ಭಾರತದಲ್ಲಿ ಪ್ರೀತಿ-ಪ್ರೇಮ ಎಂಬುದು ನಿಷೇಧಿಸಿದ ವಿಷಯವಾಗಿದೆ!!: ಫೀನಿಕ್ಸ್ ರವಿ ಅವರ ವಾರದ ಅಂಕಣ

ಭಾರತದಲ್ಲಿ ಪ್ರೀತಿ-ಪ್ರೇಮ ಎಂಬುದು ನಿಷೇಧಿಸಿದ ವಿಷಯವಾಗಿದೆ!!: ಫೀನಿಕ್ಸ್ ರವಿ ಅವರ ವಾರದ ಅಂಕಣ

Updated : 29.07.2022

ಹೌದು. ಭಾರತದಲ್ಲಿ ತಮ್ಮ ಮಗಳೋ, ಮಗನೋ, ಅಕ್ಕನೋ, ತಂಗಿಯೋ ಯಾರಾದರೋ ಪ್ರೇಮಿಸುತ್ತಿದ್ದಾರೆ ಎಂದರೇ  ಇಡೀ ಮನೆಯೇ  ಬೆಚ್ಚಿ ಬೀಳುತ್ತದೆ!!. ಆ  ವಿಷಯ ಹಳ್ಳಿಗೆ ತಿಳಿದರೆ  ಆ  ಪ್ರೇಮಕ್ಕೆ ರೆಕ್ಕೆ ಪುಕ್ಕ ಕಟ್ಟಿ  ಯಾರು  ಪ್ರೇಮಿಸುತ್ತಿರುವರೋ ಅವರನ್ನು ಪ್ರೇಮಿಸುವುದು ಅಪರಾಧವೆಂದೇ  ನಂಬಿಸಿ ಪ್ರೇಮಿಸುವರನ್ನು  ಅಪರಾಧಿಗಳಾಗಿಸಲಾಗುತ್ತಿದೆ!.

ಪ್ರೇಮವನ್ನು ಒಂದು ಅಪರಾಧವೆಂದು ತಿಳಿದ ಯಾವುದೇ ಒಂದು ಹಳ್ಳಿ ಅಥವಾ ನಗರ  ಅಥವಾ ದೇಶ  ಯಾವ  ಅರ್ಥದಲ್ಲಿ ಬದುಕುತ್ತದೆ!?. ಅಂತವರು  ಪ್ರೇಮದ  ಹೆಸರಿನಲ್ಲಿ ಮದುವೆಗಳ  ಮಾಡಿದರೂ ಕೂಡ ಅಲ್ಲಿ ಪ್ರೇಮದ ಹೆಸರಿನ  ಕಾಮ  ಚಾಲ್ತಿಯಲ್ಲಿರುತ್ತದೆ!!. ಇಲ್ಲಿ ಇನೊಂದು ಪ್ರಶ್ನೆ ಕಾಡದಿರದು, ಅದೇನೆಂದರೆ ಮನುಷ್ಯನಿಗೆ ಪ್ರೇಮ ಮುಖ್ಯವೊ ಅಥವಾ ಕಾಮ  ಮುಖ್ಯವೊ ಎಂಬ ಪ್ರಶ್ನೆ. ಮನುಷ್ಯ ತನ್ನ  ಅಂತರಂಗದಲ್ಲಿ ಮಹಾ  ಕಾಮಿಷ್ಟ. ಪ್ರೇಮ ಅವರ  ಮುಖದಲ್ಲಿ ಆಗಾಗ್ಗೆ ಬಂದು ಹೋಗುವ ಅಥಿತಿ!. ಮನುಷ್ಯನ  ಮೂಲಭೂತ ಹಕ್ಕಾದ  ಸ್ವತಂತ್ರವನ್ನು ಹತ್ತಿಕ್ಕುವುದರಲ್ಲಿ ತಮ್ಮ ಐಡೆಂಟಿಟಿ ಕಂಡುಕೊಳ್ಳುವ ಮನುಷ್ಯ, ಮನುಷ್ಯ ಮನುಷ್ಯರ ನಡುವೆ   ನೆಡೆಸುವ  ಯಜಮಾನಿಕೆಯ  ರೂಪವೆ ಕಾಮವೆಂದು.

 ಜಗತ್ತಿನೆಲ್ಲ  ಸಾಮ್ರಾಜ್ಯಶಾಹಿ, ಪುರೋಹಿತಶಾಹಿ, ಬಂಡವಾಳಶಾಹಿ ರಾಜಕೀಯ ಇತಿಹಾಸದ  ಪುಟಗಳು ಕಾಮ ಕೇಂದ್ರೀತ ಇತಿಹಾಸದ ಪುಟಗಳಾಗಿವೆ. ಇಂತಹ ಕಾಮ ಕೇಂದ್ರೀತ ಸಮಾಜ ವ್ಯವಸ್ಥೆಯ  ನಡುವೆ  ಮನುಷ್ಯ ಮನುಷ್ಯರ  ನಡುವೆ ಪ್ರೇಮ ಬಯಸುವುದು  ಮರವೊಂದು  ಮರ ಕಡಿಯುವ  ಕೊಡಲಿಯ  ಪ್ರೇಮಿಸಿದಂತೆ.!.

ಗಂಡು  ಹಣವಂತನೆಂದು ಮಗಳ  ಕೊಟ್ಟು ಮದುವೆ ಮಾಡುವ  ತಂದೆ ತಾಯಿಯರು, ಮಗಳ  ಪ್ರೇಮವನ್ನು ಕೊಂದು ಹಣಕ್ಕೆ ಮಾರಾಟ  ಮಾಡಿದಂತೆಯೇ  ಆಗುವುದು . ಪ್ರೇಮ ಅಂತರಂಗಿಕವಾಗಿ  ತಂದುಕೊಡುವ  ಸುಖಕ್ಕೆ,  ಹಣ  ತಂದುಕೊಡುವ  ಬಹಿರಂಗಿಕ  ಸುಖವನ್ನು  ಯಾವ  ಲೆಕ್ಕದಲ್ಲಿ ಅಳೆವುದು!!  

 ತಂದೆ  ತಾಯಿಯರ  ಅಪ್ಪಣೆಗೆ ತಲೆ ಬಾಗಿ ಇಲ್ಲಿ ಎರಡೂ  ಹೃದಯಗಳು  ತಮ್ಮನ್ನು ತಾವು  ವಂಚಿಸಿಕೊಳ್ಳಲು ತಯಾರಾಗಿಬಿಡುತ್ತವೆ ಅಥವಾ ಆ ರೀತಿ ತಯಾರು ಮಾಡಲಾಗುತ್ತದೆ.

ಯಾಕೆ ಮನುಷ್ಯ ಹೀಗೆ!?  ; ಪ್ರೇಮ ಮನುಷ್ಯರ  ಅಹಂನ್ನು ನೇರವಾಗಿ ಕೆದಕಿ  ಪ್ರಶ್ನಿಸುವ ಎದೆಗಾರಿಕೆ ಉಳ್ಳಂತಹದ್ದೇ ಆದರೂ,  ಭಾರತದಲ್ಲಿ ಹೆಣ್ಣುಮಕ್ಕಳನ್ನು ದಾಸಿಯರಂತೆ ಬೆಳೆಸುತ್ತಿರುವ ಕ್ರಮವೇ ಅವರು ತಮ್ಮ  ತಂದೆ ತಾಯಿಯರ  ಎದಿರು ತಮ್ಮ ಹಕ್ಕು ಮತ್ತು ಸ್ವತಂತ್ರವನ್ನು ಪ್ರಶ್ನಿಸಿ ಕೇಳುವ  ಹಕ್ಕನ್ನೇ ಭಾರತದ  ಸಮಾಜವು  ನಿರಾಕರಿಸಿದೆ! ಅಥವಾ ಕೇಳುವ ಎದೆಗಾರಿಕೆ ಇಲ್ಲದೆ ತಮ್ಮ ಹಕ್ಕುಗಳನ್ನು ಕಳೆದುಕೊಂಡಿದ್ದಾರೆ!. ಎಲ್ಲಿ ತಮ್ಮ ಹಕ್ಕುಗಳ  ಸ್ಥಾಪಿಸಲು  ಪ್ರೇಮ ವಿವಾಹ ಅಥವಾ ಪ್ರೇಮ ಪ್ರಕರಣಗಳು  ಕಂಡು  ಬರುತ್ತಾವೋ ಅಲ್ಲೆಲ್ಲ ಆ  ಗಂಡು ಮತ್ತು ಹೆಣ್ಣಿಗೆ ಜೀವ ಬೆದರಿಕೆ ಇದ್ದೇ ಇರುತ್ತದೆ!.

ಬರೀ ಜೀವ ಬೆದರಿಕೆ ಅಷ್ಟೇ ಅಲ್ಲದೆ ಆ  ಪ್ರೇಮಿಗಳನ್ನು ಕೊಲ್ಲುವ ಘಟನೆಗಳು  ಸರ್ವೇ ಸಾಮಾನ್ಯವಾಗಿವೆ. ಇಷ್ಟೇ ಅಲ್ಲದೇ ಆ  ಜೋಡಿ ಬೇರೆ ಬೇರೆ ಜಾತಿಯ  ಜೋಡಿಯಾಗಿದ್ದರಂತೂ  ಜಾತಿವಾದಿಗಳು ಕೆಳ ಜಾತಿಯ ಹುಡುಗನೇ ಆಗಿರಲಿ  ಹುಡುಗಿಯೇ ಆಗಿರಲಿ  ಅವರನ್ನು ಮುಗಿಸಲು  ತಮ್ಮೆಲ್ಲ ಪ್ರಯತ್ನವನ್ನು ಪಡುತ್ತಾರೆ! ಮತ್ತು ಮರ್ಯಾದಾ  ಹತ್ಯೆ ಅಂದರೆ ತಮ್ಮ ಜಾತಿಯನ್ನು ಅನ್ಯ ಜಾತಿಯ ಹುಡುಗ ಅಥವಾ ಹುಡುಗಿಯ  ಮದುವೆ ಮಾಡಿಕೊಳ್ಳುವ ಮೂಲಕ ನಮ್ಮ ಜಾತಿಯನ್ನು ಕೆಡಿಸಿಬಿಟ್ಟ / ಕೆಡಿಸಿಬಿಟ್ಟಳು ಹಾಗಾಗಿ  ನಮ್ಮ ಜಾತಿಯ ಉಳುವಿಗಾಗಿ  ಅವರನ್ನು  ಕೊಲ್ಲುವ ವಿಕೃತ ಕೊಲೆಗಾರಿಕೆಯ  ಹೆಸರು ಮರ್ಯಾದಾ  ಹತ್ಯೆ!!.

ಭಾರತದಲ್ಲಿ ಪ್ರೇಮವೆಂಬುದು ಬರೀ  ಕನಸು ಕಾಣುವ  ಆಂತರಿಕ  ಗುಪ್ತ ಗಾಮಿನಿಯಾಗಿ  ಒಳಗೆ  ತಟಸ್ತವಾಗಿ ಬಿಟ್ಟಿದೆ!. ಹೊರಗಿನ  ಜಾತಿವಾದಿಗಳ  ಭಯ  ಅದರ  ಕುತ್ತಿಗೆ ಹಿಸುಕುತ್ತಿದೆ!!.  ಇದು ಜಾತಿವಾದಿಗಳೊಳಗೂ ಒಂದು ದೊಡ್ಡ ಸಮಸ್ಯೆಯಾಗಿಬಿಟ್ಟಿದೆ ತಮ್ಮ ಪ್ರೇಮವ ತಾವೇ  ಕೊಂದುಕೊಳ್ಳುವ, ಕೊಂದುಕೊಂಡು ಅದಕ್ಕೊಂದು ದೇಶದ, ಮನೆಯ, ತಾಯಿ ತಂದೆಯರ ಆದರ್ಶದ  ಮುಖವಾಡತೊಡಿಸಿ ತಮ್ಮಾಳದಲ್ಲಿ  ಖಿನ್ನತೆಯ  ತಬ್ಬಿ ಬಾಳುವ  ಅವರು, ಅದರ  ಮುಂದುವರೆದ  ಭಾಗವಾಗಿ  ಅವರೊಬ್ಬ ಪ್ರೇಮ ವಂಚಿತ  ಸ್ಯಾಡಿಸ್ಟ್
ಆಗಿ  ಅವರೊಳಗಿನ  ಅತಿಯಾದ ಪ್ರೇಮದ  ತವತವಿಕೆಯು ಅವರನ್ನು  ವಿಕೃತ ಕಾಮಕ್ಕೆ ದಾರಿ ಮಾಡುತ್ತದೆ !. ಅದರ  ರೂಪವೇ ಅತ್ಯಾಚಾರ ಪ್ರಕರಣಗಳು!. ಅಂದರೆ ಅವರೊಳಗೆ  ಮುಚ್ಚಿಟ್ಟ ಪ್ರೇಮವು ಕಾಮವಾಗಿ  ಆಸ್ಪೋಟಗೊಂಡ  ಕ್ರಿಯೆಯೇ ಅತ್ಯಾಚಾರವೆಂಬುದು!!.
 
ಎಲ್ಲಿ, ಯಾವ  ದೇಶದಲ್ಲಿ ಪ್ರೇಮವನ್ನು ಮುಚ್ಚಿಡಲಾಗಿದೆಯೋ  ಅಲ್ಲಿ ಪ್ರೇಮ ಕಲೆಯ  ಮೂಲಕ  ಅಲ್ಲಿನ ಜನರನ್ನು ತೃಪ್ತಿಪಡಿಸಲು ಪ್ರಯತ್ನಿಸುತ್ತಿರುತ್ತದೆ!!. ಅಂದರೆ, ಅಂಗವಿಕಲನೊಬ್ಬನಿಗೆ ಕನಸಲ್ಲಿ  ಕಾಲು  ಬಂದ  ಹಾಗೆ!. ಅದಕ್ಕೆ  ಉತ್ತಮ ಉದಾಹರಣೆ ಎಂದರೇ  ಭಾರತದಲ್ಲಿ ಚಿತ್ರೀಕರಣಗೊಳುವ  ಮುಕ್ಕಾಲು ಸಿನಿಮಾಗಳು  ಪ್ರೀತಿ ಪ್ರೇಮ ಕುರಿತವೇ  ಆಗಿರುತ್ತವೆ  ಎಂದರೇ  ನಿಮಗೆ ಆಶ್ಚರ್ಯವಾಗಬಹುದು. ಇದು ಆಶ್ಚರ್ಯಕ್ಕಿಂತಲೂ  ಅತ್ಯಂತ ವಾಸ್ತವ!.

ಕಲೆಯ  ಉದ್ದೇಶ ಬರೀ  ಇದಷ್ಟೇ ಅಲ್ಲ, ಸಮಾಜ  ಯಾವ  ಹಕ್ಕನ್ನು ನಿರಾಕರಿಸಿದೆಯೋ, ಕಲೆ  ಆ  ಹಕ್ಕನ್ನು  ಮರು  ಸ್ಥಾಪಿಸಲು  ಮತ್ತೆ ಮತ್ತೆ ಪ್ರಯತ್ನಿಸುತ್ತಲೇ ಇರುತ್ತದೆ!!. ಆ  ಪ್ರಯತ್ನದ  ಹಿಂದೆ ಮನುಷ್ಯನಿಗರಿವಿಲ್ಲದ್ದಂತೆ ಮನುಷ್ಯನ  ಮನಸ್ಸು  ಸದಾ ಸಕ್ರಿಯವಾಗಿರುತ್ತದೆ!!. ಯಾಕೆಂದರೆ ಮನುಷ್ಯನ  ಸುಖ  ಮತ್ತು ದುಃಖದ  ನಿಜವಾದ  ವಾರಸುದಾರ  ಮನುಷ್ಯನ  ಮನಸಷ್ಟೇ  ಹೊರೆತು ಮನುಷ್ಯನ  ದೇಹವಲ್ಲ!!.
-ಫೀನಿಕ್ಸ್ ರವಿ

© Copyright 2022, All Rights Reserved Kannada One News