ಟೆನಿಸ್ ಗೆ ವಿದಾಯ ಹೇಳಿದ ರೋಜರ್ ಫೆಡರರ್: ಸ್ನೇಹಿತನ ನಿವೃತ್ತಿಗೆ ಗಳಗಳನೆ ಅತ್ತ ಪ್ರತಿಸ್ಪರ್ಧಿ ರಫೆಲ್ ನಡಾಲ್: ಇದು ಕ್ರೀಡೆಯ ಅತ್ಯುತ್ತಮ ಕ್ಷಣ ಎಂದ ಕೊಹ್ಲಿ

Related Articles

ಟಿ-20 ವಿಶ್ವಕಪ್ ಸೆಮಿಫೈನಲ್ ನಲ್ಲಿ ಸೋತ ಭಾರತ ಕ್ರಿಕೆಟ್ ತಂಡವನ್ನು ಚೋಕರ್ಸ್ ಎಂದ ಕಪಿಲ್ ದೇವ್

ಟೀ20 ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೋತ ಟೀಂ ಇಂಡಿಯಾ: ಫೈನಲ್‌ಗೆ ತಲುಪಿದ ಇಂಗ್ಲೆಂಡ್-ಪಾಕ್!

ಅತ್ಯಾಚಾರ ಆರೋಪ: ದನುಷ್ಕಾ ಗುಣತಿಲಕರನ್ನು ಅಮಾನತುಗೊಳಿಸಿದ ಶ್ರೀಲಂಕಾ ಕ್ರಿಕೆಟ್ ಮಂಡಳಿ

ಟಿ-20 ವಿಶ್ವಕಪನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ದ. ಆಫ್ರಿಕಾಕ್ಕೆ ಸೋಲು, ಸೆಮಿಫೈನಲ್ ಗೆ ಲಗ್ಗೆ ಇಟ್ಟ ಭಾರತ!

ಐಪಿಎಸ್ ಅಧಿಕಾರಿ ವಿರುದ್ಧ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ ಎಂಎಸ್ ಧೋನಿ

‘ಖೇಲ್ ರತ್ನ’ ಪ್ರಶಸ್ತಿಗೆ ಟೇಬಲ್ ಟೆನಿಸ್ ತಾರೆ ಶರತ್ ಕಮಲ್ ಹೆಸರು ಶಿಫಾರಸು

ಏಷ್ಯಾ ಸ್ಕ್ವಾಷ್‌ ಚಾಂಪಿಯನ್‌ಷಿಪ್‌ನಲ್ಲಿ ಐತಿಹಾಸಿಕ ಚಿನ್ನ ಗೆದ್ದ ಭಾರತ ತಂಡ

ಬೈಜುಸ್ ನ ಜಾಗತಿಕ ರಾಯಭಾರಿಯಾಗಿ ಫುಟ್ಬಾಲ್ ತಾರೆ ಲಿಯೊನೆಲ್ ಮೆಸ್ಸಿ ನೇಮಕ

ಟಿ20 ವಿಶ್ವಕಪ್‌| ಟಾಸ್‌ ಗೆದ್ದ ಬಾಂಗ್ಲಾದೇಶ: ಭಾರತ ಬ್ಯಾಟಿಂಗ್

ಟಿ20 ವಿಶ್ವಕಪ್ ನಲ್ಲಿ ಜಿಂಬಾಬ್ವೆ ವಿರುದ್ಧ 3 ರನ್ ಅಂತರದ ಜಯ ಸಾಧಿಸಿದ ಬಾಂಗ್ಲಾದೇಶ

ಟೆನಿಸ್ ಗೆ ವಿದಾಯ ಹೇಳಿದ ರೋಜರ್ ಫೆಡರರ್: ಸ್ನೇಹಿತನ ನಿವೃತ್ತಿಗೆ ಗಳಗಳನೆ ಅತ್ತ ಪ್ರತಿಸ್ಪರ್ಧಿ ರಫೆಲ್ ನಡಾಲ್: ಇದು ಕ್ರೀಡೆಯ ಅತ್ಯುತ್ತಮ ಕ್ಷಣ ಎಂದ ಕೊಹ್ಲಿ

Updated : 24.09.2022

ಬೆಂಗಳೂರು: ಖ್ಯಾತ ಟೆನಿಸ್ ತಾರೆ ರೋಜರ್ ಫೆಡರರ್ ತಮ್ಮ ಟೆನಿಸ್ ಕ್ರೀಡೆಗೆ ವಿದಾಯ ಸಲ್ಲಿಸಿದ್ದಾರೆ. ಇನ್ನು ಮೈದಾನದಲ್ಲಿ ಪ್ರತಿಸ್ಪರ್ಧಿಯಾಗಿದ್ದರೂ ತಮ್ಮ ಆಪ್ತ ಸ್ನೇಹಿತ ರೋಜರ್ ಫೆಡರರ್ ಟೆನಿಸ್ ಕ್ರೀಡೆಗೆ ನಿವೃತ್ತಿ ಸಲ್ಲಿಸುತ್ತಿರುವುದನ್ನು ರಫೆಲ್ ನಡಾಲ್ ಅವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಅಲ್ಲದೆ ಲೇವರ್ ಕಪ್‌ನಲ್ಲಿ ಫೆಡರರ್ ಜೊತೆಗೆ ಕಣಕ್ಕಿಳಿದಿದ್ದ ನಡಾಲ್, ನೋವು ತಾಳಲಾಗದೇ ಕಣ್ಣೀರಿಟ್ಟರು. ಇದನ್ನೇ ಹಂಚಿರುವ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ, ಇಂದು ನಾನು ನೋಡಿರುವ ಪೈಕಿ ಅತ್ಯಂತ ಸುಂದರವಾದ ಕ್ರೀಡಾ ಚಿತ್ರ (ಕ್ಷಣ) ಎಂದು ಬಣ್ಣಿಸಿದ್ದಾರೆ.

ಪ್ರತಿಸ್ಪರ್ಧಿಗಳು ಒಬ್ಬರನ್ನೊಬ್ಬರಿಗಾಗಿ ಈ ರೀತಿ ಭಾವನಾತ್ಮಕ ಕ್ಷಣವನ್ನು ಹಂಚುತ್ತಾರೆಂದು ಯಾರಾದರೂ ಯೋಚಿಸಿದ್ದೀರಾ? ಇದುವೇ ಕ್ರೀಡೆಯ ಸೌಂದರ್ಯ. ಇಂದು ನನ್ನ ಪಾಲಿಗೆ ಅತ್ಯಂತ ಸುಂದರ ಕ್ರೀಡಾ ಚಿತ್ರವಾಗಿದೆ. ನಿಮ್ಮ ಜೊತೆಗಾರ ನಿಮಗಾಗಿ ಅತ್ತಾಗ, ದೇವರು ಕರುಣಿಸಿದ ಪ್ರತಿಭೆಯಿಂದ ನಿಮಗೇನು ಮಾಡಲು ಸಾಧ್ಯವಾಯಿತು ಎಂಬುದು ಮನದಟ್ಟಾಗುತ್ತದೆ. ಅವರಿಬ್ಬರ ಬಗ್ಗೆ ನನಗೆ ಅಪಾರ ಗೌರವವಿದೆ ಎಂದು ಹೇಳಿದ್ದಾರೆ.

ಲೇವರ್ ಕಪ್‌ನಲ್ಲಿ ಸೋಲಿನೊಂದಿಗೆ ರೋಜರ್ ಫೆಡರರ್ ವಿದಾಯ ಸಲ್ಲಿಸಿದರು. ಸ್ವಿಸ್ ದಿಗ್ಗಜನ ಕೊನೆಯ ಬಾರಿ ನೋಡಲು ಪ್ರೇಕ್ಷಕರು ಕಿಕ್ಕಿರಿದು ಸೇರಿದ್ದರು. ವಿದಾಯದ ಕ್ಷಣದಲ್ಲಿ ಫೆಡರರ್ ಹಾಗೂ ನಡಾಲ್ ಬಿಕ್ಕಿ ಬಿಕ್ಕಿ ಅಳುತ್ತಿರುವ ದೃಶ್ಯವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಅತಿ ಹೆಚ್ಚು ಪ್ರತಿಕ್ರಿಯೆ ಗಿಟ್ಟಿಸಿಕೊಂಡಿದೆ.

© Copyright 2022, All Rights Reserved Kannada One News