ಪುರಾತನ ಪುಣ್ಯಕ್ಷೇತ್ರಗಳ ಅಭಿವೃದ್ಧಿ; ದೇಶಕ್ಕೆ ಬಂದ ಅಚ್ಚೇದಿನ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

Related Articles

ಅಂಕಿ ಅಂಶಗಳೆಂಬ ಬೆಂಕಿಯ ಬೆನ್ನೇರಿ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಗಂಜಿಗಿರಾಕಿ ಟ್ರೋಲ್ ಭಕ್ತರ ಗೋಳು ; ಕೆಜಿಗಟ್ಟಲೆ ಬೈಗುಳ ತಿನ್ನುವ ಭಂಡಬಾಳು: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

"ಮುಳ್ಳನ್ನು ಪೊರೆದ ಗುಲಾಬಿ ಹೂವು" ನಾಲ್ಕನೆಯ ಕಂತು: ಸಿಹಾನ ಬಿ.ಎಂ ಅವರ ವಾರದ ಅಂಕಣ

ಧ್ಯಾನ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಮಿಥ್ ಗಳ ಲೋಕದಲ್ಲಿ ಗುಬ್ಬಚ್ಚಿಯಾದ ಗುಬ್ಬಿಮರಿ: ಸಿಹಾನ ಬಿ.ಎಂ. ಅವರ ವಾರದ ಅಂಕಣ

ಜಾವಕಟ್ಟೋ ಜಂಭೂದ್ವೀಪಸ್ಥ: ಡಾ.ರವಿಕುಮಾರ್ ನೀಹ ಅವರ ಅಂಕಣ

ರಜನಿ ‘ದ’ ಸೂಪರ್ ಸ್ಟಾರ್: ಎಡಿಟರ್‌ ಸ್ಪೆಷಲ್

ಮಣ್ಣು ಮಾರಲು ವಿರೋಧಿಸಿದ ಮುದುಕಿ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಬಿಜೆಪಿಯಿಂದ ‘ಅನ್ನ’ಕ್ಕೂ ಕನ್ನ…!: ಎಡಿಟರ್‌ ಸ್ಪೆಷಲ್

ಕೋಟಿ ಕಂಠ ಕನ್ನಡಗೀತೆ ಗಾಯನದ ಕೇಸರಿ ಮಸಲತ್ತು; ಸ್ವೀಟ್ ಬಾಕ್ಸಲ್ಲಿ ನಾಯಿ ಬಿಸ್ಕತ್ತು: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ಪುರಾತನ ಪುಣ್ಯಕ್ಷೇತ್ರಗಳ ಅಭಿವೃದ್ಧಿ; ದೇಶಕ್ಕೆ ಬಂದ ಅಚ್ಚೇದಿನ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

Updated : 08.11.2022

“ನೀನೊಬ್ಬ ಭಯಂಕರ ನಟ ಅಂತ ನಮ್ಗೆ ಗೊತ್ತು. ಅದಕ್ಕೆ ಚೆನ್ನಾಗಿ ಆಕ್ಟಿಂಗ್ ಮಾಡಿ, ಬಣ್ಣದ ಮಾತಾಡಿ ಜನರನ್ನ ಮೋಡಿ ಅಂತ್ಲೇ ನಿನ್ನನ್ನು ಸಾಮ್ರಾಟ ಮಾಡಿರೋದು. ಆದ್ರೆ…ನೀನೇನಯ್ಯ…ಅದೆಂಥ ಹುಚ್ಚು…ಕ್ಯಾಮೆರಾ ಕಂಡ ಕೂಡಲೇ ಫೋಸ್ ಕೊಟ್ಕೊಂಡ್ ನಿಂತು ಬಿಡ್ತಿಯಾ! ಅದರ ಜೊತೆಗೆ ನೀನು ಹಾಕೋ ಫ್ಯಾನ್ಸಿ ಡ್ರೆಸ್ ನೋಡೋಕೆ…ಅಬ್ಬಾ… ಎರಡು ಕಣ್ಣು ಸಾಲದು! ಅದೇನು ಹ್ಯಾಟು…ಗಾಗಲ್ಸು…ಯಾವ ಸೀಮೆಯ ಚಿತ್ರವಿಚಿತ್ರ ವೇಷ! ಎಲ್ಲಾ ಅದ್ಯಾವನೊ ಕನ್ನಡ ಸಿನಿಮಾ ಆಕ್ಟರ್ ಇದ್ದಾನಲ್ಲ...ಅವನ ಇಮೀಟೆಶನ್. ಅಲ್ಲಯ್ಯ…ಅದನ್ನ ನೋಡಿ ನಿನ್ನ ಭಕ್ತರಿಗೇನೊ ಒಳ್ಳೇ ಮನರಂಜನೆ ಸಿಗಬಹುದು. ಆದ್ರೆ, ಇಷ್ಟು ದೊಡ್ಡ ದೇಶದ ಸಾಮ್ರಾಟನಾಗಿ ಹೊರದೇಶದವರು ನಿನ್ನನ್ನ ಜೋಕರ್ ಅಂದ್ಕೊಂಡು ನಗಲ್ವ? ಸ್ವಲ್ಪನೂ ಪರಿಜ್ಞಾನ ಬೇಡ್ವ?”

ಮಾಧವ ಕೃಪಾಕಟಾಕ್ಷ ಕುಟೀರದ ಪ್ರಧಾನ ಅರ್ಚಕ, ಸಾಮ್ರಾಟನನ್ನು ಕರೆಸಿ ಜನ್ಮ ಜಾಲಾಡುತ್ತಿದ್ದ. ಅಲ್ಲೇ ಕೈಕಟ್ಟಿ ಕೊಂಡು ವಿನೀತನಾಗಿ ನಿಂತಿದ್ದ ಸಾಮ್ರಾಟನಿಗೆ ಮುಖದಲ್ಲಿ ಬೆವರಿಳಿದು, ಮರುತ್ತರ ನೀಡಲು ಏನೂ ಹೊಳೆಯದೆ “ಬೆ…ಬೆ..ಬ್ಬೆ” ಎಂದು ತಡವರಿಸುತ್ತಿದ್ದ. ನಾಲಿಗೆಯ ಪಸೆ ಆರಿತ್ತು. ಹಾಗೆ, ಅರ್ಚಕ ನಖಶಿಖಾಂತ ಕೋಪಗೊಂಡು ಸಿಡಿಮಿಡಿ ಅನ್ನುತ್ತಿದ್ದರೆ ತನ್ನನ್ನು ಯಾಕಾಗಿ ಬರಹೇಳಿದ್ದೆಂಬುದೇ ಸಾಮ್ರಾಟನಿಗೆ ಮರೆತು ಹೋಗಿತ್ತು. ಮೈಂಡ್ ಬ್ಲಾಂಕಾಗಿದ್ದಾಗ ತಟ್ಟನೆ ಏನೋ ಹೊಳೆದು “ಅದು…ಡೆವಲಪ್ ಮೆಂಟ್” ಎಂದ.

“ಹ…ಅದೇ…ಡೆವಲಪ್ ಮೆಂಟ್…ಅದನ್ನೇ ಮಾತಾಡೋಕೆ ಕರೆಸಿದ್ದು. ಆದ್ರೆ ನೀನು ಹಾಕಿರೋ ಡ್ರೆಸ್ ನೋಡಿ ಎಲ್ಲಾ ಮರೆತೇ ಹೋಯಿತು” ಎಂದು ಸುಧಾರಿಸಿಕೊಂಡ ಅರ್ಚಕ “ನೋಡಯ್ಯ….ವಿದೇಶಿಗಳು ದೇಶ ಬಿಟ್ಟು ಹೋದ ಮೇಲೆ ನಮ್ಮ ವೈರಿಗಳು ದೇಶಕ್ಕೆ ಏನು ಮಾಡಿದರು? ಇಷ್ಟು ವರ್ಷದಲ್ಲಿ ದೇಶವನ್ನು ನುಂಗಿ ನೀರು ಕುಡಿದರು. ಯಾವ ನದಿಯನ್ನು ನೋಡಿದರೆ ಸಾಕು…ಅದಕ್ಕೊಂದು ಅಣೆಕಟ್ಟು ಕಟ್ಟಿದರು. ಎಲ್ಲೆಂದರಲ್ಲಿ ವಿಶ್ವವಿದ್ಯಾಲಯಗಳು…ಶಾಲೆಗಳು..ಆಸ್ಪತ್ರೆಗಳು…ಸಂಶೋಧನ ಕೇಂದ್ರಗಳು…ಹೆದ್ದಾರಿಗಳು…ದೇಶದ ಉದ್ದಗಲಕ್ಕೂ ರೈಲನ್ನು ಬಿಟ್ಟರು. ಇದರಿಂದ ನಮ್ಮ ದೇಶ ಅಭಿವೃದ್ಧಿ ಆಯಿತೇ? ನಮ್ಮ ಸನಾತನ ಧರ್ಮ ಉದ್ಧಾರವಾಯಿತೇ? ನಮ್ಮ ಪುರಾತನ ಗುಡಿಗೋಪರಗಳಲ್ಲಿ ಬಾವಲಿಗಳು ಗೂಡು ಕಟ್ಟಿದವು. ಪುಣ್ಯಕ್ಷೇತ್ರಗಳು ಪಾಳು ಬಿದ್ದವು. ಅದನ್ನು ಯಾರಾದರೂ ಜೀರ್ಣೋದ್ಧಾರ ಮಾಡಿದರೇ?”

ಅರ್ಚಕನ ಮಾತಿಗೆ ಸಾಮ್ರಾಟ ಅಡ್ಡಡ್ಡ ತಲೆ ಆಡಿಸಿದ. “ತಲೆ ಆಡಿಸಿದರೆ ಆಯಿತೇ? ನೀನೇನು ಮಾಡುತ್ತಿದ್ದೀಯ? ಎಲ್ಲಾ ಕಡೆ ಫ್ಯಾಷನ್ ಶೋ ಮಾಡ್ಕೊಂಡ್ ಮಜಾ ಮಾಡ್ತಿದ್ದೀಯ! ಎಲ್ಲಿ ಹೋಯಿತು ನಿನ್ನ ಧರ್ಮರಕ್ಷಣೆಯ ವಾಗ್ದಾನ?” ಎಂದು ಅರ್ಚಕ ನುಡಿದದ್ದೇ, ಸಾಮ್ರಾಟನ ದೇಹದಲ್ಲಿ ಮಿಂಚು ಸಂಚಾರವಾಯಿತು. ಧರ್ಮರಕ್ಷಣೆಯ ಕನಸೊತ್ತ ತನ್ನ ಪೂರ್ವಾಶ್ರಮದ ದಿನಗಳು ಕಣ್ಮುಂದೆ ಹಾದು ಹೋದವು.

“ಈ ಕ್ಷಣದಿಂದ ಪುಣ್ಯಕ್ಷೇತ್ರಗಳ ಅಭಿವೃದ್ಧಿಯೇ ನನ್ನ ಪರಮಗುರಿ” ಎಂದು ಮುಷ್ಟಿ ಮಾಡಿದ ಕೈಯೆತ್ತಿ ಪಣ ತೊಟ್ಟ. ಸಾಮ್ರಾಟನ ಆ ಶಪಥದ ಕೂಗಿಗೆ ನಡುಗಿದ ಆಕಾಶದಲ್ಲಿ ಗುಡುಗು, ಮಿಂಚುಗಳಾಯಿತು. ಆಕಾಶದ ಮೋಡಗಳಲ್ಲಿ ದೇವಾನುದೇವತೆಗಳು ಕಾಣಿಸಿಕೊಂಡು ಸಾಮ್ರಾಟನ ಮೇಲೆ ಪುಷ್ಪ ಮಳೆಗರೆದರು.

ಅರಮನೆಗೆ ಸಾಮ್ರಾಟ ಬಂದವನೇ ಹಣೆಗೆ ಅರಿಶಿನ ಬಳಿದು, ರೂಪಾಯಿ ಅಗಲ ಕುಂಕುಮವಿಟ್ಟು, ಕೊರಳಿಗೆ ರುದ್ರಾಕ್ಷಿಮಾಲೆ ಹಾಕಿ, ಜರಿಯಂಚಿನ ಬಿಳಿ ಪಂಚೆ ಉಟ್ಟು, ಅಂಥದ್ದೇ ಬಿಳಿಪಂಚೆಯನ್ನು ಹೊದ್ದ. ಪುಟ್ಟಮಕ್ಕಳು ನೋಡಿದರೆ ಹೆದರಿ ಚಡ್ಡಿಯಲ್ಲೇ ಒಂದಾ ಮಾಡಿಕೊಳ್ಳುವಂತೆ - ಭಕ್ತಿಭಾವಕ್ಕಿಂತ ಗಂಟಿಕ್ಕಿದ ಮುಖದಲ್ಲಿ ರೋಷ ಕಂಡು ಥೇಟ್ ಮಂತ್ರವಾದಿಯಂತೆ ಭಯಾನಕವಾಗಿದ್ದ.

ದೇಶಾದ್ಯಂತ ಸಂಚರಿಸಿದ ಸಾಮ್ರಾಟ, ಹೋದೆಡೆಲೆಲ್ಲ ಪುರಾತನ ಪುಣ್ಯಕ್ಷೇತ್ರಗಳನ್ನು, ದೇವಸ್ಥಾನಗಳನ್ನು ಕಾರಿಡಾರು ಮಾಡಿಸಿ ಅಭಿವೃದ್ಧಿ ಮಾಡಿಸಿದ. ಈ ಮೂಲಕ ತಾನೊಬ್ಬನೇ ಅಪ್ರತಿಮ ದೇಶಭಕ್ತ ಎಂದು ತನ್ನ ನಡೆಯಿಂದಲೇ ಸಾಬೀತು ಪಡಿಸಿದ್ದೇನೆಂದು ಘೋಷಿಸಿ, ದೇಶವು ಈಗ ಭೌದ್ಧಿಕ ಗುಲಾಮಗಿರಿಯಿಂದ ಬಿಡುಗಡೆಯಾಯಿತೆಂದ. ಸಾಮ್ರಾಟನನ್ನು ಓಲೈಸಲು ತುದಿಗಾಲಲ್ಲಿ ನಿಂತ ಬಕೆಟ್ ವರದಿಗಾರರು ಇದನ್ನು ರಂಗುರಂಗಾಗಿ ಸುದ್ಧಿ ಪ್ರಚಾರ ಮಾಡಿದವು.

ಅಲ್ಲಿಗೆ ಅಚ್ಚೇದಿನಗಳು ಬಂದಂತಾಗಿ ದೇಶವು ಮರತೇ ಹೋಗಿದ್ದ ಸುವರ್ಣಯುಗಕ್ಕೆ ಮರಳಿ, ಪ್ರಜೆಗಳು ಸುಖಸಂತೋಷದಲ್ಲಿ ಮುಳುಗಿ, ಮುಳುಗಿ ಎದ್ದು ಮಲಗಿ ಜೀವನ ಸಾಗಿಸತೊಡಗಿದರು.  
    
ಚಂದ್ರಪ್ರಭ ಕಠಾರಿ
cpkatari@yahoo.com

© Copyright 2022, All Rights Reserved Kannada One News