ದೇಹದ ತೂಕ ಇಳಿಸಿಕೊಳ್ಳಬೇಕೇ? ಈ ಸಲಹೆಗಳನ್ನು ಅನುಸರಿಸಿ ಸಾಕು..!

ದೇಹದ ತೂಕ ಇಳಿಸಿಕೊಳ್ಳಬೇಕೇ? ಈ ಸಲಹೆಗಳನ್ನು ಅನುಸರಿಸಿ ಸಾಕು..!

Updated : 01.05.2022

ಮನುಷ್ಯ ಅದೆಷ್ಟೊಂದು ಆಹಾರ ಪ್ರಿಯ ಎಂದರೆ ಕಣ್ಣು ನೋಡಿದ್ದೆಲ್ಲ ಬೇಕು ಅನಿಸಿ ತಿಂದು ಬಿಡುತ್ತಾನೆ. ಈ ರೀತಿಯ ಆಹಾರ ಶೈಲಿಯಿಂದ ಬಹುತೇಕರು ಹೆಚ್ಚು ಬೊಜ್ಜನ್ನು ಬೆಳೆಸಿಕೊಂಡಿರುತ್ತಾರೆ. ಅತಿಯಾದ ಬೊಜ್ಜಿನಿಂದ ದೇಹವು ತನ್ನ‌ ಆಕಾರ ಕಳೆದುಕೊಂಡು ನೋಡುಗರಿಗೆ ಮಾಂಸಪರ್ವತದ ರೀತಿಯಲ್ಲಿ ಕಾಣಿಸತೊಡಗುತ್ತಾರೆ. ಅವನ ದೇಹದ ತೂಕವೇ ಅವನ ಶತ್ರುವಾಗಿ ಕಾಡತೊಡಗುತ್ತದೆ.

ನಮ್ಮ ದೇಹದ ತೂಕವು‌ ನಾವು ತಿನ್ನುವ ಆಹಾರದಿಂದ ಬಂದರೆ ಕೆಲವು ಸಲ ಆಹಾರ ಸೇವಿಸದಿದ್ದರೂ ಗ್ಯಾಸ್ ತುಂಬಿಕೊಂಡು ದಪ್ಪವಾಗುತ್ತಾರೆ. ನಮ್ಮ ದೇಹದ ತೂಕವು ಹೆಚ್ಚಾದಗಲೂ ಕೆಲವು ತೊಂದರೆಗಳು ಬರುತ್ತವೆ. ತೂಕ ಕಮ್ಮಿಯಾದರೂ ಕೆಲವು ತೊಂದರೆಗಳು ಬರುತ್ತವೆ. ನಮ್ಮ ದೇಹದ ತೂಕವನ್ನು ಕಡಿಮೆ‌ಮಾಡಿಕೊಳ್ಳಲು ಜಿಮ್. ವೈದ್ಯರು ಹೇಳುವ ಸಲಹೆಯನ್ನು ಪಾಲನೆ ಮಾಡುವುದು ಹೀಗೆ ಇನ್ನಿಲ್ಲದ ಹರಸಾಹಸವನ್ನು ಮಾಡಿದರೂ ಯಾವ ರೀತಿಯ ಪರಿಣಾಮಗಳು ಬೀರುವುದಿಲ್ಲ.

ಆದ್ದರಿಂದ ನಾವು ನಮ್ಮ ಮನೆಯಲ್ಲಿ ಸಿಗುವಂತಹ ವಸ್ತುಗಳನ್ನು ಉಪಯೋಗಿಕೊಂಡು ಹೇಗೆ ತೂಕವನ್ನು ಕಡಿಮೆಮಾಡಿಕೊಳ್ಳಬಹುದು. ಅನಿಯಮಿತವಾಗಿ ತಿಂದ ಆಹಾರದಿಂದ ಯಾವ ರೀತಿ‌ ತೊಂದರೆಗಳು ಉಂಟಾಗುತ್ತವೆ ಅಲ್ಲವೇ? ನಾವು ರಾತ್ರಿಯ ವೇಳೆಯಲ್ಲಿ ಸೇವಿಸುವ ಆಹಾರದಲ್ಲಿ  ಪೌಷ್ಟಿಕಾಂಶವಿರುವ  ಆಹಾರಗಳನ್ನು ಸೇವಿಸಬೇಕು . ಆದರೆ, ಅದರಲ್ಲಿ ಕಡಿಮೆ ಕ್ಯಾಲೊರಿ ಇರುವಂತೆ ನೋಡಿಕೊಳ್ಳಬೇಕು. ಆಹಾರದಲ್ಲಿ ಎಣ್ಣೆಯ ಅಂಶಗಳು ಕಡಿಮೆ ಇರುವಂತೆ‌ ನೋಡಿಕೊಳ್ಳಬೇಕು.

​ರಾತ್ರಿಯ ಸಮಯದಲ್ಲಿ ಹೆಚ್ಚು ಆಹಾರವನ್ನು ಸೇವಿಸಬಾರದು ಸ್ವಲ್ಪ ಊಟ‌ ಮಾಡಿದರೆ‌ ಸಾಕು. ಊಟದಲ್ಲಿ ಚಪಾತಿ. ರೊಟ್ಟಿ. ಮುದ್ದೆ. ಇರುವಂತೆ ನೋಡಿಕೊಳ್ಳಬೇಕು. ಊಟಕ್ಕೆ ಮುನ್ನ ನೀರು ಕುಡಿಯುವ ಅಬ್ಯಾಸವನ್ನು ಮಾಡೊಕೊಳ್ಳಿ‌ ಏಕೆಂದರೆ ನೀರು ಕುಡಿದರೆ ಹೊಟ್ಟೆ ತುಂಬಿಕೊಂಡಂತಾಗಿ ಆಹಾರವೂ ಸ್ವಲ್ಪ ಪ್ರಮಾಣದಲ್ಲಿ ಸೇವಿಸಲು ಸಾದ್ಯವಾಗುತ್ತದೆ.

*ಬೆಳಗಿನ ಜಾವದಲ್ಲಿ ವಾಕಿಂಗ್ ಮಾಡುವುದರಿಂದ ಬೇಡದ ಕೊಬ್ಬುಗಳು ಕರಗುತ್ತದೆ.

*ಬಾದಾಮಿಯನ್ನು ನೆನಸಿ ತಿನ್ನುವುದರಿಂದ ತೂಕ ಕಡಿಮೆಯಾಗುತ್ತದೆ.

*ಜೀರಿಗೆ  ಶುಂಟಿಯನ್ನು ನೀರಿನಲ್ಲಿ ಕುದಿಸಿ ಕುಡಿದರೆ ತೂಕ ಕಡಿಮೆಯಾಗುತ್ತದೆ.

*ಕೆಲವರು ಆಲೂಗಡ್ಡೆಯನ್ನು ಸೇವಿಸಿದರೆ ದಪ್ಪ ಅಗುತ್ತಾರೆ ಎನ್ನುತ್ತಾರೆ. ಅದರೆ ಅದು ಸುಳ್ಳು ಸರಿಯಾದ ರೀತಿಯಲ್ಲಿ ಬಳಸಿದರೆ ತೂಕ ಕಡಮೆಯಾಗಲು ಸಹಕಾರಿಯಾಗುತ್ತದೆ.

*ಅನ್ನವನ್ನು ಸಂಪೂರ್ಣವಾಗಿ ಕಡಿಮೆ ಮಾಡಬೇಕು.

*ನಿಂಬೆಹಣ್ಣು ತೂಕ ಕಡಿಮೆಮಾಡಿಕೊಳ್ಳಲು‌ ಸಹಕಾರಿಯಾಗುತ್ತದೆ.

*ಆಲಿವ್ ಅಯಿಲ್ ಕೂಡಾ ತೂಕ  ಇಳಿಸಲು‌ಸಹಕಾರಿಯಾಗುತ್ತದೆ. ನಾವು ಸೇವಿಸುವ ಆಹಾರವನ್ನು  ಚೆನ್ನಾಗಿ ಜಗಿದು ತಿನ್ನಬೇಕು.

*ಜಂಕ್ ಪುಡ್ ಸೇವನೆಯನ್ನು‌ ಮಾಡಬಾರದು. ಪ್ರತಿದಿನವು ದ್ಯಾನವನ್ನು ಮಾಡಬೇಕು. ಹೊರಗಡೆಯ ಅಹಾರವನ್ನು ಕಡಿಮೆ ಮಾಡಬೇಕು.

*ಹೆಚ್ಚು ಕ್ಯಾಲೊರಿ ಇಲ್ಲದಿರುವ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಬೇಕು.

*ಸರಿಯಾಗಿ ನಿದ್ದೆಯನ್ನು ಮಾಡಬೇಕು.

*ತೂಕವನ್ನು‌ ಹೆಚ್ಚಿಸಿಕೊಳ್ಳುವುದು‌ ಸುಲಭ ಅದರೆ ಕಡಿಮೆ ಮಾಡಿಕೊಳ್ಳುವುದು ಕಷ್ಟ.


© Copyright 2022, All Rights Reserved Kannada One News