ಕಲಾವಿದ ಮತ್ತು ಕಲೆ| ಕಲೆಯ ಹೀರೋಯಿಸಮ್ ನ ಗೆಲುವು-ಪ್ರೇಮದ ಹೀರೋಯಿಸಮ್ ನ ಸೋಲು! ಭಾಗ-5: ಫೀನಿಕ್ಸ್‌ ರವಿ ಅವರ ವಾರದ ಅಂಕಣ

ಕಲಾವಿದ ಮತ್ತು ಕಲೆ| ಕಲೆಯ ಹೀರೋಯಿಸಮ್ ನ ಗೆಲುವು-ಪ್ರೇಮದ ಹೀರೋಯಿಸಮ್ ನ ಸೋಲು! ಭಾಗ-5: ಫೀನಿಕ್ಸ್‌ ರವಿ ಅವರ ವಾರದ ಅಂಕಣ

Updated : 05.08.2022

ಮನುಷ್ಯನ  ನಾಗರಿಕತೆಯ  ನಡುವೆ  ಮನುಷ್ಯ ಕಲ್ಪಿಸಿ ಕಟ್ಟಿಕೊಂಡ ವಿಷಯಗಳಲ್ಲಿ ಬರೀ  ಮೂರು ಕಲ್ಪನೆಗಳು ಅತ್ಯಂತ  ಅದ್ಭುತ ಕಲ್ಪನೆಗಳಾಗಿವೆ!!!. ಅವುಗಳಲ್ಲಿ  ಮೊದಲನೆಯದ್ದು  ಪ್ರೇಮವೆಂಬ ಕಲ್ಪನೆ, ಎರಡನೆಯದ್ದು ಧ್ಯಾನ, ಮೂರನೇಯದ್ದು  ಕಲೆ.

ಈಗ ಬರೆಯುತ್ತಿರುವ ವಿಷಯ ಕಲೆಯ ವಿಷಯವಾದ್ದರಿಂದ ಮುಂದಿನ ವಿಷಯಯವಾಗಿ ಧ್ಯಾನದ  ಬಗ್ಗೆ ಮುಂದಿನ ಅಂಕಣಗಳಲ್ಲಿ  ಬರೆಯುತ್ತೇನೆ. ಮನುಷ್ಯನ  ನಾಗರಿಕತೆಯಲ್ಲಿ ಕಲೆ ಎಂಬ  ಕಲ್ಪನೆ ಇಲ್ಲದಿದ್ದರೆ ಮನುಷ್ಯನ  ನಾಗರಿಕತೆ ಎಂದೋ ನಾಶವಾಗಿ  ಹೋಗುತ್ತಿತ್ತು!!.

ಕಲೆ ಎಂದರೇನು?
ಕಲೆ ಎಂದರೇ  ಇದು ಎಂದು ಜಗತ್ತಿನ ಹಲವಾರು ಮಹನೀಯರು ವ್ಯಾಖ್ಯಾನಗಳ ( definition ) ಬರೆದಿದ್ದಾರಾದರೂ  ಕಲೆ ಎಂದರೇ  ಇದಿಷ್ಟೇ ಎಂಬುದನ್ನು ವಿವರಿಸಲು  ಆ  ವ್ಯಾಖ್ಯಾನಗಳಿಂದಲೂ  ಸಾಧ್ಯವಾಗಿಲ್ಲ. ಕಲೆ ಎಂಬ ಪದ ಮನುಷ್ಯನ  ನಾಗರಿಕತೆಯ  ನಡುವೆ  ಅತ್ಯಂತ ವಿಶಿಷ್ಟ ಅರ್ಥಗಳನ್ನು  ಹೊಂದಿದೆ.   ಮನುಷ್ಯನ ಸೃಜನಶೀಲತೆ (Creativity) ಕಲೆಯ  ಹುಟ್ಟಿನ ಹಿಂದೆ ಮಹಾ ತಾಯಿಯಂತೆ ನಿಂತಿದೆ.  ಮನುಷ್ಯನ ಪ್ರಕ್ಷುಬ್ದತೆ (Restlessness)  ಮೀರಿ ಒಂದು ಶಾಂತ  ಮನೋಭಾವ ಹೊಂದುವುದಕ್ಕೆ ಮನುಷ್ಯ  ಮಾಡಿಕೊಂಡ  ಮಾನಸಿಕ  ಮತ್ತು ದೈಹಿಕ ತಯಾರಿಯನ್ನು ಕಲೆ  ಎನ್ನಬಹುದು. ಈ ನನ್ನ ಮಾತುಗಳು ಕೂಡ  ಅತ್ಯಂತ ತೆಳುವಾದವು  ಎಂಬ ಅರಿವು ನನಗಿದೆ. ಆಗಾಗಿ  ಬೇರೆ ಉದಾಹರಣೆಗಳ  ಕೊಡುವ ಮೂಲಕ ಕಲೆ  ಎಂದರೇನು  ಎಂಬುದನ್ನು
ಸೃಜನಶೀಲವಾಗಿ  ನಿಮಗೆ  ಕಾಣಿಸಲು  ಪ್ರಯತ್ನಿಸುತ್ತೇನೆ.

ಡಚ್ ದೇಶದ ಚಿತ್ರ ಕಲಾವಿದ  ವಿನ್ಸೆಟ್ ವ್ಯಾನ್ ಗೋ ಎಂದರೇ  ಆತನ ಕಲಾ ಪ್ರತಿಭೆಯ  ಬಗ್ಗೆ  ಲಕ್ಷಾಂತರ ಪುಟಗಳು ಆತನ  ಕಲಾ  ಸೃಜನಶೀಲತೆಯ  ಬಗ್ಗೆ ಬರೆದಿವೆ.  ಆದರೂ ಆತನ ಪ್ರೇಮದ  ಬಗ್ಗೆ ಅಥವಾ ವಾಸ್ತವದ  ಬಗ್ಗೆ ಬರೆಯದ್ದಿದರೆ  ಅದು ತಪ್ಪಾಗುತ್ತದೆ.

ವ್ಯಾನ್ ಗೋ  ಜಗತ್ತು ಕಂಡ  ಒಬ್ಬ  ಅಪ್ರತಿಮ ಚಿತ್ರ ಕಲಾವಿದ!. ಕಲೆಯ ವಿಷಯದಲ್ಲಿ ತಾನು  ತನ್ನ ಬಗ್ಗೆ ' ' ಐಯಾಮ್ ಒನ್ ಆಫ್ ಲೆಜೆಂಡ್ ಆರಿಸ್ಟ್ ' ಎಂಬುದನ್ನು ಅರಿತವನಾಗಿದ್ದ . ಆತನ  ಜೀವನದ  ದಾರಿ ದಿಕ್ಕುಗಳು ಬದಲಾದ್ದದ್ದು ಆತನ  ಅಪ್ಪನಿಂದಲೇ. ಅಪ್ಪ ಒಬ್ಬ ಕ್ರಿಶ್ಚಿಯನ್ ಪಾದ್ರಿಯಾಗಿದ್ದ. ಅಪ್ಪನೊಂದಿಗೆ ಮಗ ವ್ಯಾನ್ ಗೋ ಕೂಡ ಧರ್ಮ ಪ್ರವಚನಗಳಲ್ಲಿ  ಭಾಗವಹಿಸುತ್ತಿದ್ದ.  ಅಪ್ಪ, ಬಡವರಿಗೆ ಧರ್ಮ ಪ್ರವಚನ ಮಾಡುವುದರಲ್ಲಿ  ಹೆಚ್ಚು ಉತ್ಸುಕನಾಗಿದ್ದ.  ಗಣಿಗಳಲ್ಲಿ  ದುಡಿಯುವ ಬಡವರಿಗೆ, ಧರ್ಮ ಪ್ರವಚನ ಮಾಡುತ್ತಿದ್ದ. ಆ ಪ್ರವಚನಗಳಲ್ಲಿ  ವ್ಯಾನ್ ಗೋ ಕೂಡ ಭಾಗವಹಿಸುತ್ತಿದ್ದ.

ಬರುಬರುತ್ತಾ  ಅಪ್ಪನ  ಬೋಧನೆ ವಾಸ್ತವದಿಂದ  ದೂರವಾಗಿ  ಭ್ರಮೆಗಳಿಂದ  ಕೂಡಿದೆ ಎಂಬುದನ್ನು ವ್ಯಾನ್ ಗೋ ಅರಿತುಕೊಂಡ. ಬದುಕಿನ ಕಷ್ಟಗಳಿಂದ ಜರ್ಜರಿತ  ಬಡವರಿಗೆ  ಧರ್ಮ ತಂದು ಕೊಡುವ  ಮೋಕ್ಷವಾಗಲಿ, ಪವಿತ್ರತೆಯಾಗಲಿ ಬೇಕಾಗಿರಲಿಲ್ಲ. ಆ ಬಡವರಿಗೆ  ಉಣ್ಣಲಿಕ್ಕೆ ಊಟ, ಉಡಲಿಕ್ಕೆ ಬಟ್ಟೆ, ಮಲಗಲಿಕ್ಕೆ ಒಂದು ಉತ್ತಮ ಸೂರು ಬೇಕಾಗಿತ್ತು. ಅವುಗಳ್ಯಾವು ಅಪ್ಪ ಹೇಳುತ್ತಿದ್ದ ಧರ್ಮ ಬೋಧನೆಯಿಂದ ಸಿಕ್ಕುತ್ತಿರಲ್ಲಿ. ಬದಲಿಗೆ  ಅಪ್ಪನ  ಭೋದನೆಗಳು  ಮಾನಸಿಕವಾಗಿ  ತೃಪ್ತಿ ಕೊಡುತ್ತಿದ್ದವಷ್ಟೇ. ಅಂದರೆ, ಬಡವರಿಗೆ  ಧರ್ಮ ಬೋಧನೆ ಕನಸ್ಸಲ್ಲಿ ಕಾಣುವ  ಸುಂದರ ಯುವತಿಯಂತೆ.   ಆಕೆ  ಪ್ರೇಮಿಸಲಿಕ್ಕೆ ಸಿಕ್ಕದ  ಬರೀ ಹಗಲು ಕನಸಷ್ಟೇ!!.  ವ್ಯಾನ್ ಗೋ ಅಪ್ಪನ  ಹಗಲುಗನಸುಗಳಿಂದ  ದೂರ ಸರಿದ.

ವಾಸ್ತವ    ಅವನ  ಆರ್ಟಿಸ್ಟ್ ಜೀವನಕ್ಕೆ ಹತ್ತಿರದ  ನಿಜ ಸತ್ಯವಾಗಿರುವುದನ್ನು ಕಂಡುಕೊಂಡ. ಅಂದರೆ, ಮನುಷ್ಯನೆಲ್ಲ ಭ್ರಮೆಗಳಿಂದ  ಬಿಡುಗಡೆಗೊಂಡ  ವ್ಯಾನ್ ಗೋ, ವಾಸ್ತವದಲ್ಲಿ ಹುಟ್ಟುವ ಸೂರ್ಯ, ವಾಸ್ತವದಲ್ಲಿ ಅರಳುವ ಸೂರ್ಯ ಕಾಂತಿ ಹೂವು, ವಾಸ್ತವದ  ಗೋದಿ ತೋಟ, ವಾಸ್ತವದ  ಮನುಷ್ಯರ  ಬಡತನವನ್ನು, ಬಡವರ ಹಸಿವನ್ನು  ಬಣ್ಣಗಳಲ್ಲಿ  ಬರೆಯುತ್ತ ಹೋದ. ಬರೆಯುತ್ತ ಬರೆಯುತ್ತ ತನ್ನೊಳಗೆ ತಾನು  ಜಗತ್ತಿನ  ಒಬ್ಬ ಮಹಾನ್ ಚಿತ್ರ ಕಲಾವಿದನಾಗಿ  ಬೆಳೆದುಬಿಟ್ಟ.

 ವ್ಯಾನ್ ಗೋ ಜಗತ್ತಿನ  ಒಬ್ಬ ಮಹಾನ್ ಚಿತ್ರ ಕಲಾವಿದನಾಗಿ  ಬೆಳೆದುಬಿಟ್ಟ  ಆದರೆ, ಅವನ ನಿಜ ಜೀವನದಲ್ಲಿ ಆತನನ್ನು ಪ್ರೇಮಿಸುವವರು  ಯಾರು ಇಲ್ಲದ  ಪ್ರೇಮ ಭಿಕಾರಿಯಾಗಿದ್ದ!!.

ಅವನು ತನ್ನ ಮನೆಯೊಡತಿಯ ಮಗಳಾದ ಯುಜೀನಿ ಲೋಯರ್‌ನೊಂದಿಗೆ ವ್ಯಾಮೋಹ ಹೊಂದಿದ್ದ. ಆದರೆ ಅವನ ಪ್ರೇಮದ  ಭಾವನೆಗಳನ್ನು ಒಪ್ಪಿಕೊಂಡ ಆಕೆ ನಂತರ ಆತನನ್ನು ತಿರಸ್ಕರಿಸಿಬಿಟ್ಟಳು!!. ಕಾರಣ  ಆಕೆ ಮತ್ತೊಬ್ಬ ಪ್ರಿಯಕರನೊಂದಿಗೆ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಳು!!.

ಇತ್ತೀಚೆಗೆ ವಿಧವೆಯಾದ ಸೋದರಸಂಬಂಧಿ, ಕಾರ್ನೆಲಿಯಾ "ಕೀ" ವೋಸ್-ಸ್ಟ್ರೈಕರ್, ಅವರ ತಾಯಿಯ ಅಕ್ಕ ವಿಲ್ಲೆಮಿನಾ ಮತ್ತು ಜೋಹಾನ್ಸ್ ಸ್ಟ್ರೈಕರ್ ಅವರ ಮಗಳು ಭೇಟಿಗಾಗಿ ಆಗಮಿಸಿದರು. ಅವನು ರೋಮಾಂಚನಗೊಂಡನು ಮತ್ತು ಅವಳೊಂದಿಗೆ ದೀರ್ಘ ನಡಿಗೆಯನ್ನು ಮಾಡಿದನು. ಕೀ ಅವನಿಗಿಂತ ಏಳು ವರ್ಷ ದೊಡ್ಡವಳು ಮತ್ತು ಎಂಟು ವರ್ಷದ ಮಗನಿದ್ದನು. ವ್ಯಾನ್ ಗಾಗ್ ತನ್ನ ಪ್ರೀತಿಯನ್ನು ಅವಳಿಗೆ ಘೋಷಿಸಿ ಮದುವೆಯ ಪ್ರಸ್ತಾಪವನ್ನು ಮಾಡುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದನು. ಅವಳು "ಇಲ್ಲ, ಇಲ್ಲ, ಎಂದಿಗೂ" ಎಂಬ ಪದಗಳೊಂದಿಗೆ ನಿರಾಕರಿಸಿದಳು.
ನವೆಂಬರ್ 1881 ರ ಕೊನೆಯಲ್ಲಿ, ವ್ಯಾನ್ ಗಾಗ್ ಜೋಹಾನ್ಸ್ ಸ್ಟ್ರೈಕರ್‌ಗೆ ಪತ್ರವೊಂದನ್ನು ಬರೆದನು.
ಕೀ ಅವನನ್ನು ಭೇಟಿಯಾಗಲಿಲ್ಲ ಮತ್ತು ಅವಳ ಪೋಷಕರು ಅವನ "ಹಠವು ಅಸಹ್ಯಕರವಾಗಿದೆ " ಎಂದು ಬರೆದರು. ಹತಾಶೆಯಿಂದ, ವ್ಯಾನ್ ತನ್ನ ಎಡಗೈಯನ್ನು ದೀಪದ ಜ್ವಾಲೆಯಲ್ಲಿ ಹಿಡಿದನು: "ನಾನು ಎಲ್ಲಿಯವರೆಗೆ ನನ್ನ ಕೈಯನ್ನು ಜ್ವಾಲೆಯಲ್ಲಿ ಇಡಬಲ್ಲೆನೋ ಅಲ್ಲಿಯವರೆಗೆ ನಾನು ಅವಳನ್ನು ನೋಡಲಿ." ಎಂದು. ಆದರೆ ಆ ಘಟನೆಯಿಂದಲೂ ಕೀ ಕುಟುಂಬ  ವಿಚಲಿತರಾಗಲಿಲ್ಲ.

ವ್ಯಾನ್ ಗಾಗ್  ಜನವರಿ 1882 ರ ಅಂತ್ಯದಲ್ಲಿ   ಕ್ಲಾಸಿನಾ ಮಾರಿಯಾ "ಸಿಯೆನ್" ಹೂರ್ನಿಕ್  ಅವರನ್ನು  ಭೇಟಿಯಾದ. ಆಕೆಯಾಗಲೇ  ಐದು ವರ್ಷದ ಮಗಳನ್ನು ಹೊಂದಿದ್ದಳು ಮತ್ತು ಗರ್ಭಿಣಿಯಾಗಿದ್ದಳು. ಆದರೆ ವ್ಯಾನ್ ಗಾಗ್ ಈ ಬಗ್ಗೆ ತಿಳಿದಿರಲಿಲ್ಲ.  ಜುಲೈ 2 ರಂದು, ಅವಳು ವಿಲ್ಲೆಮ್ ಎಂಬ ಗಂಡು ಮಗುವಿಗೆ ಜನ್ಮ ನೀಡಿದಳು. ವ್ಯಾನ್ ಗಾಗ್ ಅವರ ತಂದೆ ಅವರ ಸಂಬಂಧದ ವಿವರಗಳನ್ನು ಕಂಡುಹಿಡಿದಾಗ, ಸಿಯೆನ್ ಮತ್ತು ಅವಳ ಇಬ್ಬರು ಮಕ್ಕಳನ್ನು ತ್ಯಜಿಸಲು ಅವನು ತನ್ನ ಮಗನ ಮೇಲೆ ಒತ್ತಡ ಹೇರಿದರು. ವ್ಯಾನ್ ಮೊದಲಿಗೆ ತಂದೆಯನ್ನು ವಿರೋಧಿಸಿದ ಮತ್ತು ಕುಟುಂಬವನ್ನು ನಗರದಿಂದ ಹೊರಗೆ ಸ್ಥಳಾಂತರಿಸಿದ. ಆದರೆ 1883 ರ ಕೊನೆಯಲ್ಲಿ, ಅವರು ಸಿಯೆನ್ ಮತ್ತು ಮಕ್ಕಳನ್ನು ತೊರೆದ!!.

ಪ್ರೇಮ ವಂಚಿತನಾಗಿ ಬುದ್ಧಿಭ್ರಮಣೆ ಮತ್ತು ಮನೋವಿಕಾರಗಳಿಂದ ನರಳುತ್ತಿದ್ದ ವ್ಯಾನ್ಗೋನನ್ನು ಇವನ ಇಷ್ಟದಂತೆ ಸೇಂಟ್ ರೆಮಿಯಲ್ಲಿನ ಮಾನಸಿಕರೋಗಿಗಳ ಆಸ್ಪತ್ರೆಗೆ ಸೇರಿಸಲಾಯಿತು.

ನಂತರ,  ರವೀನ್ ನಿಂದ ಈತ ಪ್ಯಾರಿಸಿಗೆ ಮರಳಿದ. ಅಲ್ಲಿ ಇವನಿಗೆ ಗೋಗ್ಯಾನನ ಮಿತ್ರನಾದ ಡಾ. ಪಾಲ್ ಗ್ಯಾಚೆಟ್ ಎಂಬ ವೈದ್ಯನೊಬ್ಬನ ಆಶ್ರಯ ಲಭಿಸಿತು. ಆ ವೈದ್ಯನ ಭಾವಚಿತ್ರವನ್ನೂ  ಈತ ಬಿಡಿಸಿದ. ಆ ವರ್ಷ ಒರಿಯರ್ ಎಂಬಾತ ಈತನ ಕಲಾಕೃತಿಗಳನ್ನು ಕುರಿತ ಒಂದು ಲೇಖನವನ್ನು ಪ್ರಕಟಿಸಿದ. ಇದರಿಂದಾಗಿ ಈತನಿಗೆ ಪ್ರಚಾರ ಸಿಕ್ಕಿದಂತಾಯಿತು.

ಪ್ರಚಾರವೇನೋ ಸಿಕ್ಕಿತು ಆದರೆ, ಮನೋವಿಕಲ್ಪದಿಂದಾಗಿ 1890 ರ ಜುಲೈ 27ರಂದು ತಾನೇ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡ!!.

ಪ್ರೇಮ ದಕ್ಕದ  ಹತಾಶೆ, ಮನುಷ್ಯರನ್ನು ಸಾವಿನ  ಅಂಚಿಗೆ  ದೂಡುವ  ಚುಪಾದ  ಕತ್ತಿಯಂತೆ!. ಆತ  ಕಲಾವಿದನೋ, ವೀರ  ಯೋಧನೋ, ಪ್ರಧಾನಿಯೋ, ಚಕ್ರವರ್ತಿಯೋ, ಸರ್ವಾಧಿಕಾರಿಯೋ, ಯಾವುದೂ ಲೆಕ್ಕಕ್ಕಿಲ್ಲ ಪ್ರೇಮವೆಂಬ ಪುಸ್ತಕದ  ಬರಹಗಳಲ್ಲಿ !!. ಗೆದ್ದವನು ಗೆದ್ದ, ಸೋತವನು  ಸೋತ!. ಆದರೂ  ಈ ಸೋಲು ಮತ್ತು ಗೆಲುವಿನ ನಡುವೆ  ಉತ್ತಮ ಮನುಷ್ಯನ   ಬದುಕಿಗಿಂತ,  ಆತನ  ದೇಹದ ಸೌಂದರ್ಯ  ಮತ್ತು ಆತ  ಬಳಸುವ  ಬಾಹ್ಯ ಸೌಂದರ್ಯದ  ವಸ್ತುಗಳೇ  ಅವನೇ  ಅದೆಂದು ಗೆಲ್ಲುವುದು ದುರಂತವಾದ ಸತ್ಯ!!.

ಎಲ್ಲಿ ದೇಹದ  ಸೌಂದರ್ಯ ಮತ್ತು ದೇಹವ  ಅಲಂಕರಿಸಿದ  ವಸ್ತುಗಳು ಅದೇ ನಿಜವಾದ ಪ್ರೇಮವೆಂದು ಗೆಲ್ಲುತ್ತಿರುವವೋ ಅಲ್ಲಿ ಹೃದಯ ಸೋತು, ಮೆದುಳು ಗೆಲ್ಲುತ್ತಿರುತ್ತದೆ!!.  ಅಂತಹ  ಪ್ರೇಮಿಗಳು ತಮ್ಮ ಮುಂದಿನ ಬದುಕಿನಲ್ಲಿ  ಜೀವನವನ್ನು ಒಂದು  ಬಿಸಿನೆಸ್ ಎಂಬಂತೆ  ಕಾಣುತ್ತಾರೆ!!. ಅಂತಹ  ಜೀವನಗಳಲ್ಲಿ  ನಿಜವಾದ  ಪ್ರೇಮಿ ವ್ಯಾನ್ ಗೋ ನಂತವರ ನೆರಳು  ಇರದು!!

-ಫೀನಿಕ್ಸ್‌ ರವಿ

© Copyright 2022, All Rights Reserved Kannada One News