Flash News:
ಯೋಗ, ಪ್ರಯೋಗ ಮತ್ತು ಬುದ್ಧ ಭಾಗ-ನಾಲ್ಕು: ಫೀನಿಕ್ಸ್ ರವಿ ಅವರ ವಾರದ ಅಂಕಣ

Related Articles

ಅಂಕಿ ಅಂಶಗಳೆಂಬ ಬೆಂಕಿಯ ಬೆನ್ನೇರಿ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಗಂಜಿಗಿರಾಕಿ ಟ್ರೋಲ್ ಭಕ್ತರ ಗೋಳು ; ಕೆಜಿಗಟ್ಟಲೆ ಬೈಗುಳ ತಿನ್ನುವ ಭಂಡಬಾಳು: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

"ಮುಳ್ಳನ್ನು ಪೊರೆದ ಗುಲಾಬಿ ಹೂವು" ನಾಲ್ಕನೆಯ ಕಂತು: ಸಿಹಾನ ಬಿ.ಎಂ ಅವರ ವಾರದ ಅಂಕಣ

ಧ್ಯಾನ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಪುರಾತನ ಪುಣ್ಯಕ್ಷೇತ್ರಗಳ ಅಭಿವೃದ್ಧಿ; ದೇಶಕ್ಕೆ ಬಂದ ಅಚ್ಚೇದಿನ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ಮಿಥ್ ಗಳ ಲೋಕದಲ್ಲಿ ಗುಬ್ಬಚ್ಚಿಯಾದ ಗುಬ್ಬಿಮರಿ: ಸಿಹಾನ ಬಿ.ಎಂ. ಅವರ ವಾರದ ಅಂಕಣ

ಜಾವಕಟ್ಟೋ ಜಂಭೂದ್ವೀಪಸ್ಥ: ಡಾ.ರವಿಕುಮಾರ್ ನೀಹ ಅವರ ಅಂಕಣ

ರಜನಿ ‘ದ’ ಸೂಪರ್ ಸ್ಟಾರ್: ಎಡಿಟರ್‌ ಸ್ಪೆಷಲ್

ಮಣ್ಣು ಮಾರಲು ವಿರೋಧಿಸಿದ ಮುದುಕಿ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಬಿಜೆಪಿಯಿಂದ ‘ಅನ್ನ’ಕ್ಕೂ ಕನ್ನ…!: ಎಡಿಟರ್‌ ಸ್ಪೆಷಲ್

ಯೋಗ, ಪ್ರಯೋಗ ಮತ್ತು ಬುದ್ಧ ಭಾಗ-ನಾಲ್ಕು: ಫೀನಿಕ್ಸ್ ರವಿ ಅವರ ವಾರದ ಅಂಕಣ

Updated : 23.09.2022

ಮಾತನ್ನು ಬಿಟ್ಟು ಮೌನಕ್ಕೆ ಶರಣಾದ ಬುದ್ಧನ ಸುತ್ತ ಇದ್ದ ಬುದ್ಧನ ಆ ಅತೀತ ಆನಂದದ ಸ್ಥಿತಿಯ ಅಭಿಮಾನಿಗಳು, ಆ ಸ್ಥಿತಿಯ ತಲುಪಲು ಯಾವ ಯಾವ ತಂತ್ರ ಬಳಸಬೇಕು, ಯಾವ ತಂತ್ರ ಬಳಸಬಾರದು ಎಂಬೆಲ್ಲ ಶೋಧನೆಗಿಳಿದ್ದಿದ್ದರ ಫಲವೇ  ಮಹಾಯಾನ ಮತ್ತು ಹೀನಾಯಾನ ಎಂಬೆರಡು  ಬೌದ್ಧ ಪಂಥಗಳು!!.

ಹೀನಾಯಾನ ಬೌದ್ಧ ಪಂಥವು ಮಹಾಯಾನಿಗಳ ನಂಬಿಕೆಗಳಿಗೆ  ವಿರುದ್ದವಾದ  ನೆಲೆಯಾಗಿದೆ. ಮಹಾಯಾನಿಗಳು ಬುದ್ಧನನ್ನು ದೇವರೆಂದು ಪೂಜಿಸಿದರೆ, ಹೀನಾಯಾನಿಗಳು  ಅದನ್ನು ವಿರೋಧಿಸುತ್ತಾರೆ. ಹೀನಾಯಾನಿಗಳ ಪ್ರಕಾರ ಬುದ್ಧ ಒಬ್ಬ ಮನುಷ್ಯನಿಗೆ ಜ್ಞಾನೋದಯದ ದಾರಿಯನ್ನು ಕಂಡು ಹಿಡಿದ ಮನುಷ್ಯ. ಜ್ಞಾನೋದಯವೆಂಬುದು ಮನುಷ್ಯನೊಬ್ಬನ  ಅಂತರಂಗದ  ವಿಷಯವೇ ಹೊರೆತು ಬಹಿರಂಗದಲಿ ಅದನ್ನು ಹುಡುಕುವುದು ಮೂರ್ಖತನವೆಂದೇ ತಿಳಿದವರು.

ಹೀನಾಯಾನ ಮತ್ತು ಮಹಾಯಾನ ಬೌದ್ಧ ಪಂಥಗಳ ಪ್ರಮುಖ ವ್ಯತ್ಯಾಸವೆಂದರೇ, ಹೀನಾಯಾನಿಗಳು  ಬುದ್ಧನ ಮೂಲ ಸೂತ್ರಗಳೆಂದು ನಂಬಲಾದ   ರೀತಿ ನೀತಿಗಳಿಗೆ  ಬದ್ಧವಾದ ಜೀವನ ಕ್ರಮವನ್ನು ಅನುಸರಿಸಿದರೇ, ಮಹಾಯಾನಿಗಳು ಬುದ್ಧನನ್ನು ಮುಂದುವರೆದು  ಸೃಜನಶೀಲವಾಗಿ ಹೊಸ ಸೂತ್ರಗಳನ್ನು ಕಂಡು ಕೊಂಡವರು. ತಮ್ಮನ್ನು ತಾವು ಮಹಾಯಾನಿಗಳೆಂದು, ಹೀನಾಯಾನಿಗಳು  ಅಥವಾ ಥೇರಾವಾದಿಗಳನ್ನು ಹೀನರು ಎಂಬ ದೃಷ್ಟಿ ಕೋನದಿಂದ ನೋಡುವ ಮೂಲಕ ಥೇರಾವಾದಿಗಳನ್ನು ಹೀನಾಯಾನಿಗಳು ಎಂದು ಸಮಾಜದಲ್ಲಿ ಬಿಂಬಿಸಿ ಅವರ ವಾದಗಳು ಬೆಳೆಯದಂತೆ ತುಳಿದವರು.

ಮಹಾಯಾನಿಗಳ ಮಹಾಯಾನವು ಹಿಂದೂ ಧರ್ಮದ  ಧಾರ್ಮಿಕತೆಯ ಕಸಿಯೊಂದಿಗೆ  ಹೊಸ ರೂಪ ಪಡೆಯಿತು. ಅದರೆಲ್ಲ ಆಚಾರ, ವಿಚಾರಗಳು,  ಇದಕ್ಕೂ ಬಂದವು. ಜನ್ಮದ  ನಂಬಿಕೆ, ಧ್ಯಾನ, ಯೋಗಾಚಾರ (ಅಥವಾ ವಿಜ್ಞಾನವಾದ /ಚಿತ್ತ್ ವಾದ ) ವೂ ಸೇರಿದಂತೆ, ಮಂತ್ರ ತಂತ್ರಗಳು ಸೇರಿಕೊಂಡವು. ಒಂದು ಲೆಕ್ಕದಲ್ಲಿ ಹೇಳುವುದಾದರೆ  ಹಳೆಯ ಬಾಟಲ್ ಗೆ ಹೊಸ ನೀರಿನಂತೆ ಬುದ್ಧನನ್ನ ತುಂಬಿಸಿಕೊಳ್ಳಲಾಗಿತಷ್ಟೇ.

ಭಾರತ ಬಿಟ್ಟು ಬುದ್ಧ ಚೀನಾಕ್ಕೆ ಯಾಕೆ ಹೋದ  ಎಂಬ ಕಾರಣಗಳನ್ನು ಮೇಲಿನ ವಿಚಾರದ  ಮೇಲೆ ಕೇಂದ್ರೀಕರಿಸಿ  ನೋಡಿದಲ್ಲಿ ಮಾತ್ರ ಸ್ಪಷ್ಟ ಕಾರಣಗಳು ಗೋಚರಿಸುವವು.

ಮೊದಲಿಗೆ ಸುಮಾರು ಕ್ರಿಸ್ತ ಶಕ  100ರಲ್ಲಿ ಅಶ್ವಘೋಷನ ಬುದ್ಧ ಚರಿತೆ ಎಂಬ ಕೃತಿಯಿಂದ ಶುರುವಾದ  ಈ ಮಹಾಯಾನ ಧಾರ್ಮಿಕ ದಂಡಯಾತ್ರೆಯು ನಂತರ   ಸುಮಾರು ಕ್ರಿಸ್ತ ಶಕ 100-200ರಲ್ಲಿದ್ದ ನಾಗರ್ಜುನ ಎನ್ನುವನಿಂದ 'ಮಾಧ್ಯಮಿಕ ಪಂಥ '  (ಅಥವಾ ಶೂನ್ಯವಾದ )ವಾಗಿ, ಸುಮಾರು ಕ್ರಿಸ್ತ ಶಕ 400-500 ರಲ್ಲಿದ್ದ ಅಸಂಗ  ಎಂಬುವವನಿಂದ 'ಯೋಗಾಚಾರ ಪಂಥ' (ಅಥವಾ ವಿಜ್ಞಾನವಾದ /ಚಿತ್ತ್ ವಾದ )  ವಾಗಿ  ಖಚಿತ ರೂಪ ಪಡೆದುಕೊಂಡಿತು. ಮುಂದೆ   ಸುಮಾರು ಕ್ರಿಸ್ತ ಶಕ 2ನೇ ಶತಮಾನದ ಹೊತ್ತಿಗೆ ಚೀನಾ ಪ್ರವೇಶಿಸಿದ  ಈ ಧಾರ್ಮಿಕ ದಂಡಯಾತ್ರೆಯು ಪ್ರಚಾರಗೊಳ್ಳ ತೊಡಗಿತು. ಆದರೆ ಅದು ಹೆಚ್ಚು ಚುರುಕು ಪಡೆದುಕೊಂಡಿದ್ದು ಕುಮಾರಜೀವ  ಎಂಬಾತ  ಚೀನಾಕೆ ಹೋಗಿ ಮಹಾಯಾನ ಪಂಥದ  'ಮಾಧ್ಯಮಿಕ ಪಂಥ 'ವನ್ನು ಪ್ರವೇಶಗೊಳಿಸಿದ. ಸುಮಾರು ಕ್ರಿಸ್ತ ಶಕ  500 ರ ಅನಂತರ  ಪಾರಮಾರ್ಥ ಎಂಬಾತ  ಚೀನಾ  ಪ್ರವೇಶಿಸಿ ಮಹಾಯಾನ ಪಂಥದ ' ಯೋಗಾಚಾರ ಪಂಥ ' ವನ್ನು ಪ್ರಚಾರಗೊಳಿಸಿದ. ಸುಮಾರು ಕ್ರಿಸ್ತ ಶಕ 520 ರಲ್ಲಿ ಚೀನಾ ಪ್ರವೇಶಿಸಿದ  ಬೋಧಿ ಧರ್ಮ ಎಂಬಾತ  ಧ್ಯಾನವನ್ನು ಪ್ರಾಚಾರಗೊಳಿಸಿದ.

ಈ ಎರಡು  ಪದ್ಧತಿಗಳನ್ನು  ಮೀರಿ,
ಆನಂತರ  ಚೀನಾದಲ್ಲಿ 'ಝೆನ್ ' ಎಂಬ ಹೊಸ  ಪ್ರಖರವಾದ ಬೌದ್ಧ ಪಂಥವು   ಬೌದ್ಧ ಗುರು ಗುನಿನ್  ಮತ್ತು ಆತನ  ಶಿಷ್ಯ ಯೆನೋ ರಿಂದಾಗಿ  ಹುಟ್ಟಿ ಕೊಂಡಿತು. ಇವರುಗಳ ಕಾಲ  ತಿಳಿದು ಬಂದಿಲ್ಲ.   ಆದರೆ ಗುನಿನ್ ಮತ್ತು ಆತನ  ಶಿಷ್ಯ  ಯೆನೋ ನ   ಕಾಲವನ್ನು  ಬೋಧಿ ಧರ್ಮನ  ಪದ್ಧತಿಯಾದ ಗುರು ಆಯ್ಕೆ ಮಾಡಿದಂತ  ಯೋಗ್ಯ ಶಿಷ್ಯನಿಗೆ  ಗುರು ಧೀಕ್ಷೆಯಾಗಿ  ಗುರುವಿನ ಕಷಾಯ  ವಸ್ತ್ರ ಮತ್ತು ಭೀಕ್ಷಾ ಪಾತ್ರೆಯನ್ನು ಕೊಡುವ ಪದ್ದತಿಯ ಅನುಸರಿಸುವ  ಗುರು ಪರಂಪರೆಗೆ ಸೇರಿದವರು  ಇವರಾಗಿದ್ದು,  ಬೋಧಿ ಧರ್ಮನ ನಂತರದ  ಗುರು ಶಿಷ್ಯರೆಂದು ಇವರನ್ನು  ಗುರಿತಿಸಬಹುದು.

ಮುಂದಿನ ಅಂಕಣದಲ್ಲಿ  ಬೌದ್ಧ ಧರ್ಮ ಚೀನಾ ಮತ್ತು ಝೆನ್  ಕುರಿತು ಬರೆಯಲಿದ್ದೆನೆ ನಮಸ್ಕಾರಗಳು.

                         - ಫೀನಿಕ್ಸ್ ರವಿ

© Copyright 2022, All Rights Reserved Kannada One News