ಸ್ವಾತಂತ್ರ್ಯೋತ್ಸವ: ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ

Related Articles

ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುವುದಿಲ್ಲ: ಅಶೋಕ್ ಗೆಹ್ಲೋಟ್

ಎರಡು ರೀತಿಯ ಸಾಹಿತಿಗಳು ಇದ್ದಾರೆ: ಸಿಎಂ ಬೊಮ್ಮಾಯಿ‌

ದಸರಾ ಕ್ರೀಡಾಪಟುಗಳಿಗೆ ವಸತಿ ನೀಡಲು ಯೋಗ್ಯತೆ ಇಲ್ಲವೇ? : ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿ

SDPI ನಿಷೇಧದ ಬಗ್ಗೆ ಇನ್ನೂ ನಿರ್ಧರಿಸಿಲ್ಲ: ಸಿಎಂ ಬೊಮ್ಮಾಯಿ

ಪಿಎಫ್ಐ ಸಿದ್ದರಾಮಯ್ಯರ ಪಾಪದ ಕೂಸು: ಯಡಿಯೂರಪ್ಪ

ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಚುನಾವಣೆ: ನಾಮಪತ್ರ ಸ್ವೀಕರಿಸಿದ ದಿಗ್ವಿಜಯ್ ಸಿಂಗ್

‘ರೂಟ್ ಮಾರ್ಚ್’ ಗೆ ಆರೆಸ್ಸೆಸ್ ಮನವಿ : ಅನುಮತಿ ನಿರಾಕರಿಸಿದ ತಮಿಳುನಾಡು ಸರ್ಕಾರ

ರಾಜ್ಯ ಮಟ್ಟದ ದಸರಾ ಯೋಗಾಸನ ಸ್ಪರ್ಧೆಗೆ ಚಾಲನೆ ನೀಡಿದ ಸಚಿವ ಎಸ್.ಟಿ.ಸೋಮಶೇಖರ್

ದೇಶದಲ್ಲಿ ಮೊದಲು ಕಾಂಗ್ರೆಸ್ ಪಕ್ಷವನ್ನು ನಿಷೇಧ ಮಾಡಬೇಕು: ನಳಿನ್ ಕುಮಾರ್ ಕಟೀಲ್

ಶಿವಮೊಗ್ಗ : ಎಸ್ ಡಿಪಿಐ ಕಚೇರಿ, ಮುಖಂಡರ ಮನೆಗಳ ಮೇಲೆ ಪೊಲೀಸ್ ದಾಳಿ

ಸ್ವಾತಂತ್ರ್ಯೋತ್ಸವ: ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ

Updated : 15.08.2022

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಹೊಸದಿಲ್ಲಿಯ ಕೆಂಪು ಕೋಟೆಯ ಆವರಣದಿಂದ ಸ್ವಾತಂತ್ರ್ಯ ದಿನಾಚರಣೆಗೆ ಚಾಲನೆ ನೀಡಿದರು. ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಅವರು ಭಾರತವು ಪ್ರಜಾಪ್ರಭುತ್ವದ ತಾಯಿ ಎಂದು ಕರೆದಿದ್ದಾರೆ.

"ನಮ್ಮ ತ್ರಿವರ್ಣ ಧ್ವಜವು ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದ ಮೂಲೆ ಮೂಲೆಗಳಲ್ಲಿ ತನ್ನ ಪೂರ್ಣ ವೈಭವದಲ್ಲಿ ಹಾರಾಡುತ್ತಿದೆ" ಎಂದು ಪ್ರಧಾನಮಂತ್ರಿಯವರು 75ನೇ ಸ್ವಾತಂತ್ರ್ಯೋತ್ಸವದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದರು.

ಪ್ರಧಾನಿ ದಿಲ್ಲಿಯ ಕೆಂಪುಕೋಟೆ ಮೇಲೆ ಸತತ 9ನೇ ಬಾರಿ ಧ್ವಜಾರೋಹಣ ನೆರವೇರಿಸಿದ್ದಾರೆ. ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರ್ಣಗೊಂಡಿದ್ದು, ಹೊಸ ಸಂಕಲ್ಪದೊಂದಿಗೆ ಹೊಸ ದಿಕ್ಕಿನತ್ತ ಹೆಜ್ಜೆ ಹಾಕುವ ಸಮಯ ಇದಾಗಿದೆ ಎಂದರು.

ಮಹಾತ್ಮ ಗಾಂಧಿ, ನೇತಾಜಿ ಸುಭಾಷ್ ಚಂದ್ರ ಬೋಸ್, ಬಾಬಾಸಾಹೇಬ್ ಅಂಬೇಡ್ಕರ್, ವೀರ್ ಸಾವರ್ಕರ್, ಭಗತ್ ಸಿಂಗ್, ಜವಾಹರಲಾಲ್ ನೆಹರು ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರ ಗ್ಯಾಲಕ್ಸಿಗೆ ಪ್ರಧಾನಿ ಮೋದಿ ನಮನ ಸಲ್ಲಿಸಿದರು.

ಭ್ರಷ್ಟಾಚಾರ ಹಾಗೂ  'ಪರಿವಾರವಾದ' ಅಥವಾ ಸ್ವಜನಪಕ್ಷಪಾತ ಇಂದು ನಾವು ಎದುರಿಸುತ್ತಿರುವ ಎರಡು ದೊಡ್ಡ ಸವಾಲುಗಳಾಗಿವೆ. ಭ್ರಷ್ಟಾಚಾರವು ಗೆದ್ದಲಿನಂತೆ ದೇಶವನ್ನು ಟೊಳ್ಳಾಗಿಸುತ್ತಿದೆ, ನಾವು ಅದರ ವಿರುದ್ಧ ಹೋರಾಡಬೇಕಾಗಿದೆ. ನಮ್ಮ ಸಂಸ್ಥೆಗಳ ಬಲವನ್ನು ಅರಿತುಕೊಳ್ಳಲು, ಅರ್ಹತೆಯ ಆಧಾರದ ಮೇಲೆ ದೇಶವನ್ನು ಮುನ್ನಡೆಸಲು ‘ಪರಿವಾರವಾದ ವಿರುದ್ಧ ನಾವು ಜಾಗೃತಿ ಮೂಡಿಸಬೇಕು' ಎಂದರು.

 ಹಿಂದಿನ ಸರಕಾರಗಳಲ್ಲಿ ಭಾರತವನ್ನು ಲೂಟಿ ಮಾಡಿದವರು ಈಗ ತಮ್ಮ ಪಾಪಗಳನ್ನು ತೀರಿಸಿಕೊಳ್ಳುತ್ತಿದ್ದಾರೆ. ಅವರ ಅಕ್ರಮ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಿದ್ದೇವೆ. ಭ್ರಷ್ಟಾಚಾರದ ವಿರುದ್ಧದ ಈ ಹೋರಾಟದಲ್ಲಿ ನನಗೆ ನಿಮ್ಮ ಬೆಂಬಲ ಬೇಕು. ನಾವು ಭ್ರಷ್ಟಾಚಾರ ಹಾಗೂ  ಭ್ರಷ್ಟರನ್ನು ಎದುರಿಸಬೇಕಾಗಿದೆ ಎಂದು  ಪ್ರಧಾನಿ ಮೋದಿ ಹೇಳಿದ್ದಾರೆ.

© Copyright 2022, All Rights Reserved Kannada One News