ಎನ್ಐಎ ದಾಳಿ ವಿರೋಧಿಸಿ ಪಿಎಫ್ಐ ಕಾರ್ಯಕರ್ತರಿಂದ ಪ್ರತಿಭಟನೆ: ಪೊಲೀಸರಿಂದ ಲಾಠಿ ಚಾರ್ಜ್: ಐವತ್ತು ಹೆಚ್ಚು ಕಾರ್ಯಕರ್ತರ ಬಂಧನ

Related Articles

ಪ್ರಭಾಸ್ ನಟನೆಯ ಆದಿಪುರುಷ ಚಿತ್ರಕ್ಕೆ ಸಂಕಷ್ಟ: ಕಾನೂನು ಕ್ರಮ ಕೈಗೊಳ್ಳುವುದಾಗಿ ಮಧ್ಯ ಪ್ರದೇಶದ ಗೃಹ ಸಚಿವ ಎಚ್ಚರಿಕೆ

ಜಮ್ಮು-ಕಾಶ್ಮೀರ ಕಾರಾಗೃಹ ಡಿಜಿ ಹತ್ಯೆ ಪ್ರಕರಣದಲ್ಲಿ ಮಹತ್ವದ ತಿರುವು: ಮನೆ ಸಹಾಯಕನೇ ಮುಖ್ಯ ಆರೋಪಿ, ಹತ್ಯೆ ಹೊಣೆ ಹೊತ್ತುಕೊಂಡ ಪಿಎಎಫ್ಎಫ್ ಸಂಘಟನೆ

ಅಮೆರಿಕಾದಲ್ಲಿ 8 ತಿಂಗಳ ಮಗುವಿನ ಸಹಿತ ಭಾರತ ಮೂಲದ ಕುಟುಂಬ ಅಪಹರಣ

ವಿಜಯಪುರ: ಕೆಎಸ್ಸಾರ್ಟಿಸಿ ನೌಕರ ಆತ್ಮಹತ್ಯೆ

ಇಸ್ಲಾಮ್ ಧರ್ಮಕ್ಕೆ ಮತಾಂತರಗೊಂಡ ಮಹಿಳೆಯ ಹತ್ಯೆ

ಬಿಬಿಎಂಪಿ ಮುಖ್ಯ ಆಯುಕ್ತರ ಚಿತ್ರ ಬಳಸಿ ವಂಚನೆ: ಎಫ್‍ಐಆರ್ ದಾಖಲು

ದಕ್ಷಿಣ ಕನ್ನಡ: ಅ.5ಕ್ಕೆ ಉಚಿತ 'ಅಭಾ ಕಾರ್ಡ್‌' ಉಚಿತ ನೋಂದಣಿ

ಉತ್ತರಾಖಂಡ್‌: ಹಿಮಕುಸಿತದಲ್ಲಿ ಸಿಲುಕಿದ 28 ಪರ್ವತಾರೋಹಿಗಳು

ಎಸ್ಸಿ ಯುವಕನ ಜೊತೆ ಒಕ್ಕಲಿಗ ಯುವತಿ ನಾಪತ್ತೆ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ಬೆಳ್ತಂಗಡಿಯಲ್ಲಿ RSSನಿಂದ ಶಸ್ತ್ರಾಸ್ತ ಪೂಜೆ: ಸಿಪಿಐ(ಎಂ) ಖಂಡನೆ

ಎನ್ಐಎ ದಾಳಿ ವಿರೋಧಿಸಿ ಪಿಎಫ್ಐ ಕಾರ್ಯಕರ್ತರಿಂದ ಪ್ರತಿಭಟನೆ: ಪೊಲೀಸರಿಂದ ಲಾಠಿ ಚಾರ್ಜ್: ಐವತ್ತು ಹೆಚ್ಚು ಕಾರ್ಯಕರ್ತರ ಬಂಧನ

Updated : 22.09.2022

ಹುಬ್ಬಳ್ಳಿ: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಮತ್ತು ಪಿಎಫ್‌ಐ ಮುಖಂಡರ ಮನೆಗಳ ಮೇಲೆ ಎನ್‌ಐಐ ದಾಳಿ ಖಂಡಿಸಿ, ಹುಬ್ಬಳ್ಳಿಯ ಕೌಲ್‌ಪೇಟೆ ಬಳಿ ಬೆಂಗಳೂರು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ ಎಸ್‌ಡಿಪಿಐ ಮತ್ತು ಪಿಎಫ್‌ಐ ಕಾರ್ಯಕರ್ತರ ಮೇಲೆ ಪೊಲೀಸರು ಬುಧವಾರ ಲಘು ಲಾಠಿ ಪ್ರಹಾರ ನಡೆಸಿದ್ದಾರೆ.

ಎಸ್‌ಡಿಪಿಐ ಬಾವುಟ ಹಿಡಿದ ನೂರಕ್ಕೂ ಹೆಚ್ಚು ಮಂದಿ ಮಧ್ಯಾಹ್ನ 3.40ರ ಸುಮಾರಿಗೆ ರಸ್ತೆಯಲ್ಲಿ ಜಮಾಯಿಸಿದರು. ಮಾನವ ಸರಪಳಿ ರಚಿಸಿ, ‘ಗೋ ಬ್ಯಾಕ್ ಎನ್‌ಐಎ’ ಎಂದು ಜೋರಾಗಿ ಕೂಗುತ್ತಾ ರಸ್ತೆಗೆ ಅಡ್ಡವಾಗಿ ನಿಂತರು.

ಸ್ಥಳಕ್ಕೆ ಬಂದ ಪೊಲೀಸರು ರಸ್ತೆ ತಡೆಯದೆ, ಶಾಂತವಾಗಿ ಪ್ರತಿಭಟಿಸುವಂತೆ ಸೂಚಿಸಿದರೂ, ಕಾರ್ಯಕರ್ತರು ಘೋಷಣೆಗಳನ್ನು ಮುಂದುವರಿಸಿದರು. ಪೊಲೀಸ್ ಕಮಿಷನರ್ ಲಾಭೂರಾಮ್, ಡಿಸಿಪಿಗಳು, ಎಸಿಪಿಗಳ ಮಾತಿಗೂ ಕಿವಿಗೊಡಲಿಲ್ಲ.

ಕಡೆಗೆ ಪೊಲೀಸರು ಕಾರ್ಯಕರ್ತರನ್ನು ರಸ್ತೆಯಿಂದ ಪಕ್ಕಕ್ಕೆ ತಳ್ಳಲು ಯತ್ನಿಸಿದರು. ಈ ವೇಳೆ, ಪರಸ್ಪರ ತಳ್ಳಾಟ ಉಂಟಾಯಿತು. ಕಡೆಗೆ ಲಘು ಲಾಠಿ ಪ್ರಹಾರ ನಡೆಸಿದರು. ಡಿಸಿಪಿಗಳಾದ ಸಾಹಿಲ್ ಬಾಗ್ಲಾ, ಗೋಪಾಲ ಬ್ಯಾಕೋಡ, ಎಸಿಪಿ ವಿನೋದ ಮುಕ್ತೇದಾರ ಸೇರಿದಂತೆ ಸ್ಥಳದಲ್ಲಿದ್ದ ಪೊಲೀಸರು ಕೈಯಲ್ಲಿ ಲಾಠಿ ಹಿಡಿದು ಪ್ರತಿಭಟನಾಕಾರರನ್ನು ಚದುರಿಸಿದರು.

50ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದು, ಪೊಲೀಸ್ ಮತ್ತು ಶಾಲಾ ವಾಹನದಲ್ಲಿ ಕರೆದೊಯ್ದರು. ಏಕಾಏಕಿ ನಡೆದ ಪ್ರತಿಭಟನೆಯಿಂದಾಗಿ ಸ್ಥಳದಲ್ಲಿ ಕೆಲಹೊತ್ತು ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಯಿತು.

‘ಎಸ್‌ಡಿಪಿಐ ಮತ್ತು ಪಿಎಫ್‌ಐ ಕಾರ್ಯಕರ್ತರು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದಾಗ, ಅವರನ್ನು ಚದುರಿಸಿದ್ದೇವೆ. 50ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದೇವೆ. ವಶಕ್ಕೆ ಪಡೆದಿರುವವರ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ವಿವಿಧೆಡೆ ಪೊಲೀಸರನ್ನು ನಿಯೋಜಿಸಲಾಗಿದೆ’ ಎಂದು ಪೊಲೀಸ್ ಕಮಿಷನರ್ ಲಾಭೂರಾಮ್ ಮಾಧ್ಯಮದವರಿಗೆ ತಿಳಿಸಿದರು.

© Copyright 2022, All Rights Reserved Kannada One News