ಮೈಸೂರು: ಸನ್ನಡತೆಯ ಆಧಾರದ ಮೇಲೆ 81 ಕೈದಿಗಳಿಗೆ ಬಿಡುಗಡೆ

Related Articles

ಭಾರತದ ಜನಪ್ರಿಯ ಗೇಮಿಂಗ್ ಯೂಟ್ಯೂಬರ್ ಅಭ್ಯುದಯ್ ಮಿಶ್ರಾ ರಸ್ತೆ ಅಪಘಾತದಲ್ಲಿ ಮೃತ್ಯು

ಪಿಎಸ್ಐ ಹಗರಣ: ಪ್ರಮುಖ ಆರೋಪಿ ಹಾಸ್ಟೆಲ್ ವಾರ್ಡನ್ ಬಂಧನ

ತಮ್ಮ ತಂಗಿ ಜೊತೆ ಸ್ನೇಹದಲ್ಲಿದ್ದ ಯುವಕನ ಹತ್ಯೆ: ಆರೋಪಿಗಳ ಬಂಧನ

ಬ್ರಹ್ಮಪುತ್ರ ನದಿಯಲ್ಲಿ ಮುಳುಗಿದ 75 ಮಂದಿ ಪ್ರಯಾಣಿಸುತ್ತಿದ್ದ ದೋಣಿ: ಓರ್ವ ಅಧಿಕಾರಿ ಸೇರಿ ಹಲವರು ನಾಪತ್ತೆ

ಪ್ರವಾದಿ ಮುಹಮ್ಮದ್ ಬಗ್ಗೆ ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆ: ಮುಖ್ಯಶಿಕ್ಷಕ ಅಮಾನತು

ದೇಶದ ನೂತನ ಅಟಾರ್ನಿ ಜನರಲ್‌ ಆಗಿ ಹಿರಿಯ ವಕೀಲ ಆರ್‌.ವೆಂಕಟರಮಣಿ ನೇಮಕ

ಕೊಡಗು: ಸಾಕಾನೆ ದಾಳಿಗೆ ಕಾರ್ಮಿಕ ಬಲಿ

ಚಾಮರಾಜನಗರ: ‘ಭಾರತ್ ಜೋಡೋ’ ಫ್ಲೆಕ್ಸ್ ಹರಿದ ದುಷ್ಕರ್ಮಿಗಳು

ಕಾನೂನುಬದ್ಧ ಗರ್ಭಪಾತಕ್ಕೆ ಎಲ್ಲ ಮಹಿಳೆಯರು ಅರ್ಹ : ಸುಪ್ರೀಂಕೋರ್ಟ್

ಮಳಲಿ‌ ಮಸೀದಿ ವಿವಾದ: ಪ್ರಕರಣದ ತೀರ್ಪು ಅ.17 ಕ್ಕೆ ಮುಂದೂಡಿಕೆ

ಮೈಸೂರು: ಸನ್ನಡತೆಯ ಆಧಾರದ ಮೇಲೆ 81 ಕೈದಿಗಳಿಗೆ ಬಿಡುಗಡೆ

Updated : 15.08.2022

ಮೈಸೂರು: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ರಾಜ್ಯದಲ್ಲಿ 81 ಮಂದಿ ಅಲ್ಪಾವಧಿ ಶಿಕ್ಷಾ ಬಂಧಿಗಳನ್ನು ಬಿಡುಗಡೆಗೊಳಿಸಲಾಗಿದೆ. ರಾಜ್ಯ ಸರ್ಕಾರದ ಆದೇಶದಂತೆ ಸನ್ನಡತೆಯ ಆಧಾರದ ಮೇಲೆ ಮೈಸೂರಿನಲ್ಲಿ 20 ಅರ್ಹ ಅಲ್ಪಾವಧಿ ಶಿಕ್ಷಾ ಬಂದಿಗಳನ್ನು ಮೊದಲ ಹಂತದಲ್ಲಿ ಬಿಡುಗಡೆಗೊಳಿಸಲಾಯಿತು.

ಮಾಫಿ ಸೇರಿ ಶೇಕಡಾ 66ರಷ್ಟು ಶಿಕ್ಷೆ ಪೂರೈಸಿದ ಅಲ್ಪಾವಧಿ ಶಿಕ್ಷಾ ಬಂಧಿಗಳಾಗಿದ್ದ 20 ಪುರುಷರನ್ನು ಬಿಡುಗಡೆಗೊಳಿಸಲಾಗಿದೆ. ಕುಮಾರ್ ಅಲಿಯಾಸ್‌ ಸೀನಾ, ಮಾದೆಯಾಂಡ ಸಿ.ರಾಜೇಶ್, ಶಾಂತರಾಜು, ಕುಮಾರ್‌, ಕೃಷ್ಣ, ಮಾದವನ್, ಜಯರಾಮ, ಮಹೇಶ್, ನಂಜುಂಡ, ಪಿ.ಜಿ.ಪುಟ್ಟ, ವಿ.ಜೆ.ಹರೀಶ್, ಚಂದ್ರೇಗೌಡ, ಮಂಜು, ಶಿವಣ್ಣ, ಜಗದೀಶ್, ಅಬ್ದುಲ್ ಫಾರೂಕ್, ಕೃಷ್ಣ, ಜೇನುಕುರುಬರ ಗಣೇಶ್, ಬೆಟ್ಟಪಟ್ಟಿ, ಆರ್.ಸದಾನಂದ ಎಂಬುವರನ್ನು ಬಿಡುಗಡೆಗೊಳಿಸಲಾಗಿದೆ. ಮೈಸೂರು ಜಿಲ್ಲೆಯ ಕಾನೂನು ಸೇವಾ ಪ್ರಾಧಿಕಾರ ಬಿಡುಗಡೆ ಪತ್ರವನ್ನು ವಿತರಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ ಮತ್ತೆ ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ತೊಡಗದೇ ಉತ್ತಮ ಬದುಕು ರೂಪಿಸಿಕೊಳ್ಳಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಾದ ಕೆ.ಸಿ.ದಿವ್ಯಶ್ರೀ ಉಪಸ್ಥಿತರಿದ್ದರು.

ರಾಜ್ಯದಲ್ಲಿ 81 ಕೈದಿಗಳ ಬಿಡುಗಡೆ: ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ರಾಜ್ಯದ 9 ಕೇಂದ್ರ ಕಾರಾಗೃಹಗಳಲ್ಲಿ ಅಲ್ಪಾವಧಿ ಶಿಕ್ಷಾ ಬಂಧಿಗಳಿಗಾಗಿರುವ ಮೂವರು ಮಹಿಳೆಯರು ಸೇರಿ 81 ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. ಬೆಂಗಳೂರು 14, ಬೆಳಗಾವಿ 3, ಬಳ್ಳಾ ರಿ 8, ವಿಜಯಪುರ ಇಬ್ಬರು ಮಹಿಳೆಯರು ಸೇರಿ 10, ಧಾರವಾಡ 6, ಕಲಬುರಗಿ 10, ಮೈಸೂರು 20, ಶಿವಮೊಗ್ಗ 9, ಶಿವಮೊಗ್ಗ ಮಹಿಳಾ ಕಾರಾಗೃಹ ಒಬ್ಬ ಮಹಿಳೆ ಸೇರಿದಂತೆ ಒಟ್ಟು 81 ಮಂದಿಯನ್ನು ಬಿಡುಗಡೆ ಮಾಡಲಾಗಿದೆ. 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಜ್ಯಪಾಲರ ಸೂಚನೆಯ ವಿಶೇಷ ಆದ್ಯತೆ ಮೇರೆಗೆ ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. ಅಲ್ಪಾವಧಿ ಶಿಕ್ಷೆಗೊಳಗಾಗಿರುವ ಸನ್ನಡತೆ ಹೊಂದಿರುವ ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಕಾರಾಗೃಹ ಇಲಾಖೆ ಅಧಿಕಾರಿಗಳು ತಿಳಿಸಿದರು.


© Copyright 2022, All Rights Reserved Kannada One News