಯ ಅರಿವುಗಳನ್ನು ಹೊಂದಿರುವ ಸತ್ವಗಳು (ಜೀವಿಗಳು) ಇವೆ. ಇವುಗಳ ಬಗ್ಗೆ ಜ್ಞಾನವಿರುವದು. –ಇವರು ಮನುಷ್ಯರು, ಇವರು ದೇವತೆಗಳು, ಇವು ಕೀಲು ಜನ್ಮದಲ್ಲಿ ಹುಟ್ಟಿದವು ಎಂಬುದರ ಜ್ಞಾನ. 2) ನಾನಾ ಕಾಯಗಳನ್ನು ಒಂದೇ ಬಗೆಯ ಅರಿವನ್ನುಹೊಂದಿರುವ ಜೀವಿಗಳಿವೆ.-ದೇವತೆಗಳು, ಬ್ರಹ್ಮಕಾಯಕರು, ಪ್ರಥಮ ಧ್ಯಾನದ ಫಲವಾಗಿ ಹುಟ್ಟಿದವರು. ಇವರ ಬಗ್ಗೆ ಜ್ಞಾನ. 3) ಒಂದೇ ಬಗೆಯ ಕಾಯವನ್ನು ನಾನಾ ಬಗೆಯ ಅರಿವನ್ನೂ ಹೊಂದಿರುವ ಜೀವಿಗಳಿವೆ. – ಅಭಿಸ್ಸರ ದೇವತೆಗಳು.  4)  ಒಂದೇ ಬಗೆಯ ಕಾಯವನ್ನು, ಒಂದೇ ಬಗೆಯ ಅರಿವನ್ನೂ ಹೊಂದಿರುವ ಜೀವಿಗಳಿವೆ—ಸುಭಕಿಣ್ಹ ದೇವತೆಗಳು 5)  ಎಲ್ಲ ಕ್ರೋಧ ಭಾವನೆಗಳನ್ನು ದಾಟಿ ಎಲ್ಲ ಅರಿವುಗಳನ್ನೂ ದಾಟಿ ಆಕಾಶವು ಅನಂತವಾಗಿದೆ ಎಂಬ ಆಕಾಸಾನಂಚಾಯತನದಲ್ಲಿ ಜೀವಿಗಳಿದ್ದಾರೆ  6) ಆಕಾಸಾನಂಚಾಯತನವನ್ನು ದಾಟಿ ವಿಞ್ಞಾಣವು ಅನಂತವಾಗಿದೆ ಎಂದು ವಿಞ್ಞಾಣಂಚಾಯತನದಲ್ಲಿ ಜೀವಿಗಳಿದ್ದಾರೆ  7)  ಎಲ್ಲ ಬಗೆಯ ವಿಞ್ಞಾಣಂಚಾಯತನವನ್ನೂ ದಾಟಿ ಏನೂ ಇಲ್ಲ ಎಂಬ  ಅಕಿಂಚಾಞ್ಞಾಯತನದಲ್ಲಿ ಜೀವಿಗಳಿದ್ದಾರೆ ಎಂಬ ಅರಿವು.
ದಕ್ಷಿಣೆಗೆ ಅರ್ಹರಾದವರು ಏಳು ಜನ- ಎರಡು ರೀತಿಯಲ್ಲೂ ಮುಕ್ತರಾದವರು, ಪಞ್ಞಾ ವಿಮುಕ್ತರು, ಕಾಯದ ಬಗ್ಗೆ ಸತ್ಯ ತಿಳಿದವರು, ಸಮ್ಮಾದಿಟ್ಟಿ ಪಡೆದವರು, ಶ್ರದ್ಧಾ ವಿಮುಕ್ತರು, ಧಮ್ಮವನ್ನು ಪಾಲಿಸುವವರು, ಶ್ರದ್ಧೆಯನ್ನು ಬಿಡದವರು.
ಒಲವುಗಳು (ಅನುಸಯ) ಏಳು_ ಕಾಮ ಮತ್ತು ರಾಗಗಳ ಕಡೆಗೆ ಎಳೆಯುವದು, ವೈರಭಾವನೆ ಕಡೆಗೆ ಎಳೆಯುವದು, ಮಿಥ್ಯಾ ದೃಷ್ಠಿಯ ಕಡೆ ಎಳೆಯುವದು, ಸಂಶಯ ಕಡೆಗೆ ವಾಲುವದು, ದುರಭಿಮಾನ ಪಡುವದು, ಒಳ್ಳೆಯ ಜನ್ಮವನ್ನು ಪಡೆಯಬೇಕೆಂಬ ಒಲವು., ಅವಿದ್ಯೆಯ ಕಡೆಗೆ ಮನಸ್ಸು ಎಳೆಯುವದು.
ಸಂಕೋಲೆಗಳು ಏಳು-  ಹೇಳಿದುದನ್ನು ನಂಬಿ ಅನುಸರಿಸಿಕೊಂಡು ಹೋಗುವದು, ವೈರಭಾವನೆ, ಮಿಥ್ಯಾ ದೃಷ್ಠಿ, ಸಂಶಯ, , ದುರಭಿಮಾನ ,  ಒಳ್ಳೆಯ ಜನ್ಮವನ್ನು ಪಡೆಯಬೇಕೆಂಬ ಆಶೆ., ಅವಿದ್ಯೆಯಿಂದ ಬಂಧಿತನಾಗಿರುವದು.
ಸಮ್ಮಾಸಂಬುದ್ಧರು ಧರ್ಮವು ಏಳರಿಂದ ಆಗಿದೆ ಎಂದು ಅರಿತಿದ್ದಾರೆ, ಕಂಡಿದ್ದಾರೆ ಮತ್ತು ಸ್ಪಷ್ಠಪಡಿಸಿದ್ದಾರೆ.
                    ……….ಮುಂದುವರೆಯುವದು.
            ಭವತು ಸಬ್ಬ ಮಂಗಲಂ, ರಕ್ಖಂತು ಸಬ್ಬ ದೇವತಾ

-ರಮಾಕಾಂತ ಪುರಾಣಿಕ© Copyright 2022, All Rights Reserved Kannada One News