ಭಾರತ್‌ ಜೋಡೊ ಯಾತ್ರೆ: ಮಹಾತ್ಮ ಗಾಂಧಿ ನೆಟ್ಟಿದ್ದ ಮರಕ್ಕೆ ನಮಿಸಿದ ರಾಹುಲ್‌ ಗಾಂಧಿ

Related Articles

ಪ್ರಭಾಸ್ ನಟನೆಯ ಆದಿಪುರುಷ ಚಿತ್ರಕ್ಕೆ ಸಂಕಷ್ಟ: ಕಾನೂನು ಕ್ರಮ ಕೈಗೊಳ್ಳುವುದಾಗಿ ಮಧ್ಯ ಪ್ರದೇಶದ ಗೃಹ ಸಚಿವ ಎಚ್ಚರಿಕೆ

ಜಮ್ಮು-ಕಾಶ್ಮೀರ ಕಾರಾಗೃಹ ಡಿಜಿ ಹತ್ಯೆ ಪ್ರಕರಣದಲ್ಲಿ ಮಹತ್ವದ ತಿರುವು: ಮನೆ ಸಹಾಯಕನೇ ಮುಖ್ಯ ಆರೋಪಿ, ಹತ್ಯೆ ಹೊಣೆ ಹೊತ್ತುಕೊಂಡ ಪಿಎಎಫ್ಎಫ್ ಸಂಘಟನೆ

ಅಮೆರಿಕಾದಲ್ಲಿ 8 ತಿಂಗಳ ಮಗುವಿನ ಸಹಿತ ಭಾರತ ಮೂಲದ ಕುಟುಂಬ ಅಪಹರಣ

ವಿಜಯಪುರ: ಕೆಎಸ್ಸಾರ್ಟಿಸಿ ನೌಕರ ಆತ್ಮಹತ್ಯೆ

ಇಸ್ಲಾಮ್ ಧರ್ಮಕ್ಕೆ ಮತಾಂತರಗೊಂಡ ಮಹಿಳೆಯ ಹತ್ಯೆ

ಬಿಬಿಎಂಪಿ ಮುಖ್ಯ ಆಯುಕ್ತರ ಚಿತ್ರ ಬಳಸಿ ವಂಚನೆ: ಎಫ್‍ಐಆರ್ ದಾಖಲು

ದಕ್ಷಿಣ ಕನ್ನಡ: ಅ.5ಕ್ಕೆ ಉಚಿತ 'ಅಭಾ ಕಾರ್ಡ್‌' ಉಚಿತ ನೋಂದಣಿ

ಉತ್ತರಾಖಂಡ್‌: ಹಿಮಕುಸಿತದಲ್ಲಿ ಸಿಲುಕಿದ 28 ಪರ್ವತಾರೋಹಿಗಳು

ಎಸ್ಸಿ ಯುವಕನ ಜೊತೆ ಒಕ್ಕಲಿಗ ಯುವತಿ ನಾಪತ್ತೆ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ಬೆಳ್ತಂಗಡಿಯಲ್ಲಿ RSSನಿಂದ ಶಸ್ತ್ರಾಸ್ತ ಪೂಜೆ: ಸಿಪಿಐ(ಎಂ) ಖಂಡನೆ

ಭಾರತ್‌ ಜೋಡೊ ಯಾತ್ರೆ: ಮಹಾತ್ಮ ಗಾಂಧಿ ನೆಟ್ಟಿದ್ದ ಮರಕ್ಕೆ ನಮಿಸಿದ ರಾಹುಲ್‌ ಗಾಂಧಿ

Updated : 22.09.2022

ಕೊಚ್ಚಿ: ಭಾರತ್ ಜೋಡೋ ಯಾತ್ರೆಯಲ್ಲಿರುವ ರಾಹುಲ್ ಗಾಂಧಿ ಸದ್ಯ ಕೇರಳದಲ್ಲಿದ್ದಾರೆ. ಈ ವೇಳೆ ಮಹಾತ್ಮ ಗಾಂಧಿಯವರು 1925ರ ಮಾರ್ಚ್‌ 18ರಂದು ಯು.ಸಿ.ಕಾಲೇಜಿಗೆ ಭೇಟಿ ನೀಡಿದ್ದರು. ಆ ನೆನಪಿಗಾಗಿ ಕಾಲೇಜು ಆವರಣದಲ್ಲಿ ಮಾವಿನ ಸಸಿಯೊಂದನ್ನು ನೆಟ್ಟಿದ್ದರು. ಅದು ಬೃಹದಾಕಾರವಾಗಿ ಬೆಳೆದಿದ್ದು, ಆ ಮರಕ್ಕೆ ನಮನ ಸಲ್ಲಿಸುವ ಮೂಲಕ ರಾಹುಲ್‌ ಗಾಂಧಿ ಯಾತ್ರೆ ಆರಂಭಿಸಿದರು.  ಇದಕ್ಕೂ ಮುನ್ನ ಅವರು ಯಾತ್ರಿಗಳ ತಂಡವೊಂದು ಲಕ್ಷದ್ವೀಪದಿಂದ ತಂದಿದ್ದ ಸಸಿಯನ್ನು ಕಾಲೇಜು ಆವರಣದಲ್ಲಿ ನೆಟ್ಟರು.

ಕಾಂಗ್ರೆಸ್‌ ಕೈಗೊಂಡಿರುವ ಭಾರತ್‌ ಜೋಡೊ ಯಾತ್ರೆಗೆ ಕೇರಳದಲ್ಲಿ ಗುರುವಾರವೂ ಭಾರಿ ಬೆಂಬಲ ದೊರೆಯಿತು. ಆಲುವಾದಲ್ಲಿರುವ ಯೂನಿಯನ್‌ ಕ್ರಿಸ್ಚಿಯನ್‌ (ಯು.ಸಿ) ಕಾಲೇಜಿನಲ್ಲಿ 15ನೇ ದಿನದ ಯಾತ್ರೆಗೆ ಚಾಲನೆ ನೀಡಲಾಯಿತು.

ಬೆಳಿಗ್ಗೆ 6.30ಕ್ಕೆ ಆರಂಭವಾದ ಯಾತ್ರೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ರಾಹುಲ್‌ ಜೊತೆ ಕಾರ್ಯಕರ್ತರು ಉತ್ಸುಕತೆಯಿಂದ ಹೆಜ್ಜೆ ಹಾಕಿದರು. ರಾಷ್ಟ್ರೀಯ ಹೆದ್ದಾರಿಯ ಒಂದು ಬದಿಯು ಕಾರ್ಯಕರ್ತರಿಂದ ತುಂಬಿ ಹೋಗಿತ್ತು. ಕಣ್ಣು ಹಾಯಿಸಿದಲ್ಲೆಲ್ಲಾ ಪಕ್ಷದ ಧ್ವಜಗಳು ರಾರಾಜಿಸುತ್ತಿದ್ದವು.

ಮುಂಜಾನೆ ಅವಧಿಯ ಯಾತ್ರೆಯು 11 ಕಿ.ಮೀ ದೂರವನ್ನು ಕ್ರಮಿಸಿ ಅಂಗಮಾಲಿಯ ಕರುಕುಟ್ಟಿ ಕಾಪ್ಪೆಲಾ ವೃತ್ತದಲ್ಲಿ ಕೊನೆಗೊಂಡಿತು. ಸಂಜೆ 5 ಗಂಟೆಗೆ ಚಿರಂಗರಾ ಬಸ್‌ ನಿಲ್ದಾಣದಿಂದ ಆರಂಭವಾದ ಯಾತ್ರೆ ಚಾಲಕುಡಿ ಪುರಸಭೆ ಬಳಿ ಮುಕ್ತಾಯವಾಯಿತು.

© Copyright 2022, All Rights Reserved Kannada One News