‘ಪೇ ಟಿಎಂ ಅಲ್ಲ ಪೇ ಸಿಎಂ’: ಇದು ಬಿಜೆಪಿ ಭ್ರಷ್ಟಾಚಾರದ ಜಾಹೀರಾತು

Related Articles

ಮಲ್ಲಿಕಾರ್ಜುನ ಖರ್ಗೆಗೆ ಒಲಿಯುತ್ತಾ ಕಾಂಗ್ರೆಸ್ ಅಧ್ಯಕ್ಷ ಪಟ್ಟ?

ದಲಿತ ಸೊಸೆಯನ್ನು ಮನೆಗೆ ಸೇರಿಸದ ಕುಟುಂಬ: ಮಗುವಿನೊಂದಿಗೆ ಧರಣಿ ಕುಳಿತ ಮಹಿಳೆ

ಮೂಡಿಗೆರೆ ಮಾಯಾವಿ ಪೂರ್ಣಚಂದ್ರ ತೇಜಸ್ವಿ ಅವರ ಕರ್ವಾಲೋ ಕಾದಂಬರಿ ಕುರಿತು ಪಿ. ಲಂಕೇಶರ ಮಾತು

‘ಸಚಿವರು ಕಾಣೆಯಾಗಿದ್ದಾರೆ! ಹುಡುಕಿಕೊಡಿ...

ಗೌರಿಯನ್ನು ಕೊಂದವರು ಜೈಲಿನಲ್ಲಿದ್ದಾರೆ, ಕೊಲ್ಲಿಸಿದವರು ಅಧಿಕಾರದಲ್ಲಿದ್ದಾರೆ: ನಟ ಪ್ರಕಾಶ್ ರಾಜ್

ನಾ ಕಂಡ ಹಾಗೆ 'ಗೌರಿ' ಅಮ್ಮ: ವಿಕಾಸ್ ಆರ್ ಮೌರ್ಯ ಅವರ ಲೇಖನ

ಗೌರಿಯ ಅಕ್ಷರಗಳು ಮಾತು ಚಟುವಟಿಕೆ ಎಲ್ಲವೂ ನಿರ್ಭಯ ಭಾರತ ನಿರ್ಮಾಣದ ಗುರಿ ಹೊಂದಿತ್ತು: ಕೆ. ನೀಲಾ ಅವರ ಲೇಖನ

ನನ್ನಕ್ಕ ಗೌರಿ ಲಂಕೇಶ್, ನಾನು ಲಂಕೇಶ್! -ಅಪ್ಪಗೆರೆ ಲಂಕೇಶ್ ಅವರ ಲೇಖನ

ಗೌರಿ ಲಂಕೇಶ್ ವ್ಯಕ್ತಿತ್ವದ ಭಿನ್ನ ಆಯಾಮಗಳು: ಹುಲಿಕುಂಟೆ ಮೂರ್ತಿ ಅವರ ಲೇಖನ

ಜನಸೇವಕ ಟಿ.ಆರ್.ಶಾಮಣ್ಣ ನೆನಪು: ಹರೀಶ್ ಕಳಸೆ ಅವರ ಲೇಖನ

‘ಪೇ ಟಿಎಂ ಅಲ್ಲ ಪೇ ಸಿಎಂ’: ಇದು ಬಿಜೆಪಿ ಭ್ರಷ್ಟಾಚಾರದ ಜಾಹೀರಾತು

Updated : 21.09.2022

‘ಪೇ ಸಿಎಂ’ ಸದ್ಯ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಶಬ್ಧ. ಪೇಟಿಎಂ ಮಾದರಿಯಲ್ಲಿ ರಾಜ್ಯಾದ್ಯಂತ ʻಪೇ ಸಿಎಂʼ ಪೋಸ್ಟರ್‌ ವೈರಲ್‌ ಆಗಿದ್ದು, ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಕ್ಯೂ ಆರ್ ಕೋಡ್ ಸಹಿತ ಕಾಂಗ್ರೆಸ್ ವಿಭಿನ್ನ ಅಭಿಯಾನ ಶುರುಮಾಡಿದೆ. ಭ್ರಷ್ಟಾಚಾರದಲ್ಲೇ ಮುಳುಗಿ ತೇಲುತ್ತಿರುವ ಬಿಜೆಪಿಗೆ ಎಲ್ಲೋದ್ರು ಮುಖಭಂಗ ತಪ್ಪುತ್ತಿಲ್ಲ, ಮೊನ್ನೆಯಷ್ಟೇ ತೆಲಂಗಾಣದಲ್ಲಿ ಬೊಮ್ಮಾಯಿ ಭಾಗಿಯಾಗಿದ್ದ ಕಾರ್ಯಕ್ರಮದ ವೇಳೆ ನೆರೆ ರಾಜ್ಯದವರು 40% ಸಿಎಂಗೆ ಸ್ವಾಗತ ಎಂಬ ಫ್ಲೆಕ್ಸ್ ಅಳವಡಿಸುವ ಮೂಲಕ ಬಸವರಾಜ ಬೊಮ್ಮಾಯಿ ಅವರನ್ನು ಮುಜುಗರಕ್ಕೆ ಸಿಲುಕಿಸಿದ್ದರು. ಇದೇ ಘಟನೆಯನ್ನು ಸ್ಫೂರ್ತಿಯಾಗಿಸಿಕೊಂಡಂತೆ ರಾಜ್ಯ ಕಾಂಗ್ರೆಸ್ ಎಚ್ಚೆತ್ತುಕೊಂಡಿದೆ. ಈಗ ಬೆಂಗಳೂರಿನ ಬೀದಿ ಬೀದಿಗಳಲ್ಲಿ ಬಿಜೆಪಿಯ ಭ್ರಷ್ಟಾಚಾರ ಜಾಹೀರಾತುಗೊಳ್ಳುತ್ತಿದೆ.
 
ಹೌದು ‘ಪೇ ಸಿಎಂ’ ಎಂಬ ಪಾಂಪ್ಲೆಟ್, ಫ್ಲೆಕ್ಸ್ ಗಳು ಎಲ್ಲೆಡೆ ರಾರಾಜಿಸುತ್ತಿದ್ದು, ಇದು ಕೇವಲ ಅಣಕದ ತಂತ್ರವಾಗಿ ಮಾತ್ರ ಉಳಿಯದೇ, ಕ್ಯೂ ಆರ್ ಕೋಡ್ ಮೂಲಕ ಬಿಜೆಪಿಯ ಭ್ರಷ್ಟಾಚಾರಗಳನ್ನು ರಾಜ್ಯದ ಜನರ ಮುಂದಿಟ್ಟಿದ್ದಾರೆ. ಅಲ್ಲದೇ ಸಾರ್ವಜನಿಕರು ತಮಗಾದ ಅನ್ಯಾಯ, ಅಭಿಪ್ರಾಯಗಳನ್ನು ನೇರವಾಗಿ ದಾಖಲಿಸುವ ಅವಕಾಶ ಕಲ್ಪಿಸಲಾಗಿದೆ.
 
ಇದೆಲ್ಲದರ ನಡುವೆ ಘಟನೆಯಿಂದ ಕೋಪಗೊಂಡಿರುವ ಬೊಮ್ಮಾಯಿ ಎಲ್ಲಾ ಫ್ಲೆಕ್ಸ್, ಪಾಂಪ್ಲೆಟ್ ಗಳನ್ನು ತೆರವುಗೊಳಿಸಲು ಸೂಚಿಸಿದ್ದು, ಈ ಕಾರ್ಯದಲ್ಲಿ ಭಾಗಿಯಾದವರ ವಿರುದ್ಧ ಗಂಭೀರ ತನಿಖೆಗೆ ಆದೇಶಿಸಿದ್ದಾರೆ. ಆದ್ರೆ ಆನ್ ಲೈನ್ ಯುಗವಾದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಪೇ ಸಿಎಂ ಪೋಸ್ಟರ್ ಗಳು ಸಕತ್ ವೈರಲ್ ಆಗಿವೆ. ರಸ್ತೆ ರಸ್ತೆಯಲ್ಲಿನ ಪೋಸ್ಟರ್ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
 
ಇನ್ನು ಅತ್ಯಂತ ವಿಭಿನ್ನವಾಗಿ ರೂಪಿಸಲಾಗಿರುವ ಈ ಪೇ ಸಿಎಂ ಕ್ಯೂಆರ್ ಕೋಡನ್ನ ಸ್ಕ್ಯಾನ್ ಮಾಡಿದ್ರೆ ಬಿಜೆಪಿ ಅಧಿಕಾರವಧಿಯಲ್ಲಿ ನಡೆದಿರುವ ಎಲ್ಲಾ ರೀತಿಯ ಭ್ರಷ್ಟಾಚಾರದ ಮಾಹಿತಿಗಳು ಲಭ್ಯವಾಗುತ್ತಿವೆ. 40 % Sಂಖಂಏಂಖಂ, ಃಎP ಒಇಂಓS ಃಖಂSಊಖಿಂಅಊಂಖಂ ಎಂಬ ಪೋಸ್ಟರ್ ನಲ್ಲಿ ಟೆಂಡರ್ ಸ್ಕ್ಯಾಮ್, ಪಿಎಸ್ ಐ ಸ್ಕ್ಯಾಮ್ , ಲ್ಯಾಂಡ್ ಗ್ರ್ಯಾಬ್ ಸ್ಕ್ಯಾಮ್, ಕೋವಿಡ್ ಸ್ಕ್ಯಾಮ್, ರಾಘವೇಂದ್ರ ಬ್ಯಾಂಕ್ ಸ್ಕ್ಯಾಮ್, ಫುಡ್ ಕಿಟ್ ಸ್ಕ್ಯಾಮ್, ಬಿಟ್ ಕಾಯಿನ್ ಸ್ಕ್ಯಾಮ್, ಎಗ್ ಸ್ಕ್ಯಾಮ್, ವಿಜಯೇಂದ್ರ ಸ್ಕ್ಯಾಮ್, ಬ್ಯಾಂಕ್ ಲೋನ್ ಸ್ಕ್ಯಾಮ್ ಗಳ ಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಅಲ್ಲದೇ ಯಾವ ಯಾವ ಸ್ಕ್ಯಾಮ್ ಗಳಲ್ಲಿ ಎಷ್ಟು ಹಣವನ್ನು ಪಡೆದಿದ್ದಾರೆ ಎಂಬ ಮಾಹಿತಿಯೂ ಇದರಲ್ಲಿದೆ.


 
ಇದರ ಜೊತೆಗೆ ಬಿಜೆಪಿ ಲಂಚ ರೇಟ್ ಕಾರ್ಡ್ ಎಂಬ ಪೋಸ್ಟರ್ ನಲ್ಲಿ ಗವರ್ನಮೆಂಟ್ ಡೀಲ್ ಹಾಗೂ ಕಮಿಷನ್ ಮಾಹಿತಿ ನೀಡಿದ್ದು ಕೋವಿಡ್, ಪಿಡಬ್ಯ್ಲೂಡಿ  ಕಾಂಟ್ರ್ಯಾಕ್ಟ್ ಸೇರಿದಂತೆ ಹಲವು ಹಗರಣಗಳು ಹಾಗೂ ಅವುಗಳಿಗೆ ಪಡೆದ ಕಮಿಷನ್ ಮಾಹಿತಿ ನೀಡಲಾಗಿದೆ. ಇನ್ನು ರೂಲ್ಸ್ ಅಂಡ್ ರೇಟ್ಸ್ ಎಂಬ ತಲೆಬರಹದಡಿ ಬೆಸ್ಕಾಂ, ಲೆಕ್ಚರರ್, ಬಾಮುಲ್, ಬಿಡಿಎ ಕಮೀಷನರ್, ಅಸಿಸ್ಟೆಂಟ್ ಪ್ರೊಫೆಸರ್, ಎಫ್.ಡಿ.ಎ, ಪಿಡಬ್ಲ್ಯೂ ಜ್ಯೂ.ಎಂಜಿನಿಯರ್, ಕೆಪಿಎಸ್ ಸಿ ಚೇರ್ ಮನ್, ಪಿಎಸ್ ಐ, ಕಾನ್ಸ್ ಟೆಬಲ್. ಡಿಸಿ ಅಂಡ್ ಎಸ್ಪಿ, ರೈಲ್ವೇ ಜಾಬ್ಸ್ ಸೇರಿದಂತೆ ಹಲವು ಹುದ್ಧೆಗಳಿಗೆ ಬಿಜೆಪಿ ಪಡೆದಿರುವ ಕಮಿಷನ್ ರೇಟ್ ಅನ್ನು ನಮೂದಿಸಲಾಗಿದೆ. ಇದಕ್ಕಿಂತ ಇಂಟ್ರೆಸ್ಟಿಂಗ್ ಅಂದ್ರೆ ಇದೇ ಪೋಸ್ಟರ್ ನಲ್ಲಿ ಸಿಎಂ ಪೋಸ್ಟ್ 2500 ಅಡಿoಡಿe, ಮಿನಿಸ್ಟರ್ ಪೋಸ್ಟ್ 500 ಛಿಡಿoಡಿe ಎಂದು ದಾಖಲಿಸಲಾಗಿದೆ.


 
ಇನ್ನು ಭ್ರಷ್ಟಾಚಾರದ ವಿರುದ್ಧ ನೀವೂ ಧ್ವನಿ ಎತ್ತಿ ಎಂದು ಕರೆನೀಡಿರುವ ಈ ಆ್ಯಪ್ ನಲ್ಲಿ ಜನಸಾಮಾನ್ಯರು ಅನುಭವಿಸಿದ ಕಷ್ಟಗಳನ್ನು, ಸರ್ಕಾರದ ನಿರ್ಧಾರಗಳಿಂದ, ಬೆಲೆ ಏರಿಕೆಯಿಂದ ತಮಗಾದ ತೊಂದರೆಗಳನ್ನು ದಾಖಲಿಸಲು ಅನುವುಮಾಡಿಕೊಡಲಾಗಿದೆ. ಈ ವೇದಿಕೆಯನ್ನು ಸರಿಯಾದ ರೀತಿಯಲ್ಲೇ ಬಳಸಿಕೊಂಡಿರುವ ಸಾರ್ವಜನಿಕರು ಬೆಲೆ ಏರಿಕೆಯಿಂದ, ಕಮಿಷನ್ ದಂಧೆಯಿಂದ ತಾವು ಅನುಭವಿಸಿದ ಸಮಸ್ಯೆಗಳನ್ನು ದಾಖಲಿಸುತ್ತಿದ್ದಾರೆ. ಒಂದೆಡೆ ಇದು ಬಿಜೆಪಿ ಸರ್ಕಾರಕ್ಕೆ ನಿಜಕ್ಕೂ ಮುಜುಗರ ತರಿಸುವ ವಿಚಾರವಾಗಿದೆ.

© Copyright 2022, All Rights Reserved Kannada One News