ಶಾಸಕರಿಗೆ ಕಿರುಕುಳ ನೀಡುವಷ್ಟು ದೊಡ್ಡವನಲ್ಲ: ಸಂಸದ ಪ್ರತಾಪ ಸಿಂಹ

ಶಾಸಕರಿಗೆ ಕಿರುಕುಳ ನೀಡುವಷ್ಟು ದೊಡ್ಡವನಲ್ಲ: ಸಂಸದ ಪ್ರತಾಪ ಸಿಂಹ

Updated : 18.11.2022

ಮೈಸೂರು: 29 ವರ್ಷಗಳ ಹಿಂದೆಯೇ ರಾಮದಾಸ್‌ ಶಾಸಕರಾದವರು. ಪ್ರಧಾನಿ ಮೋದಿ ಅವರಿಂದಲೇ ಮೆಚ್ಚುಗೆ ಪಡೆದವರು. ಜಿಲ್ಲೆಯ ಕೆಲವು ರಾಜಕಾರಣಿಗಳ ಬಳಿ ನನ್ನನ್ನು ಸುಡುವಷ್ಟು ದುಡ್ಡಿದೆ. ಅವರಿಗೆ ಕಿರುಕುಳ ಕೊಡುವಷ್ಟು ದೊಡ್ಡವನಲ್ಲ’ ಎಂದು ಸಂಸದ ಪ್ರತಾಪ ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ.

ಬಸ್‌ ನಿಲ್ದಾಣದ ಈ ವಿವಾದದ ಮೂಲಕ ನನಗೆ ಸಾಕಷ್ಟು ಕಿರುಕುಳ ನೀಡಲಾಗುತ್ತಿದೆ. ದಯಮಾಡಿ ಬಿಟ್ಟುಬಿಡಿ ಎಂದು ಶಾಸಕ ರಾಮದಾಸ್‌ ಬೇಸರ ತೋಡಿ ಮನವಿ ಮಾಡಿರುವುದಕ್ಕೆ ಸಂಸದ ಪ್ರತಾಪ ಸಿಂಹ ಮೇಲಿನ ಪ್ರತಿಕ್ರಿಯೆ ನೀಡಿದ್ದಾರೆ.

‘ಗುಂಬಜ್‌ನಂತಿರುವ ಗೋಪುರವನ್ನು ಕೆಡವಿದರೆ, ಟಿಪ್ಪುವಿನ ಅನುಯಾಯಿಗಳಿಗೆ ನೋವಾಗಬಹುದು, ಶಿವಾಜಿ ಅನುಯಾಯಿಗಳಿಗಲ್ಲ. ಗುಂಬಜ್‌ಗೂ–ಇಂಡೋ ಸಾರ್ಸೆನಿಕ್‌ ಕಲೆಗೂ ಸಾಕಷ್ಟು ವ್ಯತ್ಯಾಸವಿದೆ’ ಎಂದಿದ್ದಾರೆ.

‘ಹೆದ್ದಾರಿ ಪ್ರಾಧಿಕಾರ ಹಾಗೂ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಮಾದರಿಯಂತೆ ನಿರ್ಮಿಸಲು ಅಭ್ಯಂತರ ಇಲ್ಲ. ಗಡುವಿನವರೆಗೂ ಕಾಯುತ್ತೇನೆ’ ಎಂದು ಹೇಳಿದ್ದಾರೆ. 

ಬಸ್‌ ಪ್ರಯಾಣಿಕರ ತಂಗುದಾಣದ ‘ಗುಂಬಜ್‌’ ಸ್ವರೂಪ ವಿವಾದ ತೀವ್ರಗೊಳ್ಳುತ್ತಿದ್ದಂತೆ ಗೋಪುರಗಳ ಬಣ್ಣವನ್ನು ಗುರುವಾರ ಸಂಪೂರ್ಣವಾಗಿ ಕಡು ಕೆಂಪುಬಣ್ಣಕ್ಕೆ ಬದಲಾಯಿಸಲಾಗಿದೆ. ಬುಧವಾರ ಒಂದು ಗೋಪುರಕ್ಕಷ್ಟೇ ಕೆಂಪು ಬಣ್ಣವನ್ನು ಬಳಿಯಲಾಗಿತ್ತು. ವಿವಾದ ಪೂರ್ವದಲ್ಲಿ ತಂಗುದಾಣದ ಈ ಗೋಪುರಗಳಿಗೆ ಚಿನ್ನದ ಬಣ್ಣವನ್ನು ಬಳಿಯಲಾಗಿತ್ತು.
© Copyright 2022, All Rights Reserved Kannada One News