ಎರಡು ಧ್ವನಿಗಳು: ಫೀನಿಕ್ಸ್ ರವಿ ಅವರ ವಾರದ ಅಂಕಣ

Related Articles

ಅಂಕಿ ಅಂಶಗಳೆಂಬ ಬೆಂಕಿಯ ಬೆನ್ನೇರಿ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಗಂಜಿಗಿರಾಕಿ ಟ್ರೋಲ್ ಭಕ್ತರ ಗೋಳು ; ಕೆಜಿಗಟ್ಟಲೆ ಬೈಗುಳ ತಿನ್ನುವ ಭಂಡಬಾಳು: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

"ಮುಳ್ಳನ್ನು ಪೊರೆದ ಗುಲಾಬಿ ಹೂವು" ನಾಲ್ಕನೆಯ ಕಂತು: ಸಿಹಾನ ಬಿ.ಎಂ ಅವರ ವಾರದ ಅಂಕಣ

ಧ್ಯಾನ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಪುರಾತನ ಪುಣ್ಯಕ್ಷೇತ್ರಗಳ ಅಭಿವೃದ್ಧಿ; ದೇಶಕ್ಕೆ ಬಂದ ಅಚ್ಚೇದಿನ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ಮಿಥ್ ಗಳ ಲೋಕದಲ್ಲಿ ಗುಬ್ಬಚ್ಚಿಯಾದ ಗುಬ್ಬಿಮರಿ: ಸಿಹಾನ ಬಿ.ಎಂ. ಅವರ ವಾರದ ಅಂಕಣ

ಜಾವಕಟ್ಟೋ ಜಂಭೂದ್ವೀಪಸ್ಥ: ಡಾ.ರವಿಕುಮಾರ್ ನೀಹ ಅವರ ಅಂಕಣ

ರಜನಿ ‘ದ’ ಸೂಪರ್ ಸ್ಟಾರ್: ಎಡಿಟರ್‌ ಸ್ಪೆಷಲ್

ಮಣ್ಣು ಮಾರಲು ವಿರೋಧಿಸಿದ ಮುದುಕಿ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಬಿಜೆಪಿಯಿಂದ ‘ಅನ್ನ’ಕ್ಕೂ ಕನ್ನ…!: ಎಡಿಟರ್‌ ಸ್ಪೆಷಲ್

ಎರಡು ಧ್ವನಿಗಳು: ಫೀನಿಕ್ಸ್ ರವಿ ಅವರ ವಾರದ ಅಂಕಣ

Updated : 28.10.2022

ಧ್ವನಿ ಒಂದು

ಕೆರೆಯೊಳಗಿಳಿದು ಈಜುತಿದ್ದ
ತನ್ನ ಕೋಣದತ್ತ ಕಲ್ಲ ಬೀಸುವಾಗ
ಬಂಡೆ ಕಾಲ್ಜಾರಿ ಹುಡುಗ ಕೆರೆ ಒಳಗೆ ಬಿದ್ದ

ಕೆರೆ ಸುತ್ತ ಜನ
ಯಾರ ಗಮನವಿಲ್ಲ,  
ಪಾಪ ಹುಡುಗನಿಗೆ ಈಜುಬಾರದಲ್ಲ

ಪೂರ್ವಕಾಲದಲ್ಲಿ ಕೇಳಿಸಿಕೊಂಡ
ಈಜಿನ ಜ್ಞಾನದಂತೆ ಆತುರದಲ್ಲಿ ಕೈ ಕಾಲಾಡಿಸಿದ
ನೀರ ಹಿಂದೆ ತಳ್ಳಿ ಮೇಲೆಬರಲೆತ್ನಿಸಿದ
ತಳ್ಳಿದೊಷ್ಟು ನೀರು ಮುಳುಗಿಸಿಕೊಂಡು
ನೀರುಕುಡಿದ
ಸಾವು ತನ್ನ ತಲೆ ಮೇಲತ್ತಿ  ತುಳಿಯುತ್ತಿರುವುದ್ದನ್ನು ಕಂಡ !

ಅಲ್ಲಾಡಿದೊಷ್ಟು ಕೆಸರ ಉಸುಬಿನಂತೆ ನೀರು
ಮತ್ತೊಷ್ಟು ನೀರು ಕುಡಿದ
ಕಣ್ಣು ತುಂಬಿ ಕತ್ತಲೆ
ಕಿವಿ ತುಂಬಿ ಶೂನ್ಯವು
ಮರಗಟ್ಟುತಲಿದೇ ದೇಹವು

ಅಯ್ಯೋ... ಅವನು ಮುಳುಗುತಿದ್ದಾನೆ
ತಾಯಿಯ ಚಡಪಡಿಕೆಯ ಆರ್ತನಾದ ಸುತ್ತ ಅಲೆಯತೊಡಗಿತ್ತು,
ಅಲೆ ಅಲ್ಲೇ ಕೆರೆಯ  ದಡದಲ್ಲೇ
ನಿಂತವರ ಜಗ್ಗಿ  ಹಿಡಿದೆಳೆಯಿತು

ಓಡಿ ಬಂದವರು ದಡದದಲ್ಲಿ ನಿಂದರು
ಯಾರವನು?
ಹಲವಾರು !? !? !? !?  ಅರ್ಥದ ಚಿನ್ನೆಗಳು
' ನಮ್ಮೂರಟ್ಟಿಯ ಕರಿಯಾ...'
ಯಾರೋ ಗುರುತಿಸಿದರು
ಅವರ ಕಣ್ಣಬಿಂಬದಲಿ ಕರಿಯನು ಮುಳುಗುತ್ತ ತೇಲುತ್ತ...

ಅವ್ವನ ಕಣ್ಣ ಕೋಡಿದಾಟಿ ದುಮ್ಮಿಕ್ಕುತ್ತಿರುವ
ಕಣ್ಣೀರು...

ಜನರ ಗುಸುಗುಸು ಮಾತು...  ;
ಅವನನ್ನ ಉಳಿಸಬೇಕು... ಉಳಿಸಿದರೆ ಏನಾಗುತ್ತೆ !?
ಅಂಗಿ ಬಿಚ್ಚುತ್ತಾ  ಹರೆಯದ ಹುಡುಗ ರಾಜು ಭಟ್ಟ
ಕುಲ ನಾಶ
ಜಾತಿ ನಾಶ
ಧರ್ಮ ನಾಶ
ಬಾಣದಂತೆ ಮೂರು ಉತ್ತರಗಳು
ಬಿಚ್ಚಿದಂಗಿಯ ಮತ್ತೆ ತೊಟ್ಟ!!

ಲಿಂಗಾಯತರ ಹುಡುಗ ಅಲ್ಲಮ ಪ್ರಭುಲಿಂಗ
ಹೌದ್ದಾ...? !!
ಉದ್ಘರಿಸಿದ

ಗೌಡರ ಹುಡುಗ ಮಂಜುನಾಥ ಗೌಡ
ಹೌದೌದು...
ಪಲ್ಲಿ ಲೊಚಗುಟ್ಟುವಂತೆ ಲೊಚಗುಟ್ಟಿದ

ಜೈನರ ಹುಡುಗ ಮುಖೇಶ
ಜೀವ ದೊಡ್ಡದು ಸರಿ  ಆದರೆ,  ನಮ್ಮ ಜಾತಿಯೇ ನಾಶವಾದ ಬಳಿಕ ಅವನೊಂದಿಗೆ ನಾವೇ ನಾಶವಾದಂತಲ್ವೇ...?!
ಜಾತಿ ಶ್ರೇಷ್ಠತೆಯ ವ್ಯಾಖ್ಯಾನ….

ಕರಿಯ  ಜೋರಾಗಿ ಕೈಕಾಲಾಡಿಸುತ್ತ ಇನ್ನು ಹೋರಾಟದಲಿದ್ಧ
ಅವನ ಕೋಣ ಅವನತ್ತಲೇ ನೋಡುತ್ತಾ ದೂರ ನಡು ಕೆರೆಯಲ್ಲಿ ಈಜುತಿತ್ತು
ಕರಿಯನ ಹೆಣವಾಗಲೇ ಅವರ ಹೃದಯದೊಳಗೆ
ತೇಲುತಿತ್ತು
 
ಕೊನೆಯ ಕ್ಷಣ...
ಸಾವು ಅವನ ಕುತ್ತಿಗೆ ಹಿಡಿದು
ನೀರಿನಾಳಕ್ಕೆ ಅಮುಕಿದಾಗ
ಅವ್ವ ನೆನಪಾದಳು
ಪ್ರೇಯಸಿ ಸರೋಜ ನೆನಪಾದಳು
ದಪ್ಪ ಮೀಸೆಯ ಅಪ್ಪ ನೆನಪಾದ...

ಧ್ವನಿ ಎರಡು
__________


ಮಗು ಆಡಲು ಹೋಗಿ ಅಗ್ರಹಾರದ  ಕಲ್ಯಾಣಿಯೊಳಗೆ ಬಿತ್ತು
ಜೀವ ರೆಕ್ಕೆ ಬಡಿಯುತಿತ್ತು
ಮಗುವಿನ  ಪುಟ್ಟ ಕೈಗಳು ರೆಕ್ಕೆಯಾಗಿದ್ದರೆ ಎಂತ ಚೆಂದಿತ್ತು, ತಟ್ಟನೆ ಆ  ಕಲ್ಯಾಣಿಯಿಂದ ಮೇಲಾರಿ  ಬದುಕಬಹುದಿತ್ತು

ಸುಳಿಯಲಿ ಸಿಕ್ಕ ಪುಟ್ಟ ಮೀನಿನ ಹಾಗೆ ಆ  ಮಗುವೂ

 'ಪಾಪ...ಕಂದನ ಎದೆ ಢವಗುಡುತ್ತಲೇ ಇತ್ತು
ಆಗೋ... ಅಲ್ಲಿ ಸಾವು
ಇಗೋ... ಇಲ್ಲೇ ಸಾವು
ಬಲೆ ಬೀಸಿ ಅಲೆಯುತಲಿತ್ತು
ಪುಟ್ಟ ಕಂದನ ನೋಡಿ ಅದಕ್ಕೂ ಕಣ್ಣೀರುಬಂತು

ಗುಟುಕು ಗುಟುಕೆ ನೀರು
ಅಥವಾ ವಿಶ್ವ, ಮಗುವಿನ ಬಾಯೊಳಗೆ ಇಳಿಯುತ್ತಿತ್ತು

ಯಾರೋ ಬಂದರು...
ಗುಸುಗುಸು ಮಾತು ಕಿರಿಚಾಟ
ಪಾಪ ಕಂದನಿಗಾದರು ಎಲ್ಲಿ ಕೇಳುತ್ತಿತ್ತು
ಅದರ ಕಿವಿಯಲ್ಲಾಗಲೇ ಸಾವು ತುಂಬಿಕೊಳ್ಳುತ್ತಿತ್ತು

ಧ್ವನಿ ಪ್ರತಿದ್ವನಿಯಾಯಿತು

ಯಾರೋ ದುಮಿಕಿದರು...
ಕಂದನ ಎದೆಗವಚಿ ದಡಕ್ಕಿಜಿದರು...
ಕಂದನಿಗಾಗ ಕನಸೊಂದು ಬಿದ್ದಿತ್ತು
ಮರಳುಗಾಡಲಿ  ಯಾರೋ   ದಟ್ಟ ಕಾಡೊಳಗೆ
ಕೈ ಹಿಡಿದು ನೆಡೆಸುತ್ತಿರುವಂತೆ

ಅಪ್ಪಿಕೊಂಡ ಎದೆ ಸಿಕ್ಕ ತಕ್ಷಣ
ಆ ಕೈ ಮಾಯಾವಾಯಿತು

ಕಲ್ಯಾಣಿ ಸುತ್ತ ಗುಜುಗುಜು ಶುರುವಾಯಿತು
ಪಾಪ ಕಂದನ ಎದೆಯೊಳಗಿನ್ನೂ ಕುಂಟುಸಿರು ತೆವಳುತ್ತಿತ್ತು
ಕಣ್ಣ ಮುಚ್ಚಿದ ಕಂದ ಕಣ್ತೆರೆಯಿತು

ಕಂದನ ಎದೆಗೆ ಅವಚಿಕೊಂಡ ಈಜಿದವನ ಹಿಡಿದು ಕಂಬಕ್ಕೆ ಕಟ್ಟಲಾಯಿತು !!
ಛಡಿ ಏಟುಬಿತ್ತು !!
ನೀರು ಅಪವಿತ್ರ ದಂಡ !!
ದೇಹ ಮುಟ್ಟಿದ ದಂಡ ವಿಧಿಸಲಾಯಿತು!!

           ~ ಫೀನಿಕ್ಸ್ ರವಿ
    gcravi1975@gmail.com

© Copyright 2022, All Rights Reserved Kannada One News