Flash News:
ಯೋಗ, ಪ್ರಯೋಗ ಮತ್ತು ಬುದ್ಧ ಭಾಗ-ಐದು: ಫೀನಿಕ್ಸ್ ರವಿ ಅವರ ವಾರದ ಅಂಕಣ

Related Articles

ಅಂಕಿ ಅಂಶಗಳೆಂಬ ಬೆಂಕಿಯ ಬೆನ್ನೇರಿ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಗಂಜಿಗಿರಾಕಿ ಟ್ರೋಲ್ ಭಕ್ತರ ಗೋಳು ; ಕೆಜಿಗಟ್ಟಲೆ ಬೈಗುಳ ತಿನ್ನುವ ಭಂಡಬಾಳು: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

"ಮುಳ್ಳನ್ನು ಪೊರೆದ ಗುಲಾಬಿ ಹೂವು" ನಾಲ್ಕನೆಯ ಕಂತು: ಸಿಹಾನ ಬಿ.ಎಂ ಅವರ ವಾರದ ಅಂಕಣ

ಧ್ಯಾನ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಪುರಾತನ ಪುಣ್ಯಕ್ಷೇತ್ರಗಳ ಅಭಿವೃದ್ಧಿ; ದೇಶಕ್ಕೆ ಬಂದ ಅಚ್ಚೇದಿನ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ಮಿಥ್ ಗಳ ಲೋಕದಲ್ಲಿ ಗುಬ್ಬಚ್ಚಿಯಾದ ಗುಬ್ಬಿಮರಿ: ಸಿಹಾನ ಬಿ.ಎಂ. ಅವರ ವಾರದ ಅಂಕಣ

ಜಾವಕಟ್ಟೋ ಜಂಭೂದ್ವೀಪಸ್ಥ: ಡಾ.ರವಿಕುಮಾರ್ ನೀಹ ಅವರ ಅಂಕಣ

ರಜನಿ ‘ದ’ ಸೂಪರ್ ಸ್ಟಾರ್: ಎಡಿಟರ್‌ ಸ್ಪೆಷಲ್

ಮಣ್ಣು ಮಾರಲು ವಿರೋಧಿಸಿದ ಮುದುಕಿ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಬಿಜೆಪಿಯಿಂದ ‘ಅನ್ನ’ಕ್ಕೂ ಕನ್ನ…!: ಎಡಿಟರ್‌ ಸ್ಪೆಷಲ್

ಯೋಗ, ಪ್ರಯೋಗ ಮತ್ತು ಬುದ್ಧ ಭಾಗ-ಐದು: ಫೀನಿಕ್ಸ್ ರವಿ ಅವರ ವಾರದ ಅಂಕಣ

Updated : 30.09.2022

ಮಾತನ್ನು ಬಿಟ್ಟು ಮೌನಕ್ಕೆ ಶರಣಾದ ಬುದ್ಧನ ಸುತ್ತ ಇದ್ದ ಬುದ್ಧನ ಆ ಅತೀತ ಆನಂದದ ಸ್ಥಿತಿಯ ಅಭಿಮಾನಿಗಳು, ಆ ಸ್ಥಿತಿಯ ತಲುಪಲು ಯಾವ ಯಾವ ತಂತ್ರ ಬಳಸಬೇಕು, ಯಾವ ತಂತ್ರ ಬಳಸಬಾರದು ಎಂಬೆಲ್ಲ ಶೋಧನೆಗಿಳಿದ್ದಿದ್ದರ ಫಲವೇ  ಮಹಾಯಾನ ಮತ್ತು ಹೀನಾಯಾನ ಎಂಬೆರಡು  ಬೌದ್ಧ ಪಂಥಗಳು!!.

ಬೋಧಿ ಧರ್ಮ ತಾನು ಆರಿಸಿದ  ಉತ್ತಮ ಜ್ಞಾನಿಗೆ ತನ್ನ ಉತ್ತರಾಧಿಕಾರಿಯಾಗಿ ತನ್ನ ಕಷಾಯ ವಸ್ತ್ರ ಮತ್ತು ಭೀಕ್ಷಾ ಪಾತ್ರೆ ಕೊಟ್ಟು ಹೋದ.  ಅದೊಂದು ಪದ್ಧತಿಯಾಗಿ  ನಂತರ ಬೆಳೆದು ಬಂದಿತು. ಆ  ಪದ್ಧತಿಯಲ್ಲಿ ಐದನೇಯವರಾಗಿ  ಬಂದವರು ಬೌದ್ಧ ಗುರು ಗುನಿನ್ . ಈಗ ಯಾಕೆ ಗುರು ಗುನಿನ್ ರ ಬಗ್ಗೆ ಮಾತು ಎಂದರೇ, ಈ ಮಹಾಯಾನ  ಮತ್ತು ಹೀನಾಯಾನ ಎಂಬ ಎರಡು  ಪದ್ಧತಿಗಳನ್ನು  ಮೀರಿ,
ಆನಂತರ  ಚೀನಾದಲ್ಲಿ 'ಝೆನ್ ' ಎಂಬ ಹೊಸ  ಪ್ರಖರವಾದ ಬೌದ್ಧ ಪಂಥವು   ಬೌದ್ಧ ಗುರು ಗುನಿನ್  ಮತ್ತು ಆತನ  ಶಿಷ್ಯ ಯೆನೋ ರಿಂದಾಗಿ  ಹುಟ್ಟಿ ಕೊಂಡಿತು.  ಈ ಇಬ್ಬರು ಗುರು ಶಿಷ್ಯರ  ನಡುವೆ ಉಂಟಾದ ಝೆನ್ ಎಂಬ ಹೊಸ ಬೌದ್ಧ ಪಂಥದ ಹುಟ್ಟಿನ ಬಗ್ಗೆ ಹೇಳುವುದಾದರೆ  ಆ ಕಥೆ ಹೀಗಿದೆ ;

ಗುರು ಗುನಿನ್ ತನ್ನ ನಂತರದ  ಉತ್ತರಾಧಿಕಾರಿಯ  ಆಯ್ಕೆಗಾಗಿ ತನ್ನ ಶಾಲೆಯ  ವಿದ್ಯಾರ್ಥಿಗಳಿಗೆ ಒಂದು ಪಂಥವನಿಟ್ಟ. ಆ ಪಂಥವೇನೆಂದರೆ, ತಮ್ಮ ಬೌದ್ಧ ಪಂಥದ ತತ್ವವನ್ನು ಯಾರು ಅತ್ಯುತ್ತಮವಾಗಿ ಕವಿತೆಯ ಮೂಲಕ ಬರೆಯುವರೋ ಅವರೇ ಈ ಶಾಲೆಯ ಉತ್ತರಾಧಿಕಾರಿ ಎಂದು ಘೋಷಿಸಿದ. ಆ ವಿಹಾರದಲ್ಲಿ ಮುಖ್ಯ ಬಿಕ್ಕುವಾಗಿದ್ದವನು ಬಾರೀ ಪಂಡಿತನಾಗಿದ್ದ. ಆತ ಬರೆದ ;

'ದೇಹವೆಂಬುದೊಂದು ಬೋಧಿ ವೃಕ್ಷ
ಆತ್ಮವೆಂಬುದು ಹೊಳೆವ ಕನ್ನಡಿ ಸಮಕ್ಷ
ಅಧ್ಯಯನವೇ ಶುಚಿ ಕರ್ಮ. ಶುಚಿಯ ವಿನಾ
ಕನ್ನಡಿಯ ಬಿಂಬವೇ ಮಸಕು ಮಲಿನ '

ಎಂದು ಕವಿತೆಯ ಬರೆದ. ಅವನೊಷ್ಟು ಪಾಂಡಿತ್ಯವಿಲ್ಲದ  ಮಿಕ್ಕ ಬಿಕ್ಕುಗಳು ಆತನೇ ಗೆಲ್ಲುವುದೆಂದು ನಿರ್ಧಾರಿಸಿದರು. ಅದೇ ವಿಹಾರದಲ್ಲಿ ಅಡುಗೆ ಮಾಡಿಕೊಂಡಿದ್ದ ಯೆನೋ ಎಂಬಾತ  ನೇತು ಬಿದ್ದಿದ್ದ ಆ ಕವಿತೆಯ ಓದಿದ. ನಂತರ ಅಲ್ಲೆ ಬಿದಿದ್ದ ಕುಂಚವನೆತ್ತಿ ಕೊಂಡು ಆ  ಕವಿತೆಯ ಕೆಳಗೆ  ಹೀಗೆ ಬರೆದ ;

'ಬೋಧಿ ಎನ್ನುವುದು ವೃಕ್ಷವಲ್ಲ ಅಲ್ಲ
ಹೊಳೆವ ಕನ್ನಡಿಯೆಂಬುದು ಇಲ್ಲವೇ ಇಲ್ಲ ಎಲ್ಲವಕ್ಕೋ ಆದಿ ಶೂನ್ಯವಾಗಿರುವಾಗ
ಧೂಳು ಕವಿಯುವುದು ಯಾವ ಭಾಗ? '

ಆವತ್ತು ರಾತ್ರಿ ಗುರು ಗುನಿನ್ ಯೆನೋನನ್ನು ಕರೆದು, "ನಿನ್ನ ಕವಿತೆ ಓದಿದೆ. ನೀನೇ ನನ್ನ ಮುಂದಿನ ಉತ್ತರಾಧಿಕಾರಿ. ಇಗೋ ನನ್ನ ಕಷಾಯ ವಸ್ತ್ರ ಮತ್ತು ಭೀಕ್ಷಾ ಪಾತ್ರೆ. ನೀನಿನ್ನು ಈ ರಾತ್ರಿಯೇ ಈ ವಿಹಾರ ಬಿಟ್ಟು ಹೊರಡು.  ನಿನಗಿಲ್ಲಿ ಅಪಾಯವಿದೆ " ಎಂದೇಳಿ, ಕಷಾಯ ವಸ್ತ್ರ ಮತ್ತು ಭೀಕ್ಷಾ ಪಾತ್ರೆ ಕೊಟ್ಟು ಕಳುಹಿಸಿಕೊಟ್ಟ.

ಗುರು ಗುನಿನ್ ಶಿಷ್ಯ ಯೆನೋ ನಡುವೆ ನಡೆದ ಈ ಪ್ರಸಂಗವು ಏನನ್ನು ಹೇಳುತ್ತದೆ!?. ಬಾರೀ ಪಂಡಿತನಾಗಿದ್ದ ಬಿಕ್ಕುವಿನಿಂದ  ಮೊದಲು ಬರೆದ ಕವಿತೆ ಅಂದು ನೆಲೆಯುರಿದ್ದ ಬೌದ್ಧ ಧರ್ಮದ  ನಂಬಿಕೆಗಳ ಪ್ರತೀಕದಂತ್ತಿದ್ದರೆ, ಅಲ್ಲಿಯವರೆಗೆ ಇದ್ದ ಬೌದ್ಧ ಧರ್ಮದ  ನಂಬಿಕೆಗಳನ್ನು ಕತ್ತರಿಸಿದ ಹರಿತವಾದ  ಖಡ್ಗದಂತೆ ಯೆನೋವಿನ  ಆ ನಾಲ್ಕು ಸಾಲಿನ ಕವಿತೆ ಇದೆ.    

ಬಾರೀ ಪಂಡಿತನಾಗಿದ್ದ ಬಿಕ್ಕು ಬರೆದ  
' ದೇಹವೆಂಬುದೊಂದು ಬೋಧಿ ವೃಕ್ಷ ' ಎಂಬ ಕವಿತೆಯ ಮೊದಲ ಸಾಲು,   ದೇಹದ  ಮೇಲಿನ ಮನುಷ್ಯನ  ವ್ಯಾಮೋಹ ಮತ್ತು  ಅಂದಿನ ಬೌದ್ಧರ ದೇಹ  ವ್ಯಾಮೋಹ ತೋರಿದರೇ,
ಯೆನೋ 'ದೇಹವೆಂಬುದೊಂದು  ಬೋಧಿ  ವೃಕ್ಷವಲ್ಲ ಅಲ್ಲ'  ಎಂದು ನಿರಾಕರಿಸುವ ಮೂಲಕ ಬೌದ್ದರ  ದೇಹ ವ್ಯಾಮೋಹವನ್ನು ಇಲ್ಲವಾಗಿಸುತ್ತಾನೆ. ಬಾರೀ ಪಂಡಿತನಾಗಿದ್ದ ಬಿಕ್ಕು ಬರೆದ  'ಆತ್ಮವೆಂಬುದು ಹೊಳೆವ ಕನ್ನಡಿ ಸಮಕ್ಷ' ಎಂಬ  ಎರಡನೇ ಸಾಲು  ಅಲ್ಲಿಯವರೆಗೆ  ಬೌದ್ಧ ಧರ್ಮದೊಳಗೆ ಉಸಿರಾಡುತ್ತಿದ್ದ ಆತ್ಮವೆಂಬ ಕಲ್ಪನೆಯ  ಪ್ರತೀಕವಾಗಿದೆ. ಆದರೆ  ಅದರ  ವಿರುದ್ದವಾಗಿ  ಯೆನೋ  ಕವಿಯು  ' ಎಲ್ಲಕ್ಕೂ ಆದಿ  ಶೂನ್ಯವೆಂದು ತನ್ನ ನಿಲುವನ್ನು ಸ್ಪಷ್ಟಪಡಿಸುವ  ಮೂಲಕ ಆತ್ಮ ಮತ್ತು ಪರಮಾತ್ಮ ಕಲ್ಪನೆಗಳನ್ನು  ನಿರಾಕರಿಸುತ್ತಾನೆ.
ಪಂಡಿತನಾಗಿದ್ದ ಬಿಕ್ಕು 'ಆ ಕನ್ನಡಿಯ  ಮೇಲೆ ಧೂಳು ಕೂರದಂತೆ ಒರೆಸುತ್ತಿರಬೇಕು ಎಂದರೇ,  
 ಯೆನೋ ವಿನ ಕವಿತೆಯು ಆ ಸಾಲಿನ ಕವಿತೆಯ  ನಂಬಿಕೆಯನ್ನು ಅಲ್ಲಗಳೆಯುತ್ತ ಕನ್ನಡಿ  ಅಥವಾ ಆತ್ಮವೆಂಬುದು ಇಲ್ಲವೇ ಇಲ್ಲ  ಎನ್ನುವ ಮೂಲಕ ಆತ್ಮ ಪರಮಾತ್ಮವೆಂಬ ಕಲ್ಪನೆಗಳ ನಿರಾಕರಿಸುತ್ತಾನೆ.
ಮುಂದುವರೆದು  ಈ ಯೆನೋ ಕವಿಯು ಆದಿಯು ಶೂನ್ಯವಾಗಿರುವಾಗ  ಧೂಳು ಕೂರುವುದಾದರೂ ಹೇಗೆ? ಎಂದು ವ್ಯಂಗ್ಯ ಮಾಡುತ್ತಾನೆ.

ಯೆನೋ ಎಂಬ ಶಿಷ್ಯ  ಬರೆದ ಆ ನಾಲ್ಕು ಸಾಲಿನ ಕವಿತೆ  ಚೀನಾದ  ಮಹಾ ಜ್ಞಾನಿ ಲಾವು ತ್ಸೆ ಯ  ಧರ್ಮ ಗ್ರಂಥ 'ತಾವೋ ತೇ ಚಿಂಗ್ ' ನ್ನು ದರ್ಶನವಾಗಿ  ಕಾಣಿಸುವ  ಮುನ್ನುಡಿಯ ಸಾಲುಗಳಂತ್ತಿದ್ದವು. ಹಾಗೂ  ಅದು  ಝೆನ್ ತಾನು  ಏನನ್ನು  ಕಾಣಿಸಲು ಪ್ರಯತ್ನಿಸುತ್ತಿತ್ತೋ  ಅದು ತಾವೋನಲ್ಲಿ ಆಗಲೇ ಬರೆಯಲ್ಪಟ್ಟು  ತಾವೋವು
ಮೋರ್ ಎಕ್ಷಪ್ಲೈನ್ ಆಫ್ ಝೆನ್ ನಂತ್ತಿತ್ತು. ಅದಷ್ಟೇ ಅಲ್ಲದೆ  ತಾವೋವು ಬುದ್ಧನ  ಬೌದ್ಧಿಕ  ಮಿಮಾಂಸೆಗೆ ಹತ್ತಿರವಾದ, ಪ್ರಕೃತಿಯ ರಹಸ್ಯಗಳ  ದಾಖಲೆಯಾಗಿತ್ತು . ತಾವೋ  ಮುಂದುವರೆದು ಕಾಣಿಸುವುದೇನೆಂದರೆ, ಪ್ರಕೃತಿಯಲ್ಲಿ ಯಾವ ಭಿನ್ನ ಬೇಧಗಳಿಲ್ಲ. ಎಲ್ಲ ಭಿನ್ನ ಬೇಧಗಳು ಮನುಷ್ಯನ  ನಾಗರಿಕತೆಯ ಕೊಡುಗೆ. ಆ  ಭಿನ್ನ ಬೇಧಗಳಿಂದಾಗಿಯೇ ಮನುಷ್ಯನ  ಜ್ಞಾನವು ಕಲುಷಿತಗೊಂಡು ಮನುಷ್ಯನು ಹಪಹಪಿಯು, ಅತೀ ವ್ಯಾಮೋಹಿಯು, ಆಕ್ರಮಣಕಾರಿಯು, ಸ್ವಾರ್ಥಿಯು ಆಗಿದ್ದಾನೆ. ಅವೆಲ್ಲವ  ಬಿಟ್ಟು  ಮನುಷ್ಯ ಶುದ್ಧನಾಗಬೇಕೆಂದರೆ  ಪ್ರಕೃತಿಯ ರಹಸ್ಯಗಳನ್ನು  ಅರಿಯಬೇಕು ಎಂಬುದು ತಾವೋ ಮಾರ್ಗದ  ಉದ್ದೇಶವಾಗಿದೆ. ದಿನವೂ  ಕೋಟಿ ಕೋಟಿ ಜೀವಗಳು ಹುಟ್ಟುತ್ತವೆ, ದಿನವೂ ಕೋಟಿ ಕೋಟಿ ಜೀವಗಳು ಸಾಯುತ್ತವೆ. ಅವೆಲ್ಲವ ಹಡೆವ  ಪ್ರಕೃತಿ ನೋಡಿ ಹೇಗೆ ಶಾಂತವಾಗಿದೆ. ಆ  ಶಾಂತಿಯ ರಹಸ್ಯ ಪ್ರತಿಯೊಬ್ಬ ಮನುಷ್ಯರೂ ಅರಿಯುವ  ಮೂಲಕ ಮತ್ತು ಅದನ್ನು ಅನುಸರಿಸುವ ಮೂಲಕ ಮನುಷ್ಯ
ಜ್ಞಾನೋದಯದ  ಬಾಗಿಲನ್ನು ತೆರೆಯಬಹುದು. ಎಲ್ಲದರಲ್ಲೂ ಮೂಗು ತೂರಿಸುವ  ಮನುಷ್ಯ, ತಾನು ಎಲ್ಲದಕ್ಕಿಂತಲೂ ಭಿನ್ನ ಎಂದು ತೋರಿಸಿಕೊಳ್ಳಲು ಹೋಗಿ ಪ್ರಕೃತಿಗಿಂತ ಭಿನ್ನವೆ ಆಗಿ  ತನ್ನ ಸುತ್ತ ಜ್ಞಾನವೆಂಬ ಪಂಜರ ಹೆಣಿದುಕೊಂಡು ಅದರಲ್ಲಿ ಬಂಧಿಯಾಗಿಬಿಟ್ಟ!!. ಆ  ಪಂಜರದಿಂದ ಬಿಡುಗಡೆಗೊಳಿಸುವ  ದಿವ್ಯದ  ಬೆಳಕು  ಈ ಝೆನ್ ಅಥವಾ ತಾವೋ ಎಂಬುದನ್ನು ಅದು ಕಾಣಿಸುತ್ತದೆ.

ಹೀಗೆ ಚೀನಾದ  ತಾವೋ  ತತ್ವ ಶಾಸ್ತ್ರ ಮತ್ತು ಭಾರತದ  ಬೌದ್ಧ ಶಾಸ್ತ್ರಗಳೆರಡರ  ಮಿಲನಗೊಂಡು, ಎರಡು  ಒಂದರ ಹೆಗಲ ಮೇಲೆ ಮತ್ತೊಂದು ಕೈ  ಹಾಕಿಕೊಂಡು ನೆಡೆದ ದಾರಿಯ  ನಡುವೆ  ಹುಟ್ಟಿದ ಕೂಸು ಈ ಝೆನ್ ಎಂಬ  ಹೊಸ ಬೌದ್ಧ ಪಂಥವು.

ಈ ಝೆನ್ ಪಂಥ  ಉಗಮದ ನಂತರ ಝೆನ್ ಬುದ್ಧ ವಿಹಾರಗಳಲ್ಲಿ  ಮೌನದ  ಮೂಲಕ ಪ್ರಕೃತಿಯ  ಅಭ್ಯಾಸಿಸುವ, ಎಲ್ಲದರೊಂದಿಗೆ, ಎಲ್ಲರೊಂದಿಗೆ ಯಾವ ಭಿನ್ನ ಬೇಧವೇಣಿಸದಂತೆ ಅತ್ಯಂತ ಮಾನವಿಯವಾಗಿ  ನೆಡೆದುಕೊಳ್ಳುವ ಆಚಾರ ವಿಚಾರಗಳು  ಬೆಳೆದು ಬಂದವು.

ಈ ಮೂಲಕ ಝೆನ್ ಬೌದ್ಧ ಧರ್ಮದ  ಸುತ್ತ ಕವಿದ್ದಿದ್ದ ಅನಗತ್ಯ ವಾದಗಳು , ಸಿದ್ಧಾಂತಗಳು, ಕಲ್ಪನೆಗಳನ್ನು ಅಥವಾ ನಾಗರಿಕತೆಯ ಭ್ರಮೆಗಳನ್ನು ಮೀರಿ ಯಾವುದೇ ಅಕ್ಷರ, ಜ್ಞಾನ ಎಲ್ಲವ
 ಮೀರಿ ತಾನೊಂದು  ಪ್ರಭೆಯಾಗಿ  ಝೆನ್ ಹೊರಹೋಮಿತು!!.

               -ಫೀನಿಕ್ಸ್ ರವಿ

© Copyright 2022, All Rights Reserved Kannada One News