ಕಲೆ, ಮನಸ್ಸು ಮತ್ತು ದೇಹ; ಕಲೆ ಕಲಿಯುವಾಗಿನ ಸೂಕ್ಷ್ಮತೆಗಳು ಭಾಗ-3: ಫೀನಿಕ್ಸ್ ರವಿ ಅವರ ವಾರದ ಅಂಕಣ

Related Articles

ಕುಸುಮಬಾಲೆ ‘ಅವರವರಗ ತಿಳಿದ ರೀತೀಲೀ...’: ಡಾ.ರವಿಕುಮಾರ್ ನೀಹ ಅವರ ಅಂಕಣ

ಯೋಗ, ಪ್ರಯೋಗ ಮತ್ತು ಬುದ್ಧ ಭಾಗ-ನಾಲ್ಕು: ಫೀನಿಕ್ಸ್ ರವಿ ಅವರ ವಾರದ ಅಂಕಣ

ಸಿಎಂ ಬಸವರಾಜ ಬೊಮ್ಮಾಯಿ ರಾಜೀನಾಮೆ..?: ಎಡಿಟರ್ ಸ್ಪೆಷಲ್

ನಂಬಲಾರದ ದು:ಸ್ವಪ್ನ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಬೇಟಿ ಬಚಾವೋ ಬಿಜೆಪಿಯಿಂದ..!: ಎಡಿಟರ್ ಸ್ಪೆಷಲ್

ಸಂಗೀತಿ ಸುತ್ತ-ಬುದ್ಧರ ಬೋಧನೆಗಳ ಸಾರ ಭಾಗ-2: ರಮಾಕಾಂತ ಪುರಾಣಿಕ ಅವರ 25ನೇ ಅಂಕಣ

ಮಾರಕ ಮತಾಂತರ ಕಾಯ್ದೆಗೆ ಅಸ್ತು!: ಎಡಿಟರ್ ಸ್ಪೆಷಲ್

ಯೋಗ, ಪ್ರಯೋಗ ಮತ್ತು ಬುದ್ಧ ಭಾಗ-ಮೂರು: ಫೀನಿಕ್ಸ್ ರವಿ ಅವರ ವಾರದ ಅಂಕಣ

ಕಾಲದ ತಲ್ಲಣಗಳು: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಧಮ್ ಇದ್ದು…ತಾಕತ್ತಿದ್ದು…ನಿದ್ದೆ ಹೊಡೆದ ಕುರ್ಚಿಗಳು; ಎಚ್ಚೆತ್ತ ಜನಗಳ ದೇಶ ಕಟ್ಟೊ ಜಾಥಾವು: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ಕಲೆ, ಮನಸ್ಸು ಮತ್ತು ದೇಹ; ಕಲೆ ಕಲಿಯುವಾಗಿನ ಸೂಕ್ಷ್ಮತೆಗಳು ಭಾಗ-3: ಫೀನಿಕ್ಸ್ ರವಿ ಅವರ ವಾರದ ಅಂಕಣ

Updated : 22.07.2022

ಮನುಷ್ಯನ  ನಾಗರಿಕತೆಯ  ನಡುವೆ  ಮನುಷ್ಯ ಕಲ್ಪಿಸಿ ಕಟ್ಟಿಕೊಂಡ ವಿಷಯಗಳಲ್ಲಿ ಬರೀ  ಮೂರು ಕಲ್ಪನೆಗಳು ಅತ್ಯಂತ  ಅದ್ಭುತ ಕಲ್ಪನೆಗಳಾಗಿವೆ!. ಅವುಗಳಲ್ಲಿ  ಮೊದಲನೆಯದ್ದು  ಪ್ರೇಮವೆಂಬ ಕಲ್ಪನೆ, ಎರಡನೆಯದ್ದು ಧ್ಯಾನ, ಮೂರನೇಯದ್ದು  ಕಲೆ.

ಈಗ ಬರೆಯುತ್ತಿರುವ ವಿಷಯ ಕಲೆಯ ವಿಷಯವಾದ್ದರಿಂದ ಮುಂದಿನ ವಿಷಯಯವಾಗಿ ಧ್ಯಾನದ  ಬಗ್ಗೆ ಮುಂದಿನ ಅಂಕಣಗಳಲ್ಲಿ  ಬರೆಯುತ್ತೇನೆ. ಮನುಷ್ಯನ  ನಾಗರಿಕತೆಯಲ್ಲಿ ಕಲೆ ಎಂಬ  ಕಲ್ಪನೆ ಇಲ್ಲದಿದ್ದರೆ ಮನುಷ್ಯನ  ನಾಗರಿಕತೆ ಎಂದೋ ನಾಶವಾಗಿ  ಹೋಗುತ್ತಿತ್ತು!.

ಒಬ್ಬ ಸೈನಿಕನಿಗೆ ನಾನೊಬ್ಬ ನಿಪುಣ  ಖಡ್ಗ ವೀರನಾಗಬೇಕು ಎಂಬ ಹಂಬಲವಿತ್ತು. ಆ ಕಲೆ ಕಲಿಯಲಿಕ್ಕಾಗಿ ಊರೂರು ಅಲೆದ, ದೇಶ ದೇಶ ಅಲೆದ  ಎಲ್ಲಿಯೂ ಒಬ್ಬ ಅತ್ಯುತ್ತಮ ಗುರು ಅವನಿಗೆ  ಸಿಕ್ಕಲೇ ಇಲ್ಲ. ಒಮ್ಮೆ, ಇವನ  ಅಲೆದಾಟ ನೋಡಿ ನೋಡಿ ಸಾಕಾದ ಅವರಮ್ಮ, "ಮಗನೇ  ಜಗತ್ತಿನ ಶ್ರೇಷ್ಠ ಖಡ್ಗ ತರಬೇತಿಯ ಗುರು ನಿನ್ನ ಊರಲ್ಲೇ ಇದ್ದರೂ ನೀನು ಗುರುತಿಸಲಾಗದ ಕುರುಡನಾಗಿದ್ದೀಯ. ಬುದ್ಧ ಶಾಲೆಯ ಗುರುಗಳನ್ನ ಕಾಣು..." ಅಂತ ಹೇಳಿದಳು.  "ಯಾರು?! ಅವರೇ ?!"  ಅವನಿಗೆ  ಆಶ್ಚರ್ಯವಾಗಿತ್ತು. ಶಾಂತಿಯ ಮಂತ್ರ ಹೇಳಿಕೊಡುವ  ಗುರು ಹಿಂಸೆಯ  ಕಲೆಯ ಹೇಳಿಕೊಡಬಲ್ಲರೆ ಎಂಬ ಆತನೊಳಗಿನ ಪ್ರಶ್ನೆ ಅದಕ್ಕೆ ಕಾರಣವಾಗಿತ್ತು.

ಅಂದು ಮಧ್ಯಾಹ್ನ ಆತ ಬುದ್ಧ ಶಾಲೆಯ  ಆವರಣದಲ್ಲಿ ಕಾಣಿಸಿಕೊಂಡ. ಗುರುಗಳು ಶಾಲೆಯ ಗಿಡಗಳಿಗೆ  ನೀರು ಹಾಕುವುದರಲ್ಲಿ  ಮಗ್ನರಾಗಿದ್ದರು.
ಗುರುಗಳೇ ನಾನು ಒಬ್ಬ ಸೈನಿಕ  ಸಾಮಾನ್ಯ ಖಡ್ಗ  ವಿದ್ಯೆ ಕಲಿತ್ತಿದ್ದೇನೆ.ಆದರೆ ಅಸಮಾನ್ಯ ಖಡ್ಗ  ವಿದ್ಯೆ ಕಲಿಯಬೇಕು ಎಂಬುದು ನನ್ನ ಉಟ್ಕಟ  ಬಯಕೆ. ಅದಕ್ಕಾಗಿ ಊರೂರು ದೇಶ ದೇಶ ಅಲೆದೆ. ಬರೀ ಅಲೆದಿದ್ದಷ್ಟೇ ಪ್ರಯೋಜನವಿಲ್ಲ. ನನ್ನಮ್ಮ  ಹೇಳಿದಳು  ಜಗತ್ತಿನ ಶ್ರೇಷ್ಠ ಖಡ್ಗ  ವಿದ್ಯೆಯ ಮಹಾ ಗುರು ನೀವೆಂದು. ದಯವಿಟ್ಟು ನನಗೆ  ಖಡ್ಗ  ವಿದ್ಯೆಯ ಹೇಳಿಕೊಡಿ... "  ಎಂದ. "ಆಯಿತು ಹೇಳಿಕೊಡೋಣ..." ಅಂದರು ಗುರುಗಳು. "ಆದೊಷ್ಟು ಬೇಗ ನಾನು ಆ ಕಲೆಯ ಕಲಿಯ ಬೇಕು ಅನಿಸಿದೆ. ಎಷ್ಟು ವರುಷ ಆಗುತ್ತೆ ಕಲಿಯಲಿಕ್ಕೆ ಗುರುಗಳೇ? ".  "ಹತ್ತು ವರುಷ " ಗುರುಗಳು ಹೇಳಿದರು. 

"ಹತ್ತು ವರುಷ!! ನನ್ನ  ತಾರುಣ್ಯವೆ ಕಳೆದು ಹೋಗಿರುತ್ತೆ ಆಮೇಲೇನು  ಮಾಡೋದು  ಆ  ಕಲೆಯ ಕಲಿತು!? ನೀವು ಹೇಳಿಕೊಡುವ  ಎಲ್ಲ ನಿಯಮಗಳನ್ನೂ  ಚಾಚುತಪ್ಪದೆ  ಶೀಘ್ರವಾಗಿ  ಪಾಲಿಸುತ್ತೇನೆ. ನೀವು ಏನೇ ಜವಾಬ್ದಾರಿ ಕೊಟ್ಟರೂ ನಿಬಾಯಿಸುತ್ತೇನೆ. ಅತೀ ಶೀಘ್ರವಾಗಿ  ಕಲಿಯಬೇಕೆಂದರೆ  ಎಷ್ಟು ವರುಷ ಆಗುತ್ತೆ ಗುರುಗಳೇ?".   ಗುರುಗಳು ಮತ್ತೆ ಹೇಳಿದರು,    "ಇಪ್ಪತ್ತು ವರುಷ ". ಗಾಬರಿಯಿಂದ ಬಾಯಿ ತೆರೆದ  ಸೈನಿಕ ಬಾಯಿ ಮುಚ್ಚದೆ ಗುರುಗಳನ್ನು ಇವರ್ಯಾರೋ ಹುಚ್ಚ ಇರಬೇಕು ಅನ್ನುವಂತೆ ನೋಡಿದ. ಗುರುಗಳು ಮುಂದುವರೆದು  ಹೇಳಿದರು, " ನಿನ್ನದು ಆತುರದ  ಮನಸ್ಸು ಮತ್ತು ದೇಹ. ಆತುರದ  ಮನಸ್ಸು ಮತ್ತು ದೇಹ ಏನೇ ಕಲಿಯಬೇಕಾದರೂ  ತುಂಬಾ ಸಮಯ ಹಿಡಿಯುತ್ತೆ.  ". ಗುರುಗಳ ಆ  ಮಾತಿನ  ನಂತರ  ಆ  ಸೈನಿಕ ಒಂದೂ ಮಾತಾಡಲಿಲ್ಲ. ಗುರುಗಳ  ಆಜ್ಞೆಯಂತೆ  ಬುದ್ಧ ಶಾಲೆಯ  ಸೌದೆ ಒಡೆಯುವ ಕಾಯಕಕ್ಕೆ ಸೇರಿಕೊಂಡ. ಒಂದು ವರುಷ ಕಳೆಯಿತು ಗುರುಗಳು ಖಡ್ಗ ವಿದ್ಯೆ ತರಬೇತಿಯ  ವಿಷಯ ಮಾತೇ ಆಡಿರಲಿಲ್ಲ !.

ಎರಡು  ವರುಷ ಕಳೆಯಿತು ಗುರುಗಳು ಖಡ್ಗ ವಿದ್ಯೆ ತರಬೇತಿಯ  ವಿಷಯ ಮಾತೇ  ಆಡಿರಲಿಲ್ಲ !. ಗುರುಗಳು ಯಾವಾಗಲಾದರೂ  ಕಲಿಸಲಿ  ಎಂದು ನಿರ್ಧರಿಸಿದ  ಸೈನಿಕ ಸೌದೆ ಒಡೆಯುವ ಕಾಯಕದಲ್ಲಿ ಮುಳುಗಿಹೋಗಿದ್ದ. ಹೀಗೆ ಒಂದು ದಿನ ಆ ಸೈನಿಕ ಸೌದೆ ಒಡೆಯುವುದರಲ್ಲಿ ಮುಳುಗಿ ಹೋಗಿದ್ದ. ಪೊದೆಗಳ ಹಿಂದಿನಿಂದ ಮಿಂಚಿನಂತೆ ಬಂದ ಗುರುಗಳು ಮರದ  ಖಡ್ಗದಿಂದ ಸೈನಿಕನಿಗೆ ಹೊಡೆದು ಮಿಂಚಿನಂತೆ ಕಣ್ಮರೆಯಾದರು !. ಸೈನಿಕನಿಗೆ ಏನಾಯಿತು ಎಂದು ತಿಳಿಯುವ ಮುನ್ನವೇ ಆ  ಘಟನೆ ನೆಡೆದು ಹೋಗಿತ್ತು!. ಇನ್ನೂ ಎರಡು ಮೂರು ಬಾರಿ ಹಾಗೇ ಆಯಿತು!. ಸೈನಿಕ ಗುರುಗಳ ಆ  ಏಟುಗಳನ್ನು  ತಪ್ಪಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ  ಯಾವ ಪ್ರಯೋಜನವಾಗಲಿಲ್ಲ. ಒಮ್ಮೆ ಸೈನಿಕ ನಿದ್ದೆಯಲ್ಲಿರುವಾಗಲೂ  ಗುರುಗಳು ಹೊಡೆದರು!.

ಅಂದಿನಿಂದ ಆ ಸೈನಿಕನ  ಪ್ರಜ್ಞೆ ಎಂಬುದು ಒಂದು ಸೂಜಿ ಬಿದ್ದರೂ ಎಚ್ಚರವಾಗಿ ಆಲಿಸುವ  ಮತ್ತು ಅದಕ್ಕೆ ಪ್ರತಿಕ್ರಿಯಿಸುವ ಸೂಕ್ಷ್ಮತೆಯನ್ನು ಸೈನಿಕ ಕಲಿತ. ನಂತರ ಆಗಿದ್ದೇ ಬೇರೆ ಗುರುಗಳ ಒಂದು ಏಟು ತಿನ್ನದಂತೆ ನಿದ್ರಿಸುವಾಗಲೂ  ಸುಪ್ತ ಪ್ರಜ್ಞೆಯಲಿ  ಜಾಗರುಕನಾದ. ಅದಾದ ಆರು ತಿಂಗಳಿಗೆ  ಗುರುಗಳು ಆ ಸೈನಿಕನಿಗೆ ಖಡ್ಗ ವಿದ್ಯೆಯ  ತರಬೇತಿಗೆ ಕರೆದರು. ಬರೀ ಒಂದು ತಿಂಗಳಲ್ಲಿ ಆ  ಸೈನಿಕ ಜಗತ್ತಿನ  ಅತ್ಯುತ್ತಮ ಖಡ್ಗ ವೀರನಾದ!!. ಆತ  ಮನೆಗೆ ಹಿಂತಿರುಗುವ  ಮುನ್ನ  ಗುರುಗಳು ಆತನಿಂದ      " ನಾನು  ನನ್ನ ಅಹಂಕಾರಕ್ಕಾಗಿ  ಎಂದು ಈ ಕಲೆಯನ್ನು  ಬಳಸುವುದಿಲ್ಲ  " ಎಂದು   ಭಾಷೆ  ತೆಗೆದುಕೊಂಡರು.

          - ಫೀನಿಕ್ಸ್ ರವಿ

© Copyright 2022, All Rights Reserved Kannada One News