ಸಾರ್ವಜನಿಕ ಭವಿಷ್ಯ ನಿಧಿಯ ಬಡ್ಡಿದರ ಏರಿಕೆ?

ಸಾರ್ವಜನಿಕ ಭವಿಷ್ಯ ನಿಧಿಯ ಬಡ್ಡಿದರ ಏರಿಕೆ?

Updated : 16.09.2022

ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಮತ್ತು ಇತರ ಸಣ್ಣ ಉಳಿತಾಯ ಹೂಡಿಕೆಗಳ ಮೇಲಿನ ಬಡ್ಡಿದರ ಏರಿಕೆಯಾಗುವ ಸಾಧ್ಯತೆಯಿದ್ದು, ತಿಂಗಳಾಂತ್ಯದಲ್ಲಿ ನಡೆಯಲಿರುವ ಸಭೆಯಲ್ಲಿ ಬಡ್ಡಿದರಗಳು ಹೆಚ್ಚಾಗಬಹುದು ಎಂದು ವರದಿಯಾಗಿವೆ.

ಪಿಪಿಎಫ್‌ನ ಬಡ್ಡಿದರ ಪ್ರಸ್ತುತ ಶೇ. 7.1ರಷ್ಟಿದೆ. ಸರ್ಕಾರಿ ಭದ್ರತೆಗಳ ಮೇಲಿನ ಬಡ್ಡಿದರವು ಪ್ರಸ್ತುತ ಶೇ. 7.3ರಷ್ಟಿದ್ದು, ಸೆಕ್ಯೂರಿಟಿಗಳ ಮೇಲಿನ ಬಡ್ಡಿ ದರವು 2022ರ ಜನವರಿಯಲ್ಲಿ ಶೇ. 6.5 ಮತ್ತು ಜೂನ್‌ನಲ್ಲಿ ಶೇ. 7.6ರಷ್ಟಿತ್ತು. ಈವರೆಗೆ ಸತತ ಒಂಬತ್ತು ತ್ರೈಮಾಸಿಕಗಳಲ್ಲಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಪಿಪಿಎಫ್ ಜೊತೆಗೆ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ, ಕಿಸಾನ್ ವಿಕಾಸ್ ಪತ್ರ, ಸ್ಥಿರ ಠೇವಣಿ, ಪಿಪಿಎಫ್, ಹಿರಿಯ ನಾಗರಿಕರ ಉಳಿತಾಯ ಯೋಜನೆ ಹಾಗೂ ಸುಕನ್ಯಾ ಸಮೃದ್ಧಿ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಸಹ ಹೆಚ್ಚಿಸುವ ಸಾಧ್ಯತೆಗಳಿವೆ.

ಎನ್‌ಎಸ್‌ಸಿಯ ಬಡ್ಡಿದರ ಶೇ. 6.8ರಷ್ಟಿದ್ದರೆ, ಒಂದು ವರ್ಷದ ಅವಧಿಯ ಠೇವಣಿ ಯೋಜನೆಯು ಶೇ. 5.5ರಷ್ಟಿದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಬಡ್ಡಿದರ ಶೇ. 7.4ರಷ್ಟಿದ್ದರೆ, ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿದರ ಶೇ. 7.6ರಷ್ಟಿದೆ ಎಂದು 'ಲೈವ್ ಮಿಂಟ್' ವರದಿಯಲ್ಲಿ ಉಲ್ಲೇಖಿಸಲಾಗಿದೆ.

2020ರ ಏಪ್ರಿಲ್- ಜೂನ್‌ನ ತ್ರೈಮಾಸಿಕದಲ್ಲಿ ಕೊನೆಯದಾಗಿ ಸಣ್ಣ ಉಳಿತಾಯಗಳ ಮೇಲಿನ ಬಡ್ಡಿದರ ಪರಿಷ್ಕರಿಸಲಾಗಿತ್ತು.

“ಸರ್ಕಾರಿ ಭದ್ರತೆಗಳ ಹೆಚ್ಚಳವು ಪಿಪಿಎಫ್ ಮೇಲಿನ ಬಡ್ಡಿದರವನ್ನು ಹೆಚ್ಚಿಸುವುದಲ್ಲದೆ ಸಣ್ಣ ಉಳಿತಾಯ ಹೂಡಿಕೆಗಳ ಬಡ್ಡಿದರಗಳ ಮೇಲೆ ಪರಿಣಾಮ ಬೀರುತ್ತದೆ” ಎಂದು ಮಾರುಕಟ್ಟೆ ತಜ್ಞರು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

© Copyright 2022, All Rights Reserved Kannada One News