ಹಾಸ್ಯ ಕಲಾವಿದ ರಾಜು ಶ್ರೀವಾಸ್ತವ್ ಆರೋಗ್ಯ ಗಂಭೀರ!

ಹಾಸ್ಯ ಕಲಾವಿದ ರಾಜು ಶ್ರೀವಾಸ್ತವ್ ಆರೋಗ್ಯ ಗಂಭೀರ!

Updated : 12.08.2022

ನವದೆಹಲಿ: ಹೃದಯಾಘಾತದ ಕಾರಣ ಏಮ್ಸ್‌ ಗೆ ದಾಖಲಾಗಿರುವ ಹಾಸ್ಯ‌ ಕಲಾವಿದ ರಾಜು ಶ್ರೀವಾಸ್ತವ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ದೆಹಲಿಯ ಏಮ್ಸ್‌ ಮೂಲಗಳು ಶುಕ್ರವಾರ ತಿಳಿಸಿವೆ.

ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಜು ಶ್ರೀವಾಸ್ತವ ಅವರನ್ನು ಕೃತಕ ಉಸಿರಾಟದ ವ್ಯವಸ್ಥೆಯಲ್ಲಿರಿಸಲಾಗಿದೆ.

ಕಳೆದ 46 ಗಂಟೆಗಳಿಂದ ರಾಜು ಅವರಿಗೆ ಪ್ರಜ್ಞೆ ಬಂದಿಲ್ಲ. ಅವರ ಮಿದುಳಿಗೆ ಹಾನಿಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

© Copyright 2022, All Rights Reserved Kannada One News