Flash News:
ದಾರಿ ಇನ್ನೂ ದೂರ ( ಕವಿತೆ)

ದಾರಿ ಇನ್ನೂ ದೂರ ( ಕವಿತೆ)

Updated : 27.02.2022

ಮನದ ಹಾಸಿಗೆಯಲ್ಲಿ ಮಾಗಿ

ಹುಟ್ಟುವುದು ಚೆಂದನೆ ಕೂಸು ಕವಿತೆ

ಹೊಳಪು ಕಣ್ಣಲ್ಲಿ

ಕರೆಗೆ ಮಿಡಿದ ಅದರ ಪ್ರಕಟಣೆ

ಹೋಗಬೇಕು

ಗಂಡಿನ ಕರುಣೆಯಲ್ಲೇ?

ಅವನ ಆಸರೆಯಲ್ಲೇ

 

ಅಲೆಗಳಿಂದ ಹೊರದೂಡಲ್ಪಟ್ಟ

ಮತ್ಸದ ಆಕ್ರಂದನ ಬೆಸ್ತನಿಗೆ ಅಂಟುವುದೇ??

 

ಕಂಬನಿಯ ಕೂಪದೊಳಗೆ

ಇಂಗಿದ

ಬೆದರಿ ಕತ್ತಲೆಯಿಂದೊರಬರದ

ಅವಿತ ಕವಿತೆಗಳಷ್ಟೋ

 

ಸಿಗುವುದು ಒಂದೇ ಆಯ್ಕೆ

ಹೆಡೆ ಬಿಚ್ಚಿ ನಿನ್ನ ದಾರಿ

ನೀ ನೋಡಿಕೊ

 

ಇಲ್ಲ,

ಹೆಡೆ ಸೆಟೆಸದೆ

ಬುಟ್ಟಿಯಲ್ಲಿ ಜನ್ಮ ಸಾರ್ಥಕ ಪಡಿಸಿಕೊ

ಇರುವುದು ಒಂದೇ ಆಯ್ಕೆ, ಸಿಗುವುದು ಅಷ್ಟೆ

 

ಮೌನದೇವಿ? ಸಿರಿದೇವಿ?

ವಾಗ್ದೇವಿ? ಮೂದೇವಿ?

ನಿಮ್ಮದೇ ನಾಮಕರಣಗಳು

 

ಯಾರ ಬಳಿ ಬಿಕ್ಕಲಿ ಇದ

ಆತ್ಮ ಬಂಧುಗಳು? ಒಡನಾಡಿಗಳು?

ಸ್ನೇಹಿತರೇ?

ತಾಪತ್ರಯಗಳ ಜಡ ಲೋಕದಲ್ಲಿ

ಒಳಪಟ್ಟರೆ

ನನ್ನ ನೋವು ತಾತ್ಸಾರಕೆ

 

ಕೊನೆಗೆ,

ಯಾರಿಗೆ ಬೇಕಿದೆ ಕವಿತೆ?

ಮಡಿಲಲ್ಲಿ ಅವಿತಿಟ್ಟು

ಮನದಲ್ಲೇ ನೇವರಿಸಿ

ಬಿಗಿದಪ್ಪಿ ಹೊದ್ದು

ಮಲಗುವೆ ಕವಿತೆಯನ್ನೇ

 

ಗರ್ಭ ಕಟ್ಟುವ ಹಕ್ಕಿಗೂ

ಸ್ವಾತಂತ್ಯ್ರ ಸಿಗುವುದೆಂತು

ಮಾತಿಗೆ ನಿಲ್ಲುವುದೆಂತು

ಗೆಳತಿ,

ಸವೆಸಬೇಕಿದೆ ದಾರಿ ಇನ್ನೂ

ದೂರ ದೂರ ದೂರ

 

-ಎಡೆಯೂರು ಪಲ್ಲವಿ

© Copyright 2022, All Rights Reserved Kannada One News